HomeಮುಖಪುಟExplainer: ಕೃಷಿ ಕಾನೂನುಗಳ ಉದ್ದೇಶಿತ ಮತ್ತು ನಿರುದ್ದೇಶಿತ ಪರಿಣಾಮಗಳು

Explainer: ಕೃಷಿ ಕಾನೂನುಗಳ ಉದ್ದೇಶಿತ ಮತ್ತು ನಿರುದ್ದೇಶಿತ ಪರಿಣಾಮಗಳು

ಇಟಲಿಯ ಪಾವಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಅಮಿತ್ ಭಾದುರಿಯವರು ನಾನುಗೌರಿ.ಕಾಂಗಾಗಿ ಬರೆದ ವಿಶೇ‍ಷ ಲೇಖನ.

- Advertisement -
- Advertisement -

ಈಸ್ಟ್ ಇಂಡಿಯಾ ಕಂಪನಿಗೆ ಭಾರತದಲ್ಲಿ ನೆಲೆಯೂರಿ, ಕಂಪನಿ ಆಡಳಿತವನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟ ನಿರ್ಣಾಯಕ ಪ್ಲಾಸಿ ಕದನವನ್ನು ಅವರಿಗೆ ಯುದ್ಧಭೂಮಿಯಲ್ಲಿ ಗೆಲ್ಲಲಾಗಲಿಲ್ಲ, ಬದಲಿಗೆ ಸೇನಾ ದಂಡನಾಯಕನೊಬ್ಬನ ಪಿತೂರಿಯಿಂದ ಅವರು ಗೆದ್ದದ್ದು. ಇದೇ ನಿಟ್ಟಿನಲ್ಲಿ ಎಚ್ಚರ ನೀಡುವ ಒಂದು ಆಫ್ರಿಕಾ ಗಾದೆಯಿದೆ, “ಸಿಂಹ ಮುಂದಾಳತ್ವ ವಹಿಸಿದ ಕುರಿಯ ಸೇನೆಯು, ಕುರಿಯ ಮುಂದಾಳತ್ವದ ಸಿಂಹಗಳ ಸೇನೆಯನ್ನು ಸೋಲಿಸಲಿಬಲ್ಲುದು” ಎಂದು. ಈ ಗಾದೆಯ ಹಿಂದಿನ ಸತ್ಯ ವಿಶಾಲವಾದದ್ದು ಮತ್ತು ಅದು ಕೇವಲ ಯುದ್ಧಭೂಮಿಗಳಿಗೆ ಮಾತ್ರ ಅನ್ವಯಿಸದೆ ಹಲವು ಆಧುನಿಕ ಸರ್ಕಾರಗಳು ಮತ್ತು ಪ್ರಜಾಸತ್ತಾತ್ಮಕ ನಾಯಕರಿಗೂ ಸರಿಹೊಂದುತ್ತದೆ. ಒಬ್ಬ ತಪ್ಪು ಮುಖಂಡ, ಒಂದು ವಿಷಪೂರಿತ ಸಿದ್ಧಾಂತ, ಒಂದು ಮೂರ್ಖ ಗುರಿ ಅಥವಾ ಭವ್ಯತೆಯ ಬಗೆಗಿನ ಒಂದು ತಪ್ಪು ಕಲ್ಪನೆ ಅತಿ ಸಣ್ಣ ಸಮಯದಲ್ಲಿ ಊಹಿಸಿಕೊಳ್ಳಲಾಗದ ವಿನಾಶ ತರಬಲ್ಲದು. ಆನಂತರ, ಈ ವಿಧ್ವಂಸದಿಂದ ಚೇತರಿಸಿಕೊಳ್ಳಲು, ಅದು ಎಂದಾದರು ಸಾಧ್ಯವಾದರೆ, ದೀರ್ಘವಾದ ಸಮಯ ಹಿಡಿಯುತ್ತದೆ.

