Homeಮುಖಪುಟಸಮುದ್ರದ ಅಲೆ ರಾಜಾಜ್ಞೆಗಾಗಿ ಕಾಯುವುದಿಲ್ಲ - ಅಮಿತ್ ಭಾದುರಿ

ಸಮುದ್ರದ ಅಲೆ ರಾಜಾಜ್ಞೆಗಾಗಿ ಕಾಯುವುದಿಲ್ಲ – ಅಮಿತ್ ಭಾದುರಿ

ಇಟಲಿಯ ಪಾವಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಅಮಿತ್ ಭಾದುರಿಯವರು ರೈತ ಹೋರಾಟದ ಕುರಿತು ನಾನುಗೌರಿ.ಕಾಂಗಾಗಿ ಬರೆದ ವಿಶೇ‍ಷ ಲೇಖನ.

- Advertisement -
- Advertisement -

ತಾನು ಕಂಡ ಜಾಗವನ್ನೆಲ್ಲಾ ಆಳುವ ರಾಜನೆಂದೇ ಆತ ಜನಜನಿತನಾಗಿದ್ದ. ಹೀಗೆ ದಂತಕತೆಯಾಗಿದ್ದ ರಾಜ ಕನೂಟ್, ತನ್ನ ರಾಜಪಾದ ಮತ್ತು ನಿಲುವಂಗಿ ತೊಯ್ಯಬಾರದು ಎಂದು ಉಕ್ಕಿ ಬರುತ್ತಿದ್ದ ಅಲೆಗೆ ವಾಪಸ್ ತೆರಳಲು ಆದೇಶಿಸಿದ. ರಾಜನ ದೈವಿಕ ಶಕ್ತಿಯ ಹೊರತಾಗಿಯೂ, ಸಮುದ್ರದ ಅಲೆ ಆದೇಶವನ್ನು ಪಾಲಿಸದೆ ಇದ್ದುದು, ಆತನ ಆಸ್ಥಾನಿಕರನ್ನೆಲ್ಲ ಮುಜುಗರಕ್ಕೀಡುಮಾಡಿತು. ಈ ದಂತಕತೆಯು ಬದುಕುಳಿಯುತ್ತದೆ, ಏಕೆಂದರೆ ಮುಖಸ್ತುತಿಯಿಂದ ಪೋಷಿಸಲ್ಪಟ್ಟ ಅಹಂಕಾರಕ್ಕೆ ಅದು ಸತ್ಯವನ್ನು ಹೇಳುತ್ತದೆ.

ಆಧುನಿಕ ಪ್ರಜಾಪ್ರಭುತ್ವಗಳು ಪ್ರಜಾತಾಂತ್ರಿಕವಾಗಿ ಚುನಾಯಿತರಾದ ನಾಯಕರಿಗೆ ದೈವಿಕ ಶಕಿಯನ್ನು ದಯಪಾಲಿಸುವುದಿಲ್ಲ. ಆದರೆ ಅದು ಆತನಿಗೆ /ಆಕೆಗೆ ನಿರಂಕುಶಾಧಿಕಾರಿಯಾಗಲು ಅವಕಾಶ ನೀಡುತ್ತದೆ, ಸರ್ವಾಧಿಕಾರಿಯಾಗಲಲ್ಲ. ಸಂಸತ್ತಿನಲ್ಲಿ ಅಂಗೀಕಾರವಾದ ಕಾನೂನಿನ ಪ್ರಕಾರ ಆತ ಪ್ರಜಾತಾಂತ್ರಿಕವಾಗಿ ಆಡಳಿತ ನಡೆಸುತ್ತಾನೆ. ವಿಶೇಷವಾಗಿ ಈ ದಿನಗಳಲ್ಲಿ, ಜಗತ್ತಿನ ವಿವಿಧ ದೇಶಗಳಲ್ಲಿ, ಸಾಂಕ್ರಾಮಿಕದ ಮರೆಯಲ್ಲಿ, ಪ್ರಜಾಪ್ರಭುತ್ವದಲ್ಲಿ ನಿರಂಕುಶ ಪ್ರವೃತ್ತಿಗಳು ಸುಲಭವಾಗಿ ತಲೆಯೆತ್ತುತ್ತಿವೆ. ಅದು ವಿರೋಧವೇ ಇರದ ಭೂತದ ಸಂಸತ್ ರೀತಿಯದ್ದು ಆಗಿರಬಹುದು, ಅದು ಆರೋಗ್ಯ ತುರ್ತು ಪರಿಸ್ಥಿತಿಯ ಹೆಸರಲ್ಲಿ ಅಮಾನತುಗೊಂಡ ಸಂಸತ್ ಆಗಿರಬಹುದು ಅಥವಾ ಮುಂದೆಂದೋ ತಿದ್ದುಕೊಂಡು ಸರಿಹೋಗುವವರೆಗೆ, ಅದು ಸಾಧ್ಯವಾದರೆ, ಅಲ್ಲಿಯವರೆಗೂ ಸಂಸತ್ತಿನಲ್ಲಿ ವಿವೇಚನಾರಹಿತ ಬಹುಮತದ ಪರಿಣಾಮದಿಂದಾಗಿ ರೂಪುಗೊಳ್ಳುವ ಅಭ್ಯಾಸವಾಗಿರಬಹುದು.

