Homeಅಂತರಾಷ್ಟ್ರೀಯಟಿಕ್‌ಟಾಕ್‌ ಖರೀದಿಗೆ ಟ್ರಂಪ್‌ ಜೊತೆ ಮೈಕ್ರೋಸಾಫ್ಟ್‌‌ ಮಾತುಕತೆ: ಸತ್ಯ ನಾದೆಲ್ಲಾ

ಟಿಕ್‌ಟಾಕ್‌ ಖರೀದಿಗೆ ಟ್ರಂಪ್‌ ಜೊತೆ ಮೈಕ್ರೋಸಾಫ್ಟ್‌‌ ಮಾತುಕತೆ: ಸತ್ಯ ನಾದೆಲ್ಲಾ

ಮೈಕ್ರೋಸಾಫ್ಟ್ ಹೇಳಿಕೆಯು ಟ್ರಂಪ್ ಒಪ್ಪಂದವನ್ನು ಅಂಗೀಕರಿಸುತ್ತಾರೆಯೆ ಅಥವಾ ಟಿಕ್‌ಟಾಕ್ ನಿಷೇಧವನ್ನು ತ್ಯಜಿಸುತ್ತಾರೆಯೆ ಎಂದು ಸ್ಪಷ್ಟವಾಗಿ ಹೇಳಲಿಲ್ಲ, ಆದರೂ ಮೈಕ್ರೋಸಾಫ್ಟ್ ಟ್ರಂಪ್ ಅವರೊಂದಿಗೆ ಚರ್ಚೆಯಲ್ಲಿದೆ ಎಂದು ಹೇಳಿದೆ.

- Advertisement -
- Advertisement -

ಅಮೆರಿಕಾದಲ್ಲಿ ಕಾರ್ಯನಿರ್ವಹಿಸುವ ಟಿಕ್‌ಟಾಕ್‌ ಅಪ್ಲಿಕೇಶನ್ ಅನ್ನು ಖರೀದಿಸಲು ಆಡಳಿತದ ಬೆಂಬಲವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಕುರಿತು ಮೈಕ್ರೋಸಾಫ್ಟ್ ಕಾರ್ಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾದೆಲ್ಲಾ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರೊಂದಿಗೆ ದೂರವಾಣಿ ಮೂಲಕ ಮಾತನಾಡಿದರು ಎನ್ನಲಾಗಿದೆ.

ಮೈಕ್ರೋಸಾಫ್ಟ್ ಅಮೆರಿಕಾ ಸೇರಿದಂತೆ ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಟಿಕ್‌ಟಾಕ್‌ ಅನ್ನು  ಖರೀದಿಸುವ ಮಾತುಕತೆ ದೃಡಪಡಿಸಿದೆ ಮತ್ತು ಸೆಪ್ಟೆಂಬರ್ 15 ರ ನಂತರ ಒಪ್ಪಂದವನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚುತ್ತಿರುವ ಅಮೆರಿಕಾ-ಚೀನಾ ಉದ್ವಿಗ್ನತೆಗಳಲ್ಲಿ ಟಿಕ್‌ಟಾಕ್ ಕೂಡಾ ಕೇಂದ್ರ ಬಿಂದುವಾಗಿದೆ. ಅಮೆರಿಕನ್ ಬಳಕೆದಾರರ ಡೇಟಾವನ್ನು ಬೀಜಿಂಗ್‌ಗೆ ಹಸ್ತಾಂತರಿಸಲು, 165 ಮಿಲಿಯನ್ ಅಮೆರಿಕನ್ನರ ಮೇಲೆ ಪ್ರಭಾವ ಬೀರಲು ಟಿಕ್ ಟಾಕ್‌ ಅಪ್ಲಿಕೇಶನ್ ಅನ್ನು ಬಳಸಬಹುದೆಂದು ಅಮರಿಕಾ ರಾಜಕಾರಣಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಜಾಗತಿಕವಾಗಿ 2 ಶತಕೋಟಿಗಿಂತ ಹೆಚ್ಚು ಬಳಕೆದಾರರು ಆಪ್‌ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಟ್ರಂಪ್ ವಿರೋಧಿ ಕಾರ್ಯಕರ್ತರು ಪ್ರಚಾರ ಚಟುವಟಿಕೆಗಳನ್ನು ನಡೆಸಲು ಈ ವೇದಿಕೆಯನ್ನು ಬಳಸಿದ ನಂತರ ಅಪ್ಲಿಕೇಶನ್ ಅಮೆರಿಕಾ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಿದೆ.

