ಶುಕ್ರವಾರ ಸಂಜೆ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ಟೆನಿಸ್ ಪೆವಿಲಿಯನ್ ನಿರಾಶ್ರಿತ ಕೇಂದ್ರದ ಮೇಲ್ಛಾವಣಿ ಕುಸಿದು ವಲಸೆ ಕಾರ್ಮಿಕರ ಮೇಲೆ ಅಪ್ಪಳಿಸಿದೆ. ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಹೇಳಿಕೆಯ ಪ್ರಕಾರ, ಸುಮಾರು 100 ಪುರುಷರು, 40 ಮಹಿಳೆಯರು, 45 ಮಕ್ಕಳು ಮತ್ತು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಆರು ಮಕ್ಕಳು ಸ್ಥಳದಲ್ಲಿದ್ದರು ಎನ್ನಲಾಗಿದೆ.
ಇದರಿಂದಾಗಿ ಅಷ್ಟು ವಲಸೆ ಕಾರ್ಮಿಕರು ಮಳೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನೆನೆದಿರುವ ಅಮಾನವೀಯ ಘಟನೆ ವರದಿಯಾಗಿದೆ. ಘಟನೆ ನಡೆದ ಒಂದು ಗಂಟೆಯ ನಂತರ ಬಿಎಂಟಿಸಿ ಬಸ್ಸೊಂದು ಬಂದರೂ ಸಹ ಕಾರ್ಮಿಕರನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ಕಾರ್ಮಿಕರನ್ನು ತಮ್ಮ ಸಾಮಾನು ಸರಂಜಾಮುಗಳನ್ನು ತೆಗೆದುಕೊಂಡು ಬೇರೆ ಸ್ಥಳಕ್ಕೆ ಹೋಗಲು ಸಿದ್ದರಾಗಿದ್ದರು. ಅವರನ್ನು ತ್ರಿಪುರ ವಾಸಿನಿಗೆ ಸ್ಥಳಾಂತರಿಸಲು ಚಿಂತನೆ ನಡೆಸಿದ್ದರು ಸಹ ಅದೂ ಮುಚ್ಚಲ್ಪಟ್ಟಿದ್ದ ಕಾರಣ ಅವರು ಕಾಯಬೇಕಾಗಿದೆ.
There are more than 250 people here including infants. Workers are crying for help. @aicctukar @StrandedWorkers @BBMPCOMM @CMofKarnataka @deepolice12 @CPBlr https://t.co/WpPF7FPb6F
— aksheev thakur (@aksheevthakur) May 29, 2020
ಮಳೆಯಿಂದಾಗಿ ಸಂಪೂರ್ಣವಾಗಿ ತೇವಗೊಂಡಿದ್ದ ಕಾರ್ಮಿಕರು ಹಲವು ಗಂಟೆಗಳ ಕಾಲ ಬಸ್‌ನಲ್ಲಿಯೇ ಆಶ್ರಯ ಪಡೆದಿದ್ದಾರೆ. ಅಷ್ಟೂ ಜನರು ಒಂದೇ ಬಸ್‌ನಲ್ಲಿದ್ದರಿಂದ ಯಾವುದೇ ದೈಹಿಕ ಅಂತರವನ್ನು ಕಾಯ್ದುಕೊಳ್ಳಲಾಗಿಲ್ಲ ಎನ್ನಲಾಗಿದೆ. ಆನಂತರ ಅವರನ್ನು ಸ್ಥಳಾಂತರಿಸಲಾಗಿದೆ.
