ರಾಮ ಎಲ್ಲರಿಗೂ ಸೇರಿದವನು, ಆಗಸ್ಟ್ 5 ರಂದು ನಡೆಯುವ ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆ ಕಾರ್ಯಕ್ರಮ ರಾಷ್ಟ್ರೀಯ ಏಕತೆಗೆ ದಾರಿಯಾಗಲಿ ಎಂದು ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಗವಾನ್ ರಾಮ ಎಲ್ಲರೊಂದಿಗೂ ಇದ್ದಾರೆ. ನಾಳೆ ರಾಮ ಜನ್ಮಭೂಮಿಯಲ್ಲಿ ನಡೆಯುವ ಸಮಾರಂಭವು “ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಭೆಯ ಸಂದರ್ಭವಾಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.
सरलता, साहस, संयम, त्याग, वचनवद्धता, दीनबंधु राम नाम का सार है। राम सबमें हैं, राम सबके साथ हैं।
भगवान राम और माता सीता के संदेश और उनकी कृपा के साथ रामलला के मंदिर के भूमिपूजन का कार्यक्रम राष्ट्रीय एकता, बंधुत्व और सांस्कृतिक समागम का अवसर बने।
मेरा वक्तव्य pic.twitter.com/ZDT1U6gBnb
— Priyanka Gandhi Vadra (@priyankagandhi) August 4, 2020
“ಸರಳತೆ, ಧೈರ್ಯ, ಸಂಯಮ, ತ್ಯಾಗ, ಬದ್ಧತೆ, ದೀನಬಂಧು ಎಂಬುದು ರಾಮ ಎಂಬ ಹೆಸರಿನ ಮೂಲತತ್ವ. ರಾಮ ಎಲ್ಲರೊಂದಿಗೂ ಇದ್ದಾನೆ” ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
“ರಾಮ ಮತ್ತು ತಾಯಿ ಸೀತಾ ಅವರ ಸಂದೇಶ ಮತ್ತು ಅನುಗ್ರಹದಿಂದ, ರಾಮಲಲ್ಲಾ ದೇವಾಲಯದ ಭೂಮಿಪೂಜೆ ಸಮಾರಂಭವು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಕೂಟವಾಗಿ” ಮಾರ್ಪಡಲಿ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ರಾಮಾಯಣವು ವಿಶ್ವದ ಸಂಸ್ಕೃತಿ ಮತ್ತು ಭಾರತೀಯ ಉಪಖಂಡದಲ್ಲಿ ಆಳವಾದ ಮತ್ತು ಅಳಿಸಲಾಗದ ಗುರುತು ಹೊಂದಿದೆ. ಭಗವಾನ್ ರಾಮ, ತಾಯಿ ಸೀತಾ ಮತ್ತು ರಾಮಾಯಣದ ಕಥೆ ಸಾವಿರಾರು ವರ್ಷಗಳಿಂದ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ನೆನಪುಗಳಲ್ಲಿದೆ. ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ, ರಾಮಕಥನವು ರಾಮ ಕಥಾ, ಹರಿ ಕಥಾ, ಶ್ರೀಹರಿಯ ಅಸಂಖ್ಯಾತ ರೂಪಗಳಂತೆ ಅನಂತ ಅನೇಕ ರೂಪಗಳಲ್ಲಿ ತನ್ನನ್ನು ತಾನು ವ್ಯಕ್ತಪಡಿಸುತ್ತಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುಗಯುಗದಿಂದಲೂ ಭಗವಾನ್ ರಾಮನ ಪಾತ್ರವು ಭಾರತೀಯ ಭೂಪ್ರದೇಶದಲ್ಲಿ ಮಾನವೀಯತೆಯನ್ನು ಸಂಪರ್ಕಿಸುವ ಎಳೆಯಾಗಿದೆ. ಭಗವಾನ್ ರಾಮನನ್ನು ‘ಶಕ್ತಿಯ ಮೂಲಭೂತ ಕಲ್ಪನೆ’ ಎಂದು ಕರೆಯಲಾಗುತ್ತದೆ. ರಾಮ ಎಲ್ಲರಿಗೂ ಸೇರಿದವನು. ಭಗವಾನ್ ರಾಮನು ಎಲ್ಲರ ಕಲ್ಯಾಣವನ್ನು ಬಯಸುತ್ತಾನೆ. ಅದಕ್ಕಾಗಿಯೇ ಅವರು ಘನತೆಯ ವ್ಯಕ್ತಿ ಎಂದು ಪ್ರಿಯಾಂಕ ಗಾಂಧಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ: ಉಮಾಭಾರತಿ


