Homeಅಂಕಣಗಳುಮೋದಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುತ್ತಿರುವುದು ಅಕ್ಷಮ್ಯ...

ಮೋದಿ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ನಾಶಮಾಡುತ್ತಿರುವುದು ಅಕ್ಷಮ್ಯ…

- Advertisement -
- Advertisement -

ಖಾಸಗೀಕರಣಕ್ಕೆ ಹಾತೊರೆಯುತ್ತಿರುವ ಸರ್ಕಾರ ನಮ್ಮ ಸಾರ್ವಜನಿಕ ಉದ್ಯಮಗಳು ನಷ್ಟಕ್ಕೆ ಏಕೆ ಒಳಗಾದವು? ಅವುಗಳನ್ನು ಲಾಭದಾಯಕ ಮಾಡುವುದು ಹೇಗೆ ಎಂಬುದರ ಕುರಿತು ಗಂಭೀರವಾಗಿ ವಿಚಾರ ಮಾಡದೇ ಅವುಗಳನ್ನು ಮುಚ್ಚಿಸಿ, ಖಾಸಗಿಯವರಿಗೆ ದೋಚಲು ಅವಕಾಶ ಮಾಡಿಕೊಡಲು ಹೊರಟಿರುವುದು ದೇಶದ ದೌರ್ಭಾಗ್ಯವೇ ಸರಿ.

ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮಾರಾಟ ಮಾಡುವುದು ಮೋದಿ ಸರ್ಕಾರದ ಧೋರಣೆಯಾಗಿದೆ. ಕೆಲವು ಸಾರ್ವಜನಿಕ ವಲಯದ ಉದ್ದಿಮೆಗಳು ಅನೇಕ ವರ್ಷದಿಂದ ನಷ್ಟದಲ್ಲಿ ನಡೆಯುತ್ತಿವೆ. ಅವುಗಳನ್ನು ಮುಚ್ಚಲು ಅಭ್ಯಂತರವಿಲ್ಲ. ಆದರೆ ಕೆಲವು ಲಾಭದಾಯಕವಾದ ಸಂಸ್ಥೆಗಳನ್ನು ಅವುಗಳನ್ನು ನಿರ್ವಹಿಸುತ್ತಿದ್ದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಷ್ಟದಲ್ಲಿ ನಡೆಯುವಂತೆ ಮಾಡಿ ಕಬಳಿಸಿದ್ದೂ ಉಂಟು.

ಭಾರತದ ಆಭರಣಗಳೆಂದು ಕರೆಯಲ್ಪಡುತ್ತಿದ್ದ ಸಾರ್ವಜನಿಕವಲಯದ ಉದ್ದಿಮೆಗಳನ್ನು ಜವಹಾರ್‍ಲಾಲ್ ನೆಹರು ಅವರು ಆರಂಭಿಸಿದ್ದರು. ಆ ಹೆಮ್ಮೆಯ ದಿನಗಳು ಆಗಿಹೋಯಿತು. ಈಗ ಅವುಗಳನ್ನೆಲ್ಲ ನಷ್ಟದಲ್ಲಿ ನಡೆಯುತ್ತಿದೆಯೆಂದು ಹೆಸರಿಸಿ ಅವುಗಳನ್ನು ತಮಗೆ ಬೇಕಾದ ಉದ್ದಿಮೆದಾರರಿಗೆ ಮಾರಾಟ ಮಾಡುವ ಹುನ್ನಾರ ನಡದಿದೆ. ಉದಾಹರಣೆಗೆ BEML, BEL ಮುಂತಾದ ಲಾಭದಾಯಕ ಉದ್ಯಮಗಳನ್ನು ಮಾರಾಟ ಮಾಡುವ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಸ್ವಾತಂತ್ರ್ಯ ಬಂದ ಮೊದಲ ಕೆಲವು ವರ್ಷಗಳ ಕಾಲ ಖಾಸಗಿ ಉದ್ದಿಮೆದಾರರು ಲಕ್ಷಾಂತರ ಹಣ ಹೂಡಿ ಉದ್ಯಮಗಳನ್ನು ಆರಂಭಿಸಲು ಬಂಡವಾಳ ಹಾಕಲು ಹಿಂದೇಟು ಹಾಕುತ್ತಿದ್ದರು. ಅಂತಹ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳಿಗೆ ನೆಹರು ಅವರು ಉತ್ತೇಜನ ಕೊಟ್ಟರು. ಅವೆಲ್ಲ ಲಾಭದಾಯಕ ಸಂಸ್ಥೆಗಳಾಗಿ ಮುಂದುವರೆದವು. ಅದರಿಂದ ದೇಶದ ಆರ್ಥಿಕತೆ ದೌಡಾಯಿಸಿತು. ಆರ್ಥಿಕ ಪ್ರಗತಿ ಆಯಿತು.

