ಪ್ರಧಾನಿ ನರೇಂದ್ರ ಮೋದಿ ಕುರಿತ ವ್ಯಂಗ್ಯ ಚಿತ್ರ (ಕಾರ್ಟೂನ್) ಪ್ರಕಟಿಸಿದ್ದಕ್ಕೆ ತಮಿಳು ನಿಯತಕಾಲಿಕೆ ‘ಆನಂದ ವಿಕಟನ್’ನ ವೆಬ್‌ಸೈಟ್ ಮೇಲೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ವಿಧಿಸಿರುವ ನಿರ್ಬಂಧ ಮುಂದುವರಿದಿದೆ.
ಈ ಕುರಿತು ಗುರುವಾರ (ಫೆ.27) ಪ್ರತಿಕ್ರಿಯೆ ನೀಡಿರುವ ವಿಕಟನ್ ಸಂಸ್ಥೆ, “ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸಲು ಮತ್ತು ವೆಬ್‌ಸೈಟ್ ಪ್ರವೇಶವನ್ನು ಪುನಃಸ್ಥಾಪಿಸಲು ಕಾನೂನು ಆಯ್ಕೆಗಳನ್ನು ಅನ್ವೇಷಿಸುತ್ತೇವೆ” ಎಂದು ಹೇಳಿದೆ.
Vikatan is now consulting legal experts to determine appropriate next steps. The publication is pursuing all legal avenues to both defend freedom of expression and restore access to the website.#VikatanForFreedomOfExpression | #VikatanCartoonRow | #AnandaVikatan pic.twitter.com/jV1IK0EvOG
— விகடன் (@vikatan) February 27, 2025
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕ್ಕದಲ್ಲಿ ಕೈಗೆ ಸರಪಳಿ ಬಿಗಿದ ರೀತಿಯ ಮೋದಿ ಭಯಭೀತರಾಗಿ ಕುಳಿತಿರುವ ವ್ಯಂಗ್ಯ ಚಿತ್ರವನ್ನು ಫೆಬ್ರವರಿ 15ರಂದು ವಿಕಟನ್ ವೆಬ್‌ಸೈಟ್ ಪ್ರಕಟಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ, ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದರು. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ವೆಬ್‌ಸೈಟ್ ಮೇಲೆ ನಿರ್ಬಂಧ ವಿಧಿಸಿದೆ.
ಟ್ರಂಪ್ ಆಡಳಿತ ಅಕ್ರಮ ವಲಸಿಗರೆಂದು ನೂರಾರು ಭಾರತೀಯರನ್ನು ಕೈ, ಕಾಲಿಗೆ ಸರಪಳಿ ಬಿಗಿದು, ಸೇನಾ ವಿಮಾನದಲ್ಲಿ ಕರೆ ತಂದು ಬಿಟ್ಟಾಗ ಏನೂ ಮಾತನಾಡದೆ ಟ್ರಂಪ್ ಮುಂದೆ ಪ್ರಧಾನಿ ಮೋದಿ ತಲೆಬಾಗಿ ನಿಂತಿದ್ದನ್ನು ವಿಕಟನ್ ವ್ಯಂಗ್ಯ ಚಿತ್ರದ ಮೂಲಕ ಅಭಿವ್ಯಕ್ತಿಪಡಿಸಿತ್ತು.
“ಯಾವುದೇ ಮುನ್ಸೂಚನೆ ನೀಡದೆ ನಮ್ಮ ವೆಬ್‌ಸೈಟ್ ಮೇಲೆ ನಿರ್ಬಂಧ ವಿಧಿಸಲಾಗಿದೆ. ವಿಚಾರಣೆಯ ನಂತರ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ವ್ಯಂಗ್ಯ ಚಿತ್ರ ಪ್ರಕಟಿಸಿರುವ ಕುರಿತು ಸರ್ಕಾರಕ್ಕೆ ನಾವು ವಿವರಣೆ ನೀಡಿದ್ದೇವೆ” ಎಂದು ವಿಕಟನ್ ತಿಳಿಸಿದೆ.
