Homeಕರ್ನಾಟಕಮೇ ಸಾಹಿತ್ಯ ಮೇಳದಲ್ಲಿ ಬೆಜವಾಡ ವಿಲ್ಸನ್, ದಿನೇಶ್ ಅಮೀನ್ ಮಟ್ಟು ಮತ್ತು ರಾವ್ ಸಾಹೇಬ್ ಕಸಬೆಯವರ...

ಮೇ ಸಾಹಿತ್ಯ ಮೇಳದಲ್ಲಿ ಬೆಜವಾಡ ವಿಲ್ಸನ್, ದಿನೇಶ್ ಅಮೀನ್ ಮಟ್ಟು ಮತ್ತು ರಾವ್ ಸಾಹೇಬ್ ಕಸಬೆಯವರ ಭಾಷಣಗಳು

- Advertisement -
ಪ್ರಗತಿಪರ ಚಿಂತಕರು ಹಾಗೂ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತರಾದ  ವಿಲ್ಸನ್ ಬೆಜವಾಡರವರ ಮಾತುಗಳು.
ನಾನು ಮೂಲತಃ ಕನ್ನಡದವನು. ನಮ್ಮ ರಾಜ್ಯದಲ್ಲಿ ರಾಜಕೀಯ ಏನು ನಡಿತೀದೆ, ಹೇಗೆ ನಡಿತಿದೆ ಅನ್ನೋದು ಸಹಜವಾಗಿ ನನಗೂ ಕುತೂಹಲವಿರುತ್ತೆ. ನಾವು ಮಾತಾಡಬೇಕಾದಾಗ ಯಾವುದೇ ಪಕ್ಷಕ್ಕೆ ಸೀಮಿತವಾಗಿ ಅಥವಾ ವಿಚಾರಧಾರೆಗೆ ಸೀಮಿತವಾಗಿ ಮಾತಾಡಬಾರದು. ನಾವು ಮಾತಾಡಬೇಕಾದರೆ ತುಂಬಾ ಯೋಚನೆ ಮಾಡಿ ಮಾತಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಲಾಗುತ್ತಿದೆ. ಭಯದ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತಿದೆ. ದೇಶಪ್ರೇಮದ ಸರ್ಟಿಫಿಕೇಟ್ ಗಳನ್ನು ಕೊಡಲಾಗುತ್ತದೆ. ನ್ಯಾಯಮೂರ್ತಿಯೊಬ್ಬರು ಮಹಿಳೆಯರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಡಿ ಎಂದು ಹೇಳುತ್ತಿದ್ದಾರೆ. ನೇಮಕವಾದಲ್ಲಿ ಇವರು ನಮ್ಮ ಮೇಲೆಯೇ ಮಹಿಳಾ ಪರ ಆರೋಪಗಳನ್ನು ಮಾಡುತ್ತಾರೆ ಎಂಬ ಕಾರಣ ಕೊಡಲಾಗುತ್ತಿದೆ. ದೇಶದ ನ್ಯಾಯಾಧಾನ ವ್ಯವಸ್ಥೆಯಲ್ಲಿ  ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ. ಬಡವರಿಗೆ ದೀನ ದಲಿತರಿಗೆ  ಹಿಂದುಳಿದವರಿಗೆ ನ್ಯಾಯ ಮರಿಚಿಕೆಯಾಗಿದೆ.
