ನಿನ್ನೆ ಮೋದಿ ಸರ್ಕಾರ ರೈತರ 14 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (MSP) ಯನ್ನು ಘೋಷಿಸಿದೆ. ಹಾಗೂ ಈ ಮೂಲಕ ಕೋವಿಡ್ ಕಷ್ಟದ ಕಾಲದಲ್ಲಿ ರೈತರ ಆದಾಯ ದ್ವಿಗುಣಗೊಳಿಸಿ ರೈತರನ್ನು ಕಾಪಾಡಲಾಗಿದೆ ಎಂದು ಮೋದಿ ಸರ್ಕಾರ ಘೋಷಿಸಿದೆ.
ಆದರೆ ಮೋದಿ ಸರ್ಕಾರ ಘೋಷಿರುವ MSP ದರಗಳು, ಹೆಚ್ಚಾಗಿರುವುದಿರಲಿ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ ಎಂದು ಚಿಂತಕ ಶಿವಸುಂದರ್ ಟೀಕಿಸಿದ್ದಾರೆ.
ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ರೈತರ ಆದಾಯ ದ್ವಿಗುಣಗೊಳ್ಳುವುದಿರಲಿ ಕನಿಷ್ಟ ಸ್ಥಿರವಾಗಿರಬೇಕೆಂದರೂ ರೈತನ ಉತ್ಪಾದಕ ವೆಚ್ಚಕ್ಕೆ ೧.೫ ಪಟ್ಟು ಹೆಚ್ಚು ಬೆಲೆಯನ್ನು ಒದಗಿಸಬೇಕು. ಆದರೆ ಆ ಉತ್ಪಾದಕ ವೆಚ್ಚವನ್ನು ಲೆಕ್ಕ ಹಾಕುವಾಗ ಸ್ವಾಮಿನಾಥನ್ ವರದಿಯ ಪ್ರಕಾರ ರೈತನ ಇತರ ಮೂಲಭೂತ ಸರಕು ವೆಚ್ಚಗಳ ಜೊತೆಗೆ ಭೂಮಿಯ ಸವಕಳಿ ವೆಚ್ಚ ಹಾಗೂ ರೈತ ಹೂಡುವ ಬಂಡವಾಳದ ಮೇಲಿನ ಬಡ್ಡಿಯನ್ನು ಸೇರಿಸಿಕೊಳ್ಳಬೇಕು. ಅದನ್ನೇ C-2 ಉತ್ಪಾದಕ ವೆಚ್ಚ ಎಂದು ಕರೆಯುತ್ತಾರೆ.
ಸ್ವಾಮಿನಾಥನ್ ವರದಿಯ ಪ್ರಕಾರ ರೈತರ ಆದಾಯ ಸ್ಥಿರವಾಗಬೇಕೆಂದರೂ ಸರ್ಕಾರ ಕೊಡುವ ಎಂಎಸ್‌ಪಿ ದರ ಈ C-2 ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚಿರಬೇಕಿತ್ತು. ಆದರೆ ಮೋದಿ ಸರ್ಕಾರ ರೈತರ ಉತ್ಪಾದನಾ ವೆಚ್ಚವನ್ನು ಲೆಕ್ಕಹಾಕುವಾಗ C-2 ಆಧರಿಸಿ ಲೆಕ್ಕಾಚಾರ ಮಾಡುವುದಿಲ್ಲ. ಅದು ರೈತ ಒಳಸುರಿಗಳಿಗೆ ಅಂದರೆ ಬೀಜ, ಗೊಬ್ಬರ, ಕೂಲಿ…ಇತ್ಯಾದಿಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಸ್ವಾಮಿನಾಥನ್ ವರದಿಯಂತೆ ಭೂಮಿಯ ಸವಕಳಿ, ಹಾಗೂ ರೈತ ಹೂಡುವ ಬಂಡವಾಳದ ಮೇಲಿನ ಬಡ್ಡಿಯನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಮೋದಿ ಸರ್ಕಾರ MSP ಯ ಹೆಸರಿನಲ್ಲಿ ರೈತರಿಗೆ ದೊಡ್ಡ ಮೋಸವನ್ನೇ ಮಾಡುತ್ತಾ ಬರುತ್ತಿದೆ ಎಂದು ಶಿವಸುಂದರ್ ತಿಳಿಸಿದ್ದಾರೆ.
