Homeಕರೋನಾ ತಲ್ಲಣಕೊವಾಕ್ಸಿನ್ ಪ್ರಯೋಗಕ್ಕೆ ಒಳಪಟ್ಟವರಲ್ಲಿ 20% ಜನರು ಈಗಾಗಲೇ ಆಂಟಿಬಾಡಿ ಹೊಂದಿದ್ದಾರೆ!

ಕೊವಾಕ್ಸಿನ್ ಪ್ರಯೋಗಕ್ಕೆ ಒಳಪಟ್ಟವರಲ್ಲಿ 20% ಜನರು ಈಗಾಗಲೇ ಆಂಟಿಬಾಡಿ ಹೊಂದಿದ್ದಾರೆ!

ಇದರರ್ಥ ಅವರು ಈಗಾಗಲೇ ಸೋಂಕಿಗೆ ಒಳಗಾಗಿ ಯಾವುದೇ ರೋಗ ಲಕ್ಷಣಗಳನ್ನು ತೋರಿಸಿಕೊಳ್ಳದೇ ಚೇತರಿಸಿಕೊಂಡಿದ್ದಾರೆ. ಅವರ ಮೇಲೆ ಪ್ರಯೋಗ ನಡೆಸುವುದರಿಂದ ನಿರೀಕ್ಷಿತ ಫಲಿತಂಶಗಳನ್ನು ಪಡೆಯಲು ಸಾಧ್ಯವಿಲ್ಲ.

- Advertisement -
- Advertisement -

ಭಾರತದ ಮೊದಲ ಸ್ಥಳೀಯ ಕೊರೊನಾ ಲಸಿಕೆ, ಕೊವಾಕ್ಸಿನ್‌ ಕ್ಲಿನಿಕಲ್ ಪ್ರಯೋಗಗಳಿಗಾಗಿ ಏಮ್ಸ್ ದಾಖಲಾಗಲು ಮುಂದಾದವರಲ್ಲಿ ಸುಮಾರು 20% ರಷ್ಟು ಜನರು ಈಗಾಗಲೇ ಕೊರೊನಾ ವೈರಸ್ ವಿರುದ್ಧ ಪ್ರತಿಕಾಯಗಳನ್ನು (antibodies) ಹೊಂದಿದ್ದಾರೆಂದು ತಿಳಿದುಬಂದಿದೆ. ಹಾಗಾಗಿ ಅವರು ಪ್ರಯೋಗಗಳಿಗೆ ಅನರ್ಹರಾಗಿದ್ದಾರೆ.

ಏಮ್ಸ್ ಲಸಿಕೆ ಪ್ರಯೋಗಕ್ಕೆ ಭಾಗವಹಿಸುವವರನ್ನು ದಾಖಲಿಸಲು ಪ್ರಾರಂಭಿಸಿದ ಎರಡು ವಾರಗಳ ನಂತರ, ಸಂಸ್ಥೆಯು 80 ಕ್ಕೂ ಹೆಚ್ಚು ಸ್ವಯಂಸೇವಕರನ್ನು ಪರೀಕ್ಷಿಸಿದೆ. ಆದರೆ ಕೇವಲ 16 ಜನರನ್ನು ಮಾತ್ರ ಪ್ರಯೋಗಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೃದಯ, ಮೂತ್ರಪಿಂಡ, ಪಿತ್ತಜನಕಾಂಗ ಅಥವಾ ಶ್ವಾಸಕೋಶದ ಕಾಯಿಲೆ ಮತ್ತು ಅನಿಯಂತ್ರಿತ ಮಧುಮೇಹ ಅಥವಾ ಅಧಿಕ ರಕ್ತದೊತ್ತಡವಿಲ್ಲದ 18 ರಿಂದ 55 ವರ್ಷದೊಳಗಿನವರು ಅಧ್ಯಯನಕ್ಕೆ ಅರ್ಹರಾಗಿದ್ದಾರೆ.