ಇತಿಹಾಸದಲ್ಲಿ ಇದಕ್ಕೆ ಲೆಕ್ಕವಿಲ್ಲದಷ್ಟು ಉದಾಹರಣೆಗಳಿವೆ. ಹಿಟ್ಲರ್ ಮತ್ತು ಮುಸಲೋನಿ ಇನ್ನೂ ನೆನಪಿನಿಂದ ಮಾಸಿಹೋಗಿಲ್ಲ. ಕೆಂಪು ಸೇನೆ ನಾಜಿಗಳನ್ನು ಸೋಲಿಸಿದ್ದು, ಮತ್ತು ಅದೇ ಸಮಯದಲ್ಲಿ ತನ್ನ ವಿರೋಧಿಗಳನ್ನು ಇಲ್ಲವಾಗಿಸಲು ನೀತಿಗಳನ್ನು ಹೊಂದಿದ್ದ ಸ್ಟಾಲಿನ್‌ನ ಆಳ್ವಿಕೆಯ ವಿಪರ್ಯಾಸ, ಪೂರ್ವ ಯುರೋಪಿನ ಸ್ವತಂತ್ರ ಕಮ್ಯುನಿಸ್ಟ್ ಪಕ್ಷಗಳಿಗೆ ಅಘಾತ ನೀಡಿತಲ್ಲದೆ, ಅದರಿಂದ ಚೇತರಿಸಿಕೊಳ್ಳಲು ಅವಕ್ಕೆ ಆಗಲೇ ಇಲ್ಲ. ಐಎಂಎಫ್ (ಅಂತಾರಾಷ್ಟ್ರೀಯ ವಿತ್ತೀಯನಿ॒ಧಿ) ಮುಂದುಮಾಡಿ ಪ್ರಚಾರ ಮಾಡಿದ ವಿಷಕಾರಿ ನೀತಿಗಳು ಮತ್ತು ಅವುಗಳನ್ನು ಮಾರುಕಟ್ಟೆ ವ್ಯವಸ್ಥೆಯ ಮೂಲಭೂತವಾದಿ ಮುಖಂಡರು ಅಪ್ಪಿಕೊಂಡಿದ್ದರ ಪರಿಣಾಮ, ಅಷ್ಟು ದೊಡ್ಡ ಮಟ್ಟದ ಪ್ರಾಕೃತಿಕ ಸಂಪನ್ಮೂಲಗಳಿದ್ದ ಅರ್ಜೆಂಟೀನಾ ದೇಶವನ್ನು ವಿಶ್ವದ ಮುಂದೆ ಹೇಗೆ ಕೈಯ್ಯೊಡ್ಡುವಂತೆ ಮಾಡಿತು ಎಂಬುದು ಈಗ ಚೆನ್ನಾಗಿ ದಾಖಲಾಗಿದೆ. ವಿಷಪೂರಿತ ಸಿದ್ಧಾಂತದ ಜೊತೆಗೆ ಬೆರೆತ ಭ್ರಾಂತಿ ಯಾವುದೇ ದೇಶವನ್ನು ಹಳ್ಳ ಹಿಡಿಸುವುದಕ್ಕೆ ಬೇಕಾದ ಪರಿಣಾಮಕಾರಿ ಪಾಕ. ಅಭಿವೃದ್ಧಿಯ ಋಣಾತ್ಮಕ ದರ ಮತ್ತು ಹಿಂದೆಂದೂ ಕಾಣದ ಆರ್ಥಿಕ ಹಿಂಜರಿತ, ದೊಡ್ಡ ಮಟ್ಟದ ನಿರುದ್ಯೋಗದ ಜೊತೆಜೊತೆಗೇ ನೆಲೆಸಿರುವ ಏರುತ್ತಿರುವ ಷೇರು ಮಾರುಕಟ್ಟೆ, ಇವುಗಳ ಜೊತೆಗೆ ದನದ ಮಾಂಸವನ್ನು ನಿಷೇಧಿಸುವಂತಹ, ಮುಖಂಡನೊಬ್ಬನ ಐತಿಹಾಸಿಕ ಪ್ರಾಮುಖ್ಯತೆಯನ್ನು ಜಾಹೀರಾತು ಮಾಡಲು ಸೆಂಟ್ರಲ್ ವಿಸ್ತಾರವನ್ನು ಕಟ್ಟುವಂತಹ ಸೈದ್ಧಾಂತಿಕ ಆದ್ಯತೆಗಳು ಅಂತಹ ವಿಪತ್ತಿನ ಮುನ್ಸೂಚನೆಗಳನ್ನು ನೀಡುತ್ತಿವೆ. ಹೀಗಿದ್ದರೂ, ಈ ದೇಶದ ರೈತರು ರಾಷ್ಟ್ರಕ್ಕೆ ಕನ್ನಡಿ ಹಿಡಿದ ಮೇಲಷ್ಟೇ, ನಮ್ಮ ಬಾಗಿಲಿಗೇ ಈಗ ರಾಕ್ಷಸ ಬಂದಿರುವ ವಾಸ್ತವಾಂಶದ ಅರಿವಾಗಿ ನಿದ್ದೆಯಿಂದ ಎದ್ದಿದ್ದೇವೆ.