ಇತ್ತೀಚೆಗೆ ಸಂಸತ್ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನಾ ಅಲೆಯೇ ಎದ್ದಿರುವುದು ಈಗ ಇತಿಹಾಸ. (ಪ್ರಮುಖವಾಗಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರಪ್ರದೇಶದ ರೈತರಿಂದ ಮುನ್ನಡೆಸಲ್ಪಡುತ್ತಿರುವ ಈ ಹೋರಾಟದ ಅಲೆಗೆ ಈಗ ದೇಶದ ಇತರ ಭಾಗಗಳ ರೈತರು ಸೇರಿಕೊಳ್ಳುತ್ತಿದ್ದಾರೆ.) ಈ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕೇಳುತ್ತಿರುವ ಅವರು, ಎಲ್ಲ ಅಗತ್ಯ ಕೃಷಿ ಉತ್ಪನ್ನಗಳಿಗೆ ಸಮಂಜಸ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಲಿಖಿತ ಕಾನೂನನ್ನು ಕೇಳುತ್ತಿದ್ದಾರೆಯೇ ಹೊರತು ಅಲಿಖಿತ ಆಶ್ವಾಸನೆಯನ್ನಲ್ಲ. ಆದರೆ ಸರ್ಕಾರಕ್ಕೆ ಇಷ್ಟವಿಲ್ಲ.

ಒಳಕ್ಕೆ ಉಕ್ಕಿ ಹರಿಯುತ್ತಿರುವ ಪ್ರತಿಭಟನೆಗಳ ಉಬ್ಬರವಿಳಿತದ ಅಲೆಯು ಈಗ ಪ್ರಜಾಪ್ರಭುತ್ವ ನಾಯಕನ ಸಿಂಹಾಸನವನ್ನು ತಲುಪಿ, ಆತನ ಪಾದ ಮತ್ತು ನಿಲುವಂಗಿಗಳನ್ನು ಒದ್ದೆ ಮಾಡುವುದರ ಸನಿಹದಲ್ಲಿದೆ, ಆದರೆ ಅದನ್ನು ಬಲಪ್ರಯೋಗದ ಮೂಲಕ ತಡೆಯಲಾಗುತ್ತಿದೆ. ಪೊಲೀಸರಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಳವಾದ ಗುಂಡಿಗಳನ್ನು ತೋಡಲು ಮತ್ತು ಬ್ಯಾರಿಕೇಡ್, ಜಲಫಿರಂಗಿ, ಅಶ್ರುವಾಯುಗಳನ್ನು ಬಳಸಲು ಹೇಳಿದ್ದು ರೈತರಲ್ಲ, ಅಧಿಕಾರದಲ್ಲಿರುವ ಸರ್ಕಾರಗಳೇ. ಇಷ್ಟಾದರೂ ಪ್ರತಿಭಟನೆಯ ಅಲೆಗಳು ಸಾಯಲಿಲ್ಲ, ಬದಲಿಗೆ ಅವು ಇನ್ನಷ್ಟು ಎತ್ತರಕ್ಕೆ ಏರುತ್ತ, ರಾಜಧಾನಿಯ ಗಡಿಯ ಆಯ್ದ ಸ್ಥಳಗಳಲ್ಲಿ ಕ್ರೋಢೀಕರಣಗೊಳ್ಳುತ್ತಿವೆ. ಪ್ರತಿರೋಧವು ಬೃಹತ್ ಪ್ರಮಾಣದಲ್ಲಿ ಹೆಚ್ಚುತ್ತಿದೆ ಮತ್ತು ದೇಶದ ಇತರ ಭಾಗಗಳಿಗೂ ಹಬ್ಬುತ್ತಿದೆ.