“ಫೆಬ್ರವರಿ 25ರ ರಾತ್ರಿ, ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಈ ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮ ಆದೇಶ ಹೊರಡಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಮುಂದಿನ ಹಂತಗಳನ್ನು ನಿರ್ಧರಿಸಲು ನಾವು ಕಾನೂನು ತಜ್ಞರೊಂದಿಗೆ ಸಮಾಲೋಚಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ವೆಬ್‌ಸೈಟ್‌ಗೆ ಪ್ರವೇಶವನ್ನು ಪುನಃಸ್ಥಾಪಿಸಲು ನಾವು ಎಲ್ಲಾ ಕಾನೂನು ಮಾರ್ಗಗಳನ್ನು ಅನುಸರಿಸುತ್ತೇವೆ” ಎಂದು ವಿಕಟನ್ ಪ್ರಕಟಣೆಯಲ್ಲಿ ಹೇಳಿದೆ.
ವಿಕಟನ್ ವಿವರಣೆಯಿಂದ ಕೇಂದ್ರ ಸರ್ಕಾರ ತೃಪ್ತಿಗೊಂಡಿಲ್ಲ ಎಂಬುವುದು, ಅದರ ಪ್ರಕಟಣೆಯಿಂದ ಗೊತ್ತಾಗಿದೆ.
“ಒಂದು ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕಾಗಿ ಶತಮಾನದಷ್ಟು ಹಳೆಯದಾದ ನಿಯತಕಾಲಿಕೆ ಗುಂಪಿನ ವೆಬ್‌ಸೈಟ್ ಅನ್ನು ನಿರ್ಬಂಧಿಸುವುದು ನೂರು ವ್ಯಂಗ್ಯಚಿತ್ರಕಾರರಿಗೆ ಶ್ರೀಮಂತ ವಿಷಯವನ್ನು ಒದಗಿಸುತ್ತದೆ. ಈ ಪ್ರತಿಭಾನ್ವಿತ ಆರ್.ಕೆ. ಲಕ್ಷ್ಮಣ್ ಈ ಮೂಲಕ ಏನು ಮಾಡಿದ್ದಾರೆ ಎಂದು ಊಹಿಸಿ!” ಎಂದು ಹೇಳುವ ಮೂಲಕ ದಿ ಹಿಂದೂ ಪಬ್ಲಿಷಿಂಗ್ ಗ್ರೂಪ್‌ನ ನಿರ್ದೇಶಕ ಮತ್ತು ಪತ್ರಕರ್ತ ಎನ್. ರಾಮ್ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.
“ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ಅನಿಯಂತ್ರಿತ ಮತ್ತು ಕಾನೂನುಬಾಹಿರ ದಾಳಿಯನ್ನು ವಿರೋಧಿಸಿ. VikatanForFreedomOfExpressionನೊಂದಿಗೆ ಒಗ್ಗಟ್ಟಿನಿಂದ ನಿಲ್ಲೋಣ” ಎಂದಿದ್ದಾರೆ.
Blocking the website of a century-old magazine group for publishing a cartoon provides rich material for a hundred cartoonists — imagine what the genius R.K. Laxman would have done with this one! Oppose the arbitrary and lawless — Orwellian — assault on freedom of expression by… pic.twitter.com/JO6f79UvHl
— N. Ram (@nramind) February 27, 2025
ಇಂಟರ್‌ನೆಟ್‌ನಲ್ಲಿ ವಿಕಟನ್ ಎಂದು ಹುಡುಕಿದಾಗ ವಿಕಟನ್ ವೆಬ್‌ಸೈಟ್‌ಗೆ ಪ್ರವೇಶಿಸಲು ನಮಗೆ ಸಾಧ್ಯವಾಗಿದೆ.ಆದರೆ ದಿ ಹಿಂದೂ ವರದಿಯ ಪ್ರಕಾರ, ಫೆಬ್ರವರಿ 15 ರಿಂದ ನಿಯತಕಾಲಿಕೆಯ ಪ್ರಾಥಮಿಕ ಡೊಮೇನ್ vikatan.comಗೆ ಕೆಲವು ಬಳಕೆದಾರರಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ನಿಯತಕಾಲಿಕೆಯ ಎರಡನೇ ಡೊಮೇನ್ anandavikatan.com ಗೆ ಪ್ರವೇಶಿಸಲು ಸಾಧ್ಯವಾಗುತ್ತಿದೆ. ನಮಗೆ ಎರಡೂ ವೆಬ್‌ಸೈಟ್‌ಗಳಿಗೆ ಪ್ರವೇಶಿಸಲು ಸಾಧ್ಯವಾಗಿದೆ.
ಪ್ರಧಾನಿ ಮೋದಿ ಪದವಿ ವಿವಾದದ ಪ್ರಕರಣ | ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್


