ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ಗೆ ತಯಾರಿ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಆರು ತಿಂಗಳ ಕಾಲ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಇಬ್ಬರು ಶಿಕ್ಷಕರು ಒತ್ತೆಯಾಳಾಗಿ ಇಟ್ಟುಕೊಂಡು ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಅಪ್ರಾಪ್ತ NEET
ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ರಸಾಯನಶಾಸ್ತ್ರ ಬೋಧಿಸುತ್ತಿರುವ ವಿಕಾಸ್ ಪೋರ್ವಾಲ್ (39) ಮತ್ತು ಜೀವಶಾಸ್ತ್ರ ಕಲಿಸುತ್ತಿರುವ ಸಾಹಿಲ್ ಸಿದ್ದಿಕಿ (32) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತ NEET
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಇಬ್ಬರ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ, ಅಕ್ರಮ ಬಂಧನ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಸಿದ್ದೀಕಿ ಬೇರೊಬ್ಬ ವಿದ್ಯಾರ್ಥಿಯ ಜೊತೆಗೆ ಲೈಂಗಿಕವಾಗಿ ವರ್ತಿಸುತ್ತಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದ್ದು, ಅದು ಬಹಿರಂಗವಾದ ನಂತರ ಆತನನ್ನು ಇತ್ತಿಚೆಗೆ ಬಂಧಿಸಲಾಗಿತ್ತು.
ಸಂತ್ರಸ್ತ ವಿದ್ಯಾರ್ಥಿ ಫತೇಪುರ್ ಮೂಲದವರಾಗಿದ್ದು, ಘಟನೆ ಸಂಭವಿಸಿದಾಗ ಅವರು 17 ವರ್ಷ ವಯಸ್ಸಿನವರಾಗಿದ್ದರು. ಅವರು ನೀಡಿರುವ ದೂರಿನಲ್ಲಿ, ಡಿಸೆಂಬರ್ 2022 ರಲ್ಲಿ, ಸಿದ್ದಿಕಿ ತನ್ನನ್ನು ಕಲ್ಯಾಣಪುರದ ಮಕ್ಡಿ- ಖೇರಾ ಪ್ರದೇಶದ ಸ್ನೇಹಿತರ ಸ್ಥಳಕ್ಕೆ ಹೊಸ ವರ್ಷದ ಕೂಟಕ್ಕೆ ಆಹ್ವಾನಿಸಿದ್ದನು. ಜೊತೆಗೆ ಅಲ್ಲಿಗೆ ಇತರ ವಿದ್ಯಾರ್ಥಿಗಳು ಕೂಡಾ ಇರುತ್ತಾರೆ ಎಂದು ಹೇಳಿದ್ದನು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಅದಾಗ್ಯೂ, ಸಿದ್ದಿಕಿಯ ಫ್ಲಾಟ್‌ಗೆ ಬಂದಾಗ ಅವರಿಗೆ ಅಲ್ಲಿ ಯಾರೂ ಕಾಣಲಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಸಿದ್ದಿಕಿ ತಂಪು ಪಾನೀಯಕ್ಕೆ ನಿದ್ರೆಯ ಮಾತ್ರೆಯನ್ನು ಬೆರೆಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಅಷ್ಟೆ ಅಲ್ಲದೆ, ದುಷ್ಕರ್ಮಿಯು ಈ ಕೃತ್ಯವನ್ನು ವಿಡಿಯೋ ರೆಕಾರ್ಡಿಂಗ್ ಕೂಡ ಮಾಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಅಷ್ಟೆ ಅಲ್ಲದೆ ಆರು ತಿಂಗಳ ಕಾಲ ದುಷ್ಕರ್ಮಿಯು ಫ್ಲಾಟ್‌ನಲ್ಲಿ ತನ್ನನ್ನು ಒತ್ತೆಯಾಳಾಗಿಟ್ಟುಕೊಂಡಿದ್ದು ಪದೇ ಪದೇ ಅತ್ಯಾಚಾರವೆಸಗಿದ್ದಾನೆ ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಈ ಕೃತ್ಯವನ್ನು ಬಹಿರಂಗ ಪಡಿಸಿದರೆ ತನ್ನ ಕೈಯ್ಯಲ್ಲಿ ಇರುವ ವಿಡಿಯೊ ಕ್ಲಿಪ್‌ಗಳನ್ನು ಶೇರ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ದುಷ್ಕರ್ಮಿಯು ಪಾರ್ಟಿಗಳಿಗೆ ಹಾಜರಾಗುವಂತೆ ಆಕೆಯನ್ನು ಬಲವಂತಪಡಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ರೀತಿಯ ಸಭೆಯೊಂದರಲ್ಲಿ ಬಾಲಕಿಯು ಪೋರ್ವಾಲ್‌ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ‘ಮಹಾರಾಷ್ಟ್ರದ ಜನರು ಇದನ್ನು ಇಷ್ಟಪಡುವುದಿಲ್ಲ..’; ಬಿಜೆಪಿಯ ‘ಬಾಟಂಗೆ ತೋ ಕಟೆಂಗೆ’ ಘೋಷಣೆ ತಿರಸ್ಕರಿಸಿದ ಅಜಿತ್ ಪವಾರ್
‘ಮಹಾರಾಷ್ಟ್ರದ ಜನರು ಇದನ್ನು ಇಷ್ಟಪಡುವುದಿಲ್ಲ..’; ಬಿಜೆಪಿಯ ‘ಬಾಟಂಗೆ ತೋ ಕಟೆಂಗೆ’ ಘೋಷಣೆ ತಿರಸ್ಕರಿಸಿದ ಅಜಿತ್ ಪವಾರ್