ತನ್ನನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಾಯಕ ಹೇಳುತ್ತಾನೆ. ತನ್ನ ನಾಯಕತ್ವವನ್ನು ಅನುಸರಿಸಿದರೆ, ಈ ಕಾನೂನುಗಳು ಸಮೃಧ್ಧಿ ತರುತ್ತವೆ ಮತ್ತು ಕೆಲವೇ ವರ್ಷಗಳಲ್ಲಿ ದ್ವಿಗುಣ ಆದಾಯವನ್ನು ತಂದುಕೊಡಲಿವೆ ಎಂದು ನಾಯಕ ಹೇಳುತ್ತಾನೆ. ಆತನ ಆಸ್ಥಾನಿಕರು ಮತ್ತು ಹಿಂಬಾಲಕರು ಕೂಡ ಮಾರುಕಟ್ಟೆಯ ಮ್ಯಾಜಿಕ್‌ಅನ್ನು ನಂಬುತ್ತಾರೆ. ಕನಿಷ್ಠ ಬೆಂಬಲ ಬೆಲೆ ಸಮೃದ್ಧಿಗೆ ಅಡ್ಡಿಯಾಗಿದೆ, ಕೇವಲ ಮುಕ್ತ ಮಾರುಕಟ್ಟೆ ಮಾತ್ರ ಅದನ್ನು ತಂದು ಕೊಡಬಲ್ಲದು, ಈ ಮೂರು ಕಾಯ್ದೆಗಳ ಉದ್ದೇಶ ಮುಕ್ತ ಮಾರುಕಟ್ಟೆ ಸೃಷ್ಟಿಸುವುದೇ ಆಗಿದೆ ಎನ್ನುತ್ತಿದ್ದಾರೆ. ಅಂಬಾನಿ ತಂಡ ಕೃಷಿ ಉತ್ಪನ್ನಗಳ ತನ್ನ ಚಿಲ್ಲರೆ ಔಟ್‌ಲೆಟ್‌ಗಳನ್ನು ವಿಸ್ತರಿಸುವ ಮುಕ್ತ ಮಾರುಕಟ್ಟೆಯಿದು. ಈಗಾಗಲೇ ನಿರ್ಮಿಸಿರುವ ಗೋದಾಮುಗಳನ್ನು ತುಂಬಿಸಲು ಹತಾಶರಾಗಿ ಕಾಯುತ್ತಿರುವ ಅದಾನಿಯ ಜನರು, ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರೊಂದಿಗೆ ಬೆಳೆ ಬೆಲೆ ಖರೀದಿಗೆ ಚೌಕಾಸಿ ನಡೆಸುವಂತಹ ಮುಕ್ತ ಮಾರುಕಟ್ಟೆಯಿದು. ಇದಲ್ಲದೆ, ಭಿನ್ನಾಭಿಪ್ರಾಯದ ಸಂದರ್ಭದಲ್ಲಿ, ಸಿವಿಲ್ ಕೋರ್ಟ್ ಅಲ್ಲ, ಕಾನೂನನ್ನು ಅಂಗೀಕರಿಸಿದ ಕೇಂದ್ರ ಸರ್ಕಾರ ತೀರ್ಪು ನೀಡುತ್ತದೆ. ಭೌಗೋಳಿಕವಾಗಿ ಜಮೀನು ಹೊಂದಿರುವ ರಾಜ್ಯಗಳಿಗೆ ಕೂಡ ಈ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರ ಇಲ್ಲ. ಕಾನೂನುಗಳನ್ನು ಪಾಸು ಮಾಡುವುದು, ಅವನ್ನು ಕಾರ್ಯಗತಗೊಳಿಸುವುದು ಮತ್ತು ವ್ಯಾಜ್ಯಗಳನ್ನು ಇತ್ಯರ್ಥ – ಇವೆಲ್ಲವನ್ನೂ ಕೇಂದ್ರ ಸರ್ಕಾರವೇ ಮಾಡಲಿದ್ದು, ಭಾರತ ಸಂವಿಧಾನ ರೂಪಿಸಿರುವ ಅಧಿಕಾರ ಹಂಚಿಕೆ ಮತ್ತು ವಿಕೇಂದ್ರೀಕರಣದ ಒಕ್ಕೂಟ ಪ್ರಜಾಪ್ರಭುತ್ವದ ಬದಲು, ಏಕೀಕೃತ ಅಧಿಕಾರವನ್ನು ಸ್ಥಾಪಿಸುವುದು ಕೇಂದ್ರ ಸರ್ಕಾರದ ಹುನ್ನಾರ. ಅಂತಹ ಯಾವುದೇ ಕಾನೂನುಗಳನ್ನು ಒಪ್ಪುವುದಿಲ್ಲ ಎಂದು ರೈತರು ಹೇಳುತ್ತಾರೆ. ಆದರೆ ಮಾಧ್ಯಮಗಳ ಮುಂದೆ ನಾಯಕ ಗಂಭೀರ ಧ್ವನಿಯಲ್ಲಿ ಮತ್ತೆ ಮತ್ತೆ ಹೇಳುತ್ತಾನೆ: ‘ತನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ’ ಎಂದು.