ಮುಖ್ಯವಾಹಿನಿ ಮಾಧ್ಯಮಗಳು ತೋರಿಸುವ ಚಿತ್ರಪಟಗಳು ಮತ್ತು ಪರಿಣಿತರ ಚರ್ಚೆಗಳ ಮೇಲೆ ನಿಮ್ಮೆಲ್ಲಾ ಬುದ್ಧಿವಂತಿಕೆಯನ್ನು ಠೇವಣಿ ಇಟ್ಟಿಲ್ಲವಾದರೆ, ಚಂದಮಾಮ ಕಥೆಯಲ್ಲಿ ಬರುವ ಹಾಗೆ ನೀವು ಹೀಗೆ ಪ್ರಶ್ನಿಸಬಹುದು: “ಕನ್ನಡಿ, ಕನ್ನಡಿ, ಗೋಡೆಯ ಮೇಲಿನ ಕನ್ನಡಿಯೊಳಗಿನ ಗಂಟೆ, ತೋರಿಸು ಅದರ ಹಿಂದೆ ಯಾರುಂಟು” ಎಂದು. ಮತ್ತಾಗ, ಕನ್ನಡಿ ಈಗ ಅಧಿಕಾರ ನಡೆಸುತ್ತಿರುವ ಆಳುವ ಪಕ್ಷದ ಇಬ್ಬರು ಬಲಾಢ್ಯ ರಾಜಕಾರಣಿಗಳನ್ನು (ಇಬ್ಬರೂ ಗುಜರಾತಿಗಳು) ತೋರಿಸದೆ ಇರಬಹುದು, ಆದರೆ ಬೇರೆ ಎರಡು ಮುಖಗಳು, ಈ ದೇಶದ ಇಬ್ಬರು ಸಿರಿವಂತ ಉದ್ದಿಮೆದಾರರನ್ನು (ಮತ್ತೆ ಅವರಿಬ್ಬರೂ ಗುಜರಾತಿನವರು) ತೋರಿಸಬಹುದು. ಅವರ್‍ಯಾರು ಎಂಬದನ್ನು ಊಹಿಸುವುದು ಕಷ್ಟವೇನಲ್ಲ. ಈ ಇಬ್ಬರೂ ಗುಜರಾತಿನ ಮುಖ್ಯಮಂತ್ರಿ ಆಗಿರುವ ಕಾಲದಿಂದಲೂ ಈಗಿನ ಮುಖಂಡರಿಗೆ ಪರಮಾಪ್ತರು (ಕ್ರೋನಿಗಳು).

ಹೀಗಿದ್ದರೂ, ನಾವು ಮಾತನಾಡುತ್ತಿರುವುದು ಕೇವಲ ’ಕ್ರೋನಿ ಬಂಡವಾಳಶಾಹಿ ವ್ಯವಸ್ಥೆ’ಯ ಬಗ್ಗೆ ಮಾತ್ರ ಅಲ್ಲ. ಶಿಥಿಲಾವಸ್ಥೆಯತ್ತ ಸಾಗಿರುವ ಸಂಸತ್ತಿನಲ್ಲಿ ಆತುರಾತುರವಾಗಿ ಮೂರು ಕೃಷಿ ಕಾಯ್ದೆಗಳು ಮಂಜೂರಾಗಿದ್ದು ಈಗಾಗಲೇ ಅವರು ತಮ್ಮ ಹಾದಿಯಲ್ಲಿ ಮೊಳಗಿಸಿರುವ ಟ್ರೆಂಡ್‌ಗೆ ಭಿನ್ನವಾದದ್ದೇನಿರಲಿಲ್ಲ. ಸರ್ಕಾರ ಇದನ್ನು ಮತ್ತೆ ಮತ್ತೆ ಮಾಡಿದೆ ಆದರೆ ಪ್ರತಿಕ್ರಿಯಿಸುವುದಕ್ಕೆ ಅವಕಾಶವನ್ನೇ ನೀಡದೆ ಮಾಡುವ ಒತ್ತಾಯಪೂರ್ವಕ ದಾಳಿಗಳ ಜೊತೆಗೆ ಈ ಮೊದಲೇ ಈ ಟ್ರೆಂಡ್ ಶುರುವಾಗಿತ್ತು. ಡಿಮಾನೆಟೈಸೇಶನ್ ಎಂಬ ಗೆರಿಲ್ಲಾ ದಾಳಿಯ ಜೊತೆಗೆ, ಸಣ್ಣ ವ್ಯವಹಾರಗಳನ್ನು ಮತ್ತು ಒಕ್ಕೂಟ ವಿತ್ತೀಯ ವ್ಯವಸ್ಥೆಯಲ್ಲಿ ರಾಜ್ಯಗಳನ್ನು ಬಲಗುಂದಿಸಿದ ಜಿಎಸ್‌ಟಿಯ ಅತಿಕೆಟ್ಟ ಅನುಷ್ಠಾನದೊಂದಿಗೆ ಇದು ಪ್ರಾರಂಭವಾಯಿತು. ನಾಲ್ಕು ಗಂಟೆಗಳ ನೋಟಿಸ್ ನೀಡಿ ಭೀಕರ ಲಾಕ್‌ಡೌನ್ ಮಾಡಿ ವಲಸೆ ಕಾರ್ಮಿಕರ ಜೀವಗಳನ್ನು ಮತ್ತು ಜೀವನೋಪಾಯಗಳನ್ನು ಹಿಂಸಾತ್ಮಕವಾಗಿ ಪಲ್ಲಟಗೊಳಿಸುವ ಮೂಲಕ ಇದು ಮುಂದುವರೆಯಿತು. ಗೊಣಗಾಟ, ಸಮಸ್ಯೆ, ಯಾತನೆ ಇವೆಲ್ಲವೂ ಇದ್ದರೂ ಸಾರ್ವಜನಿಕ ಪ್ರತಿಕ್ರಿಯೆ ಇನ್ನೂ ಆಕ್ರೋಶದ್ದಾಗಿರಲಿಲ್ಲ.

