Homeಕರ್ನಾಟಕಹೊನ್ನಾವರ ಬಂದರು ಯೋಜನೆ ಕೈ ಬಿಡಿ : ಸರ್ಕಾರಕ್ಕೆ ಮೇಧಾ ಪಾಟ್ಕರ್ ಒತ್ತಾಯ

ಹೊನ್ನಾವರ ಬಂದರು ಯೋಜನೆ ಕೈ ಬಿಡಿ : ಸರ್ಕಾರಕ್ಕೆ ಮೇಧಾ ಪಾಟ್ಕರ್ ಒತ್ತಾಯ

ಹೊನ್ನಾವರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಸತ್ಯಶೋಧನಾ ವರದಿ ಬಿಡುಗಡೆ

- Advertisement -
- Advertisement -

ಪರಿಸರ ಹಾಗೂ ಮತ್ಸ್ಯ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುವಂತಹ ಹೊನ್ನಾವರ ಬಂದರು ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಡಬೇಕು. ಅಲ್ಲದೇ, ಹೋರಾಟಗಾರರ ಮೇಲಿನ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಒತ್ತಾಯಿಸಿದರು.

ಮಂಗಳವಾರ ಬೆಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್‌ (ಎಐಸಿಸಿಟಿಯು), ಫ್ರೈಡೇಸ್ ಫಾರ್ ಫ್ಯೂಚರ್-ಕರ್ನಾಟಕ (ಎಫ್‍ಎಫ್‍ಎಫ್-ಕೆ) ಹಾಗೂ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ವತಿಯಿಂದ ಹೊನ್ನಾವರ ಬಂದರು ಯೋಜನೆ ಕುರಿತ ಸತ್ಯಶೋಧನಾ ವರದಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

2023ರ ವಿಧಾನಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಹೊನ್ನಾವರ ಬಂದರು ಯೋಜನೆ ವಿರೋಧಿಸಿ ಹೋರಾಟ ಮಾಡುತ್ತಿದ್ದ ಮೀನುಗಾರರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಂಕಾಳ ವೈದ್ಯ ಯಾವುದೇ ಕಾರಣಕ್ಕೂ ಬಂದರು ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಈಗ ಅವರು ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿದ್ದಾರೆ. ಆದರೆ, ಈ ಯೋಜನೆಯನ್ನು ನಿಲ್ಲಿಸುವ ವಿಚಾರದಲ್ಲಿ ಯಾಕೆ ಮೌನ ವಹಿಸಿದ್ದಾರೆ? ಜನರ ಬದುಕಿನ ಹಕ್ಕನ್ನು ಕಸಿದುಕೊಳ್ಳುವ ಯೋಜನೆಗಳ ವಿರುದ್ಧ ಧ್ವನಿ ಎತ್ತಿದರೆ ನಮ್ಮನ್ನು ಅಭಿವೃದ್ಧಿ ವಿರೋಧಿಗಳು, ನಗರ ನಕ್ಸಲರು ಎನ್ನುತ್ತಾರೆ. ಅಭಿವೃದ್ಧಿ ಹೆಸರಿನಲ್ಲಿ ಬದುಕು ಕಳೆದುಕೊಳ್ಳುತ್ತಿದ್ದೇವೆ. ಹೊನ್ನಾವರ ಬಂದರು ಯೋಜನೆ ಇದಕ್ಕೆ ಉತ್ತಮ ಉದಾಹರಣೆ ಎಂದು ಮೇಧಾ ಪಾಟ್ಕರ್ ಹೇಳಿದರು.