ಘಟನೆಯನ್ನು ವಿವರಿಸುತ್ತಾ, ಕಾರ್ಮಿಕರೊಬ್ಬರು, “ಭಾರೀ ಮಳೆಗೆ ಮೇಲ್ಛಾವಣಿಯು ಕೆಳಗೆ ಬಿದ್ದಿತು. ಸಣ್ಣ ಮಕ್ಕಳು, ಮಹಿಳೆಯರು – ಬಹಳಷ್ಟು ಜನರು, ಅವರು ಇಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಾವು ಅಧಿಕಾರಿಗಳಿಗೆ ತಿಳಿಸಿದೆವು. ಉತ್ತರ ಪ್ರದೇಶ, ಚತ್ತೀಸ್‌ಘಡ, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾದ ಜನರು ಇಲ್ಲಿದ್ದಾರೆ. ಇಂದು ಈ ಜನರನ್ನು ತುರ್ತಾಗಿ ಸ್ಥಳಾಂತರಿಸುವಂತೆ ನಾವು ಸರ್ಕಾರವನ್ನು ವಿನಂತಿಸುತ್ತೇವೆ. ಇಲ್ಲಿದಿದ್ದರೆ ಇಲ್ಲಿಂದ ಕಾಲ್ನಡಿಗೆಯಲ್ಲಿ ಹೋಗಬೇಕಾಗುತ್ತದೆ ” ಎಂದು ಅವರು ಹೇಳಿದ್ದಾರೆ.
ಕೊನೆಗೂ ಸಿಕ್ಕ ಸಹಾಯ
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ರವಿ ಕುಮಾರ್ ಆಗಮಿಸಿ, ಮೇಲ್ಛಾವಣಿ ಕುಸಿತಕ್ಕೊಳಗಾದವರು ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದ್ದಾರೆ.
“ನಾವು ಹೇಗೋ ಬದುಕುಳಿದಿದ್ದೇವೆ. ನಮಗೆ ಪೊಲೀಸ್ ಅಧಿಕಾರಿಯೊಬ್ಬರು ಸಹಾಯ ಮಾಡಿದರು. ಆನಂತರ ಮೇಲ್ಛಾವಣಿ ತೆರವುಗೊಳಿಸಲು ಬಹಳಷ್ಟು ಜನರು ಮುಂದೆ ಬಂದರು. ಎಲ್ಲರ ನಗದು ಸೇರಿದಂತೆ ಸಾಮಾನು, ಮೊಬೈಲ್ ಮತ್ತಿತರ ವಸ್ತುಗಳ ಅಡಿಯಲ್ಲಿ ಉಳಿದುಕೊಂಡಿವೆ ಎಂದು ಕಾರ್ಮಿಕರೊಬ್ಬರು ತಿಳಿಸಿದ್ದಾರೆ.
6/n
Finally a bus has come to take them
When will we think of the impact of climate change? In the next few years these kind of heavy winds and rains will increase as may disturbances such as the pandemic. Will we have proper facilities for all and not one where the roof flies? pic.twitter.com/q9nu5cF5fM
— AICCTU Karnataka (@aicctukar) May 29, 2020
ನಮ್ಮೂರಿಗೆ ಕಳಿಸಿಕೊಡಿ
ಘಟನೆಯಿಂದ ಭಯಭೀತರಾಗಿರುವ ವಲಸೆ ಕಾರ್ಮಿಕರು ಆದಷ್ಟು ಬೇಗ ತಮ್ಮ ಸ್ವಂತ ರಾಜ್ಯಗಳಿಗೆ ತೆರಳಲು ಅವಕಾಶಮಾಡಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ನಿಮ್ಮ ಕೈಮುಗಿದು ಕೇಳಿಕೊಳ್ಳುತ್ತೇವೆ, ಇಲ್ಲಿಂದ ಹೊರಡಲು ವ್ಯವಸ್ಥೆ ಮಾಡಿ ಎಂದು ಅವರ ಅವಲತ್ತುಕೊಂಡಿದ್ದಾರೆ.