ಸರ್ಕಾರ ಕಪ್ಪುಹಣದ ವಿರುದ್ಧ ಹೋರಾಡುತ್ತಿದೆ ಎಂಬ ಕಣ್ಕಟ್ಟು (15 ಲಕ್ಷ ರೂ ಭರವಸೆಯನ್ನು ಮರೆತುಬಿಡಿ) ಮತ್ತು ವ್ಯಾಪಕವಾಗಿ ಹರಡುತ್ತಿದ್ದ ಸಾಂಕ್ರಾಮಿಕ ರೋಗದ ವಿರುದ್ಧ ಧೀರೋದ್ಧಾತವಾಗಿ ಹೇರಿದ ಲಾಕ್‌ಡೌನ್, ನಂಬಿಕಸ್ಥ ಸಾರ್ವಜನಿಕರ ನಡುವೆ ಇನ್ನೂ ಸ್ವಲ್ಪ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿತ್ತು. ಸಂಸದದೀಯ ಪ್ರಜಾಪ್ರಭುತ್ವದ ಸಾರವನ್ನು ಒಳಗಿನಿಂದಲೇ ನಿಸ್ಸಾರಗೊಳಿಸಲು ಈ ಸಾಂಕ್ರಾಮಿಕವನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬುದನ್ನು ನಮಗೆಲ್ಲಾ ಕಾಣದೆ ಇರಲಾಗಲಿಲ್ಲ. ಯಾವುದೇ ಪೂರ್ವ ಸೂಚನೆ ನೀಡದೆ ಅಥವಾ ಚರ್ಚೆ ನಡೆಸದೆ ಸರಣಿಸರಣಿಯಾಗಿ ಕಾರ್ಮಿಕ ವಿರೋಧಿ ಮತ್ತು ಕಾರ್ಪೊರೆಟ್ ಪರವಾದ ಕಾನೂನುಗಳನ್ನು ಅಕ್ಷರಶಃ ಜಾರಿ ಮಾಡಲಾಯಿತು ಮತ್ತು ಈಗ ಋಣಾತ್ಮಕ ಅಭಿವೃದ್ಧಿಯಿರುವ ಹಾಗೂ ಭರವಸೆ ಕಳೆದುಕೊಂಡಿರುವ ಆರ್ಥಿಕ ವ್ಯವಸ್ಥೆಯಲ್ಲಿ ಮತ್ತು ನಿರುದ್ಯೋಗ ತಾಂಡವವಾಡುತ್ತಾ ಬಹುತೇಕ ಎಲ್ಲರೂ ಉಸಿರಿಗಾಗಿ ಏದುಸಿರುಬಿಡುತ್ತಿರುವ ಸಂದರ್ಭದಲ್ಲಿ, ಸಂಸತ್ತಿನ ಒಳಗಾಗಲೀ ಅಥವಾ ಹೊರಗಾಗಲೀ ಪ್ರತಿರೋಧವನ್ನು ನಿರೀಕ್ಷಿಸದೆ ಈ ಮೂರು ಕೃಷಿ ಕಾಯ್ದೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಲೆಕ್ಕಾಚಾರದ ಹೆಜ್ಜೆಯಿಟ್ಟಿದೆ.