ಜಿಯೋ ಟವರ್ ಮೇಲೆ ರೈತರು ಮಾಡಿದ ದಾಳಿಯನ್ನು ಪರೋಕ್ಷವಾಗಿ ಖಂಡಿಸಿದ ಪ್ರಧಾನಿ
Photo Courtesy: DNA India

ಆತನ ಆಸ್ಥಾನಿಕರು ಮತ್ತು ಸಂದಾಯಿತ ಪಂಡಿತರು ದೊಡ್ಡ ಮಾಧ್ಯಮಗಳ ಮೂಲಕ ಉತ್ಸಾಹದಿಂದ ಪುನರಾವರ್ತನೆ ಮಾಡುತ್ತಾರೆ: ‘ನಮ್ಮ ನಾಯಕನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು. ಇದಕ್ಕೆ ಕಾರಣ ಪಾಕಿಸ್ತಾನಿಗಳು, ಖಲಿಸ್ತಾನಿಗಳು, ಮಾವೋವಾದಿಗಳು, ನಗರ ನಕ್ಸಲರು ಇರಬಹುದು, ಬಹುಷಃ ಇವರೆಲ್ಲರೂ ಆ ಪ್ರತ್ಯೇಕವಾದಿ ಎಲಿಮೆಂಟುಗಳ ಮೂಲಕ ಒಳ ನುಸುಳಿದ್ದಾರೆ. ಇವರೆಲ್ಲ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು.

ಇದೇನೂ ಮೊದಲ ಸಲವಲ್ಲ. ಮುಸ್ಲಿಮರು ಸಿಎಎ ಅನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. 370 ವಿಧಿ ಹಿಂಪಡೆದ ಸೌಂದರ್ಯವನ್ನು ಕಾಶ್ಮೀರಿಗಳು ನೋಡಲಿಲ್ಲ. ಜಿಎಸ್‌ಟಿ ಅರ್ಥವಾಗದವರಂತೆ ಮಾರಾಟ ವ್ಯವಸ್ಥೆ ವರ್ತಿಸಿತು. ಹೇಗೋ ಬದುಕುಳಿದಿದ್ದ ಬಡವರು ನೋಟು ಅಮಾನ್ಯೀಕರಣವನ್ನು ಅರ್ಥ ಮಾಡಿಕೊಳ್ಳಲಿಲ್ಲ, ಕೋವಿಡ್ ವೈರಸ್‌ಅನ್ನು ನಾಶ ಮಾಡಲು ಪರಿಣಾಮಕಾರಿಯಾದ ತ್ವರಿತ ಲಾಕ್‌ಡೌನ್ ಅರ್ಥ ಮಾಡಿಕೊಳ್ಳಲು ವಲಸೆ ಕೆಲಸಗಾರರಿಗೆ ಆಗಲಿಲ್ಲ. ಅದೇನೇ ಇರಲಿ, ನಾಯಕ ಮಾತ್ರ ದೃಢ ನಿಶ್ಚಯದಿಂದ ದೇಶ ಮುನ್ನಡೆಸುತ್ತಾನೆ ಎಂಬುದನ್ನೂ ಅರ್ಥ ಮಾಡಿಕೊಳ್ಳಲಿಲ್ಲ. ಇವು ಪುನರಾವರ್ತಿತವಾಗುತ್ತಲೇ ಇವೆ.

