Homeಚಳವಳಿ‘ಆಂದೋಲನ ಜೀವಿ’ಗಳ ಮುಂದೆ ಸೋಲೊಪ್ಪಿದ ಮೋದಿ: ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಏನಂದರು?

‘ಆಂದೋಲನ ಜೀವಿ’ಗಳ ಮುಂದೆ ಸೋಲೊಪ್ಪಿದ ಮೋದಿ: ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಏನಂದರು?

- Advertisement -
- Advertisement -

ಪ್ರಧಾನಿ ಮೋದಿ ಕಳೆದ ಬಾರಿ ಸಂಸತ್ತಿನಲ್ಲಿ, ಕೃಷಿ ಕಾನೂನನ್ನು ವಿರೋಧಿಸಿ ಹೋರಾಟ ನಿರತರಾಗಿದ್ದ ರೈತ ಮುಖಂಡರನ್ನು ಉಲ್ಲೇಖಿಸಿ ‘ಆಂದೋಲನ ಜೀವಿ’ಗಳು ಎಂದು ಹಂಗಿಸಿದ್ದರು. ಆದರೆ ರೈತರು ಮಾತ್ರ ಹೌದು ನಾವು ಆಂದೋಲನ ಜೀವಿಗಳು ಎಂದು ಒಪ್ಪಿಕೊಂಡಿದ್ದರು. ಜೊತೆಗೆ ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಡಿದ ಹುತಾತ್ಮರನ್ನು, ಮಹಾತ್ಮರನ್ನು ಉದಾಹರಿಸಿ ಇವರೆಲ್ಲರ ಆಂದೋಲನದ ಫಲವೇ ನಮ್ಮ ಸ್ವಾತಂತ್ಯ್ರ ಎಂದು ಹೇಳಿದ್ದರು.

ಇದೀಗ ಬಿಜೆಪಿಯ ಮೋದಿ ನೇತೃತ್ವದ ಸರ್ಕಾರವು ಹೊಸ ಕೃಷಿ ಕಾನೂನನ್ನು ರದ್ದು ಪಡಿಸುವುದಾಗಿ ಘೋಷಿಸಿದೆ. ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ರೈತರಿಗೆ ಕೊನೆಗೂ ಜಯ ಸಿಕ್ಕಿದೆ. ಹಠಮಾರಿ ಸರ್ಕಾರ ರೈತರ ಮುಂದೆ ಮಂಡಿಯೂರಿರುವುದನ್ನು ಭಾರತದಾದ್ಯಂತ ಜನರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ರೈತರಿಗೆ ಮಂಡಿಯೂರಿದ ಬಿಜೆಪಿಯ ಮೋದಿ ನೇತೃತ್ವದ ಸರ್ಕಾರ: ನೆಟ್ಟಿಗರು ಹೇಳುತ್ತಿರುವುದೇನು?

ಪ್ರಧಾನಿಯ ಈ ಘೋಷಣೆಗೆ ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳ ಹೇಳಿಕೆ ಇಲ್ಲಿದೆ.

ಕರ್ನಾಟಕ – ಬಸವರಾಜ್ ಬೊಮ್ಮಾಯಿ; ಭಾರತೀಯ ಜನತಾ ಪಕ್ಷ (BJP)

“ಪ್ರಧಾನಿ ಮೋದಿ ಕೃಷಿ ಕಾನೂನನ್ನು ಹಿಂಪಡೆದಿರುವುದರ ಹಿಂದೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೂ ಸಂಬಂಧವಿಲ್ಲ. ರೈತರ ಹೋರಾಟಕ್ಕೆ ಮಣಿಯುವ ಪ್ರಶ್ನೆಯೂ ಉದ್ಭವಿಸಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಪರವಾಗಿ ರೈತರು ಹೋರಾಟ ನಡೆಸುತ್ತಿದ್ದರು. ಇದು ಸ್ಪಂದನಶೀಲ ಸರ್ಕಾರ. ರೈತರ ಹೋರಾಟಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ”

ತಮಿಳುನಾಡು – ಎಂ. ಕೆ. ಸ್ಟಾಲಿನ್; ಡ್ರಾವಿಡ ಮಕ್ಕಳ್ ಕಚ್ಚಿ (DMK)

“ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲಾಗುವುದು ಎಂಬ ಪ್ರಧಾನ ಮಂತ್ರಿಯ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಇದು ಇಡೀ ರೈತರ ಹೋರಾಟಕ್ಕೆ ಸಂದ ಜಯವಾಗಿದ್ದು, ಪ್ರಜಾಪ್ರಭುತ್ವದಲ್ಲಿ ಜನರ ಮಾತುಗಳನ್ನು ಗೌರವಿಸಬೇಕು. ಇದು ಇತಿಹಾಸ ಹೇಳುವ ಪಾಠ”

“ಕೃಷಿ ವಿರೋಧಿ ಕಾನೂನುಗಳ ವಿರುದ್ಧ ಶಾಸಕಾಂಗ ಸಭೆಯಲ್ಲಿ ರೈತರ ಪರವಾಗಿ ನಿಂತು ನಿರ್ಣಯ ಅಂಗೀಕರಿಸಿದ್ದಕ್ಕೆ ನಾವು ಹೆಮ್ಮೆ ಪಡುತ್ತಿದ್ದೇವೆ. ರೈತರು ತಮ್ಮ ನೈತಿಕ ಹೋರಾಟದ ಮೂಲಕ ಹಕ್ಕುಗಳನ್ನು ಗಳಿಸಿ ಭಾರತವು ಗಾಂಧಿಯ ನೆಲ ಎಂದು ಜಗತ್ತಿಗೆ ಸಾರಿದ್ದಾರೆ!”

ಇದನ್ನೂ ಓದಿ: ರೈತ ಹೋರಾಟವನ್ನು ತಕ್ಷಣಕ್ಕೆ ಹಿಂಪಡೆಯುವುದಿಲ್ಲ: ರಾಕೇಶ್ ಟಿಕಾಯತ್

ಕೇರಳ – ಪಿಣರಾಯಿ ವಿಜಯನ್; ಭಾರತ ಕಮ್ಯುನಿಷ್ಟ್‌ ಪಕ್ಷ (CPIM)

“ಒಂದು ವರ್ಷದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ವರ್ಗ ಹೋರಾಟಗಳ ಇತಿಹಾಸದಲ್ಲಿ ಸುವರ್ಣಾಕ್ಷರಗಳ ಒಂದು ಅಧ್ಯಾಯವನ್ನು ಭಾರತೀಯ ರೈತರು ಬರೆದಿದ್ದಾರೆ. ಸರಿಸಾಟಿಯಿಲ್ಲದ ಸಂಕಲ್ಪ ಮತ್ತು ಅಚಲ ಮನೋಭಾವದಿಂದ ಹೋರಾಡಿದ ರೈತರು ಮತ್ತು ರೈತ ಸಂಘಟನೆಗಳು ಹಾಗೂ ಹುತಾತ್ಮರಿಗೆ ನಮನಗಳು”

ತೆಲಂಗಾಣ – ತೆಲಂಗಾಣ ರಾಷ್ಟ್ರ ಸಮಿತಿ (TRS)

“ಕೇಂದ್ರದ ನಿರ್ಧಾರವು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತು ರೈತರ ವಿಜಯವಾಗಿದೆ” ಎಂದು ಆಡಳಿತ ಪಕ್ಷ ಟಿಆರ್‌ಎಸ್‌ ಹೇಳಿದೆ.

ಕೃಷಿ ಸಚಿವ ಎಸ್ ನಿರಂಜನ್ ರೆಡ್ಡಿ ಮಾತನಾಡಿ, “ಪ್ರಧಾನಿ ಮೋದಿ ಅಂತಿಮವಾಗಿ ದೇಶದ ತಳಮಟ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ. ಇದನ್ನು ಮೊದಲೇ ರದ್ದು ಮಾಡಿದ್ದರೆ ರೈತರ ಆಂದೋಲನ ತಪ್ಪಿಸಬಹುದಿತ್ತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯ ರೈತ ಹೋರಾಟವನ್ನು ಮುನ್ನಡೆಸಿದ ವೈದ್ಯ ದರ್ಶನ್ ಪಾಲ್ ಯಾರು?