PC : APN Live

ಬಹಳ ಸಂಕ್ಷಿಪ್ತವಾಗಿ ಹೇಳಬಹುದಾದರೆ, ಈ ಮೂರು ಕಾಯ್ದೆಗಳು ಮಂಡಿ ವ್ಯವಸ್ಥೆಯನ್ನು ಮತ್ತು ಕೃಷಿ ಉತ್ಪನ್ನಗಳಿಗೆ ಇರುವ ಕನಿಷ್ಠ ಬೆಂಬಲ ಬೆಲೆಯನ್ನು ತೊಡೆದುಹಾಕಲು ಬಂದಿರುವಂತವು ಮತ್ತು ಮುಖ್ಯವಾಹಿನಿ ಮಾಧ್ಯಮಗಳು ಗಮನಕೊಡದ ಸಾಮಾನ್ಯರ ಹಿತಾಸಕ್ತಿಯ ಅಂಶವೆಂದರೆ ವ್ಯಾಜ್ಯದ ಸಮಯದಲ್ಲಿ ಎಲ್ಲಾ ಸಾಮಾನ್ಯ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅಕ್ಷರಶಃ ತೆಗೆದುಹಾಕಿ, ಸರ್ಕಾರಕ್ಕೆ ಏಕಪಕ್ಷೀಯ ಅಧಿಕಾರವನ್ನು ಕೊಡುತ್ತಿರುವುದು. ವಿವಾದ-ವ್ಯಾಜ್ಯಗಳನ್ನು ಬಗೆಹರಿಸುವ ಅಧಿಕಾರದಲ್ಲಿ ನ್ಯಾಯಾಲಯದ ಯಾವುದೇ ಪಾತ್ರ ಇಲ್ಲದಂತೆ ಮಾಡಿ ಅದನ್ನು ಕಾರ್ಯಾಂಗಕ್ಕೆ ವರ್ಗಾಯಿಸಲಾಗುತ್ತಿದೆ. ಕಾನೂನಿನಲ್ಲಿ ಸಾಧ್ಯವಾಗುವ ಎಲ್ಲ ಸ್ವಹಿತಾಸಕ್ತಿ ಸಂಘರ್ಷಗಳ ಧೋರಣೆಗಳನ್ನೆಲ್ಲ ಉಲ್ಲಂಘಿಸಿ ಆರೋಪಿತ ಸಂಚುಕೋರನೇ, ಅಪರಾಧದ ಸ್ವ್ವರೂಪವನ್ನು ಇನ್ನುಮುಂದೆ ವಿಚಾರಣೆ ಮಾಡುತ್ತಾನೆ. ನಮ್ಮ ಪ್ರಜಾಸತ್ತಾತ್ಮಕ ಸಂಸತ್ತಿನಲ್ಲಿ ಅಂತಹ ಕಾನೂನನ್ನು ತರಾತುರಿಯಲ್ಲಿ ಮಂಜೂರು ಮಾಡಲಾಗಿದ್ದು, ಇದು ರೈತರ ಹಕ್ಕುಗಳನ್ನಷ್ಟೇ ನಾಶ ಮಾಡಿಲ್ಲ ಬದಲಿಗೆ ಎಲ್ಲ ಭಾರತೀಯ ನಾಗರಿಕರ ಹಕ್ಕುಗಳಿಗೂ ಬೆದರಿಕೆಯೊಡ್ಡಿದೆ.

ರೈತರು ಇದರ ವಿರುದ್ಧ ಎದ್ದು ನಿಂತಿದ್ದಾರೆ. ಅವರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಎದ್ದು ನಿಂತರು ಮತ್ತದು ಈಗ ಭಾರತೀಯ ನಾಗರಿಕರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಜೊತೆಗೆ ವಿಶಾಲವಾಗಿ ಬೆಸೆದುಕೊಂಡಿದೆ. ಧೃತಿಗೆಟ್ಟಿದ್ದ ಭಾರತದ ಬಹುಸಂಖ್ಯಾತ ಬಡ ಜನರು ಇದರಿಂದಾಗಿ ಅವರ ಮುಂದಿರುವ ಅಪಾಯದ ಬಗ್ಗೆ ತ್ವರಿತವಾಗಿ ತಿಳಿದುಕೊಂಡಿದ್ದಾರೆ. ಕೃಷಿಯ ಕಾರ್ಪೊರೇಟಿಕರಣ ಭಾರತದ ಪ್ರಜಾಪ್ರಭುತ್ವದ, ನಮ್ಮ ಸಾಂವಿಧಾನಿಕ ಹಕ್ಕುಗಳ ಕಾರ್ಪೊರೇಟಿಕರಣಕ್ಕೆ ಮುನ್ನುಡಿಯಂತಿದೆ.