ನೆಹರು ಅವರು ಈ ಸರ್ಕಾರಿ ಉದ್ಯಮಗಳನ್ನು ಆರಂಭಿಸಲು ಮತ್ತೊಂದು ಪ್ರಬಲ ಉದ್ದೇಶವಿತ್ತು. ಅದೇನೆಂದರೆ ಜನತೆಗೆ ಉದ್ಯೋಗ ಒದಗಿಸುವುದು. ಉದ್ಯಮೀಕರಣ ದಾಪುಗಾಲಿಟ್ಟಿತಾದರೂ ಜನತೆಗೆ ಉದ್ಯೋಗ ಒದಗಿಸುವ ಗುರಿ ತಲುಪಲಾಗಲಿಲ್ಲ. ನಿರ್ವಹಣೆಯ ಅನಾದರದಿಂದ ಹಾಗೂ ಕಾರ್ಮಿಕ ಸಂಘಟನೆಗಳ ಕಾಟದಿಂದ ಉದ್ಯಮಗಳು ಸೊರಗಲು ಆರಂಭವಾದವು.

ಕೇಂದ್ರದಿಂದ ಆರಂಭವಾದ ಸಾರ್ವಜನಿಕ ವಲಯದ ಉದ್ಯಮಗಳು ಲಾಭದಾಯಕವಾಗಿಯೇ ನಡೆದವಾದರೂ, ರಾಜ್ಯಗಳು ಆರಂಭಿಸಿದ ಸಾರ್ವಜನಿಕ ವಲಯದ ಉದ್ಯಮಗಳು ಕಾಲಕ್ರಮೇಣ ನೆಲಕಚ್ಚಿದವು. ಅವುಗಳಿಗೆ ಆಕ್ಸಿಜನ್ ಕೊಟ್ಟು ಜೀವಂತವಾಗಿಡಲು ವರ್ಷ ವರ್ಷ ಲಕ್ಷಾಂತರ ರೂಗಳನ್ನು ಕೇಂದ್ರ ಸರ್ಕಾರ ಒದಗಿಸಬೇಕಾಯಿತು.

1991ರಲ್ಲಿ ಉದಾರೀಕರಣ ಖಾಸಗೀಕರಣದತ್ತ ಸರ್ಕಾರ ವಾಲಿತು. ಈ ರಾಷ್ಟ್ರೀಕೃತ ಉದ್ಯಮಗಳಿಗಿಂತ ಉತ್ತಮವಾಗಿ ಖಾಸಗಿ ಉದ್ಯಮಗಳು ನಡೆಯುತ್ತಿದ್ದುದರಿಂದ ಸರ್ಕಾರಿ ಉದ್ಯಮಗಳನ್ನು ಸರ್ಕಾರ ಸ್ಥಗಿತ ಗೊಳಿಸಿದವು. ಅವುಗಳ ಷೇರುಗಳನ್ನು ಮಾರಲು ಆರಂಭವಾಯಿತು. ಸರ್ಕಾರ ಕೆಲವು ಕಂಪನಿಗಳ ಷೇರುಗಳನ್ನು ಸಂಪೂರ್ಣವಾಗಿ ಇನ್ನು ಕೆಲವು ಕಂಪನಿಗಳ ಷೇರುಗಳನ್ನು ಭಾಗಶಃ ಮಾರಾಟ ಮಾಡಿದವು ಈ ನಿಲುವಿಗೆ ಸರ್ಕಾರ ತನ್ನ ಸಮರ್ಥನೆ ನೀಡಿತು.