ನಿಜವಾದ ದೇಶಭಕ್ತರಿಗೆ ಮಾತ್ರ ನಾಯಕ ಅರ್ಥವಾಗುತ್ತಾನೆ, ದೇಶದ್ರೋಹಿಗಳು ಮಾತ್ರ ನಾಯಕನನ್ನು ವಿರೋಧಿಸುತ್ತಾರೆ. ಈಗ ರೂಪುಗೊಳ್ಳುತ್ತಿರುವ ನಮ್ಮ ಪ್ರಾಚೀನ ಅದ್ಭುತ ಹಿಂದೂ ರಾಷ್ಟ್ರವನ್ನು ತುಂಡು ಮಾಡಲು ಬಯಸುವವರು (ತುಕಡೆ ತುಕ್ಡೆ ಗ್ಯಾಂಗ್) ಮಾತ್ರ ನಾಯಕನನ್ನು ಟೀಕಿಸುತ್ತಾರೆ. ಅವರು ನೈಜವಾಗಿ ಈ ದೇಶಕ್ಕೆ ಸಂಬಂಧಿಸಿದವರೇ ಅಲ್ಲ, ಏಕೆಂದರೆ ಅವರು ಅದರ ಸಂಸ್ಕೃತಿಗೆ ಮತ್ತು ಅದರ ಭವ್ಯವಾದ, ವೈಜ್ಞಾನಿಕ ಸಂಪ್ರದಾಯಕ್ಕೆ ಅನ್ಯರಾಗಿದ್ದಾರೆ. ಎಂತಹ ವೈಜ್ಞಾನಿಕ ಸಂಪ್ರದಾಯ? ಗಣೇಶನ ಮುಖವನ್ನು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಆನೆಯ ಮುಖಕ್ಕೆ ಪರಿವರ್ತಿಸಿದ ವೈಜ್ಞಾನಿಕ ಸಂಪ್ರದಾಯ, ಅಲ್ಲಿ ಪ್ರಾಚೀನ ಬುದ್ಧಿವಂತರು (ಋಷಿಗಳು) ಬಹಳ ಹಿಂದೆಯೇ ಪಾತ್ರೆಗಳಿಂದ ಸದ್ದು ಮಾಡುವ ಮೂಲಕ ಮತ್ತು ಮೇಣದ ಬತ್ತಿಗಳ ಬೆಳಕಿನ ಮೂಲಕ ಸಾಂಕ್ರಾಮಿಕ ರೋಗಗಳ ವಿರುದ್ಧದ ಯುದ್ಧವನ್ನು ಹೇಗೆ ಗೆಲ್ಲಬಹುದು ಎಂಬುದನ್ನು ಕಂಡುಹಿಡಿದಿದ್ದರು.

6 ನೇ ಸುತ್ತಿನ

ಇದನ್ನು ನಾಯಕನ ಎಲ್ಲಾ ಆಸ್ಥಾನಿಕರು, ಮಂತ್ರಿಗಳು, ಪಂಡಿತರು ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಒಪ್ಪುತ್ತವೆಯೇ ಎಂದು ನಾವು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಖಂಡಿತವಾಗಿಯೂ ಅವರು ಭಿನ್ನಾಭಿಪ್ರಾಯದ ಯಾವ ಕುರುಹನ್ನೂ ತೋರಲಾರರು. ಅರ್ಥ ಮಾಡಿಕೊಳ್ಳುವಿಕೆಗೆ ಬದಲಾಗಿ ಮುಖಸ್ತುತಿ (ಹೊಗಳುಭಟ್ಟತನ), ಪ್ರಶ್ನಿಸುವ ಗುಣದ ಬದಲಾಗಿ ನಿಷ್ಠೆ, ಭಿನ್ನಾಭಿಪ್ರಾಯದ ಬದಲಾಗಿ ಅಧೀನತೆ… – ರಾಜಕಾರಣದಲ್ಲಿ ಆಡಬೇಕಾದ ಏಕೈಕ ಆಟ ಇದು ಹೇಳಿಕೊಳ್ಳುತ್ತಾ ಮಾಡಲಾಗುತ್ತಿದೆ.