ಈ ಯೋಜನೆಗೆ ಅಗತ್ಯವಿರುವ ಪರಿಸರ ಇಲಾಖೆಯ ಅನುಮತಿಯನ್ನು ಸಮರ್ಪಕವಾಗಿ ಪಡೆಯಲಾಗಿಲ್ಲ. ಅಲ್ಲದೇ, ಈ ಯೋಜನೆಯ ಅನುಷ್ಠಾನದಿಂದ ಸಾಮಾಜಿಕವಾಗಿ ಹಾಗೂ ಪರಿಸರದ ಮೇಲೆ ಆಗುವಂತಹ ಪರಿಣಾಮಗಳ ಕುರಿತು ವೈಜ್ಞಾನಿಕ ಮೌಲ್ಯಮಾಪನ ಮಾಡಿಲ್ಲ. ರಸ್ತೆ ನಿರ್ಮಾಣಕ್ಕಾಗಿ ನಡೆದ ಭೂಮಾಪನ ಕ್ರಿಯೆಯನ್ನು ವಿರೋಧಿಸಿದ ಕಾರಣಕ್ಕಾಗಿ ಪೊಲೀಸರು ಲಾಠಿಚಾರ್ಜ್ ನಡೆಸಿ, 45 ಜನರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ ಎಂದರು.

ಪೊಲೀಸರ ದೌರ್ಜನ್ಯ ಖಂಡಿಸಿ ಸುಮಾರು 40 ಮಂದಿ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಒಂದು ದಶಕದಿಂದ ಬಂದರು ವಿರೋಧಿಸಿ ಹೋರಾಟ ನಡೆಯುತ್ತಿದೆ. ಮೀನು ಒಣಗಿಸುವ ಕಟ್ಟಡಗಳನ್ನು ನೆಲಸಮ ಮಾಡಿದ್ದಾರೆ. ವಿಶೇಷವಾಗಿ ಮಹಿಳೆಯರು ಒಣ ಮೀನು ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. 2019ರಿಂದ ಮೀನು ಒಣಗಿಸುವ ಭೂಮಿಗೆ ಬೇಲಿ ಹಾಕಲಾಗಿದೆ. ಅವರ ಪರಿಸ್ಥಿತಿ ಹೇಳಲು ಆಗುವುದಿಲ್ಲ ಎಂದು ಮೇಧಾ ಪಾಟ್ಕರ್ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ನಮಗೆ ವಿಶ್ವಾಸವಿದೆ. ಈ ಸಮಸ್ಯೆಯನ್ನು ಆದ್ಯತೆ ಮೇಲೆ ಪರಿಗಣಿಸಿ, ಹೊನ್ನಾವರ ಬಂದರು ಯೋಜನೆಯನ್ನು ಕೈ ಬಿಟ್ಟು, ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಅವರಿಗೆ ಸಲ್ಲಿಸಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಸತ್ಯಶೋಧನಾ ವರದಿಯ ಮುಖ್ಯಾಂಶಗಳು 

2010 ರಲ್ಲಿ ಹೊನ್ನಾವರ ಪೋರ್ಟ್ ಪ್ರೈವೆಟ್ ಲಿಮಿಟೆಡ್ (ಹೆಚ್‌ಪಿಪಿಎಲ್‌) ಗೆ ಕಾಸರಕೋಡ್ ವಾಣಿಜ್ಯ ಬಂದರನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡಿದಾಗಿನಿಂದಲೂ, ಈ ಪ್ರದೇಶದಲ್ಲಿ ವಿರೋಧಗಳು ವ್ಯಕ್ತವಾಗುತ್ತಿದ್ದು, ಮೀನುಗಾರರೇ ಹೆಚ್ಚಿರುವ ಟೋಂಕಾ-1, ಟೋಂಕಾ-2, ಪಾವಿನ್ ಕುರ್ವ, ಮಲ್ಲುಕುರ್ವ ಮತ್ತು ಹೊನ್ನಾವರ ಗ್ರಾಮೀಣ-ಈ ಐದು ಗ್ರಾಮಗಳಿಗೆ ಸೇರಿದ 44 ಹೆಕ್ಟೇರ್ ಭೂಮಿಯಲ್ಲಿ ಈ ಬಂದರು ಸ್ಥಾಪಿಸಲು ಯೋಜಿಸಲಾಗಿದೆ. ಸ್ಥಳೀಯ ಸಮುದಾಯಗಳಿಂದ ಒಪ್ಪಿಗೆ ಪಡೆದುಕೊಳ್ಳದೆಯೇ ಮತ್ತು ಸಂವಿಧಾನದಡಿಯಲ್ಲಿ ಪಾಸಲಿಬೇಕಿರುವ ಪರಿಸರ ಸುರಕ್ಷತಾ ಕ್ರಮಗಳನ್ನು ಪ್ರಸ್ತುತ ಯೋಜನೆಯು ಗಾಳಿಗೆ ತೋರಿದೆ ಎಂದು ಸತ್ಯಶೋಧನಾ ವರದಿ ಹೇಳಿದೆ.

