Homeಕರ್ನಾಟಕಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

ಎಂಎಲ್‌ಸಿ ಚುನಾವಣೆ: ಮಹಿಳೆಯರ ವಿಚಾರದಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್‌ ಈಗಲಾದರೂ ತಿದ್ದಿಕೊಂಡೀತೇ?

- Advertisement -
- Advertisement -

ಮೊದಲು ಈ ಕೆಳಗಿನ ಕೋಷ್ಟಕ ನೋಡಿ.

ಕ್ಷೇತ್ರ

ಟಿಕೆಟ್‌ ಕೇಳಿದ್ದ ಕಾಂಗ್ರೆಸ್ಸಿನ ಮಹಿಳಾ ನಾಯಕಿ

ಟಿಕೆಟ್‌ ಕೊಡಲಾಯಿತೇ?

ಅಂತಿಮ ಫಲಿತಾಂಶ

ಮತಗಳ ಅಂತರ

ಬೊಮ್ಮನಹಳ್ಳಿ

ಕವಿತಾ ರೆಡ್ಡಿ

ಇಲ್ಲ

ಕಾಂಗ್ರೆಸ್‌ ಸೋತಿತು

24215

ದಾಸರಹಳ್ಳಿ

ಡಾ.ನಾಗಲಕ್ಷ್ಮಿ

ಇಲ್ಲ

ಕಾಂಗ್ರೆಸ್‌ ಸೋತಿತು

47770

ಜೆಡಿಎಸ್ ಎರಡನೇ ಸ್ಥಾನ

ಬೆಂಗಳೂರು ದಕ್ಷಿಣ

ಸುಷ್ಮಾ ರಾಮಗೋಪಾಲ್

ಇಲ್ಲ

ಕಾಂಗ್ರೆಸ್‌ ಸೋತಿತು

49699

ರಾಜಾಜಿನಗರ

ಭವ್ಯ ನರಸಿಂಹಮೂರ್ತಿ/ ಪದ್ಮಾವತಿ

ಇಲ್ಲ

ಕಾಂಗ್ರೆಸ್‌ ಸೋತಿತು

8060

(ಕಡಿಮೆ ಅಂತರವೇ, ಆದರೆ ಇಲ್ಲಿ ಮತದಾನವೇ ಬಹಳ ಕಡಿಮೆ)

ಮಹದೇವಪುರ

ಕಮಲಾಕ್ಷಿ ರಾಜಣ್ಣ

ಇಲ್ಲ

ಕಾಂಗ್ರೆಸ್‌ ಸೋತಿತು

44501

ಬಸವಕಲ್ಯಾಣ

ಮಾಲಾ

ಇಲ್ಲ

ಕಾಂಗ್ರೆಸ್‌ ಸೋತಿತು

14415

ಹರಪನಹಳ್ಳಿ

ವೀಣಾ ಎಂ/ಲತಾ ಎಂ

ಇಲ್ಲ

ಕಾಂಗ್ರೆಸ್‌ ಸೋತಿತು

ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ. ಟಿಕೆಟ್‌ ಕೇಳಿದ್ದ ಲತಾ ಸ್ವತಂತ್ರ ಅಭ್ಯರ್ಥಿಯಾಗಿ 13845 ಮತಗಳಿಂದ ಗೆದ್ದರು

ತೇರದಾಳ

ಉಮಾಶ್ರೀ

ಇಲ್ಲ

ಕಾಂಗ್ರೆಸ್‌ ಸೋತಿತು

10745

ಚಿಕ್ಕಪೇಟೆ

ಗಂಗಾಂಬಿಕೆ

ಇಲ್ಲ

ಕಾಂಗ್ರೆಸ್‌ ಸೋತಿತು

ಈ ಕೆಳಗಿನ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ/ಪ.ಜಾತಿಗೆ ಸೇರಿದ ಹೆಸರು ಮಾಡಿದ್ದ ಪುರುಷರಿಗೆ ಕೊಡಲಾಯಿತು. ಅದೂ ಸರಿಯೇ ಆಗಿತ್ತು. ಇಲ್ಲೂ ಮಹಿಳಾ ಆಕಾಂಕ್ಷಿಗಳಿದ್ದರು ಎಂಬುದನ್ನು ದಾಖಲಿಸುವ ಸಲುವಾಗಿ ಸೇರಿಸಲಾಗಿದೆ.