ಪ್ರವಾಸೋದ್ಯಮ, ಹೊಟೇಲ್ ನಡೆಸುವುದು ದಿನಬಳಕೆಯ ವಸ್ತುಗಳ ಉತ್ಪಾದನೆ, ಸಾರಿಗೆವಾಹನಗಳ ಉತ್ಪಾದನೆಗಳನ್ನು ಖಾಸಗಿ ಉದ್ಯಮಿಗಳು ಯಶಸ್ವಿಯಾಗಿ ನಡೆಸುವರಾಗಿದ್ದರಿಂದ ಸರ್ಕಾರ ಈ ಉದ್ಯಮಗಳಿಗೆ ಕೈಹಾಕಬಾರದು. ಸಾರ್ವಜನಿಕ ಉದ್ಯಮಗಳ ಆರೋಗ್ಯಕ್ಕೆ ಸಂಬಂಧಪಟ್ಟ ವಿದ್ಯಮಾನಗಳನ್ನು ಬಲಪಡಿಸುವುದು ಸರ್ಕಾರದ ನಿಲುವಾಯಿತು.

ತದನಂತರ ಅಸ್ತಿತ್ವಕ್ಕೆ ಬಂದ ಸರ್ಕಾರಗಳೂ ಲಾಭದಾಯಕವಾಗಿ ನಡೆಯುತ್ತಿದ್ದ ಸಾರ್ವಜನಿಕ ಉದ್ದಿಮೆಗಳ ಷೇರುಗಳನ್ನು ಮಾರಾಟ ಮಾಡಿ ಒಂದು ಲಕ್ಷ ಕೋಟಿ ರೂಗಳ ಬಂಡವಾಳ ಹಿಂಪಡೆಯಬೇಕೆಂದು ನಿರ್ಧರಿಸಿದವು. ಸಾರ್ವಜನಿಕ ವಲಯದ ಉದ್ಯಮಗಳನ್ನು ಬೆಳೆಸುವುದು ಅನವಶ್ಯಕ. ಖಾಸಗೀಕರಣವೇ ಮುಕ್ತಿದಾಯಕ ಎಂದು ಸರ್ಕಾರ ಭಾವಿಸಿತು. ಸಾರ್ವಜನಿಕ ವಲಯದ ಉದ್ಯಮಗಳ ಷೇರುಗಳ ಮಾರಾಟದ ಜೊತೆಗೆ ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣ ಮಾಡತೊಡಗಿದವು. ಹಣಕಾಸಿನ ಕೊರತೆ ಖಾಸಗೀಕರಣಕ್ಕೆ ಕಾರಣ ಎಂದು ಸಬೂಬು ಹೇಳಿತು. ಭಾರತ್ ಪೆಟ್ರೋಲಿಯಂನಂತಹ ಲಾಭದಾಯಕ, ಪ್ರತಿಷ್ಠಿತ ಉದ್ಯಮದ ಷೇರುಗಳನ್ನು ಕೂಡ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವುದು ದುರ್ದೈವ.

ಸಾಮಾನ್ಯ ಜನರಿಗೆ ಆರೋಗ್ಯ ಕಾಪಾಡಿಕೊಳ್ಳಲು, ಉತ್ತಮ ಶಿಕ್ಷಣ ಪಡೆಯಲು ಇದ್ದ ಅವಕಾಶವನ್ನು ಸರ್ಕಾರ ಲಾಭಕೋರ ಖಾಸಗಿ ಸಂಸ್ಥೆಗಳಿಗೆ ವಹಿಸಿ ಪ್ರಜಾದ್ರೋಹ ಎಸಗಲಾಗಿದೆ.