ರೈತರನ್ನು ನೀವು ಇಂದೇ ಪ್ರಶ್ನೆ ಮಾಡಿ, ಐದು ವರ್ಷಗಳಲ್ಲಿ ನಿಮಗೇನಾದರೂ ಕೆಲಸಗಳಾಗಿವೆಯೇ ಎಂದು. ಇಲ್ಲ ಎಂಬ ಉತ್ತರ ದೊರೆಯುತ್ತದೆ. ಬೇರೆ ಬೇರೆ ವೃತ್ತಿಯವರನ್ನು  ಕೇಳಿ ಇಲ್ಲವೆನ್ನುತ್ತಾರೆ. ಆದರೆ ಇದೇ ಪ್ರಶ್ನೆಗೆ ಉತ್ತರವನ್ನು ರಾಜಕಾರಣಿಗಳಿಂದ ಪಡೆದಾಗ ದೇಶಕ್ಕಾಗಿ ಏನಾದರೂ ಮಾಡೋಣ. ದೇಶದ ಹಿತಕ್ಕಾಗಿ ಓಟು ಮಾಡಬೇಕು ಅಂತ ಹೇಳ್ತಾರೆ. ಈ ರೀತಿ ಮನಸ್ಥಿತಿಗಳನ್ನು ಸೃಷ್ಟಿ ಮಾಡಲಾಗಿದೆ. ಅವರು ಅಂದುಕೊಂಡ ದೇಶಕ್ಕಾಗಿ ಓಟು ಕೇಳುತ್ತಿದ್ದಾರೆಯೇ ಹೊರತು ಭಾರತದ ಜನಕ್ಕಾಗಲ್ಲ. ಪ್ರತಿ ವರ್ಷ 2000 ರೈತರು ರೈತಾಪಿ ಜೀವನ ಬಿಟ್ಟು ಕಾರ್ಮಿಕರಾಗುತ್ತಿದ್ದಾರೆ. ಮಲ ಹೊರುವ ಪದ್ದತಿಯಲ್ಲಿ ಆಧ್ಯಾತ್ಮಿಕ ಸಂತೃಪ್ತಿ ಇದೆ ಅಂತ ಆಗಿನ ಗುಜರಾತ್ ಮುಖ್ಯಮಂತ್ರಿಗಳು ಹೇಳುತ್ತಾರೆ. ಆಗ ನಾನು ಹೇಳಿದ್ದೆ ಹಾಗಾದರೆ ನೀವು‌ ಮಲ ಹೊತ್ತು ಸಂತೃಪ್ತಿ ಪಡೆಯಿರಿ ಎಂದು. ಸಫಾಯಿ ಕರ್ಮಚಾರಿ ಆಂದೋಲನ್ ನಾವು ಪ್ರಾರಂಭ ಮಾಡಿದ್ದು ಈ ಸಮಸ್ಯಗಳಿಂದ ಹೊರಬರಲು. ನೀವು ಬಡವರಾಗಿ ಹುಟ್ಟಿದ್ದು ಯಾಕೆ ಎಂದು ಕೇಳಿದಾಗ ಬಾಬಾ ಉತ್ತರ ಹೀಗಿರುತ್ತದೆ, ನೀನು ಹುಟ್ಟಿದ ಜಾತಿ ಎಂದು. ಏನಾದರೂ ಪ್ರಶ್ನೆ ಮಾಡಿದಾರೆ ನಿಮ್ಮ ಹಣೆಬರಹವೆಂಬ ಹಣೆಪಟ್ಟಿ ಕಟ್ಟುತ್ತಾರೆ. ಅಂಧಶ್ರದ್ಧೆಗಳನ್ನು  ನಮ್ಮ ಮೆದುಳಿನಲ್ಲಿ ತುರುಕುತ್ತಾರೆ. ನಿರಂತರ ಹೋರಾಟಗಳ ನಂತರ ಮ್ಯಾನ್ ಹೋಲ್ ಕ್ಲೀನ್ ಮಾಡಲು ಸೇಪ್ಟಿಕ್ ಟ್ಯಾಂಕ್ ಗಳನ್ನು ಸರಕಾರಗಳು ಜಾರಿ ಮಾಡಿವೆ, ಹಾಗೂ ಖಾಸಗಿಯಲ್ಲೂ ಅದು ನಡಿತಿವೆ. ಕೊನೆಯಲ್ಲಿ ನನ್ನದೊಂದು ಪ್ರಶ್ನೆ ಇಲ್ಲಿ ಯಾರಾದರೂ ಸತ್ತರೆ ದೇಶವೆಲ್ಲಾ ತುಂಬಾ ಭಾವುಕವಾಗುತ್ತೆ. ದಿನೆ ದಿನೇ ಸಫಾಯಿ ಕರ್ಮಚಾರಿಗಳು ಗಟಾರದಲ್ಲಿಳಿದು ಸ್ವಚ್ಛಗೊಳಿಸುತ್ತಾ ಸಾಯುತ್ತಿದ್ದಾರೆ ದೇಶದ ಜನಕ್ಕೆ ಆಕ್ರೋಶ ಬರುತ್ತಿಲ್ಲ ಯಾಕೆ?