ಮಂಗಳೂರು ದಕ್ಷಿಣ

ಶಾಲೆಟ್‌ ಪಿಂಟೋ

ಇಲ್ಲ

ಕಾಂಗ್ರೆಸ್‌ ಸೋತಿತು

23962

ಶಿಗ್ಗಾಂವ್‌

ರಾಜೇಶ್ವರಿ ಪಟೇಲ್

ಇಲ್ಲ

ಕಾಂಗ್ರೆಸ್‌ ಸೋತಿತು

35978

ಹೊಳಲ್ಕೆರೆ

ಸವಿತಾ ರಘು

ಇಲ್ಲ

ಕಾಂಗ್ರೆಸ್‌ ಸೋತಿತು

5682

ರಾಜ್ಯದ ಇನ್ನೂ ಎಷ್ಟೋ ಕ್ಷೇತ್ರಗಳಲ್ಲಿ ಮಹಿಳೆಯರು ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಕೇಳಿದ್ದಿರಬಹುದು. ಈ ಬರಹ ಬರೆಯುವ ಹೊತ್ತಿಗೆ, ನನ್ನಲ್ಲಿ ಅದರ ವಿವರಗಳು ಲಭ್ಯವಿಲ್ಲ ಅಷ್ಟೇ.

ಈಗ ವಿಚಾರಕ್ಕೆ ಬರೋಣ. ಚುನಾವಣೆಗಳು ಬಲಾಢ್ಯ ಜಾತಿಗಳ, ಹಣವಂತರ, ಗಂಡಸರ, ಬಹುಸಂಖ್ಯಾತ ಧರ್ಮದವರ ಅಖಾಡವಾಗುತ್ತಿದೆ. ಆದರೆ, ಚುನಾವಣೆಗಳಲ್ಲಿ ಮತ ಹಾಕುವವರಲ್ಲಿ ಹೆಚ್ಚಿನವರು ದುರ್ಬಲ ಜಾತಿಗಳವರು, ಬಡವರು. ಮಹಿಳೆಯರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಚುನಾವಣೆಗಳಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಎಂಬುದಕ್ಕೆ ಇತ್ತೀಚಿನ 2023ರ ವಿಧಾನಸಭಾ ಚುನಾವಣೆಯ ಅಂಕಿ-ಅಂಶ ಸಾಕಷ್ಟು ಸಾಕ್ಷಿ ಒದಗಿಸುತ್ತದೆ. ಆದರೆ, ಟಿಕೆಟ್‌ ಪಡೆದುಕೊಳ್ಳುವ ವಿಚಾರದಲ್ಲಿ ಮಾತ್ರ ಅವರಿಗೆ ಅವಕಾಶವಿರುವುದಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಇರುವುದರಿಂದ ಬಚಾವ್‌ ಆಗಿದ್ದಾರೆಯೇ ಹೊರತು, ಇಲ್ಲವಾಗಿದ್ದರೆ ಅವರ ಪರಿಸ್ಥಿತಿಯೂ ಹೀಗೇ ಇರುತ್ತಿತ್ತು. ಕರ್ನಾಟಕದಲ್ಲಿ 3-4% ಇರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಶಾಸಕರು 10 ಜನರಿದ್ದರೆ, 13%ಗೂ ಹೆಚ್ಚಿರುವ ಮುಸ್ಲಿಂ ಸಮುದಾಯಕ್ಕೆ ಸೇರಿದವರು 9 ಶಾಸಕರಿದ್ದಾರೆ. ಈ ವಿಚಾರ ಇನ್ನೊಮ್ಮೆ ಚರ್ಚಿಸೋಣ.