ಅದರಂತೆಯೇ ಷಿಪ್ಪಿಂಗ್ ಇಂಡಸ್ಟ್ರಿ ಆಫ್ ಇಂಡಿಯಾ ಮತ್ತು ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ ಕಂಪನಿಗಳ ಷೇರುಗಳನ್ನು ಮಾರಾಟ ಮಾಡಲು ತೀರ್ಮಾನಿಸಿರುವುದರ ಲಾಜಿಕ್ ಏನು ಎಂಬುದು ಒಂದು ಚಿದಂಬರ ರಹಸ್ಯವಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ಸಾರ್ವಜನಿಕ ಸೇವಾಉದ್ಯಮಗಳ ಶೇ.51ರಷ್ಟು ಷೇರುಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಇದಕ್ಕಿರುವ ಏಕೈಕ ಕಾರಣ ಇಂದಿನ ಸರ್ಕಾರಕ್ಕೆ ಉಡಾಯಿಸಲು ಹಣ ಬೇಕು. ಅದೇ ದೃಷ್ಟಿಯಿಂದ ರಿಸರ್ವ್ ಬ್ಯಾಂಕಿನ ರಿಸರ್ವ್ ಫಂಡಿನಲ್ಲಿ ಒಂದು ಭಾಗ ಅಂದರೆ ಎಷ್ಟೋ ಕೋಟಿ ಹಣ ಸರ್ಕಾರಕ್ಕೆ ಕೊಡಿ ಎಂಬ ಒತ್ತಾಯ ಬಂದಿದೆ. ನವರತ್ನಗಳಲ್ಲಿ ಒಂದಾದ ಭಾರತ್ ಪೆಟ್ರೋಲಿಯಂ ಕಂಪನಿಯನ್ನು ಮಾರಲು ಹೊರಟಿವುದರ ರಹಸ್ಯವೇನು? ಇದರಿಂದ ನಾವು ಕಲಿಯಬಹುದಾದ ಪಾಠ ಯಾವುದು?

ಲಾಭದಾಯಕವೋ, ನಷ್ಟವೋ PSUಗಳನ್ನು ಮಾರಾಟ ಮಾಡುವುದು ನಮ್ಮ ಧ್ಯೇಯ ಎಂದು ಸರ್ಕಾರ ಭಾವಿಸಿರಬಹುದು.

ಖಾಸಗೀಕರಣಕ್ಕೆ ಹಾತೊರೆಯುತ್ತಿರುವ ಸರ್ಕಾರ ನಮ್ಮ ಸಾರ್ವಜನಿಕ ಉದ್ಯಮಗಳು ನಷ್ಟಕ್ಕೆ ಏಕೆ ಒಳಗಾದವು? ಅವುಗಳನ್ನು ಲಾಭದಾಯಕ ಮಾಡುವುದು ಹೇಗೆ ಎಂಬುದರ ಕುರಿತು ಗಂಭೀರವಾಗಿ ವಿಚಾರ ಮಾಡದೇ ಅವುಗಳನ್ನು ಮುಚ್ಚಿಸಿ, ಖಾಸಗಿಯವರಿಗೆ ದೋಚಲು ಅವಕಾಶ ಮಾಡಿಕೊಡಲು ಹೊರಟಿರುವುದು ದೇಶದ ದೌರ್ಭಾಗ್ಯವೇ ಸರಿ.

PSUಗಳನ್ನು ಮುಗಿಸುವುದಕ್ಕೆ ಕಾರಣಗಳೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ರಿಸರ್ವ್ ಬ್ಯಾಂಕಿನ ರಿಸರ್ವ್ ಫಂಡಿಗೆ ಏಕೆ ಲಗ್ಗೆ ಹಾಕಬೇಕು ಎಂಬುದನ್ನು ಜನತೆಗೆ ಸ್ಪಷ್ಟ ನುಡಿಗಳಲ್ಲಿ ಮನವರಿಕೆ ಮಾಡಿಕೊಡಬೇಕು. ಈ ಬಗೆಗೆ ಸರ್ಕಾರದ ಪಾಲಿಸಿ ಏನು ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಬೇಕು. PSUಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ತಮ್ಮ ಭವಿಷ್ಯದ ಬಗೆಗೆ ಗಾಬರಿ ಉಂಟಾಗುತ್ತದೆ.

ಚುನಾಯಿತ ಸರ್ಕಾರ ಅಭಿವೃದ್ಧಿ ಮತ್ತು ಸಮಾನತೆಗೆ ಬದ್ಧನಾಗಿರಬೇಕು. ಅಭಿವೃದ್ಧಿಯ ಎಲ್ಲ ಆಯಾಮಗಳನ್ನು ಪಟ್ಟಭದ್ರ ಹಿತಾಸಕ್ತಿಗಳೇ ನಿರ್ಧರಿಸುವುದಾದರೆ ಜನಸಾಮಾನ್ಯರ ಪಾಡೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...