ಪ್ರಸ್ತಾವಿತ ಬಂದರಿನಲ್ಲಿ ಎರಡು ಮುಖ್ಯ ಘಟಕಗಳಿವೆ. ಒಂದು 44 ಎಕರೆಯಲ್ಲಿ ಬಂದರು ನಿರ್ಮಿಸುವುದು, ಎರಡನೆಯದ್ದು ಅದಕ್ಕೆ ರಾಷ್ಟ್ರೀಯ ಹೆದ್ದಾರಿ 66ರಿಂದ ಸಂಪರ್ಕ ಕಲ್ಪಿಸಲು ಚತುಷ್ಪತ ರಸ್ತೆ ನಿರ್ಮಿಸುವುದು. ಬಂದರು ನಿರ್ಮಾಣದ ವಿರುದ್ದ ಸ್ಥಳೀಯ ಮೀನುಗಾರ ಸಮುದಾಯ ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯನ್ನು ಕ್ರೂರವಾಗಿ ಹತ್ತಿಕ್ಕಿದ ನಂತರವಷ್ಟೇ ರಸ್ತೆ ಯೋಜನೆಯ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

ಸಮೀಕ್ಷೆಯ ಹಿಂದಿನ ದಿನ ರಾತ್ರಿ ಬಿಎನ್‌ಎಸ್‌ ಸೆಕ್ಷನ್ 163ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮರುದಿನ ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿ, ಅಧಿಕಾರಿಗಳು ಸಮೀಕ್ಷೆಗೆ ಮುಂದಾದರು. ಈ ವೇಳೆ ಪ್ರತಿಭಟಿಸಿದ ಸ್ಥಳೀಯರನ್ನು ಪೊಲೀಸರು ಹಿಂಸಿಸಿದರು, ಮಾತ್ರವಲ್ಲ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿದರು. ಹೀಗೆ ಪೊಲೀಸರ ದೌರ್ಜನ್ಯದಿಂದ ಗಾಯಗೊಂಡಿದ್ದ ಜನರು ಚಿಕಿತ್ಸೆ ಪಡೆಯುವಾಗ ಆಸ್ಪತ್ರೆಯಲ್ಲಿ ಪೊಲೀಸರು ಹಾಜರಿದ್ದರು. ಪೊಲೀಸ್ ದೌರ್ಜನ್ಯದಿಂದ ಗಾಯಗಳಾಗಿವೆ ಎಂದು ದಾಖಲಿಸಲು ವೈದ್ಯರು ನಿರಾಕರಿಸಿದರು. ಪೊಲೀಸರ ದೌರ್ಜನ್ಯ ಈಗಲೂ ಮುಂದುವರಿದಿದ್ದರು, ಹೆಚ್ಚಿನ ಪೊಲೀಸರನ್ನು ನೇಮಿಸಿ ಸ್ಥಳೀಯರ ಚಲನವಲನಗಳ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ವರದಿ ವಿವರಿಸಿದೆ.

