Homeಅಂಕಣಗಳುಆಘಾತವಾಣಿ | ಅಟ್ಯಾಕ್ ಹನ್ಮಂತರಾಜ್ಯ ಎಲ್ಡು ಭಾಗ ಆಗ್ಲಿ, ಒಂದು ಭಾಗದ ಖಾತೆಪಾಣಿ ನನ್ನಪ್ಪನ ಹೆಸರಿನ್ಯಾಗೆ ಐತೆ....

ರಾಜ್ಯ ಎಲ್ಡು ಭಾಗ ಆಗ್ಲಿ, ಒಂದು ಭಾಗದ ಖಾತೆಪಾಣಿ ನನ್ನಪ್ಪನ ಹೆಸರಿನ್ಯಾಗೆ ಐತೆ….

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಕಟ್ಟುಮಸ್ತಾದ ದೇಹದವರು ಕಂಡರೆ ಕಿಯ್ಯೋ ಕಿಯ್ಯೋ ಎಂದು ಕಿರುಚಾಡಿಕೊಂಡು ಓಡಿಹೋಗುವ ಬ್ಲೂಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಅಖಿಲಭಾರತ ಉಂಡಾಡಿಗುಂಡರ ಪರಿಷತ್ತಿನ ಪುಕ್ಕಲರ ರಣಹೇಡಿ ಕೃತ್ಯವೊಂದು ಬಯಲಾಗಿದೆ. ಜಾರ್ಖಂಡ್‍ನಲ್ಲಿ ಭಾಷಣವೊಂದನ್ನು ಮುಗಿಸಿ ಬರುತ್ತಿದ್ದ ಸ್ವಾಮಿ ಅಗ್ನಿವೇಶ್ ಎಂಬ 80 ವರ್ಷದ ಇಳಿವೃದ್ಧ ಹೋರಾಟಗಾರರ ಮೇಲೆ ಬ್ಲೂಜೆಪಿಯ ಸಣಕಲುತೊಡೆಯ ಕೋಡಂಗಿಗಳು ಮುಗಿಬಿದ್ದು ಹಲ್ಲೆ ನಡೆಸಿವೆ. ವೃದ್ಧರು, ಮಹಿಳೆಯರನ್ನು ಕಂಡರೆ ಇದ್ದಕ್ಕಿದ್ದಂತೆ ಗಂಡಸರಾಗುವ ಈ ಕ್ರಿಮಿಗಳು ಮತ್ತು ಹುಳಹುಪ್ಪಟೆಗಳ ಪಡೆಯು ಹೊಡೆಯುವುದು ಬಡಿಯುವುದು ಮಾಡುವುದು ಈ ದೇಶದಲ್ಲಿ ಸಾಮಾನ್ಯವಾಗಿ ಹೋಗಿದೆ. ಈ ಲಂಪಟಕ್ರಿಮಿಗಳ ಅನಧಿಕೃತ ಪಿತಾಶ್ರೀ ಬ್ಲೂಜೆಪಿಯ ಪಿಶಾಚಿ ನಾಯಕರು ಮತ್ತವರ ಪುಕ್ಕಲು ಮುದುಕ ಮಾತ್ರ ಈ ಬಗ್ಗೆ ಕ್ಯಾರೆ ಕೆತ್ತ ಎನ್ನದೆ ಗಂಟಲಿಗೆ ಸೋರೆಕಾಯಿ ಸಿಗಿಸಿಕೊಂಡು ನಸುಗುನ್ನಿಗಳಂತೆ ಸುಮ್ಮನಿರುವುದು ಮೂರೂಬಿಟ್ಟವರಿಗಿಂತ ಕಡೆಯಾಗಿ ಕಾಣುತ್ತಿರುವುದು ಈ ದೇಶದ ವಾಸ್ತವ.
