Homeಕರ್ನಾಟಕಹರಿಯೋ ನೀರು, ಉರಿಯೋ ಸೂರ್ಯನ ತಡೆಯಲಾಗಲ್ಲ, ಮೇಕೆದಾಟು ಹೋರಾಟ ನಿಲ್ಲಿಸಲಾಗಲ್ಲ: ಡಿ.ಕೆ.ಶಿವಕುಮಾರ್‌‌

ಹರಿಯೋ ನೀರು, ಉರಿಯೋ ಸೂರ್ಯನ ತಡೆಯಲಾಗಲ್ಲ, ಮೇಕೆದಾಟು ಹೋರಾಟ ನಿಲ್ಲಿಸಲಾಗಲ್ಲ: ಡಿ.ಕೆ.ಶಿವಕುಮಾರ್‌‌

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮೇಕೆದಾಟು ಪಾದಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು.

- Advertisement -
- Advertisement -

“ಹರಿಯೋ ನೀರು, ಉರಿಯೋ ಸೂರ್ಯನನ್ನು ತಡೆಯಲಾಗಲ್ಲ. ಹಾಗೆಯೇ ಮೇಕೆದಾಟು ಅಣೆಕಟ್ಟು ಜಾರಿಗಾಗಿ ನಡೆಯುತ್ತಿರುವ ಹೋರಾಟವನ್ನು ಯಾರಿಂದಲೂ ನಿಲ್ಲಿಸಲಾಗಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಗುಡುಗಿದರು.

“ನಮ್ಮ ನೀರು ನಮ್ಮ ಹಕ್ಕು” ಘೋಷಣೆಯೊಂದಿಗೆ ಪ್ರದೇಶ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಿತು. ಕನಕಪುರ ತಾಲ್ಲೂಕಿನ ‘ಸಂಗಮ’ದಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಕಾವೇರಿ ಹೋರಾಟಕ್ಕೆ ಜಯವಾಗಲಿ”, “ಭಾರತ್‌ ಮಾತಾಕೀ ಜೈ” ಎಂದು ಮಾತು ಆರಂಭಿಸಿದ ಅವರು, “ಇಲ್ಲಿ ಹಾರಾಡುತ್ತಿರುವ ಭಾರತದ ಧ್ವಜ, ಕರ್ನಾಟಕದ ಧ್ವಜ, ಕಾಂಗ್ರೆಸ್‌ ಧ್ವಜ, ಈ ಕಾವೇರಿ ನದಿಯ ಮೇಕೆದಾಟಿನ ಹೋರಾಟ ಧ್ವಜವನ್ನು ಮುಟ್ಟಲು ನಿಮ್ಮಿಂದ ಸಾಧ್ಯವಿಲ್ಲ. ಈ ನಡಿಗೆ ನಮ್ಮ ಪಕ್ಷಕ್ಕಲ್ಲ. ನೀರಿಗಾಗಿ. ಎರಡೂವರೆ ಕೋಟಿ ಜನರ ಬದುಕಿಗಾಗಿ” ಎಂದು ಸ್ಪಷ್ಟಪಡಿಸಿದರು.

“ಇದೊಂದು ಐತಿಹಾಸಿಕ ಕಾರ್ಯಕ್ರಮ. ಮನುಷ್ಯ ಎಷ್ಟು ದಿನ ಇರುತ್ತಾನೋ ಹೇಳಲು ಆಗಲ್ಲ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ” ಎಂದು ತಿಳಿಸಿದರು.

ಈ ಹೋರಾಟಕ್ಕೆ ತೊಂದರೆ ಮಾಡಬೇಕೆಂದು ತೊಂದರೆ ಮಾಡುತ್ತಿದ್ದಾರೆ. ಅನೇಕ ರೀತಿಯಲ್ಲಿ ಟೀಕೆ-ಟಿಪ್ಪಣಿಯನ್ನು ನಮ್ಮ ನಡಿಗೆಗೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರೇ ನೀವು ರೈತರ ಮಕ್ಕಳು. ಈ ರಾಜ್ಯವನ್ನು ಪ್ರತಿನಿಧಿಸುತ್ತಿರಿ. ಆದರೆ ಹೋರಾಟವನ್ನು ಮುಗಿಸಬೇಕೆಂದು ನಿಷೇದಾಜ್ಞೆ ಜಾರಿ ಮಾಡಿದ್ದೀರಲ್ಲ, ಇಲ್ಲಿ ಭಾಗವಹಿಸಿರುವ ಧರ್ಮ ಪೀಠದ ಪ್ರತಿನಿಧಿಗಳನ್ನು, ಸಿದ್ದರಾಮಯ್ಯನವರನ್ನು, ಖರ್ಗೆಯವರನ್ನು, ನೂರು ಜನ ಶಾಸಕರನ್ನು ಬಂಧಿಸಿ ನೋಡೋಣ ಎಂದು ಸವಾಲು ಹಾಕಿದರು.