ಬಂದರು ಯೋಜನೆಗಾಗಿ ಸ್ಥಳೀಯರು ತಮ್ಮ ಭೂಮಿಯನ್ನು ಕಳೆದುಕೊಂಡಿರುವುದು ಮಾತ್ರವಲ್ಲದೆ, ಬಂದರು ನಿರ್ಮಾಣವು ಅವರ ಜೀವನೋಪಾಯಕ್ಕೂ, ಅಲ್ಲಿನ ಪರಿಸರ ಸಮತೋಲನಕ್ಕೂ ಅಪಾಯವನ್ನು ತಂದಿಟ್ಟಿದೆ. ಬ್ರೇಕ್ ವಾಟರ್‌ಗಳ ನಿರ್ಮಾಣವು ನಿಧಾನವಾಗಿ ಕರಾವಳಿಯ ಸವೆತಕ್ಕೆ ಕಾರಣವಾಗುತ್ತದೆ. ಶರಾವತಿ ನದಿಯು ವಿವಿಧ ಮೀನುಗಳ ಪ್ರಬೇಧಗಳಿಗೆ, ಅದರಲ್ಲೂ ಮುಖ್ಯವಾಗಿ ನದಿ ಮುಖದಲ್ಲಿ ಮಾತ್ರವೇ ಕಂಡು ಬರುವ ಮೀನು ಪ್ರಬೇಧಗಳಿಗೆ ನೆಲೆಯಾಗಿದೆ. ಅಲ್ಲದೆ, ಕಡಲ ತೀರ ಪ್ರದೇಶವು ಅಳಿವಿನಂಚಿನಲ್ಲಿರುವ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಶೆಡ್ಯೂಲ್ ರ ಅಡಿಯಲ್ಲಿ ಸಂರಕ್ಷಿಸಲ್ಪಟ್ಟ ಪ್ರಬೇಧವಾದ ಆಲಿವ್ ರಿಡ್ಲೆ ಟರ್ಟಲ್ (ಆಮೆ) ಗಳು ಗೂಡುಗಳನ್ನು ಕಟ್ಟಿಕೊಳ್ಳುವ ತಾಣವಾಗಿದೆ. ಹೆಚ್‌ಪಿಪಿಎಲ್‌ ಅನುಮೋದನೆ ಮತ್ತು ಅನುಮತಿ ಪಡೆವ ಪ್ರಿಕ್ರಿಯೆಯನ್ನೂ ಗಾಳಿಗೆ ತೂರಿದೆ ಎಂದು ವರದಿ ತಿಳಿಸಿದೆ. ಎನ್‌ಜಿಟಿ ಮತ್ತು ಹೈಕೋರ್ಟ್‌ನಲ್ಲಿ ಇತ್ತೀಚೆಗೆ ನಡೆದ ಕಾನೂನು ಪ್ರಕ್ರಿಯೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವರದಿ ಒದಗಿಸುತ್ತದೆ.

ಶಾಂತಿಯುತವಾಗಿ ಪ್ರತಿಭಟಿಸುತ್ತಿರುವವರ ಮೇಲೆ ಹಿಂಸಾಚಾರ ನಡೆಸಿದ ಪೊಲೀಸರಿಗೆ ಶಿಕ್ಷೆಯಾಗಬೇಕು. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲೆಂದೇ ದಾಖಲಿಸಲಾಗಿರುವ ಎಲ್ಲಾ ಸುಳ್ಳು ಪ್ರಕರಣಗಳನ್ನು ಕೈಬಿಡಬೇಕು ಎಂದು ವರದಿ ಆಗ್ರಹಿಸಿದೆ. ಬಂದರು ಯೋಜನೆಯ ನಿರ್ಮಾಣಕ್ಕಾಗಿ ನೀಡಲಾಗಿರುವ ಅನುಮೋದನೆಗಳನ್ನೂ ಪರಿಸರ ಸಂಬಂಧಿತ ಅನುಮತಿಗಳನ್ನೂ ಕೂಡಲೇ ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ.

ಹೊನ್ನಾವರದ ಕಾರ್ಪೊರೇಟ್ ಬಂದರಿನ ಭೂತ ಚೇಷ್ಟೆಯೂ… ಬೆಸ್ತರಿಗೆ ಬೀದಿ ಪಾಲಾಗುವ ಭಯವೂ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ : ಆರು ಮಹಿಳೆಯರು ಸಾವು

ಹಳಿ ದಾಟುತ್ತಿದ್ದ ವೇಳೆ ರೈಲು ಹರಿದು ಆರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಝಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಬೆಳಿಗ್ಗೆ 9.30 ರ ಸುಮಾರಿಗೆ ಚೋಪನ್-ಪ್ರಯಾಗರಾಜ್ ಪ್ಯಾಸೆಂಜರ್...

ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ : ಪ.ಬಂಗಾಳದಲ್ಲಿ ‘ನರೇಗಾ’ ಪುನರಾರಂಭಕ್ಕೆ ಮುಂದಾದ ಕೇಂದ್ರ

ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನೆಡೆಯಾದ ಕಾರಣ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಪಶ್ಚಿಮ ಬಂಗಾಳದಲ್ಲಿ ವಿಶೇಷ ಷರತ್ತುಗಳೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ನರೇಗಾ) ಪುನರಾರಂಭಿಸಲು ಮುಂದಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್...

ಹರಿಯಾಣ ಮತಗಳ್ಳತನ : ರಾಹುಲ್ ಗಾಂಧಿ ಮಾಡಿರುವ ಪ್ರಮುಖ ಆರೋಪಗಳೇನು?

ಕಾಂಗ್ರೆಸ್ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ನವದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಚೇರಿಯಲ್ಲಿ ಬುಧವಾರ (ನವೆಂಬರ್ 5, 2025) ಮಹತ್ವದ ಪತ್ರಿಕಾಗೋಷ್ಠಿ ನಡೆಸಿದ್ದು, 2024ರ ಅಕ್ಟೋಬರ್...

ಬಾಣಂತಿಯರ ಸಾವಿನಿಂದ ಎಚ್ಚೆತ್ತ ಸರ್ಕಾರ: ಜೀವರಕ್ಷಕ ಔಷಧಿ ಖರೀದಿಸಲು ಕಟ್ಟುನಿಟ್ಟಿನ ನಿಯಮ

ಬೆಂಗಳೂರು: ಕೆಲವು ತಿಂಗಳ ಹಿಂದೆ ಬಳ್ಳಾರಿಯಲ್ಲಿ ಕಳಪೆ ಗುಣಮಟ್ಟದ IV ದ್ರವಗಳ ಬಳಕೆಯಿಂದ ಐದು ಯುವ ತಾಯಂದಿರು ಸಾವನ್ನಪ್ಪಿದ ನಂತರ, ರಾಜ್ಯ ಸರ್ಕಾರವು ತನ್ನ ಆಸ್ಪತ್ರೆಗಳಿಗೆ ಗುಣಮಟ್ಟದ ಜೀವರಕ್ಷಕ ಔಷಧಿಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು...

ಬ್ರೆಝಿಲ್ ಮಾಡೆಲ್ ಹರಿಯಾಣದಲ್ಲಿ 22 ಬಾರಿ ಮತ ಚಲಾಯಿಸಿದ್ದಾರೆ : ರಾಹುಲ್ ಗಾಂಧಿ ಆರೋಪ

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ 25 ಲಕ್ಷ ಅಥವಾ ರಾಜ್ಯದ ಒಟ್ಟು ಮತದಾರರಲ್ಲಿ ಶೇಕಡ 12ರಷ್ಟು 'ನಕಲಿ ಮತಗಳು' ಚಲಾವಣೆಯಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ದೆಹಲಿಯಲ್ಲಿ ಬುಧವಾರ (ನ.5)...

ಆಹಾರ-ಆರೋಗ್ಯ ಮತ್ತು ಸುರಕ್ಷತೆಗೆ ಮಾನದಂಡ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಬೀದಿ ಬದಿ ವ್ಯಾಪಾರಿಗಳು ಹಾಗೂ ದೊಡ್ಡ-ದೊಡ್ಡ ರೆಸ್ಟೋರೆಂಟ್‌ಗಳು ಆರೋಗ್ಯ ಮತ್ತು ಸುರಕ್ಷತಾ ಮಾನದಂಡ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಜೊತೆಗೆ, ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನದ ಬಗ್ಗೆ ನಿಗಾ ಇರಿಸುವುದಕ್ಕೆ ಸೂಕ್ತ ಕಾರ್ಯ ವಿಧಾನವೊಂದನ್ನು...