ಏಕೆಂದರೆ, ಅಧಿಕಾರದ ಸ್ಥಾನ ಪಡೆಯುವಲ್ಲಿ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ವಿಚಾರ ಚಿಂತಾಜನಕವಾಗಿದೆ. ಇದಕ್ಕೆ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಕೊಡುವ ಕಾರಣ, ʼಅವರು ಗೆಲ್ಲುವುದಿಲ್ಲʼ ಎಂಬುದಾಗಿದೆ. ಇದೇ ಮಾನದಂಡವನ್ನು ಮುಸ್ಲಿಮರಿಗೂ, ಹಿಂದುಳಿದ ಸಮುದಾಯಗಳಿಗೂ ಅನ್ವಯಿಸಲಾಗುತ್ತದೆ. ಮೀಸಲೇತರ ಕ್ಷೇತ್ರಗಳಲ್ಲಿ ಪ.ಜಾತಿ/ಪ.ಪಂಗಡಗಳಿಗೂ ಅನ್ವಯಿಸಲಾಗುತ್ತದೆ. ಆದರೆ, ಬಲಾಢ್ಯ ಜಾತಿಗಳಿಗೆ ಸೇರಿದವರು ಅಥವಾ ಗಂಡಸರೂ ಸಹಾ ಗೆಲ್ಲದೇ ಇರುವ ಕ್ಷೇತ್ರಗಳಲ್ಲಿ ಎಷ್ಟೇ ಚುನಾವಣೆಗಳು ನಡೆದರೂ ಅವರವರಿಗೇ ಟಿಕೆಟ್‌ ನೀಡಲಾಗುತ್ತದೆ. ಉದಾಹರಣೆಗೆ ಬೆಂಗಳೂರು ನಗರದ ಬಸವನಗುಡಿ ಕ್ಷೇತ್ರವನ್ನೇ ತೆಗೆದುಕೊಳ್ಳಿ. 2004ರಲ್ಲಿ ಅಲ್ಲಿ ಕೆ.ಚಂದ್ರಶೇಖರ್‌ ಅವರು ಒಮ್ಮೆ ಕಾಂಗ್ರೆಸ್ಸಿನಿಂದ ಗೆದ್ದುದನ್ನು ಬಿಟ್ಟರೆ, 1972ರ ನಂತರ ಅಲ್ಲಿ ಕಾಂಗ್ರೆಸ್‌ ಗೆದ್ದೇ ಇಲ್ಲ. 1972ರಲ್ಲಿ ಗೆದ್ದಿದ್ದು ಅಮೀರ್‌ ರಹಮತುಲ್ಲಾ ಖಾನ್‌ ಎಂಬ ಮುಸ್ಲಿಂ ಅಭ್ಯರ್ಥಿ. ಅದು ದೇವರಾಜ ಅರಸರ ವಿಶಿಷ್ಟ ಸಾಮಾಜಿಕ ಸಮೀಕರಣದ ಚುನಾವಣೆ ಎಂಬುದನ್ನೂ ನೆನಪಿನಲ್ಲಿಡಬೇಕು.

ಈ ಕ್ಷೇತ್ರವನ್ನು ಬ್ರಾಹ್ಮಣರ ಕ್ಷೇತ್ರ ಎಂದು ತಾವೇ ತೀರ್ಮಾನಿಸಿಕೊಂಡು (ಅದಕ್ಕೆ ಯಾವ ಸಮೀಕ್ಷೆಯ ಆಧಾರ ಇಲ್ಲದಿದ್ದರೂ), ಬಿಜೆಪಿಯಿಂದ ಸತತವಾಗಿ ಬ್ರಾಹ್ಮಣರು ಗೆಲ್ಲುತ್ತಿರುವುದರಿಂದ ತಾವೂ ಬ್ರಾಹ್ಮಣರಿಗೇ ಟಿಕೆಟ್‌ ಕೊಡಬೇಕೆಂದು ಕಾಂಗ್ರೆಸ್‌ ಪಕ್ಷ ತೀರ್ಮಾನಿಸುತ್ತದೆ. ಮುಸ್ಲಿಮರಷ್ಟೇ ಧ್ರುವೀಕರಣಗೊಂಡ ಇನ್ನೊಂದು ಸಮುದಾಯವಿದ್ದರೆ ಅದು ಬ್ರಾಹ್ಮಣರದ್ದು; ಮತ್ತು ಅದು ಬಿಜೆಪಿಯೆಡೆಗೆ ಧ್ರುವೀಕರಣಗೊಂಡಿದೆ. ಆದರೂ ಈ ಸಾರಿ ಅದೇ ಮಾನದಂಡದ ಮೇಲೆ ಟಿಕೆಟ್‌ ನೀಡಲಾಯಿತು.