ಈ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಎಲ್ಲಾ ಬಗೆಯ ಉತ್ಪಾದನ ಹಾಗೂ ಸರಬರಾಜು ಮತ್ತು ಸಂಗ್ರಹ ವೆಚ್ಚ ಹೆಚ್ಚಿರುವುದರಿಂದ ಈ ಬಾರಿಯಾದರೂ ಮೋದಿ ಸರ್ಕಾರ ನೈಜ ದರದಲ್ಲಿ MSP ದರವನ್ನು ಹೆಚ್ಚಿಸಿ ರೈತರ ಕಷ್ಟಗಳನ್ನು ಸ್ವಲ್ಪವಾದರೂ ಕಡಿಮೆಮಾಡಬಹುದಿತ್ತು. ಆದರೆ ಮೋದಿ ಸರ್ಕಾರ MSP ದರವನ್ನು ಹೆಚ್ಚು ಮಾಡುವುದಕ್ಕಿಂತ ಸುಳ್ಳುಗಳನ್ನು ಹೆಚ್ಚು ಹೇಳುತ್ತಾ ರೈತರನ್ನು ಮೋಸ ಮಾಡುತ್ತಿದೆ ಎಂದಿದ್ದಾರೆ.
ಎಂಬುದು ಕೆಳಗಿನ ಪಟ್ಟಿಯನ್ನು ನೋಡಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ:

2019-20 ರ ಸಾಲಿನಲ್ಲಿ ಸರಾಸರಿ ಹಣದುಬ್ಬರ ದರ ಶೇ.4.5- 5 ಇತ್ತು. ಅಂದರೆ ಕಳೆದ ವರ್ಷ ದ 100 ರೂ. ನ ಮೌಲ್ಯ ಈ ವರ್ಷ ದ 105 ರೂ. ಎಂದರ್ಥ.. ಅಂದರೆ ಈ ವರ್ಷ 105 ರೂ. ಕೊಟ್ಟರೂ ಅದು 5 ರೂ. ಹೆಚ್ಚಾದಂತಲ್ಲ. ಏಕೆಂದರೆ ಶೇ.5ರ ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಈ ವರ್ಷದ 105 ರೂ.ನ ನಿಜವಾದ ಮೌಲ್ಯ ಕಳೆದ ವರ್ಷ ದ 100 ರೂ.ಮಾತ್ರ..
ಹೀಗಾಗಿ ಈ ವರ್ಷ ಘೋಷಿಸಿರುವ MSP ದರ ಹೋದ ವರ್ಷದ ದರಕ್ಕಿಂತ ಕನಿಷ್ಟ ಶೇ.5ಕ್ಕಿಂತ ಹೆಚ್ಚಿದ್ದರೆ ಮಾತ್ರ ಈ ವರ್ಷ ಹೆಚ್ಚಿಗೆ ದರ ಕೊಡಲಾಗಿದೆ ಎಂದರ್ಥ….. MSP ದರ ಹೆಚ್ಚಳವು ಹೋದವರ್ಷಕ್ಕಿಂತ ಶೇ.5 ಕ್ಕಿಂತ ಕಡಿಮೆ ಇದೆ ಎಂದರೆ ಸಾರಾಂಶದಲ್ಲಿ ಹೋದವರ್ಷ ಕೊಟ್ಟಷ್ಟು ಕೂಡಾ ಈ ವರ್ಷ ಕೊಟ್ಟಿಲ್ಲ ಎಂದರ್ಥ…
ಹಾಗಾಗಿ ಮೋದಿ ಸರ್ಕಾರವು ಈ ವರ್ಷ ಘೋಷಿಸಿರುವ ಕನಿಷ್ಟ ಬೆಂಬಲ ಬೆಲೆ ಕಳೆದ ವರ್ಷಕ್ಕಿಂತ ಕಡಿಮೆಯಿದೆ. ಈಗಾದರೆ ರೈತರ ಕಥೆಯೇನು?
ಇದನ್ನೂ ಓದಿ: ಆಪ್ ಗುಜರಾತ್ ಕೋರ್ಟ್ ಕಾ ಭಿ ಕ್ರೋನಾಲಜಿ ಸಮಜ್ ಲೀಜಿಯೇ….!! ಶಿವಸುಂದರ್ ಬರೆಯುತ್ತಾರೆ


