ಸೂಕ್ಷ್ಮವಾದ ವಿಚಾರಗಳನ್ನು ಸರಳವಾಗಿ ಹೇಳುವ ಮೂಲಕ ಪ್ರೇಕ್ಷಕರ ಹೃದಯವನ್ನು ಗೆದ್ದ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಪ್ರತಿಷ್ಠಿತ ಆಸ್ಕರ್ ಸ್ಪರ್ಧೆಗೆ ಆಯ್ಕೆಯಾಗಿದೆ. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಆಸ್ಕರ್ 2025 ಗೆ ಭಾರತದ ಅಧಿಕೃತ ಪ್ರವೇಶ ಎಂದು ಘೋಷಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಜಾನು ಬರುವಾ ನೇತೃತ್ವದ ಆಯ್ಕೆ ಸಮಿತಿಯು ಆಯ್ಕೆ ಪಟ್ಟಿಯಲ್ಲಿ ಇದ್ದ ‘ಅನಿಮಲ್’ ಮತ್ತು ‘ಆಟ್ಟಂ’ ನಂತಹ 29 ಪ್ರತಿಸ್ಪರ್ಧಿಗಳಲ್ಲಿ ‘ಲಾಪತಾ ಲೇಡಿಸ್’ ಚಿತ್ರವನ್ನು ಆಸ್ಕರ್ ಅಂಗಳದಲ್ಲಿ ಇಟ್ಟಿದೆ. ತಮ್ಮ ಚಿತ್ರವು ಆಸ್ಕರ್‌ಗೆ ಆಯ್ಕೆಯಾಗಿರುವ ಬಗ್ಗೆ ಪಿಟಿಐಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕಿ ಕಿರಣ್ ರಾವ್ ಅವರು, ಬಹುದಿನದ ಕನಸು ನನಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
‘ಲಾಪತಾ ಲೇಡಿಸ್’
ಕಿರಣ್ ರಾವ್ ಅವರು ನಿರ್ದೇಶಿಸಿರುವ ಈ ಚಿತ್ರವನ್ನು ಅವರ ಮಾಜಿ ಪತಿ, ಸೂಪರ್‌ಸ್ಟಾರ್ ಅಮೀರ್ ಖಾನ್ ಅವರು ನಿರ್ಮಿಸಿದ್ದಾರೆ. ಚಿತ್ರವು ಭಾರತದ ಗ್ರಾಮೀಣ ಭಾಗದಲ್ಲಿ ಇರುವ ಪುರುಷಪ್ರಧಾನ ಸಮಾಜದ ಕತೆಯನ್ನು ಹೇಳುತ್ತದೆ. ಸ್ತ್ರೀ ಸಬಲೀಕರಣದ ಕುರಿತು ಹೃದಯಸ್ಪರ್ಶಿ ಸಂದೇಶವನ್ನು ನೀಡುವ ಚಿತ್ರವನ್ನು ನವಿರಾಗಿ ನಿರೂಪಿಸಲಾಗಿದೆ. ಕೃತಿಯು ಆರ್ಟ್ ಮಾದರಿಯಲ್ಲಿದ್ದರೂ ಕಮರ್ಶಿಯಲ್ ಆಗಿ ಗೆದ್ದಿದೆ.
ಇದನ್ನೂಓದಿ: ‘ನನ್ನ ಪರಿಸ್ಥಿತಿ ರಾಮನ ಅನುಪಸ್ಥಿತಿಯ ಭರತನಂತಿದೆ..’ ಎಂದ ದೆಹಲಿ ನೂತನ ಮುಖ್ಯಮಂತ್ರಿ ಅತಿಶಿ
ಈಗಷ್ಟೆ ಮದುವೆ ಮುಗಿಸಿದ ಜೋಡಿಗಳು ರೈಲಿನಲ್ಲಿ ಪ್ರಯಾಣಿಸುತ್ತದೆ. ಆದರೆ ರೈಲು ತುಂಬಾ ನವವಿವಾಹಿತರ ಹಲವು ಜೋಡಿಗಳು ತುಂಬಿದ್ದು, ಆಕಸ್ಮಿಕವಾಗಿ ನಾಯಕ ತನ್ನ ವಧುವಿನ ಬದಲಿಗೆ ಬೇರೊಂದು ವಧುವನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಚಿತ್ರವೂ ಗ್ರಾಮೀಣ ಭಾರತದ ಅದರಲ್ಲೂ ಉತ್ತರ ಭಾರತದ ಪರಿಸ್ಥಿತಿಯನ್ನು ಚಿತ್ರವೂ ಒಂದೊಂದಾಗಿ ಮುಂದಿಡುತ್ತಾ ಹೋಗುತ್ತದೆ.
ಈ ಹಿಂದೆ ಚಿತ್ರ 48 ನೇ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (TIFF) ಪ್ರದರ್ಶಿಸಲಾಯಿತು. ಬಿಡುಗಡೆಯ ನಂತರ, ತನ್ನ ಚಿತ್ರಕಥೆ ಮತ್ತು ಪ್ರಮುಖ ಪಾತ್ರದಾರಿಗಳ ನಟನೆಗೆ ವಿಮರ್ಶಕರಿಂದ ಭಾರಿ ಮೆಚ್ಚುಗೆಯ ವಿಮರ್ಶೆಗಳನ್ನು ಗಳಿಸಿತ್ತು. ಏಪ್ರಿಲ್ 26 ರಂದು ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಂಡಿದೆ. ಅಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ.
ಚಿತ್ರದಲ್ಲಿ ಸ್ಪರ್ಶ ಶ್ರೀವಾಸ್ತವ ಜೊತೆಗೆ ನಿತಾಂಶಿ ಗೋಯೆಲ್, ಪ್ರತಿಭಾ ರಂತ, ಛಾಯಾ ಕದಮ್ ಮತ್ತು ರವಿ ಕಿಶನ್ ನಟಿಸಿದ್ದಾರೆ. ಬಿಪ್ಲಬ್ ಗೋಸ್ವಾಮಿ ಅವರ ‘ಟೂ ಬ್ರೈಡ್ಸ್’ ಚಿತ್ರಕಥೆಯನ್ನು ಆಧರಿಸಿದೆ.
ವಿಡಿಯೊ ನೋಡಿ: ಓ ನನ್ನ ಚೇತನ, ಆಗು ನೀ ಅನಿಕೇತನ.. ಕುವೆಂಪು ಹಾಡಿಗೆ ಭಾವತುಂಬಿದ ಜೀವಪರರು O nanna chethana