ಪ್ರಭುತ್ವದ ಪರವಾದ ಆರ್ಥಿಕತಜ್ಞರು ತಮ್ಮ ಪರಿಣಿತಿಯ ಜ್ಞಾನಕ್ಕೆ ಹೆಸರುವಾಸಿಯಾದವರಲ್ಲ ಬದಲಿಗೆ ಪರಿಭಾಷೆಗಳಿಂದ ತುಂಬಿದ ಅಪ್ರಸ್ತುತವಾದ ಅರ್ಧ ಸತ್ಯಗಳಿಗೆ ಹೆಸರಾದವರು. ಮಿಲ್ಟನ್ ಫ್ರೀಡನ್ ಜನಪ್ರಿಯಗೊಳಿಸಿದ ಅವರ ವಾದದ ಮೂಲಾಧಾರ ಹೀಗಿದೆ: ’ಮುಕ್ತ ಪ್ರಜಾಪ್ರಭುತ್ವಕ್ಕೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಅವಶ್ಯಕತೆ ಇದೆ’ಯೆಂಬ ಮಾತು. ಕೃಷಿ ಕಾನೂನುಗಳು ಈ ಪ್ರಶ್ನೆಯನ್ನು ಎತ್ತಿದೆ: ಕಾರ್ಯಾಂಗವೇ ನ್ಯಾಯಾಧೀಶನಾಗುವುದು ಪ್ರಜಾಪ್ರಭುತ್ವವೇ? ಪ್ರಜಾಪ್ರಭುತ್ವದ ಹೊಸ ವ್ಯಾಖ್ಯಾನವೇ ಇದು? ಮತ್ತೆ, ಸಣ್ಣ ಮತ್ತು ದುರ್ಬಲ ರೈತ, ಅಂಬಾನಿ ಅಥವಾ ಅದಾನಿಯ ಜೊತೆಗೆ ಬೆಲೆ ಚೌಕಾಸಿ ಮಾಡಬೇಕಾಗಿ ಬರುವಂತಹ ಮಾರುಕಟ್ಟೆ ಎಷ್ಟು ಮುಕ್ತವಾದದ್ದು? ಪ್ರ್ರಾಮಾಣಿತ ಆರ್ಥಿಕ ಸಿದ್ಧಾಂತದಲ್ಲಿ ಎಲ್ಲರಿಗೂ ತಿಳಿದಿರುವ ಮಾತೆಂದರೆ, ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೊಳ್ಳುವವರೆಲ್ಲರೂ ಮತ್ತು ಮಾರಾಟಗಾರರೆಲ್ಲರೂ ನಿಗದಿತ ಬೆಲೆಯನ್ನು ಒಪ್ಪಿಕೊಳ್ಳುವವರಾಗಬೇಕಿದ್ದು ಏಕಸ್ವಾಮ್ಯ ರೂಪಿಸುವವರಾಗಬಾರದು, ಅಲ್ಲದೆ ಹೋದರೆ ಬೆಲೆ ವ್ಯವಸ್ಥೆ ಕೆಲಸ ಮಾಡುವುದಿಲ್ಲ. ಇದರ ಅರ್ಥ ಬೆಲೆಗಳನ್ನು ರೂಪಿಸುವ ಮಾರುಕಟ್ಟೆ ಶಕ್ತಿ ಯಾರಿಗೂ ಇರುವುದಿಲ್ಲ. ಬಹಳ ಮುಖ್ಯವಾದ ಸಾಮಾನ್ಯ ಸಮತೋಲನ ಸಿದ್ಧಾಂತ ಅದಕ್ಕಾಗಿ ನಿರಾಸಕ್ತ ಹೊರಗಿನ ’ಹರಾಜುದಾರ’ನನ್ನು ಸೃಷ್ಟಿಸಬೇಕಾಯ್ತು.