ಪಂಜಾಬ್ – ಚರಣ್‌ಜಿತ್‌ ಚನ್ನಿ; ಕಾಂಗ್ರೆಸ್

“ಈ ನಿರ್ಧಾರವು ತುಂಬಾ ತಡವಾಯಿತು, ಆದರೆ ಇದನ್ನು ನಾನು ಸ್ವಾಗತಿಸುತ್ತೇನೆ. ‘ಸಂಘರ್ಷ’ದ ಸಂದರ್ಭದಲ್ಲಿನ ರೈತರ ತ್ಯಾಗವನ್ನು ಗೌರವಿಸಲು ಸ್ಮಾರಕವನ್ನು ನಿರ್ಮಿಸಲಾಗುವುದು. ಎಂಎಸ್‌ಪಿಯನ್ನು ಶಾಸನಬದ್ಧ ಹಕ್ಕನ್ನಾಗಿ ಮಾಡುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ”

“ಕೇಂದ್ರದ ವಿರುದ್ಧ ವರ್ಷವಿಡೀ ನಡೆದ ಆಂದೋಲನದಲ್ಲಿ ನ್ಯಾಯಕ್ಕಾಗಿ ನಡೆದ ಈ ಹೋರಾಟದಲ್ಲಿ 700 ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು”

ಮಹಾರಾಷ್ಟ್ರ – ಉದ್ಧವ್‌ ಠಾಕ್ರೆ; ಶಿವಸೇನೆ

“ಈ ದೇಶದಲ್ಲಿ ಜನಸಾಮಾನ್ಯರು ಏನು ಮಾಡಬಹುದು ಮತ್ತು ಅದರ ಶಕ್ತಿ ಏನು ಎಂಬುದಕ್ಕೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆ ಒಂದು ಉದಾಹರಣೆಯಾಗಿದೆ. ಮೊದಲನೆಯದಾಗಿ ಗುರುನಾನಕ್ ಜಯಂತಿಯಂದು ಪ್ರಧಾನಮಂತ್ರಿಯವರು ಮಾಡಿದ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ದೇಶದೆಲ್ಲೆಡೆ ರೈತರ ಕಾಯ್ದೆ ವಿರುದ್ಧ ಪ್ರತಿಭಟನೆಯ ವಾತಾವರಣ ನಿರ್ಮಾಣವಾಗಿತ್ತು. ಆಂದೋಲನ ಇಂದಿಗೂ ಮುಂದುವರೆದಿದೆ. ಎಲ್ಲರ ಹೊಟ್ಟೆ ತುಂಬಿಸುವ ಅನ್ನದಾತ ಅನಗತ್ಯವಾಗಿ ಬಲಿಯಾಗಿದ್ದಾನೆ. ಆದರೆ ಅನ್ನದಾತ ತನ್ನ ಶಕ್ತಿಯನ್ನು ತೋರಿಸಿದ್ದು, ಅವನಿಗೆ ನಮಸ್ಕಾರ”

“ಈ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ವೀರಯೋಧರಿಗೆ ನಮನಗಳು. ಇಂತಹ ಕಾನೂನುಗಳನ್ನು ಜಾರಿಗೊಳಿಸುವ ಮುನ್ನ ಕೇಂದ್ರವು ಇಂದು ನಡೆದಿರುವ ಅವಮಾನ ಮುಂದೆ ಆಗದಂತೆ ಎಲ್ಲಾ ವಿರೋಧ ಪಕ್ಷಗಳು ಹಾಗೂ ಸಂಬಂಧಪಟ್ಟ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶದ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕು. ಈ ಕಾನೂನುಗಳನ್ನು ರದ್ದುಗೊಳಿಸುವ ತಾಂತ್ರಿಕ ಪ್ರಕ್ರಿಯೆಯು ತ್ವರಿತಗೊಳ್ಳುವ ನಿರೀಕ್ಷೆಯಿದೆ.”

ಇದನ್ನೂ ಓದಿ: ರಾಜ್ಯ ಸರ್ಕಾರವು ಮೋದಿಯ ದಾರಿಯಲ್ಲಿ ಹೆಜ್ಜೆ ಹಾಕಲಿ: ‘ಸಂಯುಕ್ತ ಹೋರಾಟ ಕರ್ನಾಟಕ’ ಆಗ್ರಹ

ಪಶ್ಚಿಮ ಬಂಗಾಳ – ಮಮತಾ ಬ್ಯಾನರ್ಜಿ; ತೃಣ ಮೂಲ ಕಾಂಗ್ರೆಸ್ (TMC)