ಮತ್ತೊಬ್ಬ ಕಾರ್ಮಿಕನು, ಛಾವಣಿ ಕುಸಿದಾಗ ನನ್ನ ಹೆಗಲ ಮೇಲೆ ಮಗುವನ್ನಿಟ್ಟುಕೊಂಡಿದ್ದೆ. ಇದರಿಂದ ನನಗೆ ತೀವ್ರ ಭಯವಾಗಿದೆ. ಇಲ್ಲಿಯೇ ಇದ್ದರೆ ನನ್ನ ಮಗುವನ್ನು ಕಳೆದುಕೊಳ್ಳಬಹುದೆಂಬ ಭಯ ನನ್ನನ್ನು ಕಾಡುತ್ತಿದೆ. ಆ ಮಗು ಕೇವಲ ಹಾಲು ಕುಡಿಯುತ್ತಿದ್ದು, ಅದಕ್ಕೂ ನಮ್ಮ ಬಳಿ ಹಣವಿಲ್ಲದಂತಾಗಿದೆ. ಹಾಗಾಗಿ ಇಲ್ಲಿಂದ ನಮ್ಮ ರಾಜ್ಯಕ್ಕೆ ಹೊರಡಲು ದಯವಿಟ್ಟು ಅವಕಾಶಮಾಡಿಕೊಡಿ ಎಂದು ಬೇಡಿಕೊಂಡಿದ್ದಾರೆ.
ಮತ್ತೊಬ್ಬ ಕಾರ್ಮಿಕನು, ಇಲ್ಲಿಂದ ಹೊರಡಲು ನಮಗೆ ಸರ್ಕಾರ ಸಹಾಯ ಮಾಡದಿದ್ದರೆ ನಡೆದುಕೊಂಡು ಹೋಗುತ್ತೇನೆ ಎಂದಿದ್ದಾರೆ. ಏನಾದರೂ ಆಗಲಿ ನಾವು ಬೆಳಿಗ್ಗೆಯೇ ಹೊರಡುವಂತೆ ವ್ಯವಸ್ಥೆ ಮಾಡಿ. ಇಲ್ಲದಿದ್ದರೆ ನಾವು ಕಾಲ್ನಡಿಗೆಯಲ್ಲಿ ಹೊರಡುತ್ತೇವೆ. ಇಲ್ಲಿ ಏನಾದರೂ ಆದರೆ ಯಾರು ಹೊಣೆ? ನಮ್ಮನ್ನು ನಂಬಿ ನಮ್ಮೀಡಿ ಕುಟುಂಬ ಬದುಕುತ್ತಿದೆ ಎಂದು ತನ್ನ ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಲಾಕ್‌ಡೌನ್ ಆದಾಗಿನಿಂದ ಆರಂಭವಾದ ವಲಸೆ ಕಾರ್ಮಿಕರ ಸಂಕಷ್ಟುಗಳು ಇನ್ನು ಪರಿಹಾರಗೊಂಡಿಲ್ಲ. ಅತ್ತ ಸುಪ್ರೀಂ ಕೋರ್ಟ್ ಕಡೆಗೂ ವಲಸೆ ಕಾರ್ಮಿಕರಿಗೆ ಊಟ, ವಸತಿ ನೀಡಬೇಕು, ಸರ್ಕಾರದ ವೆಚ್ಚದಲ್ಲಿ ಅವರು ತಮ್ಮ ಮನೆ ತಲುಪಲು ವ್ಯವಸ್ಥೆ ಮಾಡಬೇಕೆಂದು ಆದೇಶ ನೀಡಿದೆ. ಆದರೆ ವಲಸೆ ಕಾರ್ಮಿಕರ ಬವಣೆ ಮಾತ್ರ ತಪ್ಪಿಲ್ಲ. ಈಗಲಾದರೂ ಸರ್ಕಾರಗಳು ಈ ವಿಚಾರದಲ್ಲಿ ಅತಿ ವೇಗವಾಗಿ ಕೆಲಸ ಮಾಡಬೇಕಿದೆ.
ಇದನ್ನೂ ಓದಿ: ಮೋದಿ 2.1: ದೇಶವನ್ನು ಉಳಿಸಿ, ಬೆಳೆಸುವ ಪ್ಯಾಕೇಜ್ ಹೇಗಿರಬೇಕು? – ಅಮಿತ್ ಬಾಸೋಲೆ
Also read: SC directs States: No Travel Fare for Migrants, Provide Food For Stranded Migrants


