ಪ್ರಧಾನಿ ಮಂತ್ರಿ ಪರಿಹಾರ ನಿಧಿ ಇದ್ದಾಗಲೂ ನಮ್ಮ ಪ್ರಧಾನಿ ಮೋದಿಯವರು ಪಿಎಂಕೇರ್ ನಿಧಿಯನ್ನು ಏಕೆ ರಚಿಸಿದರು ಎಂದು ವಿರೋಧ ಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯನ್ನು ಜವಾಹರಲಾಲ್ ನೆಹರು ಸ್ಥಾಪಿಸಿದರು. ಅಲ್ಲದೇ ಆ ಸಮಿತಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಸದಸ್ಯರನ್ನಾಗಿ ಮಾಡಿದರು.
“ಈಗ ಯೋಚಿಸಿ ಅದು ಸರ್ಕಾರಿ ನಿಧಿಯಾಗಿದ್ದಾಗ ಯಾವುದೇ ರಾಜಕೀಯ ಪಕ್ಷದ ಅಧ್ಯಕ್ಷರು ಆ ನಿಧಿಯ ಟ್ರಸ್ಟಿಯನ್ನು ಏಕೆ ಮಾಡಬೇಕು? ಇಂದಿಗೂ, ಸೋನಿಯಾ ಗಾಂಧಿಯವರ ಸಹಿ ಅಥವಾ ಒಪ್ಪಿಗೆಯಿಲ್ಲದೆ ಮೋದಿಯವರುಪ್ರಧಾನಿ ಮಂತ್ರಿ ಪರಿಹಾರ ನಿಧಿಯಿಂದ ಹಣವನ್ನು ಖರ್ಚು ಮಾಡಲು ಸಾಧ್ಯವಿಲ್ಲ. ಇದು ಭಯಾನಕ ಸತ್ಯ” ಎಂದು ಬಲಪಂಥೀಯ ಸುಳ್ಳು ಸುದ್ದಿ ಹರಡುವ ಒಪಿಇಂಡಿಯಾ, ಸ್ವರಾಜ್‌ನಂತರ ವೆಬ್‌ಸೈಟ್‌ಗಳು ಸುದ್ದಿ ಮಾಡಿವೆ.
ಆದ್ದರಿಂದ ಸೋನಿಯಾ ಗಾಂಧಿಯವರ ಹಿಡಿತದಿಂದ ಮುಕ್ತರಾಗಲು ಮೋದಿ ಹೊಸ ನಿಧಿ ಪಿಎಂ ಕೇರ್ ಅನ್ನು ರಚಿಸಿದರು ಎಂದು ಅವು ವಾದ ಮಾಡಿವೆ
ಫ್ಯಾಕ್ಟ್‌ಚೆಕ್
ಪ್ರಧಾನ ಮಂತ್ರಿಗಳ ನಿಧಿಯಿಂದ ಹಣ ತೆಗೆಯಲು ಸೋನಿಯಾಗಾಂಧಿಯವರ ಅನುಮೋದನೆ ಅಗತ್ಯವಿಲ್ಲ ಎಂದು ಪಿಎಂಎನ್‌ಆರ್‌ಎಫ್ ವೆಬ್‌ಸೈಟ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಪ್ರಧಾನ ಮಂತ್ರಿಯ ವಿವೇಚನೆಯಿಂದ ನಿಧಿಯ ಹಣವನ್ನು ವಿತರಿಸಲಾಗುತ್ತದೆ ಎಂದು ಸಹ ಅಲ್ಲಿ ನಮೂದಿಸಲಾಗಿದೆ. ಈ ಹಿಂದೆ ಈ ನಿಧಿಯನ್ನು ಒಂದು ಸಮಿತಿಯು ನಿರ್ವಹಿಸುತ್ತಿತ್ತು (ಇದರಲ್ಲಿ ಕಾಂಗ್ರೆಸ್ ಅಧ್ಯಕ್ಷರು ಸದಸ್ಯರಾಗಿದ್ದರು), ಆದರೆ 1985 ರಲ್ಲಿ, ಎಲ್ಲಾ ಅಧಿಕಾರಗಳನ್ನು ಪ್ರಧಾನ ಮಂತ್ರಿಗೆ ವರ್ಗಾಯಿಸಲಾಯಿತು. ಆದ್ದರಿಂದ ಒಪಿ ಇಂಡಿಯಾ ಮತ್ತು ಸ್ವರಾಜ್ ಹೇಳಿರುವುದು ಸಂಪೂರ್ಣ ಸುಳ್ಳುಗಳಾಗಿವೆ.