ಮೈಕ್ರೋಸಾಫ್ಟ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ, ಟಿಕ್‌ಟಾಕ್ ಅಪ್ಲಿಕೇಶನ್‌ಗೆ ಹೆಚ್ಚಿನ ಸುರಕ್ಷತೆ, ಗೌಪ್ಯತೆ ಮತ್ತು ಡಿಜಿಟಲ್ ಸುರಕ್ಷತಾ ರಕ್ಷಣೆಗಳನ್ನು ಸೇರಿಸಲು ಮತ್ತು ಅಮೆರಿಕನ್ನರ ಎಲ್ಲಾ ಖಾಸಗಿ ಡೇಟಾವನ್ನು ಅಮೆರಿಕಾಗೆ ಹಿಂತಿರುಗಿಸಲು ಮತ್ತು ದೇಶದ ಹೊರಗಿನ ಸರ್ವರ್‌ಗಳಿಂದ ಅಳಿಸುವುದನ್ನು ಖಚಿತಪಡಿಸಿಕೊಳ್ಳಲು ಭರವಸೆ ನೀಡಿದೆ. ಕಂಪನಿಯ ಅಲ್ಪ ಪಾಲನ್ನು ತೆಗೆದುಕೊಳ್ಳಲು ಅಮೆರಿಕದ ಇತರ ಹೂಡಿಕೆದಾರರನ್ನು ಆಹ್ವಾನಿಸಬಹುದು ಎಂದು ಕಂಪನಿ ಹೇಳಿದೆ.

ಮೈಕ್ರೋಸಾಫ್ಟ್ ಹೇಳಿಕೆಯು ಟ್ರಂಪ್ ಒಪ್ಪಂದವನ್ನು ಅಂಗೀಕರಿಸುತ್ತಾರೆಯೆ ಅಥವಾ ಟಿಕ್‌ಟಾಕ್ ನಿಷೇಧವನ್ನು ತ್ಯಜಿಸುತ್ತಾರೆಯೆ ಎಂದು ಸ್ಪಷ್ಟವಾಗಿ ಹೇಳಲಿಲ್ಲ, ಆದರೂ ಮೈಕ್ರೋಸಾಫ್ಟ್ ಟ್ರಂಪ್ ಅವರೊಂದಿಗೆ ಚರ್ಚೆಯಲ್ಲಿದೆ ಎಂದು ಹೇಳಿದೆ.

ಅದಾಗ್ಯೂ ಬೈಟೆಡೆನ್ಸ್ ಜಾಗತಿಕ ಕಂಪನಿಯಾಗಲು ಬದ್ಧವಾಗಿದೆ ಮತ್ತು ಸ್ಥಳೀಯ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ ಎಂದು ಟಿಕ್‌ಟಾಕ್ ಮಾಲೀಕರು ಆನ್‌ಲೈನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟಿಕ್‌ಟಾಕ್ ಅನ್ನು ಎರಡು ವರ್ಷಗಳ ಹಿಂದೆ ಅಮೆರಿಕದಲ್ಲಿ ಪ್ರಾರಂಭಿಸಲಾಯಿತು. ಟಿಕ್‌ಟಾಕ್ ಜನಪ್ರಿಯವಾಗುತ್ತಿದ್ದಂತೆ, ಅದರ ವಿರುದ್ಧ ಟೀಕೆಗಳು ಸಹ ಕೇಳಿಬಂದಿವೆ.


ಓದಿ: ಅಮೇರಿಕದಲ್ಲಿ ಟಿಕ್ ಟಾಕ್ ಬ್ಯಾನ್ ಮಾಡುತ್ತೇವೆ; ಡೋನಾಲ್ಡ್ ಟ್ರಂಪ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...