HomeUncategorizedಗುರುಗಾಂವ್: 75% ಕಾರ್ಮಿಕರಿಗೆ ಎಪ್ರಿಲ್ ತಿಂಗಳ ಸಂಬಳ ನೀಡದ ಕಾರ್ಖಾನೆ

ಗುರುಗಾಂವ್: 75% ಕಾರ್ಮಿಕರಿಗೆ ಎಪ್ರಿಲ್ ತಿಂಗಳ ಸಂಬಳ ನೀಡದ ಕಾರ್ಖಾನೆ

- Advertisement -
- Advertisement -

ಗುರುಗಾಂವ್ ನಲ್ಲಿ ಕೆಲಸದ ಅನಿಶ್ಚಿತತೆ ಎದುರಿಸುತ್ತಿರುವ ವಲಸೆ ಕಾರ್ಮಿಕರು ಸರ್ಕಾರದ ಸಹಾಯಕ್ಕೆ ಹಾತೊರೆಯುತ್ತಿದ್ದಾರೆಂಬ ಮಾಹಿತಿ ಸಫೆ ಇನ್ ಇಂಡಿಯಾ ಫೌಂಡೇಷನ್, ಅಗ್ರಸರ್ ಸರ್ಕಾರೇತರ ಸಂಸ್ಥೆಗಳು ನಡೆಸಿರುವ ಸರ್ವೇಯಲ್ಲಿ ಬಹಿರಂಗವಾಗಿದೆ.

ಗುರುಗಾಂವ್ ಪ್ರದೇಶವನ್ನು ಘಟಕವನ್ನಾಗಿ ಪರಿಗಣಸಿ ಸರ್ವೇ ನಡೆಸಿರುವ ಖಾಸಗಿ ಸಂಸ್ಥೆಗಳು ಶೇ. 95ರಷ್ಟು ವಲಸೆ ಕಾರ್ಮಿಕರು ಯಾವುದೇ ಸಂಘಟನೆಯ ಸದಸ್ಯತ್ವ ಪಡೆದಿಲ್ಲ ಎಂಬುದನ್ನು ದೃಢಪಡಿಸಿವೆ. ಅಷ್ಟೇ ಅಲ್ಲ ಹಲವು ಕಂಪನಿಗಳು ಕಾರ್ಮಿಕರ ಕೊರತೆ ಎದುರಿಸುತ್ತಿವೆ ಎಂದು ಸರ್ವೇ ಹೇಳಿದೆ.

ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಕಂಪನಿಗಳಲ್ಲಿ ಕೆಲವು ಕಾರ್ಯಚಟುವಟಿಕೆ ಪುನರಾರಂಭಿಸಿವೆ. ಈ ಕಂಪನಿ ಗಳು ಗುತ್ತಿಗೆ ಮತ್ತು ಉಪಗುತ್ತಿಗೆ ಕಾರ್ಮಿಕರನ್ನು ನೆಚ್ಚಿಕೊಂಡಿವೆ. ಆದರೆ ವಲಸೆ ಕಾರ್ಮಿಕರು ಊರುಗಳಿಗೆ ತೆರಳಿದ ನಂತರ ಕಂಪನಿಗಳು ಮತ್ತು ಕಾರ್ಮಿಕರು ಸಂಕಷ್ಟ ಎದುರಿಸುತ್ತಿವೆ.

ವಲಸೆ ಕಾರ್ಮಿಕರು ಕೆಲಸವಿಲ್ಲದೆ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಹಾಗಾಗಿ ವಲಸೆ ಕಾರ್ಮಿಕರು ಸರ್ಕಾರ ಸಹಾಯಕ್ಕೆ ತುರ್ತುಕ್ರಮ ಕೈಗೊಳ್ಳಬೇಕೆಂಬುದನ್ನು ಎದುರು ನೋಡುತ್ತಿದ್ದಾರೆ ಎಂದು ಸರ್ವೇ ಹೇಳಿದೆ.

ಕೊರೊನ ಸೋಂಕು ವ್ಯಾಪಕವಾಗಿ ಹರಡಿದ ಪರಿಣಾಮ ಲಾಕ್ ಡೌನ್ ಮಾಡಿದ್ದು ಶೇ.75ರಷ್ಟು ವಲಸೆ ಕಾರ್ಮಿಕರಿಗೆ ಏಪ್ರಿಲ್ ತಿಂಗಳ ಸಂಬಳ ನೀಡಿಲ್ಲ. ಶೇ. 25ರಷ್ಟು ಕಾರ್ಮಿಕರು ಸಂಪೂರ್ಣ ಸಂಬಳ ಪಡೆಯಲು ಆಗಿಲ್ಲ ಎಂದು ಸಮೀಕ್ಷೆಯನ್ನು ಆಧರಿಸಿ ದಿ ವೈರ್ ವರದಿ ಮಾಡಿದೆ.

ಶೇಕಡ 50ರಷ್ಟು ಕಾರ್ಮಿಕರಿಗೆ ಮಾಲಿಕರು ಕೂಲಿಯನ್ನು ಪಾವತಿಸಿಲ್ಲ ಎಂಬ ಅಂಶವು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಕೇವಲ 18ರಷ್ಟು ಕಾರ್ಮಿಕರು ಮಾಲಿಕರಿಗೆ ಕರೆ ಮಾಡಿ ಕೂಲಿ ಕೇಳಿದ್ದಾರೆಂದು ಹೇಳಲಾಗಿದೆ

ಗುರೆಗಾಂವ್ ನಲ್ಲಿ ಶೇಕಡ 77ರಷ್ಟು ವಲಸೆ ಕಾರ್ಮಿಕರ ಮನೆಗಳಿಗೆ ತೆರಳಿದ್ದು, ಶೇ. 57ರಷ್ಟು ಕಾರ್ಮಿಕರಿಗೆ ಮಾಲಿಕರು ಕರೆ ಮಾಡಿ ಕೆಲಸಕ್ಕೆ ಬರುವಂತೆ ಸೂಚನೆ ನೀಡಿದ್ದಾರ. ಈ ನಡುವೆ ಬಹುದೊಡ್ಡ ಸಂಖ್ಯೆಯ ಕಾರ್ಮಿಕರು ಕೆಲಸದ ಸ್ಥಳದಲ್ಲೇ ಉಳಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


ಓದಿ: ಧರಿಸುವವರ ಮುಖ ಮಾಸ್ಕ್‌ನಲ್ಲೇ ಪ್ರಿಂಟ್; ಕೇರಳದಲ್ಲಿ ವಿಭಿನ್ನ ಪ್ರಯತ್ನ…!!


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...