ಮಾರುಕಟ್ಟೆಯ ಸಮತೋಲನ ಬೆಲೆಗಳತ್ತ ತೆರಳಲು ಬೆಲೆಗಳನ್ನು ನಿಗದಿಪಡಿಸುವ ಮತ್ತು ಪರಿಷ್ಕರಿಸುವ ವಾಲ್ಟೇರ್‌ನ ದೇವರಂತೆ ಅವನು. ಎಲ್ಲ ಅಪೂರ್ಣತೆಗಳು ಮತ್ತು ಭ್ರಷ್ಟಾಚಾರಗಳ ಜೊತೆಗೂ, ’ಹರಾಜುದಾರ’ ನಿಗದಿಪಡಿಸುವ ಬೆಲೆಗೆ ಹತ್ತಿರವಾಗಿ ’ಕನಿಷ್ಠ ಬೆಂಬಲ ಬೆಲೆ’ ಇದೆ. ಇದು ಕಾನೂನಿನಲ್ಲಿ ಕೆತ್ತನೆಯಾಗಬೇಕೆಂಬುದು ರೈತರ ಬೇಡಿಕೆ; ಆದರೆ ಇದಕ್ಕೆ ಸರ್ಕಾರ ಒಪ್ಪುತ್ತಿಲ್ಲ ಏಕೆಂದರೆ, ಮುಂದೆಂದೋ ನಡೆಯುವ ಬದಲು ಶೀಘ್ರವಾಗಿಯೇ ಕಾರ್ಪೊರೇಶನ್‌ಗಳು ಬೆಲೆಯನ್ನು ನಿಗದಿಪಡಿಸುವಂತಾಗಬೇಕೆಂಬುದು ಅದರ ಇರಾದೆ. ಇದಕ್ಕಾಗಿ ತಿದ್ದುಪಡಿಗಳಿರಲಿ ಇಲ್ಲವಾಗಲಿ ಸದ್ಯದ ಕಾನೂನುಗಳ ಪ್ರಕಾರ ಮಂಡಿ ವ್ಯವಸ್ಥೆ ನಿಷ್ಕ್ರಿಯವಾಗುತ್ತಿರುವುದು. ದೊಡ್ಡ ಕಾರ್ಪೊರೆಟ್ ಸಂಸ್ಥೆಗಳು ಬಂಡವಾಳ ಹೂಡಿದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ತಥಾಕಥಿತ ಪರಿಣಿತರು ಚರ್ಚಿಸುವ, ಮುಖ್ಯವಾಹಿನಿ ಆರ್ಥಿಕತಜ್ಞರು ಸಂಭ್ರಮಿಸುವ ಮುಕ್ತ ಮಾರುಕಟ್ಟೆಯ ವ್ಯವಸ್ಥೆ ಇದೆ. ಇದರ ನಡುವೆ ಅಂಬಾನಿಯವರ ರಿಲಾಯನ್ಸ್, ಕೃಷಿ ಉತ್ಪನ್ನಗಳ ಚಿಲ್ಲರೆ ಮಾರುಕಟ್ಟೆಗೆ ತನ್ನ ಹೆಜ್ಜೆಯನ್ನಿಡಲು ಹವಣಿಸಿದೆ ಮತ್ತು ಜಿಯೋ ಎಲ್ಲ ಕಾರ್ಪೊರೆಟ್ ಅಂತರ್ಜಾಲದ ದೊಡ್ಡ ಖರೀದಿಯನ್ನು ನಿಯಂತ್ರಿಸಲಿದೆ. ಇದೇ ಸಮಯದಲ್ಲಿ ಅದಾನಿ, ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡುವ ಬೃಹತ್ ಶೈತ್ಯಾಗಾರಗಳು ಹಾಗು ಕಾರ್ಪೊರೆಟ್ ಸಂಪರ್ಕ ವ್ಯವಸ್ಥೆಯನ್ನು ವಿಸ್ತರಿಸುವುದರಲ್ಲಿ ಆಗಲೇ ಕಾರ್ಯನಿರತರಾಗಿದ್ದಾರೆ. 5ಜಿ ಜೊತೆಗೆ ಬರುವ ಡಿಜಿಟಲ್ ಬಂಡವಾಳಶಾಹಿಯನ್ನು ಭಾರತದಲ್ಲಿ ಜಿಯೋ ನಿಯಂತ್ರಿಸಲಿದೆ ಎಂದು ಸರ್ಕಾರ ಉತ್ಸುಕವಾಗಿರುವುದು ತಿಳಿಯುವಂತಾದ್ದೇ. ಇದಕ್ಕೆ ಏನಾದರೂ ಪರಿಹಾರ, ಬದಲಿ ಮಾರ್ಗ ಸಾಧ್ಯವಿದೆಯೇ?