ಹೋರಾಟಕ್ಕೆ ಬೆಂಬಲ ಕೊಡಬೇಡಿ ಎಂದು ನಿಮಗೆ ಕರೆ ಮಾಡಿ ಯಾರಾದರೂ ಹೇಳಬಹುದು. ಹರಿಯೋ ನೀರನ್ನು, ಬೀಸೋ ಗಾಳಿಯನ್ನು, ಉರಿಯೋ ಸೂರ್ಯನನ್ನು ನಿಲ್ಲಿಸಲು ಸಾಧ್ಯವೇ? ಉರಿಯೋ ಸೂರ್ಯದ ಮಕ್ಕಳು ವೇದಿಕೆ ಮೇಲೆ ಕೂತಿದ್ದಾರೆ ಎಂದು ಗುಡುಗಿದರು.

“ನಮ್ಮ ಕಾಂಗ್ರೆಸ್ ನಾಯಕರಲ್ಲಿ ಹೋರಾಟ ರಕ್ತಗತವಾಗಿದೆ. ಈ ದೇಶದ ಏಕತೆ, ಸಮಗ್ರತೆಗಾಗಿ ಕಾಂಗ್ರೆಸ್ ಹೋರಾಡಿದೆ. ಕಾಂಗ್ರೆಸ್‌ ನಾಯಕರು ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್‌ ಇತಿಹಾಸವೇ ದೇಶದ ಇತಿಹಾಸ. ಈ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಬಡಜನರ ಅಭಿವೃದ್ಧಿಗಾಗಿ” ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಅವರು ಕಾವೇರಿ ನದಿಗೆ ಪೂಜೆ ಸಲ್ಲಿಸಿದರು. ಕಾವೇರಿ ನದಿಯಲ್ಲಿ ಮಿಂದರು. ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಪಾದಯಾತ್ರೆಯನ್ನು ಉದ್ಘಾಟಿಸಿದರು.

ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿ, “ಈ ಯೋಜನೆಯು ಬೆಂಗಳೂರಿಗೆ ಕುಡಿಯುವ ನೀರು ಕೊಡುತ್ತದೆ. ಹಲವು ಹಳ್ಳಿಗಳಿಗೆ ನೀರು ಕೊಡುತ್ತದೆ. ನಾಲ್ಕು ನೂರು ಮೆಗಾವ್ಯಾಟ್ ವಿದ್ಯುತ್‌ ಶಕ್ತಿ ಉತ್ಪಾದಿಸಬಹುದು. ಇದೊಂದು ದೊಡ್ಡ ಕೆಲಸ. ಈ ಯೋಜನೆಯ ವೆಚ್ಚ 9,000 ಕೋಟಿ ರೂ.ಗಳು. ಇಂತಹದೊಂದು ದೊಡ್ಡ ಕೆಲಸವನ್ನು ಕಾಂಗ್ರೆಸ್‌ ಸರ್ಕಾರ ಪ್ರಾರಂಭಿಸಿತ್ತು” ಎಂದರು.

