ಮೂರನೇ ವ್ಯಕ್ತಿಯ ಕುತೂಹಲವನ್ನು ತಣಿಸುವುದು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯ ಉದ್ದೇಶ ಅಲ್ಲ ಎಂದು ದೆಹಲಿ ವಿಶ್ವವಿದ್ಯಾಲಯ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ವಿದ್ಯಾನಿಲಯದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಅವರ ಪದವಿ ಪ್ರಮಾಣ ಪತ್ರವನ್ನು ಕಂಡುಕೊಳ್ಳಲು ಸಲ್ಲಿಸಲಾಗಿದ್ದ ಆರ್‌ಟಿಐಯ ಅರ್ಜಿ ಪ್ರಕರಣದಲ್ಲಿ ಈ ಹೇಳಿಕೆಯನ್ನು ವಿಶ್ವವಿದ್ಯಾಲಯ ಹೇಳಿದೆ. ಮೋದಿ ಪದವಿ ಪ್ರಕರಣ
1978 ರಲ್ಲಿ ಕೊನೆಗೊಳ್ಳುವ ಶೈಕ್ಷಣಿಕ ವರ್ಷದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ವಿಭಾಗದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡುವಂತೆ ಕೇಂದ್ರ ಮಾಹಿತಿ ಆಯೋಗವು ನಿರ್ದೇಶಿಸಿದ ಆದೇಶವನ್ನು ಪ್ರಶ್ನಿಸಿ ದೆಹಲಿ ವಿಶ್ವವಿದ್ಯಾಲಯವು 2017 ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ದತ್ತ ಅವರ ಪೀಠವು ವಿಚಾರಣೆ ನಡೆಸುತ್ತಿತ್ತು.
1978 ರಲ್ಲಿ ಪ್ರಧಾನಿ ಮೋದಿ ಅವರಿಗೆ ದೆಹಲಿ ವಿಶ್ವವಿದ್ಯಾಲಯದಿಂದ ಬಿಎ ಪದವಿ ಮತ್ತು 1983 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ನೀಡಲಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಆದರೆ, ಟೀಕಾಕಾರರು ಇದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಅವರ ಪದವಿಗಳ ವಿಚಾರವು ಕಟ್ಟುಕಥೆ ಎಂದು ಆರೋಪಿಸಿದ್ದಾರೆ. ಮೋದಿ ಪದವಿ ಪ್ರಕರಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕೇಂದ್ರ ಮಾಹಿತಿ ಆಯೋಗದ ಆದೇಶವು ಕಾನೂನಿಗೆ ವಿರುದ್ಧವಾಗಿದೆ ಎಂದು ಸಾಲಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 6 ಮಾಹಿತಿಯನ್ನು ಒದಗಿಸಬೇಕೆಂದು ಕಡ್ಡಾಯಗೊಳಿಸುತ್ತದೆ ಎಂಬುವುದು ನಿಜವಾದರೂ, ಈ ಕಾಯ್ದೆಯು “ಯಾರದ್ದೋ ಕುತೂಹಲವನ್ನು ತಣಿಸುವ ಉದ್ದೇಶವನ್ನು ಹೊಂದಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.
ಸಾರ್ವಜನಿಕ ಅಧಿಕಾರಿಗಳ ಹೊಣೆಗಾರಿಕೆ ಮತ್ತು ಪಾರದರ್ಶಕತೆಗೆ ಸಂಬಂಧಿಸದ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಸಾಲಿಸಿಟರ್ ಜನರಲ್ ವಾದಿಸಿದ್ದಾರೆ.
ನಿಯಮಗಳು ಅನುಮತಿಸಿದರೆ ಶಿಕ್ಷಣ ಸಂಸ್ಥೆಗಳನ್ನು ವ್ಯಕ್ತಿಗಳು ತಮ್ಮದೇ ಆದ ಪದವಿಗಳು ಅಥವಾ ಅಂಕಪಟ್ಟಿಗಳನ್ನು ಒದಗಿಸುವಂತೆ ಕೇಳಬಹುದು, ಆದರೆ ಕಾಯ್ದೆಯ ಸೆಕ್ಷನ್ 8(1)(ಇ) ಅಂತಹ ಮಾಹಿತಿಯನ್ನು ಮೂರನೇ ವ್ಯಕ್ತಿಗೆ ಅದನ್ನು ನೀಡುವುದಕ್ಕೆ ವಿನಾಯಿತಿ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಏನಿದು ಪ್ರಕರಣ?