“ಬಿಜೆಪಿಯ ಕ್ರೌರ್ಯದಿಂದ ಕಂಗೆಡದೆ ಅವಿರತ ಹೋರಾಟ ನಡೆಸಿದ ಪ್ರತಿಯೊಬ್ಬ ರೈತನಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದು ನಿಮ್ಮ ವಿಜಯವಾಗಿದ್ದು, ಈ ಹೋರಾಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿಯೊಬ್ಬರಿಗೂ ನನ್ನ ತೀವ್ರ ಸಂತಾಪಗಳು”

ಜಾರ್ಖಂಡ್ – ಹೇಮಂತ್ ಸೊರೆನ್; ಝಾರ್ಖಂಡ್‌ ಮುಕ್ತಿ ಮೋರ್ಚಾ(JMK)

“ಇದು ಅತ್ಯಂತ ಹಾಸ್ಯಾಸ್ಪದ ಘೋಷಣೆಯಾಗಿದೆ. ಈಗ ಇಡೀ ಬಿಜೆಪಿ ಪ್ರಧಾನಿಯನ್ನು ರೈತ ಸ್ನೇಹಿಯಂತೆ ಕಾಣಬೇಕು ಎಂಬ ಅಭಿಯಾನದಲ್ಲಿ ತೊಡಗಿದೆ! ಇಂದಿಗೂ ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂಬುದು ಸಾಬೀತಾಗಿದೆ. ಈ ಚಳವಳಿಯಲ್ಲಿ ಹುತಾತ್ಮರಾದ ರೈತರಿಗೆ ಪ್ರಧಾನಿ ಕೂಡಲೇ 5 ಕೋಟಿ ರೂಪಾಯಿ ಪರಿಹಾರ ನೀಡಿ, ಹುತಾತ್ಮರ ಸ್ಥಾನಮಾನ ನೀಡಬೇಕು”

“ಮೃತ ರೈತರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು ಹಾಗೂ ಅವರ ವಿರುದ್ಧದ ಎಫ್‌ಐಆರ್‌ಗಳು, ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇವೆ, ಅವುಗಳನ್ನು ತಕ್ಷಣವೇ ಹಿಂಪಡೆಯಬೇಕು. ಇಷ್ಟು ದಿನ ರೈತರು ಮನೆ ಬಿಟ್ಟು ತಮ್ಮ ಮಕ್ಕಳೊಂದಿಗೆ ರಸ್ತೆಗಿಳಿದಿದ್ದರು. ಹೀಗಾಗಿ ರೈತರ ಬೆಳೆ ಪರಿಹಾರವಾಗಿ ನಾಡಿನ ಎಲ್ಲ ರೈತರಿಗೆ ತಲಾ 10 ಲಕ್ಷ ರೂ. ನೀಡಬೇಕು. ಅಲ್ಲದೆ ಕೇಂದ್ರ ಕೃಷಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು.”

ರಾಜಸ್ತಾನ – ಅಶೋಕ್ ಗೆಹ್ಲೋಟ್;ಕಾಂಗ್ರೆಸ್

“ಇಂದು ಪ್ರಧಾನಿ ಒತ್ತಾಯಪೂರ್ವಕವಾಗಿ ಬಂದು ಮಾತನಾಡುವಂತಾಯಿತು. ದೇಶದ ಜನತೆಗೆ ಸಂದೇಶ ನೀಡಲೇ ಬೇಕಾಗಿ ಬಂತು. ಮೂರು ಕರಾಳ ಕಾನೂನು ನಮ್ಮ ವಿಧಾನಸಭೆಯಿಂದ ಈಗಾಗಲೇ ತಿರಸ್ಕರಿಸಲ್ಪಟ್ಟಿದ್ದವು. ಅದನ್ನು ಈಗ ವಾಪಾಸು ಪಡೆಯುವ ಘೋಷಣೆ ಮಾಡುವಂತಾಯಿತು. ಇದು ದೇಶದ ರೈತರ ಅದ್ಭುತ ವಿಜಯ ಎಂದು ನಾನು ಭಾವಿಸುತ್ತೇನೆ, ನಾನು ರೈತರನ್ನು ಅಭಿನಂದಿಸುತ್ತೇನೆ”

ಇದನ್ನೂ ಓದಿ: ರಾಜ್ಯ ಸರ್ಕಾರವು ಮೋದಿಯ ದಾರಿಯಲ್ಲಿ ಹೆಜ್ಜೆ ಹಾಕಲಿ: ‘ಸಂಯುಕ್ತ ಹೋರಾಟ ಕರ್ನಾಟಕ’ ಆಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...