ಈ ನಿರಾಶಾವಾದ ತಳೆಯುವುದರಲ್ಲಿ ನಾವೆಷ್ಟು ತಪ್ಪು ಎಂಬುದನ್ನು ರೈತರು ನಮಗೆ ತೋರಿಸುತ್ತಿದ್ದಾರೆ. ಸಾಮಾನ್ಯ ಜನರು ತಮ್ಮೆಲ್ಲಾ ಮಾಮೂಲಿ ದೌರ್ಬಲ್ಯಗಳನ್ನು ಬದಿಗಿಟ್ಟು ಒಂದಾದರೆ ಮತ್ತು ಸಾಮಾನ್ಯವಾಗಿ ಬಡ ಜನರ ಪರವಾದ ಆಭಿವೃದ್ಧಿ ಪಥದ ಬಗ್ಗೆ ಸ್ಪಷ್ಟ ಚಿತ್ರಣವನ್ನು ಹೊಂದಿರದ ಅಥವಾ ಯಾಂತ್ರಿಕ ಕಾರ್ಪೊರೆಟ್ ಕೃಷಿಯ ಮೋಸವನ್ನು ಭವಿಷ್ಯದ ಎಲ್ ದೊರ್‍ಯಾದೋ (ಮಿಥ್ಯ ನಗರಿ) ಎಂದು ಕರೆಯಲು ಧೈರ್ಯ ತೋರದ ವಿರೋಧ ಪಕ್ಷಗಳನ್ನು ಈ ಒಂದು ಸಮಸ್ಯೆಯ ದೃಷ್ಟಿಯಿಂದಲಾದರೂ ಒಗ್ಗೂಡುವಂತೆ ಮಾಡಿದರೆ, ಸಂಗತಿಗಳು ಬದಲಾದರೂ ಸಿರಿವಂತ ಅಧಿಕಾರಸ್ಥರ ಮತ್ತು ಅವರ ಚಾಕರಿಗಳಿಗೆ ಬೇಕಾದಂತೆಯೇ ಬದಲಾಗುವುದಿಲ್ಲ. ಈ ಬಾರಿ ರೈತರ ದೃಢ ಪ್ರತಿರೋಧ ಬಹಳ ಅಗತ್ಯವಾದ ಸನ್ನಿವೇಶಗಳನ್ನು ಸೃಷ್ಟಿಸಿದೆ. ದಿಟ್ಟತನದಿಂದ ಅವರ ಜೊತೆಗೆ ಸೇರಿಕೊಳ್ಳುವುದು ಈಗ ನಮಗೆ ಬಿಟ್ಟಿರುವ ವಿಷಯವಾಗಿದೆ. ಇದೇ ಸಮಯದಲ್ಲಿ ಒಂದು ವಿವೇಕದ ಮಾತು ನೆನಪಿಗೆ ಬರುತ್ತದೆ:

“ಪುರುಷರು (ಮತ್ತು ಮಹಿಳೆಯರು) ಇತಿಹಾಸವನ್ನು ಸೃಷ್ಟಿಸುತ್ತಾರೆ ಆದರೆ ಅವರೇ ಸೃಷ್ಟಿಸುವ ಸನ್ನಿವೇಶಗಳಲ್ಲಿಯೇ ಅದು ಘಟಿಸಬೇಕಿಲ್ಲ (ಪ್ಲೆಖನೋವ್)”. ಈಗ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಅಜೇಯ ಶತ್ರುವಿನಂತೆ ಕಾಣುತ್ತಿದ್ದವನ್ನು ಸೋಲಿಸಲು ಆಫ್ರಿಕನ್ ಗಾದೆಯಲ್ಲಿರುವಂತೆ ಕುರಿಗಳ ಸೇನೆಯನ್ನು ಸಿಂಹ ಈಗ ಇನ್ನೂ ಮುನ್ನಡೆಸಲು ಸಾಧ್ಯವಿದೆ.

  • ಪ್ರೊ. ಅಮಿತ್ ಭಾದುರಿ

(ಕನ್ನಡಕ್ಕೆ: ಗುರುಪ್ರಸಾದ್ ಡಿ. ಎನ್)

ಭಾದುರಿ ಅವರು ಪ್ರಸ್ತುತ ಇಟಲಿಯ ಪಾವಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಸಾಮಾಜಿಕ ಅಭಿವೃದ್ಧಿ ಕೌನ್ಸಿಲ್‌ನಲ್ಲಿ ಅತಿಥಿ ಪ್ರಾಧ್ಯಾಪಕರು.


ಇದನ್ನೂ ಓದಿ: ಅಯೋಧ್ಯೆ: ಗಣರಾಜ್ಯೋತ್ಸವದಂದು ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...