*****
ಬಾಯಿ ಬಿಟ್ಟರೆ ಸುಳ್ಳುಗಳ ಚರಂಡಿಯನ್ನೇ ಹರಿಸುವ ಅರಳುಮರುಳು ಲೂಸು ಗಿರಾಕಿ ಫಕೀರಪ್ಪನ ಸುಳ್ಳಿನ ಹೊಡೆತ ತಾಳಲಾಗದೆ ಅವನು ಭಾಷಣ ಮಾಡುತ್ತಿದ್ದ ಪೆಂಡಾಲೇ ಸಭಿಕರ ತಲೆಯ ಮೇಲೆ ಧುಡುಮ್ಮನೆ ಕುಸಿದು ಬಿದ್ದಿರುವ ಘಟನೆ ವರದಿಯಾಗಿದೆ. ಪೆಂಡಾಲ್ ಕುಸಿದ ಮೇಲೂ ತನ್ನ ಕೊಳಕುಬಾಯಿಯ ದರಿದ್ರ ಭಾಷಣವನ್ನು ನಿಲ್ಲಿಸದ ಲೂಸ್ ಗಿರಾಕಿ ಫಕೀರಪ್ಪನು ಯಾರ್ ಸತ್ರೆ ನಂಗೇನು ಎಂದು ಕಯೋ ಕಯೋ ಕಯ್ಯಯ್ಯೋ ಅಂತ ಸುಳ್ಳು ಬೊಗಳುತ್ತಲೇ ಇದ್ದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
*****
ಇದೀಗ ಬಂದ ಸುದ್ದಿ, ತಲೆಕೆಟ್ಟ ಬೀದಿ ಭಿಕಾರಿಯಂತೆ ಐದೂವರೆ ಅಡಿ ಗಡ್ಡ ಬೆಳೆಸಿಕೊಂಡು ಪೋಲಿ ತಿರುಗುವ ‘ಅಂದ್ರುಗಿನ ಸ್ತ್ರೀ ರಾಮುಲು’ ಈಗ ಹೊಸದಾಗಿ ಇನ್ನೊಂದು ಕಲ್ ಚಪ್ಪಡಿ ತಗೊಂಡು ಹೊಟ್ಟೆ ಮೇಲೆ ಎತ್ತಾಕಿಕೊಂಡಿದ್ದಾನೆ. ಕರ್ನಾಟಕ ನಮ್ಮಪ್ಪನ ಮನೆ ಆಸ್ತಿ, ಅದರ ಮೇಲೆ ನಾನು ಖಾತೆಪಾಣಿ ಮಾಡಿಸ್ಕೊಂಡಿದೀನಿ, ಆದ್ರಿಂದ ರಾಜ್ಯ ಎರಡು ಭಾಗ ಆಗಬೇಕು, ಒಂದು ಭಾಗದಲ್ಲಿ ಯಾರಾದ್ರೂ ಇದ್ಕೊಳ್ಳಿ, ಇನ್ನೊಂದು ಭಾಗವನ್ನ ನಾನು ‘ಟೋಫನ್ ತಲೆ ರೆಡ್ಡಿ’ ಇಬ್ರೂ ಹಂಚಿಕೊಂಡು ಉಪ್ಪಿನಕಾಯ್ ಹಾಕ್ಕೊಂಡು ನೆಕ್ಕೋತೀವಿ ಅಂತ ‘ಸ್ತ್ರೀ ರಾಮುಲು’ ಬೊಗಳಿದೆ. ಮಾತೆತ್ತಿದರೆ ನಮ್ದು ಅಖಂಡ ಭಾರತ, ಜಗತ್ತಲ್ಲಿರೋ ಎಲ್ಲ ದೇಶಗಳೂ ಭಾರತಕ್ಕೇ ಸೇರಬೇಕು ಅಂತ ಗಂಟಲು ಹರಿದುಕೊಳ್ಳೋ ಬ್ಲೂಜೆಪಿ ಪಕ್ಷದಲ್ಲಿದ್ದು, ಇಂತಹ ರಾಜ್ಯ ಒಡೆಯುವ ನಮಕ್ ಹರಾಮ್ ಕೆಲಸಕ್ಕೆ ಸಪೋರ್ಟ್ ಮಾಡ್ತೀನಿ ಅಂದ ರಾಮುಲುಗೆ ಈಗ ಜೀವಭಯ ಎದುರಾಗಿ ಹಾರ್ಟು ‘ಚುಟು ಚುಟು, ಚುಮು ಚುಮು’ ಅಂತಾ ಇದೆಯಂತೆ. ಚಳ್ಳಕೆರೆ ಕಡೆಯ ಕನ್ನಡಪರ ಹೋರಾಟಗಾರರು “ರಾಮುಲು ಎಲ್ಲೇ ಕಂಡರೂ ಅವನ ಮುಖವೇ ಹೂತುಹೋಗಿರೋ ಗಡ್ಡಕ್ಕೆ ಸೀಮೆಣ್ಣೆ ಎರಚಿ ಬೆಂಕಿ ಹಚ್ಚಿ, ಸುಟ್ಟ ಗಡ್ಡದ ಬೂದಿಯನ್ನ ಅವನಿಗೇ ತಿನ್ನಿಸ್ತೀವಿ ಅಂತ “ ಇನ್ನೂ ಬೆದರಿಕೆ ಹಾಕಿಲ್ಲವೆಂದು ತಿಳಿದು ಬಂದಿದೆ.