ಎಂ.ಬಿ.ಪಾಟೀಲ ಅವರು ನೀರಾವರಿ ಸಚಿವರಾಗಿದ್ದಾಗ ಈ ಯೋಜನೆ ರೂಪ ಪಡೆಯಿತು. ಡಿ.ಕೆ.ಶಿವಕುಮಾರ್‌ ಅವರು ನೀರಾವರಿ ಸಚಿವರಾಗಿದ್ದಾಗ ಮತ್ತಷ್ಟು ಸ್ಪಷ್ಟತೆ ಪಡೆಯಿತು. ಕರ್ನಾಟಕ ರಾಜ್ಯದ ಎಲ್ಲ ಜನತೆಯು ಈ ಯೋಜನೆಗೆ ಸಂಪೂರ್ಣವಾದ ಬೆಂಬಲವನ್ನು ಕೊಡುತ್ತದೆ. ಇದು ಎಲ್ಲರಿಗೂ ಬೇಕಾದ ಯೋಜನೆಯಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರಾಗಾಗಿ ಪದೇ ಪದೇ ಕಚ್ಚಾಡುತ್ತಿದ್ದೇವೆ. 67 ಟಿಎಂಸಿ ನೀರು ಸಂಗ್ರಹಿಸುವ ಯೋಜನೆಯ ಪ್ರಯತ್ನಕ್ಕಾಗಿ ಕಾಂಗ್ರೆಸ್‌ ನಾಯಕರನ್ನು ಅಭಿನಂದಿಸುವೆ. ಈ ಯೋಜನೆ ಕಾರ್ಯಗತವಾಗುವವರೆಗೂ ಬಿಡಬಾರದು. ಈ ಛಲ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಲ್ಲಿ ಇದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ನಾಲ್ಕೈದು ದಿನ ಪಾದಯಾತ್ರೆ ನಡೆಯಲಿದೆ. ಆರೋಗ್ಯ ಕಾಪಾಡಿಕೊಳ್ಳಿ. ಕೋವಿಡ್ ಸೂಚನೆಯನ್ನು ಪಾಲನೆ ಮಾಡಿರಿ. ನಮ್ಮ ವಿರುದ್ಧ ಏನಾದರೂ ಹೇಳಿಕೊಳ್ಳುವಂತಹದ್ದು ಆಗಬಾರದು. ಮಾಸ್ಕ್‌ ಧರಿಸಬೇಕು. ದೈಹಿಕ ಅಂತ ಕಾಪಾಡಿಕೊಂಡು ಸಾಗಬೇಕು. ಹೋರಾಟದ ಕ್ರೆಡಿಟ್‌ ಕಾಂಗ್ರೆಸ್‌ ನಾಯಕರಿಗೆ ಹೋಗುತ್ತದೆ ಎಂದು ಭಾವಿಸಿ ಈ ಹೋರಾಟವನ್ನು ವಿಫಲ ಮಾಡಲು ಯತ್ನಿಸುತ್ತಿದೆ. ಆದರೆ ಈ ಹೋರಾಟವನ್ನು ಯಶಸ್ವಿಗೊಳಿಸಬೇಕು.

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತನಾಡಿ, “ನಾಲ್ಕೈದು ವರ್ಷಗಳಲ್ಲಿ 260 ಟಿಎಂಸಿ ನೀರು ಹೆಚ್ಚುವರಿಯಾಗಿ ಸಮುದ್ರಕ್ಕೆ ಹೋಗಿದೆ. ಮಳೆಗಾಲದಲ್ಲಿ ಹೆಚ್ಚು ನೀರನ್ನು ನಾವು ಶೇಖರಣೆ ಮಾಡಿಕೊಳ್ಳುತ್ತೇವೆ. ಕುಡಿಯಲು ಬೆಂಗಳೂರಿಗೆ ನೀಡುತ್ತೇವೆ. ತಮಿಳುನಾಡಿನಲ್ಲಿ ನೀರಿಲ್ಲದಿದ್ದಾಗ ಅವರಿಗೂ ನೀಡುತ್ತೇವೆ. ಎರಡು ರಾಜ್ಯಕ್ಕೂ ಈ ಯೋಜನೆ ಸೂಕ್ತವಾಗಿದೆ” ಎಂದು ವಿವರಿಸಿದರು.

ಈ ಯೋಜನೆಯ ಕುರಿತು ತರಕಾರು ತೆಗೆಯಲು ಯಾವುದೇ ದಾಖಲಾತಿ, ಆಧಾರಗಳಿಲ್ಲ. ತಮಿಳುನಾಡಿದವರು ಕ್ಯಾತೆ ತೆಗೆದಯುವುದು ಸರಿ, ಇವರು (ಬಿಜೆಪಿಯವರು) ಯಾಕೆ ಅವರ ಜೊತೆ ಸೇರಿಕೊಂಡಿದ್ದಾರೆ. ಅಣ್ಣಾ ಮಲೈ (ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ) ಕರ್ನಾಟಕದಲ್ಲಿ ಇದ್ದ ಅಧಿಕಾರಿ. ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬೆಂಬಲ ನೀಡುವುದು ಏನನ್ನು ಸೂಚಿಸುತ್ತದೆ. ನಿಮ್ಮ ಶಕ್ತಿಯನ್ನು ವಿಸ್ತರಿಸಲು ಅಲ್ಲಿಗೆ ಸಪೋರ್ಟ್ ಮಾಡುತ್ತೀರಿ. ಈ ಯೋಜನೆ ಮಾಡಬಾರದು ಎಂಬುದು ಬಿಜೆಪಿಯ ಉದ್ದೇಶವಾಗಿದೆ. ಇದು ಕನ್ನಡ ನಾಡಿಗೆ ಮಾಡುವ ದ್ರೋಹ ಅಲ್ಲವಾ? ಅದಕ್ಕಾಗಿ ಈ ಪಾದಯಾತ್ರೆ ಮಾಡಬಾರದಾ? ಎಂದು ಪ್ರಶ್ನಿಸಿದರು.

