ನವೆಂಬರ್ 26ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಭಾನುವಾರ ವೈದ್ಯಕೀಯ ನೆರವು ಪಡೆಯಲು ಒಪ್ಪಿಕೊಂಡಿದ್ದಾರೆ ಎಂದು ರೈತ ನಾಯಕ ಸುಖಜಿತ್ ಸಿಂಗ್ ಹರ್ಡೋಜಂದೆ ಅವರು ಹೇಳಿದ್ದಾರೆ ಎಂದು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಅದಾಗ್ಯೂ, ದಲ್ಲೇವಾಲ್ ಅವರು ಬೇಡಿಕೆ ಈಡೇರುವವರೆಗೆ ಉಪವಾಸ ಮುಂದುವರೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ದಲ್ಲೆವಾಲ್ ಅವರ ಆರೋಗ್ಯ ಸ್ಥಿತಿಯನ್ನು “ಗಂಭೀರ” ಎಂದು ವಿವರಿಸಲಾಗಿದ್ದರೂ, ಅವರ ಪ್ರತಿಭಟನೆಯ ತೀವ್ರತೆಯನ್ನು ಎತ್ತಿ ತೋರಿಸಲು ಅವರು ಈ ಹಿಂದೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ್ದರು. ಅದಾಗ್ಯೂ, ಉಪವಾಸದ ಅವಧಿಯಲ್ಲಿ ದಲ್ಲೆವಾಲ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಸುಮಾರು 20 ಕೆಜಿಗಳಷ್ಟು ತೂಕ ಕಳೆದುಕೊಂಡಿದ್ದಾರೆ ಎಂದು ಹರ್ಡೋಜಂದೆ ವಿವರಿಸಿದ್ದಾರೆ. ವೈದ್ಯಕೀಯ ನೆರವು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ದಲ್ಲೇವಾಲ್ ಅವರ ಉಪವಾಸವೂ 54 ನೇ ದಿನಕ್ಕೆ ಕಾಲಿಟ್ಟಿದ್ದು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕಾನೂನುಬದ್ಧ ಖಾತರಿ ನೀಡುವವರೆಗೆ ತಮ್ಮ ಅನಿರ್ದಿಷ್ಟಾವಧಿ ಉಪವಾಸವನ್ನು ಕೊನೆಗೊಳಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಫೆಬ್ರವರಿ 14 ರಂದು ಚಂಡೀಗಢದಲ್ಲಿ ಪಂಜಾಬ್‌ನ ಪ್ರತಿಭಟನಾ ನಿರತ ರೈತರೊಂದಿಗೆ ಸಭೆ ನಡೆಸಲು ಕೇಂದ್ರ ಸರ್ಕಾರವು ಒಪ್ಪಿಕೊಂಡ ನಂತರ ಈ ಬೆಳವಣಿಗೆ ನಡೆದಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೇಲೆ ಕಾನೂನುಬದ್ಧ ಖಾತರಿ ನೀಡಬೇಕು ಎಂದು ಒತ್ತಾಯಿಸುತ್ತಿರುವ ಪ್ರತಿಭಟನಾಕಾರರೊಂದಿಗೆ ಸಂವಾದವನ್ನು ಪುನರಾರಂಭಿಸುವ ಕುರಿತಾದ ಬಿಕ್ಕಟ್ಟನ್ನು ಈ ಸಭೆ ಕೊನೆಗೊಳಿಸಲಿದೆ ಎಂದು ನಂಬಲಾಗಿದೆ.
ಶನಿವಾರದಂದು, ಜಂಟಿ ಕಾರ್ಯದರ್ಶಿ ಪ್ರಿಯ ರಂಜನ್ ನೇತೃತ್ವದ ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿಗಳ ನಿಯೋಗವು ದಲ್ಲೆವಾಲ್ ಅವರನ್ನು ಭೇಟಿ ಮಾಡಿ ಕಳೆದ 11 ತಿಂಗಳುಗಳಿಂದ ಆಂದೋಲನವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು, ರೈತರಿಗೆ ಪ್ರಸ್ತಾವನೆಯೊಂದನ್ನು ನೀಡಿದೆ. ಈ ಪ್ರಸ್ತಾವನೆಯನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದಾಗಿ ರೈತ ಮುಖಂಡರು ಹೇಳಿದ್ದಾರೆ.
ಶನಿವಾರ, ಖಾನೌರಿ ಗಡಿ ಕೇಂದ್ರದಲ್ಲಿ ಇನ್ನೂ 10 ರೈತರು ಉಪವಾಸ ಸತ್ಯಾಗ್ರಹದಲ್ಲಿ ಸೇರಿಕೊಂಡಿದ್ದಾರೆ. ಹಾಗಾಗಿ ಒಟ್ಟು ಉಪವಾಸ ನಿರತ ರೈತರ ಸಂಖ್ಯೆ 121 ಕ್ಕೆ ತಲುಪಿದೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ ರೈತ ಸಂಘಟನೆಗಳ ನೇತೃತ್ವದ ದೊಡ್ಡ ಚಳುವಳಿಯ ಭಾಗವಾಗಿ ದಲ್ಲೆವಾಲ್ ಅವರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಹೋರಾಟವು ಸುಮಾರು ಒಂದು ವರ್ಷದಿಂದ ನಡೆಯುತ್ತಿವೆ.
ಇದನ್ನೂ ಓದಿ: ಪ್ರತಿಭಟನಾ ನಿರತ ರೈತರಿಗೆ ಪ್ರಸ್ತಾವನೆ ಸಲ್ಲಿಸಿದ ಕೇಂದ್ರ ಸರ್ಕಾರ – ಮಂಡಿಯೂರಿತೆ ಬಿಜೆಪಿ?
ಪ್ರತಿಭಟನಾ ನಿರತ ರೈತರಿಗೆ ಪ್ರಸ್ತಾವನೆ ಸಲ್ಲಿಸಿದ ಕೇಂದ್ರ ಸರ್ಕಾರ – ಮಂಡಿಯೂರಿತೆ ಬಿಜೆಪಿ?