*****
ಸಾವಿರಾರು ವರ್ಷಗಳಿಂದ ಮೈಬಗ್ಗಿಸಿ ದುಡಿದು ತಿಂದು ಗೊತ್ತೇ ಇರದ ಸನಾತನಿ ಶನಿಗಳು, ಕಳೆದ 30 ವರ್ಷಗಳಿಂದ ಶ್ರೀರಾಮನಿಗೆ ಗುಡಿ ಕಟ್ಟುವ ಟಪಾಸ್ ಅಡ್ವೆಂಚರ್ ಮಾಡುತ್ತ ತಿರುಗುತ್ತಿರುವುದು ನಿಮಗೆ ಗೊತ್ತೇ ಇದೆ. ಈ ಅಡ್ವೆಂಚರ್‍ನಲ್ಲಿ ಮಂಚೂಣಿಯಲ್ಲಿದ್ದ ಸಂಘಟನೆಗಳಲ್ಲಿ ಒಂದಾದ ‘ನಿರ್ಮೋಹಿ ಮಂಚ್’ ಸಂಘಟನೆಯು ರಾಮನಗುಡಿ ಕಟ್ತೇವೆಂದು ಸಾವಿರಾರು ಕೋಟಿ ಚಂದಾ ಎತ್ತಿದ ವಿ.ಹೆಚ್.ಪಿಯು ಆ ಹಣದಲ್ಲಿ ಒಂದು ಇಟ್ಟಿಗೆಯನ್ನೂ ಖರೀದಿಸದೆ ಇಡೀ ಚಂದಾಹಣವನ್ನು ಮುಂಡಾ ಮೋಚಿದೆಯೆಂದು ಆಕ್ರೋಶ ವ್ಯಕ್ತಪಡಿಸಿದೆ. ಇದು ಒಂದು ಕಡೆಯಿರುವಾಗ ಇನ್ನೊಂದು ಕಡೆಯಲ್ಲಿ 2019ರ ಎಲೆಕ್ಷನ್ನಿಗೆ ಮುಂಚೆ ರಾಮನಗುಡಿ ಕಟ್ತೀವಿ ಅಂತ ಹೇಳಿಕೆ ಕೊಟ್ಟ ಗುಜರಾತಿನ ಹಳೇ ಕ್ರಿಮಿನಲ್ ಪಂಟರ್ ‘ಹಮಿತ್ ಶಾ’ ಗಂಟಲಿಗೆ ಬ್ಲೂಜೆಪಿ ಪಕ್ಷ ತನ್ನ ಬಲಗಾಲನ್ನು ತುರುಕಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿದೆ. ಈ ಬೋಡಗುಂಡನ ಮಾತು ನಂಬಬೇಡಿ, ರಾತ್ರಿ ಹೊಡೆದ ಬಿಟ್ಟಿ ಎಣ್ಣೆ ಏಟಲ್ಲಿ ಹಿಂಗೆಲ್ಲ ವದರವ್ನೆ, ಇವನ ಮಾನಸಿಕ ಸ್ಥಿತಿ ಡೋಲಾಯಮಾನವಾಗಿದೆಯೆಂದು ಸ್ಪಷ್ಟನೆ ಕೊಟ್ಟಿದೆ. ಅಂದಹಾಗೆ, ಇವರ ರಾಮನಗುಡಿ ಅಡ್ವೆಂಚರ್ ಮುಂದಿನ 500 ವರ್ಷಕ್ಕೂ ಮುಂದುವರೆಯಲಿದೆ ಎಂಬುದು ಜನತೆಗೆ ಸ್ಪಷ್ಟವಾಗಿದೆ.
*****
ದೇಶದ ರಕ್ಷಣಾ ಢಾಕಿಣಿ, ಅಲ್ಲಲ್ಲ ಮಂತ್ರಿಣಿಯಾದ ‘ನಿರ್ಮಲಾ ರಾಮಸೀತನ್’ ಎಂಬ ಮಧ್ಯವಯಸ್ಕ ಮಹಿಳೆಯು.. ಲೋಕಸಭೆ ಚುನಾವಣೆಗಿಂತ ಮುಂಚೆ ಕಾಂಗ್ರೆಸ್ ದೇಶದಲ್ಲಿ ಕೋಮು ಗಲಭೆಗಳನ್ನು ಹುಟ್ಟು ಹಾಕುವ ಸಂಚು ಮಾಡುತ್ತಿದೆಯೆಂದು ಹಾಸ್ಯಾಸ್ಪದ ಹೇಳಿಕೆಯೊಂದನ್ನು ಕೊಟ್ಟಿದೆ. ಕೋಮುಗಲಭೆಗಳನ್ನು ದೇಶದ ತುಂಬೆಲ್ಲ ಎರಚಾಡಿ, ಸತ್ತವರ ಹೆಣದ ಮೇಲೆ ತಟ್ಟೆಯಿಟ್ಟುಕೊಂಡು ಅಧಿಕಾರ ಸವಿಯುತ್ತಿರೋ ಪೆಕರು ಪಡಪೋಶಿಗಳ ಪಕ್ಷದಲ್ಲಿದ್ದು, ತನ್ನ ತಟ್ಟೆಯಲ್ಲಿ ಕುದುರೆ ಸತ್ತುಬಿದ್ದಿದ್ದರೂ ಕಂಡವರ ತಟ್ಟೆಯಲ್ಲಿ ಅಮೀಬಾ ಹುಡುಕುವ ಈ ಮತಿಗೇಡಿ ಮಹಿಳೆಗೆ ತಲೆ ಎಂಬುದು ಇದೆಯೇ ಇಲ್ಲವೇ ಎಂಬುದು ಈಗ ಚರ್ಚಾಸ್ಪದ ಸಂಗತಿಯಾಗಿದೆ. ಅತ್ತ ಚೀನಾದೇಶವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಾಜಾರೋಷವಾಗಿ ಬಂಕರ್‍ಗಳನ್ನು ಕಟ್ಟಿಕೊಂಡು ಪಾಕ್ ಜೊತೆ ಜಂಟಿ ಸಮರಾಭ್ಯಾಸ ನಡೆಸುತ್ತಿದ್ದರೆ, ಆ ಅಪಾಯದ ಬಗ್ಗೆ ಕಿಂಚಿತ್ ಗ್ಯಾನವಿಲ್ಲದ ಈ ಮೂರ್ಖಮ್ಮನಿಗೆ ‘ಬಾಯಿಗೆ ಬಂದಂಗೆ ಮಾತಾಡಿಕೊಂಡು ಎಲ್ಲರಿಂದ ಉಗಿಸಿಕೊಳ್ಳುವುದೇ’ ಪ್ರಿಯವಾಗಿರುವುದು ದುರಂತ.

*****

ತರೀಕೆರೆಯ ರೈತರು ತಮ್ಮ ಹೊಲಗದ್ದೆಗಳಿಗೆ ಕಂಟಕಪ್ರಾಯವಾಗಿದ್ದ ಕಾಡುಪ್ರಾಣಿಗಳನ್ನು ಓಡಿಸಲು ಬ್ಲೂಜೆಪಿ ಪಕ್ಷದ ನ್ಯಾಷನಲ್ ಲೀಡರುಗಳ ಕಟೌಟ್‍ಗಳನ್ನು ಹೊಲದಲ್ಲಿ ನೆಟ್ಟು ಪ್ರಾಣಿಕಾಟದಿಂದ ಮುಕ್ತರಾಗಿದ್ದಾರೆ. ಸತ್ತು ಕೊಳೆತ ಘೇಂಡಾಮೃಗದಂತೆ ಕಾಣುವ ‘ಹಮಿತ್ ಶಾ’, ವಯಸ್ಸಾದ ಓತಿಕ್ಯಾತಕ್ಕೆ ಬಿಳಿ ಗಡ್ಡಮೀಸೆ ಬಂದಂತೆ ಕಾಣುವ ಪಕೋಡತಾತ, ಅಡುಗೂಲಜ್ಜಿ ಮುದುಕಿಗೆ ಬಿಳಿ ಪ್ಯಾಂಟು ಶರ್ಟು ಹಾಕಿದಂತೆ ಕಾಡುವ ‘ ಧಡಿಯೂರಪ್ಲ’ನ ಕಟೌಟುಗಳ ಮುಸುಡಿಗಳನ್ನು ಕಂಡು ಹೆದರಿದ ಹೊಲ ಮೇಯಲು ಬರುವ ಕಾಡುಹಂದಿ, ಸಿಂಗಳೀಕ, ಮುಸಿಯ, ಕಾಡೆಮ್ಮೆಗಳು ಉಚ್ಚೆ ಹೊಯ್ದುಕೊಂಡು ವಾಪಸ್ ಕಾಡೊಳಗೆ ಓಡಿ ಹೋಗುತ್ತಿರುವುದು ರೈತರ ಸಂತೋಷಕ್ಕೆ ಕಾರಣವಾಗಿದೆ. ಜನರಿಗಂತೂ ಈ ಕಟೌಟ್ ಮುಷಂಡಿಗಳಿಂದ ಮೂರುಕಾಸಿನ ಪ್ರಯೋಜನ ಇಲ್ಲ, ಕೊನೇಪಕ್ಷ ಕಾಡುಪ್ರಾಣಿಗಳಿಗೆ ಉಚ್ಚೆ ಹುಯ್ಯಿಸಲಾದರೂ ಈ ಕ್ರಿಮಿಗಳು ಬಳಕೆಯಾದವಲ್ಲ ಎಂದು ಗಬ್ಲಿಕ್ ಟಿವಿ ರಂಗಣ್ಣ ಗೊಳೋ ಎಂದು ಅಳುತ್ತ ಕುಳಿತಿದ್ದಾರಂತೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ
ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...