ಹರಿಯಾಣ ಚುನಾವಣೆಯಲ್ಲಿ ದೊಡ್ಡ ಮಟ್ಟದ ‘ಮತಗಳ್ಳತನ’ : ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ

ಬಿಹಾರದಲ್ಲಿ ಮೊದಲ ಹಂತದ ಮತದಾನದ ಮುನ್ನಾ ದಿನವಾದ ಇಂದು (ನವೆಂಬರ್ 5, 2025) ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಮಟ್ಟದ 'ಮತಗಳ್ಳತನ' ನಡೆದಿದೆ ಎಂಬ 'ಹೈಡ್ರೋಜನ್ ಬಾಂಬ್'...

ಹೊನ್ನಾವರದ ಕಾರ್ಪೊರೇಟ್ ಬಂದರಿನ ಭೂತ ಚೇಷ್ಟೆಯೂ… ಬೆಸ್ತರಿಗೆ ಬೀದಿ ಪಾಲಾಗುವ ಭಯವೂ!!

(ಇದು ಮೊದಲು ನ್ಯಾಯಪಥ ಜುಲೈ ಸಂಚಿಕೆಯಲ್ಲಿ ಪ್ರಕಟವಾಗಿತ್ತು) ಉತ್ತರ ಕನ್ನಡವೆಂದರೆ ಸರಕಾರಿ ಯೋಜನೆಗಳ ಪ್ರಯೋಗಶಾಲೆ; ಇಲ್ಲಿಯ ಅಮಾಯಕ ಮಂದಿ ಸರಕಾರಿ ಯೋಜನೆಗಳ ಪ್ರಯೋಗಪಶುಗಳು. ಹಲವು ದಶಕಗಳಿಂದ ಉತ್ತರ ಕನ್ನಡದ ಜನರು ಒಂದಿಲ್ಲೊಂದು ಯೋಜನೆಗಾಗಿ ತಲೆತಲಾಂತರದಿಂದ...

ಮೊದಲ ಪತ್ನಿ ವಿರೋಧಿಸಿದರೆ ಮುಸ್ಲಿಂ ಪುರುಷರಿಗೆ ಎರಡನೇ ವಿವಾಹ ನೋಂದಣಿಗೆ ಅವಕಾಶವಿಲ್ಲ: ಕೇರಳ ಹೈಕೋರ್ಟ್

ಕೇರಳ ಹೈಕೋರ್ಟ್ ಇತ್ತೀಚೆಗೆ ಮುಸ್ಲಿಂ ಪುರುಷನ ಎರಡನೇ ವಿವಾಹವನ್ನು ಕೇರಳ ವಿವಾಹ ನೋಂದಣಿ (ಸಾಮಾನ್ಯ) ನಿಯಮಗಳು, 2008 ರ ಅಡಿಯಲ್ಲಿ, ಮೊದಲ ಪತ್ನಿಗೆ ತಿಳಿಸದೆ ಮತ್ತು ವಿಚಾರಣೆ ನಡೆಸದೆ ನೋಂದಾಯಿಸಲಾಗುವುದಿಲ್ಲ ಎಂದು ತೀರ್ಪು...

‘Tryst with Destiny’ : ವಿಜಯ ಭಾಷಣದಲ್ಲಿ ನೆಹರು ಹೇಳಿಕೆ ಉಲ್ಲೇಖಿಸಿದ ಝೊಹ್ರಾನ್ ಮಮ್ದಾನಿ

ಅಮೆರಿಕದ ಅತಿ ದೊಡ್ಡ ನಗರ ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾಗಿರುವ ಝೊಹ್ರಾನ್ ಮಮ್ದಾನಿ ತನ್ನ ವಿಷಯ ಭಾಷಣದಲ್ಲಿ ಭಾರತದ ಮೊದಲ ಪ್ರಧಾನಿ ಜವಹರಲಾಲ್‌ ನೆಹರು ಅವರ ಐತಿಹಾಸಿಕ ಭಾಷಣದ ಸಾಲುಗಳನ್ನು...