ನೇಮಕಾತಿಗೆ ಮುಂಚಿತವಾಗಿ ಸ್ವಯಂಸೇವಕರ ಮೇಲೆ ಯಕೃತ್ತು, ಮೂತ್ರಪಿಂಡದ ಕಾರ್ಯಕೊರೊನಾ ಪರೀಕ್ಷೆ ಮತ್ತು ಕ್ಷಿಪ್ರ ಪ್ರತಿಕಾಯ ಪರೀಕ್ಷೆಗಳಂತಹ (rapid antibody tests) ವಾಡಿಕೆಯ ತನಿಖೆ ನಡೆಸಲಾಗುತ್ತದೆ.

ನಾವು ಆರೋಗ್ಯವಂತ ಸ್ವಯಂಸೇವಕರನ್ನು ಮಾತ್ರ ನೇಮಿಸಿಕೊಳ್ಳುವುದರಿಂದ ಅನರ್ಹರ ಪ್ರಮಾಣ ತುಂಬಾ ಹೆಚ್ಚಾಗಿದೆ. ನೊಂದಾಯಿಸಿಕೊಂಡ ಸ್ವಯಂಸೇವಕರಲ್ಲಿ ನಾವು ಸುಮಾರು 20%  ಪ್ರತಿಕಾಯ (ಆಂಟಿಬಾಡಿ) ಹೊಂದಿರುವವರನ್ನು ಕಂಡುಕೊಂಡಿದ್ದೇವೆ. ಇದರರ್ಥ ಅವರು ಈಗಾಗಲೇ ಸೋಂಕಿಗೆ ಒಳಗಾಗಿ ಯಾವುದೇ ರೋಗ ಲಕ್ಷಣಗಳನ್ನು ತೋರಿಸಿಕೊಳ್ಳದೇ ಚೇತರಿಸಿಕೊಂಡಿದ್ದಾರೆ. ಅವರ ಮೇಲೆ ಪ್ರಯೋಗ ನಡೆಸುವುದರಿಂದ ನಿರೀಕ್ಷಿತ ಫಲಿತಂಶಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಮಾನವ ಪ್ರಯೋಗಗಳಲ್ಲಿ ಭಾಗವಹಿಸಲು ವೈದ್ಯಕೀಯ ಸಂಸ್ಥೆಯು ಈವರೆಗೆ 3,500 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಜುಲೈ 24 ರಂದು, 30 ವರ್ಷದ ಯುವಕನಿಗೆ ಕೋವಾಕ್ಸಿನ್‌ನ ಮೊದಲ ಪ್ರಮಾಣವನ್ನು ನೀಡಲಾಯಿತು. ಇಂಟ್ರಾಮಸ್ಕುಲರ್ ಇಂಜೆಕ್ಷನ್ ಮೂಲಕ ಅವರಿಗೆ 0.5 ಮಿಲಿ ನೀಡಲಾಯಿತು.

“ಲಸಿಕೆ ನೀಡಿ ಮೊದಲ ವಾರವನ್ನು ಪೂರ್ಣಗೊಳಿಸಲಾಗಿದೆ. ಮತ್ತು ಇಲ್ಲಿಯವರೆಗೆ ಯಾವುದೇ ಅಸ್ವಸ್ಥತೆಯನ್ನು ವರದಿ ಮಾಡಿಲ್ಲ. ಲಸಿಕೆಯ ಮುಂದಿನ ಪ್ರಮಾಣವನ್ನು ನೀಡುವ ಮೊದಲು ಮುಂದಿನ ಶುಕ್ರವಾರದವರೆಗೆ ನಾವು ಅವರನ್ನು ಮೇಲ್ವಿಚಾರಣೆ ಮಾಡುತ್ತೇವೆ” ಎಂದು ವೈದ್ಯರು ಹೇಳಿದರು.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಔಷಧ ಕಂಪನಿ ಭಾರತ್ ಬಯೋಟೆಕ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಈ ಮೊದಲು I ಮತ್ತು IIನೇ ಹಂತದ ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ಅನುಮೋದಿಸಿತು.


ಇದನ್ನೂ ಓದಿ: 370 ನೇ ವಿಧಿ ರದ್ಧತಿಯ ಮೊದಲ ವಾರ್ಷಿಕೋತ್ಸವಕ್ಕೆ ಮುಂಚೆಯೇ ಶ್ರೀನಗರದಲ್ಲಿ ಮತ್ತೆ ಕರ್ಫ್ಯೂ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...