ಒಬ್ಬ ನಿರೋದ್ಯೋಗಿ ಉದ್ಯೋಗದ ಬಗ್ಗೆ ಮಾತಾನಾಡುವುದು ಬಿಟ್ಟು ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ
– ದಿನೇಶ್ ಅಮೀನ್ ಮಟ್ಟು
ಈ ಮೇ‌ ಸಾಹಿತ್ಯ  ಕಾರ್ಯಕ್ರಮದಲ್ಲಿ ತಿಳಿದುಕೊಂಡದ್ದನ್ನು ನಿಮ್ಮೂರುಗಳಲ್ಲಿ ನಡೆಸುವ ಹಾಗೆ ಆಗಬೇಕು. ಚುನಾವಣೆಗೆ ಮಾತ್ರ ನಮ್ಮ ಕೆಲಸಗಳು ಸೀಮಿತವಾಗಬಾರದು, ಬೆಂಗಳೂರಿನಲ್ಲಿ ಕಾಣುವ ಭಾರತ ಬೇರೆ, ಗದಗದಲ್ಲಿ ಕಾಣುವ ಭಾರತ ಬೇರೆ.  ವೈದ್ಯರಿಲ್ಲದ ,ನೀರು ಬಾರದ ಭಾರತ ಗದಗಿನಲ್ಲಿ ಕಂಡರೆ ಬೆಂಗಳೂರಿನಲ್ಲಿ ವಿಶ್ವಭಾರತ ಮಾಡುವವರನ್ನು ನಾವು ಕಾಣಬಹುದು. ಅಂಕಿ ಅಂಶಗಳನ್ನು ನೋಡಿಯೇ ಯಾವುದೇ ತೀರ್ಮಾನಗಳನ್ನು ಮಾಡಬೇಕು, ಸಮಿಕ್ಷೆಗಳು ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ರೈತರ ಸಂಖ್ಯೆ ಏಳೂ ವರ್ಷಗಳಲ್ಲಿ ಶೇ7% ಕಡಿಮೆಯಾಗಿದೆ. ಕೆಲ ಮುಕ್ಕಾಲು ರೈತರು ರೈತನಾಗಲು ಬಯಸುವುದಿಲ್ಲ.
ಒಬ್ಬ ನಿರೋದ್ಯೋಗಿ ಉದ್ಯೋಗದ ಬಗ್ಗೆ ಮಾತಾನಾಡುವುದಿಲ್ಲ ಹಿಂದುತ್ವದ ಬಗ್ಗೆ ಮಾತನಾಡುತ್ತಾನೆ. ಅಷ್ಟರ ಮಟ್ಟಿಗೆ ಧರ್ಮವನ್ನು ತಲೆ ಹೊಕ್ಕಿಸಲಾಗುತ್ತಿದೆ. ಅಂಬೇಡ್ಕರ್ ಬರೆದ ಸಂವಿಧಾನ ಮತ್ತು ನಾವು ಅರ್ಥ ಮಾಡಿಕೊಂಡ ಸಂವಿಧಾನವೇನೆಂಬುದು ನಮಗೆ ಗೊತ್ತಿರಬೇಕು, ಇವತ್ತಿನ ಚುನಾವಣೆ ವ್ಯವಸ್ಥೇಯಲ್ಲೂ ಪ್ರಾಮಾಣಿಕವಾಗಿ ಏನಾದರೂ ಕೆಲಸ ಮಾಡಬೇಕೆಂದರೂ ಕೂಡ ಮಾಡಲಾರದ ವ್ಯವಸ್ಥ ಇದೆ. ಅಂಬೇಡ್ಕರ್ ಬಯಸಿದ ಸಂವಿಧಾನವನ್ನು