ಕನೂಟ್ ರಾಜನು ಸ್ಕ್ಯಾಂಡಿನಿವಿಯಾದ ಹೆಚ್ಚಿನ ಭಾಗವನ್ನು ಆಳಿದನು. ಬಲಪ್ರಯೋಗದಿಂದ ಬ್ರಿಟನ್‌ಅನ್ನು ವಶಪಡಿಸಿಕೊಂಡ. ಬಹಳಷ್ಟು ಇತಿಹಾಸಕಾರರು ಆತ ತುಂಬ ಜಾಣ ಆಡಳಿತಗಾರ ಎನ್ನುತ್ತಾರೆ. ಬಹುಷಃ ಎಷ್ಟೊಂದು ಜಾಣ ಎಂದರೆ ರಾಜನ ಅನಿರ್ಬಂಧಿತ ದೈವಿಕ ಶಕ್ತಿಯಲ್ಲಿ ನಂಬಿಕೆ ಇಡುವಷ್ಟು. ರಾಜನ ಆದೇಶಕ್ಕಿಂತಲೂ ಮಿಗಿಲಾದ ಮತ್ತು ಬಲವಾದ ಒಂದು ಶಕ್ತಿ ಒಳಹರಿವ ಅಲೆಗೆ ನಿರ್ದೇಶನ ನೀಡುತ್ತದೆ ಎಂದು ಅರ್ಥಮಾಡಿಕೊಂಡ. ನಿಜಕ್ಕೂ ಅಂದು ತನ್ನ ಈ ವಿವೇಕವನ್ನು ಪ್ರದರ್ಶಿಸಲು ಸಮುದ್ರದ ಪಕ್ಕವೇ ಅವನ ಸಿಂಹಾಸನವನ್ನು ಇಡಲಾಗಿತ್ತು. ತನ್ನ ವಿವೇಕವನ್ನು ಮರೆಮಾಚುವ ಉದ್ದೇಶದ ಆಸ್ಥಾನಿಕರ ಮುಖಸ್ತುತಿಯು ಆತನಿಗೆ ಅರ್ಥವಾಗಿತ್ತು. ಈ ಸಮುದ್ರ ಬದಿಯ ಪ್ರಕರಣ ಬಹಳ ಸರಳವಾದುದು, ಆದರೂ ಆತನ ಆಸ್ಥಾನಿಕರಿಗೆ ಮತ್ತು ನಾಗರಿಕರಿಗೆ ತನ್ನ ‘ಮನ್ ಕಿ ಬಾತ್’ನ ಒಂದು ಸಶಕ್ತ ಪ್ರದರ್ಶನವಾಗಿತ್ತು. ಹಾಗಾಗಿಯೇ ಅದು ಸಾವಿರಾರು ವರ್ಷಗಳಿಂದ ಇತಿಹಾಸದಲ್ಲಿ ದಂತಕತೆಯಾಗಿ ಉಳಿದಿದೆ. ರಾಜಾಜ್ಞೆಗಿಂತ ಸಮುದ್ರದ ಅಲೆಯು ಪ್ರಬಲ ಎಂಬ ಸರಳ ಸತ್ಯವನ್ನು ಅರ್ಥಮಾಡಿಕೊಳ್ಳುವುದು ಅವನ ಕಾಲದ ವಿವೇಕವಾಗಿತ್ತು. ನಮ್ಮ ಕಾಲದ ವಿವೇಕವೆಂದರೆ, ಸಂಸತ್ತಿನ ಯಾವುದೇ ಕಾನೂನಿಗಿಂತ, ಜನಪ್ರಿಯವಾದ ಅಲೆಗಳು ಹೆಚ್ಚು ಶಕ್ತಿಯುತವಾಗಿರುತ್ತವೆ ಎಂಬುದನ್ನು ತಿಳಿಯುವುದು. ಇದನ್ನು ಗೌರವಯುತವಾಗಿ ಒಪ್ಪಿಕೊಳ್ಳಲು ನಮ್ಮ ಕಾಲದಲ್ಲಿ ಮತ್ತು ದೇಶದಲ್ಲಿ ವಿವೇಕ ಉಳಿದಿದೆಯೇ?

  • ಪ್ರೊ. ಅಮಿತ್ ಭಾದುರಿ

ಅನುವಾದ: ಮಲ್ಲನಗೌಡರ್

ಪ್ರೊ. ಅಮಿತ್ ಭಾದುರಿ

ಭಾದುರಿ ಅವರು ಪ್ರಸ್ತುತ ಇಟಲಿಯ ಪಾವಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಸಾಮಾಜಿಕ ಅಭಿವೃದ್ಧಿ ಕೌನ್ಸಿಲ್‌ನಲ್ಲಿ ಅತಿಥಿ ಪ್ರಾಧ್ಯಾಪಕರು.


ಇದನ್ನೂ ಓದಿ: Explainer: ಕೃಷಿ ಕಾನೂನುಗಳ ಉದ್ದೇಶಿತ ಮತ್ತು ನಿರುದ್ದೇಶಿತ ಪರಿಣಾಮಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...