ಪಿಎಂಎನ್‌ಆರ್‌ಎಫ್ ವೆಬ್‌ಸೈಟ್‌ನಲ್ಲಿ, ಈ ನಿಧಿಯನ್ನು 1948 ರಲ್ಲಿ ಸ್ಥಾಪಿಸಲಾಯಿತು ಎಂದು ಕಾಣಬಹುದು. ಪ್ರಾರಂಭದ ಸಮಯದಲ್ಲಿ, ನಿಧಿಯನ್ನು ನಿರ್ವಹಿಸಲು ಒಂದು ಸಮಿತಿಯನ್ನು ರಚಿಸಲಾಯಿತು. ‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು’ ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದರು.

ಆದರೆ ಪ್ರಸ್ತುತ, ಪಿಎಂಎನ್‌ಆರ್‌ಎಫ್ ವೆಬ್‌ಸೈಟ್‌ನಲ್ಲಿ, ‘ನಿಧಿಯಿಂದ ಹಣ ವಿತರಿಸುವುದು ಪ್ರಧಾನಮಂತ್ರಿಯ ವಿವೇಚನೆಯಿಂದ ಮತ್ತು ಪ್ರಧಾನ ಮಂತ್ರಿಯ ನಿರ್ದೇಶನಗಳಿಗೆ ಅನುಗುಣವಾಗಿ’ ಎಂದು ಓದಬಹುದು. ಆದ್ದರಿಂದ, ಕಾಂಗ್ರೆಸ್ ಅಧ್ಯಕ್ಷರಿಂದ ಅಂತಹ ಯಾವುದೇ ಅನುಮೋದನೆ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಅಲ್ಲದೇ ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ, ‘1985 ರಲ್ಲಿ, ಪಿಎಂಎನ್‌ಆರ್‌ಎಫ್‌ನ ವ್ಯವಸ್ಥಾಪನಾ ಸಮಿತಿಯು ಈ ಪರಿಹಾ ನಿಧಿ ಯ ಸಂಪೂರ್ಣ ನಿರ್ವಹಣೆಯನ್ನು ಪ್ರಧಾನಮಂತ್ರಿಯವರಿಗೆ ವಹಿಸಿತ್ತು. ಅದನ್ನು ನಿರ್ವಹಿಸಲು ನಿಧಿಯ ಕಾರ್ಯದರ್ಶಿಯನ್ನು ನೇಮಿಸುವ ವಿವೇಚನೆಯನ್ನು ನೀಡಲಾಯಿತು’.
ಇಷ್ಟೆಲ್ಲಾ ಆಧಾರಗಳಿರುವುದರಿಂದ ಪ್ರಧಾನ ಮಂತ್ರಿಯವರ ಪರಿಹಾರ ನಿಧಿ ಯಿಂದ ಹಣವನ್ನು ಬಳಸಲು ಕಾಂಗ್ರೆಸ್ ಅಧ್ಯಕ್ಷರ ಅನುಮೋದನೆ ಬೇಕಿಲ್ಲ ಎಂಬುದು ಮತ್ತಷ್ಟು ಸ್ಪಷ್ಟವಾಗುತ್ತದೆ. ಆದರೂ ಸಹ ಪಿಎಂ ಕೇರ್ಸ್ ಅನ್ನು ಪ್ರಧಾನಿಗಳು ಏಕೆ ಆರಂಭಿಸಿದರು ಎಂಬುದಕ್ಕೆ ಮೋದಿಯಾಗಲಿ, ಒಪಿ ಇಂಡಿಯಾ, ಸ್ವರಾಜ್ ವೆಬ್‌ಸೈಟ್‌ಗಳಾಗಲಿ ಸ್ಪಷ್ಟ ಕಾರಣಗಳನ್ನು ನೀಡಿಲ್ಲ. ಬದಲಿಗೆ ಈ ವೆಬ್‌ಸೈಟ್‌ಗಳು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿವೆ.
ಮತ್ತುಷ್ಟು ಮಾಹಿತಿ: ಫ್ಯಾಕ್ಟ್‌ಲಿ
ಇದನ್ನೂ ಓದಿ: Fack Check: ಕೊರೊನಾ ಹರಡಲು ನೋಟುಗಳಿಗೆ ಎಂಜಲು ಸವರಿ ರಸ್ತೆಯಲ್ಲಿ ಎಸೆದಿದ್ದಾರೆಯೇ? ವಿಡಿಯೋದ ಅಸಲಿ ಸತ್ಯವೇನು?



ಮೋಶಾ ಬಕ್ತರು ಗೋಬೆಲ್ಸ್ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಆದರೆ ಅವರ ದುರಾದೃಷ್ಟವಶಾತ್ ಸತ್ಯವನ್ನು ಹೇಳುವ ಜನ ಈ ಬೂಮಿಯ ಮೇಲೆ ಇನ್ನೂ ಇದ್ದಾರೆ.