ಚಿಂತನೆಗಳನ್ನು ಸೇರಿಸಿದರೆ ಅಭಿವೃದ್ಧಿ ಭಾರತ ಮಾಡಲು ಸಾಧ್ಯ. ಮೇ ಸಾಹಿತ್ಯ ಮೇಳದಂತಹ ಕಾರ್ಯಕ್ರಮಗಳು  ಚುನಾವಣೆಗಿಂತ ಮುಂಚೆ ನಡೆಯಬೇಕಿತ್ತು, ಇಲ್ಲಿ ಸೇರಿದ ಯುವಜನರು ಇಲ್ಲಿನ ಮಾತುಗಳು ಕೇಳಿ ವೈಚಾರಿಕ ತಿಳುವಳಿಕೆ ಪಡೆಯಬೇಕು
ಉದ್ಘಾಟನೆ ಕಾರ್ಯಕ್ರಮದಲ್ಲಿ ಬಾಂಬೆಯ ಪ್ರಗತಿಪರ ಚಿಂತಕರಾದ ರಾವ್ ಸಾಹೇಬ್ ಕಸಬೆಯವರ ಮಾತುಗಳು 
ಕನ್ನಡ ಭಾಷೆ ನನಗೆ ಬರುವುದಿಲ್ಲ. ಇದು ಒಂದು ರಿದಮ್ ಇರೋ ಭಾಷೆ. ನಾನು ಮೊದಲ ಸಲ ಕರ್ನಾಟಕಕ್ಕೆ ಬಂದಾಗ ಬಹಳ ಖುಷಿಯಾಗಿತ್ತು. ಯಾಕೆಂದರೆ ನಾನು ಬಸವಣ್ಣನ ನೆಲಕ್ಕೆ ಬಂದಿದ್ದೆ. ಇಲ್ಲಿ ಬಂದ ನಾವೆಲ್ಲಾ ಹೊಸ ಭಾರತ ಕಟ್ಟುವ ಕನಸು ಕಾಣುತ್ತಿದ್ದೇವೆ , ಕನಸಾದ್ರೂ ಕಾಣುತ್ತಿದ್ದೇವಲ್ಲಾ ಎಂಬುದು ಖುಷಿಯ  ವಿಚಾರ. ಇಲ್ಲಿ ಬೇರೆ ಬೇರೆ ಜನಾಂಗಗಳಿವೆ, ಧರ್ಮಗಳಿವೆ, ವರ್ಣಗಳಿವೆ, ಭಾಷೆಗಳಿವೆ ಇದೆಯಲ್ಲವೇ ಭಾರತದೇಶದ ಸೌಂದರ್ಯ?. ಈಗೀಗ ಭಾರತದಲ್ಲಿ ಭಾರತ ಮಾತಾ ಕಿ ಜೈ ಅನ್ನುವ ಸದ್ದು ಕೇಳಿ ಬರುತ್ತಿದೆ, ಇಲ್ಲದ ರಾಷ್ಟ್ರವನ್ನು ಜೈಕಾರ ಹಾಕುವುದೇನು ? ಮೊದಲ ರಾಷ್ಟ್ರ ನಿರ್ಮಿಸೋಣ, ಯಾರ್ಯಾರೋ ರಾಜರುಗಳು, ಮೊಗಲರು, ಸುಲ್ತಾನರು ರಾಜರು ಬಂದರೂ ರಾಷ್ಟ್ರವನ್ನು ಮಾಡಲಾಗಲಿಲ್ಲ. ಸಮಾಜವಾದ, ಸಮಾನತೆ, ನಾಡು ಕಟ್ಟುವ ಕನಸು ನನಸಾಗಿದ್ದೆ ಬಾಬಾಸಾಹೇಬರು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಭಾರತ ನನ್ನ ದೇಶವೆಂದು ಹೇಳುವಂತೆ ಮಾಡಿದರು.
