ಆಗಸ್ಟ್ 2023 ರಲ್ಲಿ ಪ್ರಬಲ ಜಾತಿ ವ್ಯಕ್ತಿಯಿಂದ ಅತ್ಯಾಚಾರಕ್ಕೊಳಗಾಗಿದ್ದ 21 ವರ್ಷದ ದಲಿತ ಮಹಿಳೆಯನ್ನು ನಂತರ ಸ್ಥಳೀಯ ಪಂಚಾಯತ್‌ನಲ್ಲಿ ರಾಜಿ ಮಾಡಿಕೊಳ್ಳಲು ಒತ್ತಾಯಿಸಲಾಯಿಸಿದ ಬಳಿಕ, ದೂರು ನೀಡಿದಂತೆ ₹2.5 ಲಕ್ಷಗಳನ್ನು ನೀಡಲಾಗಿತ್ತು.
ಆದರೆ, ಈ ರಾಜಿ-ಪಂಚಾಯ್ತಿಂದ ಆಕೆಯ ಸಂಕಷ್ಟ ಅಂತ್ಯವಾಗಲಿಲ್ಲ. ಕಿರುಕುಳ ಮತ್ತು ಸಾಮಾಜಿಕ ದಬ್ಬಾಳಿಕೆಯಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆ ಕುಟುಂಬ ಊರನ್ನೇ ಬಿಟ್ಟು ಬೇರೆಡೆ ಜೀವನ ಕಂಡುಕೊಂಡಿದ್ದರು. ದೂರದ ಊರಲ್ಲಿ ಸದ್ದಿಲ್ಲದೆ ಆಕೆಯ ಮದುವೆ ಏರ್ಪಡಿಸಿದಾಗ, ಆರೋಪಿಯು ಅದರ ಬಗ್ಗೆ ತಿಳಿದುಕೊಂಡು ಲೈಂಗಿಕ ದೌರ್ಜನ್ಯದ ವೀಡಿಯೊವನ್ನು ವರನ ಕುಟುಂವಕ್ಕೆ ಕಳುಹಿಸಿದ್ದಾನೆ. ಪರಿಣಾಮ, ಆಕೆಯ ನಿಶ್ಚಿತಾರ್ಥದ ನಂತರ ಮದುವೆಯನ್ನು ರದ್ದುಗೊಳಿಸಲಾಯಿತು.
ಮದುವೆ ರದ್ದಾದ ಬಳಿಕ ಆಕೆಯ ಕುಟುಂಬದ ಸ್ಥಿತಿ ಇನ್ನೂ ಕೆಟ್ಟದಾಗಿದೆ; ಆರೋಪಿಯ ಕುಟುಂಬವು ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿತು. ಆಗ ಸಂತ್ರಸ್ತೆ ತಂದೆ, ಒತ್ತಡ ಮತ್ತು ಬೆದರಿಕೆಗಳನ್ನು ಸಹಿಸಲಾರದೆ, ಹಾಪುರ್ ಪೊಳಿಸ್ ವರಿಷ್ಠಾಧಿಕಾರಿ ಕುನ್ವರ್ ಜ್ಞಾನಂಜಯ್ ಸಿಂಗ್ ಅವರನ್ನು ಭೇಟಿಯಾದರು. ಅಪರಾಧ ನಡೆದ ಸುಮಾರು ಎರಡು ವರ್ಷಗಳ ನಂತರ ಕಳೆದ ಗುರುವಾರ ಎಫ್‌ಐಆರ್ ದಾಖಲಿಸಲಾಯಿತು.
“ನನ್ನ ಮಗಳ ಮೇಲೆ ದೌರ್ಜನ್ಯ ನಡೆಸಿದ ನಂತರ, ಪಂಚಾಯತ್ ಕರೆಯಲಾಯಿತು, ಅಲ್ಲಿ ನಾವು ₹2.5 ಲಕ್ಷ ಗಳಿಗೆ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಒತ್ತಾಯಿಸಲಾಯಿತು. ನಾವು ಗ್ರಾಮವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋದೆವು. ಇತ್ತೀಚೆಗೆ ನನ್ನ ಮಗಳ ಮದುವೆಯನ್ನು ಒಬ್ಬ ವ್ಯಕ್ತಿಯೊಂದಿಗೆ ಏರ್ಪಡಿಸಿದೆವು, ಆದರೆ ಆರೋಪಿಯು ನಿಶ್ಚಿತಾರ್ಥದ ದಿನ ಅಶ್ಲೀಲ ವೀಡಿಯೊ ಕಳುಹಿಸಿದನು. ಇದರಿಂದಾಗಿ ಆಕೆಯ ಮದುವೆಯನ್ನು ರದ್ದುಗೊಳಿಸಲಾಯಿತು; ಈಗ ನಾವು ಏನು ಮಾಡಬೇಕು” ಎಂದು ಪ್ರಶ್ನಿಸಿದ್ದಾರೆ.
ಆರೋಪಿಯ ಕುಟುಂಬವು ತನ್ನ ಮೇಲೆ ಇತ್ತೀಚೆಗೆ ಹಲ್ಲೆ ನಡೆಸಿ ಬಟ್ಟೆ ಬಿಚ್ಚಿತು ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. “ಅವರು ಹಣವನ್ನು ಹಿಂತಿರುಗಿಸುವಂತೆ ನಮ್ಮ ಬಳಿಗೆ ಬಂದು ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ನನ್ನ ಹೆಂಡತಿ ಅವರನ್ನು ವಿರೋಧಿಸಿದಾಗ, ಆಕೆಯ ಮೇಲೆ ಹಲ್ಲೆ ನಡೆಸಲಾಯಿತು. ಆರೋಪಿಯು ತನ್ನ ಬಟ್ಟೆಗಳನ್ನು ಹರಿದು ಹಾಕಿದನು” ಎಂದು ಯುವತಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
“ಆರಂಭಿಕ ಘಟನೆಯನ್ನು ನನಗೆ ವರದಿ ಮಾಡಲಾಗಿಲ್ಲ. ಈಗ, ಲಿಖಿತ ದೂರು ಬಂದಿದ್ದು, ಅದರ ನಂತರ ಐದು ಪುರುಷರ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 354 (ದಾಳಿ ಅಥವಾ ಕ್ರಿಮಿನಲ್ ಬಲ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಹಫೀಜ್‌ಪುರ ಎಸ್‌ಎಚ್‌ಒ ಆಶಿಶ್ ಕುಮಾರ್ ಹೇಳಿದರು.
“ಈ ವಿಷಯದ ತನಿಖೆಗಾಗಿ ತಂಡಗಳನ್ನು ರಚಿಸಲಾಗಿದ್ದು, ಸಂಬಂಧಪಟ್ಟವರನ್ನು ಬಂಧಿಸಲಾಗುವುದು” ಎಂದು ಎಸ್‌ಎಚ್‌ಒ ಹೇಳಿದರು.
550 ದಲಿತರಿಗೆ ಶಿವ ದೇಗುಲಕ್ಕೆ ಪ್ರವೇಶ ನಿರ್ಬಂಧ; ಕ್ರಮ ತೆಗೆದುಕೊಳ್ಳದ ಮಮತಾ ಬ್ಯಾನರ್ಜಿ ಸರ್ಕಾರ