“ಎಲ್ಲರೂ ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಿ, ಗ್ಲೌಸ್ ಹಾಕಿಕೊಳ್ಳಿ. ಸ್ಯಾನಿಟೈಸ್ ಮಾಡಿಕೊಳ್ಳಿ. ಮಾಸ್ಕ್‌ ಹಾಕಿಕೊಳ್ಳದವರನ್ನು ವಾಪಸ್‌ ಕಳಿಸುತ್ತೇವೆ. ಸರ್ಕಾರದ ನಿಯಮಗಳಿಗೆ ಗೌರವ ಕೊಡಬೇಕು. ಆ ಜವಾಬ್ದಾರಿಯನ್ನು ನಿರ್ವಹಿಸಿ ಮುನ್ನಡೆಯಬೇಕು” ಎಂದು ಸೂಚಿಸಿದರು.

ಸಾಧುಕೋಕಿಲ ಅವರ ತಂಡವು ಮೇಕೆದಾಟು ಕಾವೇರಿ ಗೀತೆಯನ್ನು ಹಾಡಿತು. “ಹರಿಯುತಿಹಳು ನಮಗಾಗಿ. ಹೆಜ್ಜೆ ಹಾಕುತ್ತೇವೆ ನಾವು, ಹೆಜ್ಜೆ ಹಾಕುತ್ತೇವೆ ನಾವು ಹೆಜ್ಜೆ. ಕಾವೇರಿಗಾಗಿ ಹೆಜ್ಜೆ. ನಮ್ಮ ನೀರಿಗಾಗಿ ಹೆಜ್ಜೆ. ನಾಡಿಗಾಗಿ ಹೆಜ್ಜೆ. ನಾಡ ಜನತೆಗಾಗಿ ಹೆಜ್ಜೆ. ಹೆಜ್ಜೆ ಹಾಕುತ್ತೇವೆ ನಾವು ಹೆಜ್ಜೆ. ಕಾವೇರಿ ತಾಯಿಗಾಗಿ ಹೆಜ್ಜೆ” ಎಂದು ಸಾಧು ಕೋಕಿಲ ತಂಡ ಹಾಡಿತು.

ಕಾಂಗ್ರೆಸ್ ನಾಯಕಿ, ಹಿರಿಯ ನಟಿ ಜಯಮಾಲ, ಕರ್ನಾಟಕ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದ್, ನಟ ದುನಿಯಾ ವಿಜಯ್‌ ಭಾಗಿಯಾಗಿ ಚಿತ್ರರಂಗದ ಪರ ಬೆಂಬಲ ಸೂಚಿಸಿದರು.

ವೇದಿಕೆ ಕಾರ್ಯಕ್ರಮದ ನಿರೂಪಣೆಯನ್ನು ಕಾಂಗ್ರೆಸ್ ನಾಯಕ ಆರ್‌.ಧ್ರುವನಾರಾಯಣ ಮಾಡಿದರು. ಸ್ವಾಗತ ಹಾಗೂ ಪ್ರಸ್ತಾವಿಕ ಭಾಷಣವನ್ನು ಡಿ.ಕೆ.ಸುರೇಶ್‌ ನೆರವೇರಿಸಿದರು. ಕೆಪಿಸಿಸಿ ಮಾಜಿ ಅಧ್ಯಕ್ಷರಾದ, ಆರ್‌.ವಿ.ದೇಶಪಾಂಡೆ, ಡಾ.ಜಿ.ಪರಮೇಶ್ವರ್‌‌, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಚ್‌.ಕೆ.ಪಾಟೀಲ್‌, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್‌.ಮುನಿಯಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್‌, ಕಾಂಗ್ರೆಸ್ ನಾಯಕರಾದ ರಾಮಲಿಂಗರೆಡ್ಡಿ, ಸಲೀಂ ಮಹಮದ್, ಈಶ್ವರ್‌ ಖಂಡ್ರೆ, ಹರಿಪ್ರಸಾದ್‌, ಮಾಜಿ ಸಚಿವರಾದ ಎಂ.ಬಿ.ಪಾಟೀಲ್‌, ಕೆ.ಜೆ.ಜಾರ್ಜ್, ಮೋಟಮ್ಮ, ಟಿ.ಬಿ.ಜಯಚಂದ್ರ, ಎಚ್.ಎಂ.ರೇವಣ್ಣ, ರಮೇಶ್‌ಕುಮಾರ್‌, ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.


ಇದನ್ನೂ ಓದಿರಿ: ಚಂಡೀಗಢ: ಹೆಚ್ಚು ಸ್ಥಾನ ಗೆದ್ದರೂ ಎಎಪಿಗೆ ಒಲಿಯದ ಮೇಯರ್‌ ಸ್ಥಾನ; ಬಿಜೆಪಿ ಅಭ್ಯರ್ಥಿ ಆಯ್ಕೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...