Homeಮುಖಪುಟಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 3.1%ಕ್ಕೆ ಕುಸಿತ : ಚಿದಂಬರಂ ಟೀಕೆ

ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ 3.1%ಕ್ಕೆ ಕುಸಿತ : ಚಿದಂಬರಂ ಟೀಕೆ

"2019-20ರ ಜನವರಿ-ಮಾರ್ಚ್ ತ್ರೈಮಾಸಿಕದ ಶೇ 3.1 ರಷ್ಟು ಜಿಡಿಪಿ ಬೆಳವಣಿಗೆಯು ಬಿಜೆಪಿ ಸರ್ಕಾರದ ಆರ್ಥಿಕ ನಿರ್ವಹಣೆಗೆ ಸಂಬಂಧಿಸಿದ ವ್ಯಾಖ್ಯಾನವಾಗಿದೆ" ಎಂದು ಚಿದಂಬರಂ ನುಡಿದಿದ್ದಾರೆ.

- Advertisement -
- Advertisement -

2019-20ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇಕಡಾ 3.1 ಕ್ಕೆ ಇಳಿದಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಒ) ಹೇಳಿದೆ.

ಶುಕ್ರವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2018-19 ರ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇಕಡಾ 5.7 ರಷ್ಟು ಇತ್ತು ಎಂದಿದೆ. ಕೊರೊನಾ ಸೋಂಕನ್ನು ಎದುರಿಸಲು ಭಾರತವೂ ಮಾರ್ಚ್ 25 ರ ನಂತರ ಲಾಕ್‌ಡೌನ್ ವಿಧಿಸಿತ್ತು. ಆನಂತರದ ಜಿಡಿಪಿ ಇನ್ನೂ ತೀವ್ರ ರೀತಿಯಲ್ಲಿ ಕುಸಿದಿರುತ್ತದೆ ಎನ್ನಲಾಗಿದೆ.

ಈ ವರ್ಷದ ಆರಂಭದಲ್ಲಿ ಕ್ರಮವಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ಬಿಡುಗಡೆಯಾದ ಎನ್‌ಎಸ್‌ಒ ತನ್ನ ಮೊದಲ ಮತ್ತು ಎರಡನೆಯ ಮುಂಗಡ ಅಂದಾಜುಗಳಲ್ಲಿ ರಿಸರ್ವ್ ಬ್ಯಾಂಕ್ 2019-20ರ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 5 ಕ್ಕೆ ಏರಿಸಿತ್ತು.

ಜಿಡಿಪಿ ಇಳಿಕೆ ಕುರಿತು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರತಿಕ್ರಿಯಿಸಿ “2019-20ರ ಜನವರಿ-ಮಾರ್ಚ್ ತ್ರೈಮಾಸಿಕದ ಶೇ 3.1 ರಷ್ಟು ಜಿಡಿಪಿ ಬೆಳವಣಿಗೆಯು ಬಿಜೆಪಿ ಸರ್ಕಾರದ ಆರ್ಥಿಕ ನಿರ್ವಹಣೆಗೆ ಸಂಬಂಧಿಸಿದ ವ್ಯಾಖ್ಯಾನವಾಗಿದೆ” ಎಂದು ಹೇಳಿದ್ದಾರೆ.

“ತ್ರೈಮಾಸಿಕದ ಜಿಡಿಪಿ ಶೇಕಡಾ 4 ಕ್ಕಿಂತ ಕಡಿಮೆ ಆಗಲಿದೆ ಎಂದು ನಾವು ಗ್ರಹಿಸಿದ್ದೇವು. ಆದರೆ ಈಗ 3.1% ರಷ್ಟು ಕೆಟ್ಟದಾಗಿದೆ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ನಾಲ್ಕನೇ ತ್ರೈಮಾಸಿಕ (ಜನವರಿ-ಮಾರ್ಚ್ 2020) ಲಾಕ್‌ಡೌನ್ ಜಾರಿಗೊಳಿಸುವುದಕ್ಕಿಂತ ಮುಂಚೆಯಾಗಿದೆ, ಈ ಅವಧಿಯ 91 ದಿನಗಳಲ್ಲಿ 7 ದಿಗಳಷ್ಟೇ ಲಾಕ್ ಡೌನ್ ಸೇರಿದೆ” ಎಂದು ಅವರು ನೆನಪಿಸಿದರು.

ಅಲ್ಲದೆ, 2019-20 ರ ದೇಶದ ಹಣಕಾಸಿನ ಕೊರತೆಯು ಏಳು ವರ್ಷಗಳಲ್ಲೇ ಜಿಡಿಪಿ ಯ ಶೇಕಡಾ 4.6 ಕ್ಕೆ ಏರಿತು, 2012-13ರಲ್ಲಿ ಜಿಡಿಪಿಯ ಶೇಕಡಾ 4.9 ರಷ್ಟು ಹಣಕಾಸಿನ ಕೊರತೆ ದಾಖಲಾಗಿತ್ತು.

ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2019-20ರಲ್ಲಿ ಹಣಕಾಸಿನ ಕೊರತೆಯು ಜಿಡಿಪಿಯ ಶೇಕಡಾ 4.59 ರಷ್ಟಿದೆ, ಫೆಬ್ರವರಿಯಲ್ಲಿ ಪರಿಷ್ಕೃತ ಅಂದಾಜುಗಳಲ್ಲಿ ಇದು 3.8 ಶೇಕಡಾ ಇತ್ತು. ಆದರೆ ಮೂಲ ಅಂದಾಜು ಶೇ 3.3 ರಷ್ಟಿತ್ತು.

ಸರ್ಕಾರದ ಸಾಲವನ್ನು ಪ್ರತಿಬಿಂಬಿಸುವ ಹಣಕಾಸಿನ ಕೊರತೆಯ ಹೆಚ್ಚಳವು ಮುಖ್ಯವಾಗಿ ತೆರಿಗೆ ಸಂಗ್ರಹದ ಕಾರಣದಿಂದಾಗಿತ್ತು, ಆದಾಯದ ಕೊರತೆಯು ಜಿಡಿಪಿಯ ಶೇಕಡಾ 2.4 ರ ಪರಿಷ್ಕೃತ ಅಂದಾಜಿನಿಂದ ಶೇಕಡಾ 3.27 ಕ್ಕೆ ಏರಿದೆ. ಮೂಲ ಅಂದಾಜು ಶೇಕಡಾ 2.3 ರಷ್ಟಿತ್ತು.


ಓದಿ: ಮೋದಿ 2.1; ಪ್ರಶ್ನೆಗಳೇ ಹುಟ್ಟದ ಕಾಲದಲ್ಲಿ ಹೇಳಿದೆಲ್ಲಾ ಸಾಧನೆಗಳೇ – ಎ.ನಾರಾಯಣ ಬರಹ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...