ಇಂತಹ ಮಾನದಂಡಗಳಿಂದ ಅತ್ಯಂತ ಹೆಚ್ಚು ಅನ್ಯಾಯಕ್ಕೊಳಗಾಗುವ ಸಮುದಾಯ ಮಹಿಳೆಯರದ್ದು. ಮೇಲಿನ ಕೋಷ್ಟಕದಲ್ಲಿ ಕಾಣಿಸಿರುವ ಹೆಸರುಗಳಲ್ಲಿ ಕೆಲವರು ಕುಟುಂಬದ ಹಿನ್ನೆಲೆಯ ಕಾರಣಕ್ಕೆ ರಾಜಕಾರಣದಲ್ಲಿರಬಹುದು. ಆದರೆ, ಎಲ್ಲರೂ ಹಾಗೆ ಅಲ್ಲ. ಉದಾಹರಣೆಗೆ ಕವಿತಾ ರೆಡ್ಡಿಯವರು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನಿರಂತರವಾಗಿ ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಮಾಡುತ್ತಾರೆ. ಆ ಕ್ಷೇತ್ರದಲ್ಲಿ- ಮತ್ತು ಮಹಿಳೆಯರಿಗೆ ಟಿಕೆಟ್‌ ನಿರಾಕರಿಸಿ ʼಹೊರಗಿನಿಂದ ಬಂದʼ ಪುರುಷರಿಗೆ ಟಿಕೆಟ್‌ ನೀಡಲಾದ ವಿವಿಧ ಕ್ಷೇತ್ರಗಳಲ್ಲಿ ಸೋತ ಕಾಂಗ್ರೆಸ್‌ ಅಭ್ಯರ್ಥಿಗಳು ಮತ್ತೆ ಅಲ್ಲೇ ನಿಂತು ಪಕ್ಷ ಕಟ್ಟುತ್ತಾರೆ ಎನ್ನುವುದರ ಬಗ್ಗೆ ಯಾರಿಗೂ ಖಾತರಿಯಿಲ್ಲ. ಬಹುಶಃ ಅವರು ಇನ್ನೆಲ್ಲೋ ಅಧಿಕಾರದ ಸ್ಥಾನಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಇದೇ ಪಕ್ಷದಲ್ಲಿ ಅಥವಾ ಇನ್ನೊಂದು ಪಕ್ಷದಲ್ಲಿ. ಹೀಗಿದ್ದೂ, ಪಕ್ಷಕ್ಕಾಗಿ ನಿರಂತರ ಕೆಲಸ ಮಾಡಿದ ಮಹಿಳೆಯರಿಗೆ ಯಾವ ಕಾರಣಕ್ಕೆ ಟಿಕೆಟ್‌ ನಿರಾಕರಿಸಲಾಗುತ್ತದೆ? ಸಾಮಾನ್ಯವಾಗಿ ಕೊಡುವ ಕಾರಣ, ಈಗಾಗಲೇ ಹೇಳಿದಂತೆ, ಅವರು ಗೆಲ್ಲುವುದಿಲ್ಲ ಎಂಬುದು.

ಈಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ಒಂದು, ಹಾಗಾದರೆ ಆ ಜಾಗಗಳಲ್ಲಿ ನೀವು ಟಿಕೆಟ್‌ ನೀಡಿದ ಪುರುಷರೂ ಗೆದ್ದಿಲ್ಲವಲ್ಲಾ? ಕೆಲವರಂತೂ ಭೀಕರವಾಗಿ ಸೋತಿದ್ದಾರೆ! ಎರಡನೆಯದು, ಮಹಿಳೆಯರು, ಮುಸ್ಲಿಮರು, ಶೋಷಿತ ಸಮುದಾಯಗಳವರು ಸ್ಪರ್ಧಿಸಿದರೆ ಅವರಿಗೆ ಉಳಿದವರು ಮತ ಹಾಕುವುದಿಲ್ಲ ಎನ್ನುವುದಾದರೆ, ಆ ಪಕ್ಷದ್ದೇ ಆದ ಒಂದು ವೋಟ್‌ ಬ್ಯಾಂಕ್‌ ಇಲ್ಲ ಎಂದಾಯಿತು! ಹಾಗಾದರೆ ಇಂತಹ ಪಕ್ಷಗಳು ಇಷ್ಟು ಸುದೀರ್ಘ ಕಾಲ ರಾಜಕಾರಣ ಮಾಡಿಕೊಂಡು ಬಂದು ಏನನ್ನು ಸಾಧಿಸಿದರು? ಇದು ಗಂಭೀರವಾಗಿ ಯೋಚಿಸಬೇಕಾದ ಸಂಗತಿ. ಇದೇ ಕಾರಣಕ್ಕೆ ಬಾಬಾ ಸಾಹೇಬರು ದಲಿತ ಸಮುದಾಯಕ್ಕೆ ಪ್ರತ್ಯೇಕ ಮತಕ್ಷೇತ್ರಗಳನ್ನು ಕೇಳಿದ್ದರು. ಅದು ಸಾಧ್ಯವಾಗಿದ್ದರೆ ನಂತರ ಉಳಿದೆಲ್ಲಾ ಸಮುದಾಯಗಳೂ, ಮಹಿಳೆಯರೂ ಸಹಾ ಪ್ರತ್ಯೇಕ ಮತಕ್ಷೇತ್ರಗಳನ್ನು ಕೇಳುತ್ತಿದ್ದರು ಎನಿಸುತ್ತದೆ. ಅದು ಮಾತ್ರವೇ ನ್ಯಾಯ ಒದಗಿಸಿಕೊಡುತ್ತಿತ್ತು!!

ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಹಾಕಿದ್ದರಿಂದಲೂ ಕಾಂಗ್ರೆಸ್‌ ಗೆದ್ದು ಬಂದಿದೆ. ಇದ್ದುದರಲ್ಲಿ ವೈಜ್ಞಾನಿಕವಾಗಿ ನಡೆದ ಚುನಾವಣೋತ್ತರ ಸಮೀಕ್ಷೆಯಲ್ಲೂ ಇದು ಸ್ಪಷ್ಟವಾಗಿದೆ. ಮಹಿಳೆಯರು ಶೇ.11ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಪುರುಷರು ಕೇವಲ ಶೇ.3ರಷ್ಟು ಹೆಚ್ಚಿನ ಪ್ರಮಾಣದಲ್ಲಿ (ಬಿಜೆಪಿಗೆ ಹಾಕಿದ್ದಕ್ಕಿಂತ) ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ. ಇದರ ಋಣವನ್ನು ತೀರಿಸಲು ಗ್ಯಾರಂಟಿಗಳನ್ನು, ಭಾಗ್ಯಗಳನ್ನು ನೀಡುತ್ತೇವೆಂದು ಕಾಂಗ್ರೆಸ್‌ ಪಕ್ಷ ಹೇಳಬಹುದು; ಹೌದು ಅದನ್ನು ನೀಡಲೇಬೇಕು. ಹಾಗೆಯೇ ಅಧಿಕಾರದಲ್ಲೂ ಪಾಲು ಕೊಡಬೇಕು. ಈಗೇನು ಮಾಡಬಹುದು?

ಈ ವಿಧಾನ ಪರಿಷತ್ತಿನ ಚುನಾವಣೆಯ ಸಂದರ್ಭ ಅವರಿಗೆ ನೆರವಾಗಬಹುದು. ಆರರಲ್ಲಿ ಮೂರು ಸ್ಥಾನಗಳನ್ನಾದರೂ ಮಹಿಳೆಯರಿಗೆ ನೀಡಿದರೆ, ಕಾಂಗ್ರೆಸ್ಸು ಸಾಮಾಜಿಕ ನ್ಯಾಯದ ವಿಚಾರದಲ್ಲಿ ದೃಢ ಹೆಜ್ಜೆಗಳನ್ನಿಡುತ್ತಿದೆ ಎಂದುಕೊಳ್ಳಬಹುದು.

ಇಂತಹ ಎಲ್ಲಾ ಪ್ರಶ್ನೆಗಳನ್ನು ನಮಗೇ ಏಕೆ ಕೇಳುತ್ತಾರೆ ಎಂದು ಕಾಂಗ್ರೆಸ್ಸಿನವರು ಕೇಳಬಹುದು. ಸಾಮಾಜಿಕ ನ್ಯಾಯ ಹಾಗೂ ಮಹಿಳೆಯರಿಗೆ ಸಿಗಬೇಕಾದ ಹಕ್ಕುಗಳಿಗೂ ಮತ್ತು ಬಿಜೆಪಿಗೂ ಯಾವುದೇ ಸಂಬಂಧವಿಲ್ಲವಾದ್ದರಿಂದ ಕಾಂಗ್ರೆಸ್ಸನ್ನು ಕೇಳಲಾಗುತ್ತದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗುವುದು ಕಾಂಗ್ರೆಸ್ʼನಲ್ಲಿ ಸಾಧ್ಯವಿಲ್ಲವಾದರೆ, ಆಗ ಆಯ್ಕೆ ಬಿಜೆಪಿ ಅಥವಾ ಜೆಡಿಎಸ್‌ ಅಲ್ಲ. ಅದಕ್ಕೆ ಈ ಮೂರು ಪಕ್ಷಗಳನ್ನು ಹೊರತುಪಡಿಸಿದ ಬೇರೆ ಆಯ್ಕೆ ಮಾಡಿಕೊಳ್ಳುವುದೇ ಅನಿವಾರ್ಯ.

– ಡಾ. ಎಚ್. ವಿ. ವಾಸು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...