ಮಾಹಿತಿ ಹಕ್ಕು ಹೋರಾಟಗಾರ ನೀರಜ್ ಕುಮಾರ್ ಅವರು, 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಬಿಎ ವಿಭಾಗದಲ್ಲಿದ್ದ ವಿದ್ಯಾರ್ಥಿಗಳ ರೋಲ್ ಸಂಖ್ಯೆಗಳು, ಅಂಕಗಳು ಮತ್ತು ಫಲಿತಾಂಶವು ಉತ್ತೀರ್ಣ ಅಥವಾ ಅನುತ್ತೀರ್ಣವಾಗಿದ್ದರ ಮಾಹಿತಿಯನ್ನು ಕೋರಿದ್ದರು. ಆದರೆ, ವಿಶ್ವವಿದ್ಯಾಲಯದ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಈ ವಿನಂತಿಯನ್ನು “ಮೂರನೇ ವ್ಯಕ್ತಿಯ ಮಾಹಿತಿ” ಎಂಬ ಕಾರಣಕ್ಕೆ ನಿರಾಕರಿಸಿದ್ದರು. ಹಾಗಾಗಿ ಅವರು ಕೇಂದ್ರ ಮಾಹಿತಿ ಆಯೋಗಕ್ಕೆ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು.
2016 ರಲ್ಲಿ ಆಯೋಗವು ಇದು ಸಾರ್ವಜನಿಕ ವಿಚಾರವಾಗಿದೆ ಎಂದು ತೀರ್ಪು ನೀಡಿತ್ತು ಮತ್ತು ಮಾಹಿತಿಯನ್ನು ಬಿಡುಗಡೆ ಮಾಡಲು ವಿಶ್ವವಿದ್ಯಾಲಯಕ್ಕೆ ಆದೇಶಿಸಿತ್ತು. “ದೆಹಲಿ ವಿಶ್ವವಿದ್ಯಾಲಯವು ಸಾರ್ವಜನಿಕ ಸಂಸ್ಥೆಯಾಗಿದ್ದು, ಅದರ ಪದವಿಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯು ಸಂಸ್ಥೆಯ ರಿಜಿಸ್ಟರ್‌ನಲ್ಲಿ ಲಭ್ಯವಿದೆ. ಹಾಗಾಗಿ ಇದು ಸಾರ್ವಜನಿಕ ದಾಖಲೆಯಾಗಿದೆ” ಎಂದು ಆಯೋಗ ಹೇಳಿತ್ತು.
ವಿಶ್ವವಿದ್ಯಾನಿಲಯವು ಈ ಹಿಂದೆ ಹೈಕೋರ್ಟ್‌ನಲ್ಲಿ ಎಲ್ಲಾ ವಿದ್ಯಾರ್ಥಿಗಳ ರೋಲ್ ಸಂಖ್ಯೆಗಳು, ಹೆಸರುಗಳು ಮತ್ತು ಅಂಕಗಳಂತಹ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಾದಿಸಿತ್ತು.
ಇದನ್ನೂಓದಿ: ಗೋಮಾಂಸ ಮಾರುತ್ತಿದ್ದ ದಂಪತಿಗಳಿಗೆ ಕಿರುಕುಳ; ಕೊಯಮತ್ತೂರು ಬಿಜೆಪಿ ನಾಯಕನ ವಿರುದ್ಧ ಪ್ರತಿಭಟನೆ
ಗೋಮಾಂಸ ಮಾರುತ್ತಿದ್ದ ದಂಪತಿಗಳಿಗೆ ಕಿರುಕುಳ; ಕೊಯಮತ್ತೂರು ಬಿಜೆಪಿ ನಾಯಕನ ವಿರುದ್ಧ ಪ್ರತಿಭಟನೆ


