ಮಧ್ಯಪ್ರದೇಶದ ಇಂಧೋರ್‌ನಲ್ಲಿ ಜನವರಿ 2 ರಂದು ಬಂಧನಕ್ಕೊಳಗಾಗಿದ್ದ ಹಾಸ್ಯ ಕಲಾವಿದ ಮುನಾವರ್ ಫಾರೂಖಿ ಅವರು ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟು ಮಾಡಿದ್ದಾರೆ ಎಂಬ ಆರೋಪಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷಾಚರಣೆಯ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವತೆಗಳನ್ನು ಹಾಗೂ ಒಕ್ಕೂಟದ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಹಾಸ್ಯ ಕಲಾವಿದ ಮತ್ತು ಇತರೆ ನಾಲ್ಕು ಜನ ಕಾರ್ಯಕ್ರಮ ಸಂಘಟಕರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ಸಮಯದಲ್ಲಿ ಪೊಲೀಸರ ಸಮ್ಮುಖದಲ್ಲೇ ವ್ಯಕ್ತಿಯೊಬ್ಬರು ಥಳಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿ ಭಾರಿ ಆಕ್ರೋಶ ಉಂಟು ಮಾಡಿತ್ತು.
Seems like a video of one of the persons arrested along with Munawar Faruqui being taken away by the police. And getting abused and beaten up in front of the police.
— Hussain Haidry (@hussainhaidry) January 2, 2021
ಇದನ್ನೂ ಓದಿ: ಅಮಿತ್ ಶಾ & ಹಿಂದೂ ದೇವತೆಗಳಿಗೆ ಅವಮಾನ ಆರೋಪ: ಹಾಸ್ಯ ಕಲಾವಿದನ ಬಂಧನ
“ವಿಡಿಯೋದಲ್ಲಿ, ಗಣಪತಿಯ ಕುರಿತು ಮತ್ತೊಬ್ಬ ಹಾಸ್ಯನಟ ಹಾಸ್ಯ ಮಾಡಿದ್ದಾರೆ. ಮುನಾವರ್ ಫಾರೂಖಿ ಅವರು ಹಿಂದೂ ದೇವತೆಗಳನ್ನಾಲಿ ಅಥವಾ ಗೃಹ ಸಚಿವ ಅಮಿತ್ ಶಾ ಅವರನ್ನಾಲಿ ಅವಮಾನಿಸಿದ ಯಾವುದೇ ಪುರಾವೆಗಳಿಲ್ಲ” ಎಂದು ತುಕಾಗಂಜ್ ಠಾಣೆಯ ಇನ್ಸ್‌ಪೆಕ್ಟರ್ ಕಮಲೇಶ ಶರ್ಮಾ ಅವರು ಹೇಳಿದ್ದಾಗಿ ದಿ ಕ್ವಿಂಟ್ ವರದಿ ಮಾಡಿದೆ.
ಹೊಸ ವರ್ಷಾಚರಣೆಯ ಪ್ರದರ್ಶನದಲ್ಲಿ ಏನಾಯಿತು ಎಂಬುದನ್ನು ಪ್ರತ್ಯಕ್ಷದರ್ಶಿ ಆಗ್ನೆಸ್ ಎಂಬವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ಅವರ ಬರಹದ ಪ್ರಕಾರ, “ಮುನಾವರ್ ವೇದಿಕೆಗೆ ಬರುವುದಕ್ಕಿಂತ ಮುಂಚೆಯೆ ಬೇರೆಯವರೊಬ್ಬರು ವೇದಿಕೆಗೆ ಬಂದು ಅಲ್ಲಿನ ಮೈಕ್ ಪಡೆದು ಧಾರ್ಮಿಕ ಭಾವನೆಗಳನ್ನು ನೋಯಿಸುವ ಹಾಗೆ ಮಾತನಾಡಿದ್ದಾರೆ. ಅವರು ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಮುನಾವತ್ ಪ್ರದರ್ಶನ ನೀಡಲು ಪ್ರಾರಂಭಿಸಿಲ್ಲ. ಅವರು ಯಾವುದೇ ಅವಹೇಳನಕಾರಿ ಹೇಳಿಕೆಯನ್ನು ನೀಡಲಿಲ್ಲ. ಅವರು ಹಿಂದೂ ಅಥವಾ ಇಸ್ಲಾಂ ಧರ್ಮವನ್ನು ಗೇಲಿ ಮಾಡಿಲ್ಲ” ಎಂದು ಬರೆದಿದ್ದಾರೆ.
ಹಾಸ್ಯನಟ ಮುನಾವರ್ ಫಾರೂಖಿ ವಿರುದ್ಧ ಬಿಜೆಪಿ ಶಾಸಕನ ಪುತ್ರ ಮತ್ತು ಹಿಂದ್ ರಕ್ಷಕ ಸಂಘಟನ್‌ನ ಕನ್ವೀನರ್ ಏಕಲವ್ಯ ಗೌರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಹಿಂದೂ ದೇವತೆಗಳ ಅವಹೇಳನ: ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಎಫ್‌ಐಆರ್