ಸ್ವಾತಂತ್ರ್ಯ ಬಂದ ಮೇಲೆ ಗಾಂಧೀಜಿಯೂ ಚರಕ ಬಳಸುತ್ತಿದ್ದರು. ಮೋದಿಯೂ ಬಳಸುತ್ತಿದ್ದಾರೆ ಪ್ರಚಾರಕ್ಕಾಗಿ. ಆದರೆ ಗಾಂಧೀಜಿಯ ಪಕ್ಕಕ್ಕೆ ಕಸ್ತೂರಬಾ ಇದ್ದರು ಆದರೆ ಇವರು ಒಬ್ಬರೇ ಇದ್ದದ್ದು ಇದನ್ನು ನಾವು ಗಮನಿಸಬೇಕು. ನಾವು ಏಕೆ ಬದುಕುತ್ತಿದ್ದೇವೆ ಎಂದು ನನ್ನನ್ನೂ ಪ್ರಶ್ನೆ ಕಾಡುತ್ತಿತ್ತು ಅದಕ್ಕೆ ಬಾಲಕನೊಬ್ಬ ಉತ್ತರಿಸಿದ್ದ ನಮಗೆ ಸಾಯಲು ಆಗುವುದಿಲ್ಲ ಹಾಗಾಗಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದ್ದ. ಮನುಷ್ಯ ಮತ್ತು ಪ್ರಾಣಿಗಳ ಜೀವನಕ್ಕೆ ವ್ಯತ್ಯಾಸವನ್ನು ತಿಳಿದವನ ಮಾತುಗಳಾಗಿದ್ದವು. ನಮ್ಮ ಜೀವನಕ್ಕ ಅರ್ಥ ಕೊಡಲು ನಾವು ಬದುಕಬೇಕಿದೆ ನಮ್ಮ ಜೀವನವನ್ನು ತುಂಬಾ ಅದ್ಭುತವಾಗಿ ಜೀವಿಸಿ ಮುಂದಿನ ಭವಿಷ್ಯವನ್ನು ಸುಂದರಗೊಳಿಸುವುದಾಗಿರಬೇಕು. ಎಂತಹ ದುರಂತವೆಂದರೆ ಭಾರತದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗುತ್ತದೆ. ಮನಸ್ಸಿನಿಂದ ಯಾವುದೇ ಹುಡುಗಿಗೆ ನೀವು ಪ್ರೀತಿಸಿದ್ದರೆ ನೀವು ಹೆಣ್ಣನ್ನು ಗೌರವಿಸುತ್ತಿದ್ದಿರಿ. ಅರ್ಥಿಕ ಮತ್ತು ಸಾಮಾಜಿಕ ನ್ಯಾಯ ಸಿಗದಿದ್ದರೆ ಮುಂದೆ ದೊಡ್ಡ ಆಘಾತ ಕಾದಿದೆ ಹಾಗಾಗಿ ಸಂವಿಧಾನವನ್ನು ಉಳಿಸುವ ಅಗತ್ಯವಿದೆ. ಇದರಲ್ಲಿ ನಾವು ಎಡವಿದರೆ ಪ್ರಜಾಪ್ರಭುತ್ವಕ್ಕೆ ಕುತ್ತು ಬರಲಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ, ಸೃಷ್ಟಿಯಾದರೆ ಮಹಿಳೆಯರ ಮೇಲೆ ಅದು ಕೆಟ್ಟ ಪರಿಣಾಮ ಬೀರಲಿದೆ, ದೇಶ ಫ್ಯಾಸಿಸಂ ಕಡೆ ವಾಲುವುದು ಕಟ್ಟಿಟ್ಟ ಬುತ್ತಿ. ಮುಂದೆ ಯೋಚಿಸಿ ಹೆಜ್ಜೆಗಳನ್ನಿಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...