ಮೋದಿಯವರ ಕಳೆದ ಆರು ವರ್ಷಗಳ ಅವಧಿಯಲ್ಲಿ ಹಲವಾರು ವಿಷಯಗಳಲ್ಲಿ ಸತತ ವೈಫಲ್ಯ ಕಂಡಿದ್ದಾರೆ. ಈ ಒಂದು ವರ್ಷದಿಂದಂತೂ ವೈಫಲ್ಯಗಳ ಸಂಖ್ಯೆ ಏರುತ್ತಲೇ ಇದೆ. ಆದರೆ ಇದರಿಂದ ಮೋದಿಯವರ ಜನಪ್ರಿಯತೆ ಅಥವಾ ಜನಬೆಂಬಲ ಕಡಿಮೆಯಾಗಿಲ್ಲ. ಏಕೆ? ಸತತ ವೈಫಲ್ಯಗಳ ನಡುವೆಯೂ ಅವರು ಭಾರೀ ಜನ ಬೆಂಬಲ ಹೊಂದಿರುವುದು ಹೇಗೆ?

ಅದಕ್ಕೆ ಉತ್ತರ ಹುಡುಕುವ ಮೊದಲು ಮೋದಿ 2.0 ವೈಫಲ್ಯಗಳ ಪಟ್ಟಿ ನೋಡೋಣ.

1. CAA/NRC ತರುತ್ತೇವೆ ಅಂತ ಜನಗಳ ಮಧ್ಯೆ ಭಯದ ವಾತಾವರಣ ಮೂಡಿಸಿದ್ದು.

2. GDP ಕಳೆದ ಕೆಲವು ವರ್ಷದಿಂದ ಸತತ ಇಳಿಕೆ ಆಗುತ್ತಿದ್ದು JAN-MAR ತ್ರೈಮಾಸಿಕದಲ್ಲಿ 3.1% ಕುಸಿದಿದೆ. ಅಂದರೆ ಇದು ಲಾಕ್‌ಡೌನ್ ಆಗುವ ಮುಂಚಿನ ತಿಂಗಳಿನ ಪರಿಸ್ಥಿತಿಯಾದರೆ ಲಾಕ್‌ಡೌನ್‌ ನಂತರದ್ದು ಹೇಗಿರುತ್ತದೆ? ಈ ಜಿಡಿಪಿ ದರ ಕಳೆದ 11 ವರ್ಷದಲ್ಲೇ ಅತಿ ಕಡಿಮೆ. ಅಲ್ಲದೇ ಇದು ನೆರೆಹೊರೆಯ ಪಾಕಿಸ್ತಾನ,  ಬಾಂಗ್ಲಾದೇಶಕ್ಕಿಂತ ಕಡಿಮೆ ಇದೆ.

3. ಕೆಟ್ಟ ವಿದೇಶಾಂಗ ನೀತಿಗಳಿಂದ ಪುಟ್ಟ ರಾಷ್ಟ್ರಗಳಾದ ನೇಪಾಳ, ಮಾಲ್ಡೀವ್ಸ್ ಭಾರತದ ವಿರುದ್ಧವೇ ಮಾತಾನಾಡುತ್ತಿರುವುದು.

4. ಚೀನಾ ದೇಶವು ಭಾರತದ ಗಡಿ ಒಳಗೆ ಅತಿಕ್ರಮ ಪ್ರವೇಶ ಮಾಡಿದೆ. ಆದರೂ ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಇರುವುದು.

5. ಈ ವರ್ಷದ ಜನವರಿ 30ರಂದೇ ಮೊದಲ ಕೊರೊನ ಪ್ರಕರಣ ￰ದಾಖಲಾದರೂ, ಮಾರ್ಚ್‌ ಮಧ್ಯಭಾಗದವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು.

6. ಫೆಬ್ರವರಿ 24 ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕರೆಸಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಿ ಗುಜರಾತ್, ಮಹಾರಾಷ್ಟ್ರದಲ್ಲಿ ಕೊರೊನ ವ್ಯಾಪಕವಾಗಿ ಹಬ್ಬಲು ಕಾರಣವಾಗಿದ್ದು.

7. ಕೊರೊನಾ ವ್ಯಾಪಕವಾಗಿ ಹರುಡುತ್ತಿದೆ ಎಂದು ಗೊತ್ತಿದ್ದರೂ ಮಧ್ಯಪ್ರದೇಶಕ್ಕೆ ತಮ್ಮ ಬಿಜೆಪಿ ಸರ್ಕಾರ ರಚಿಸುವುದಕ್ಕಾಗಿ ಜನರಿಗೆ ಮಾಹಿತಿ ಕೊಡದೆ ಮುಚ್ಚಿಟ್ಟಿದ್ದು.

8. ದೇಶದ ಜನರಿಗೆ ಯಾವುದೇ ಮಾಹಿತಿ ಕೊಡದೆ ರಾತ್ರೋರಾತ್ರಿ ಅವೈಜ್ಞಾನಿಕವಾಗಿ ಲಾಕ್‌ಡೌನ್‌ ಘೋಷಿಸಿದ್ದು.

9. ವಲಸೆ ಕಾರ್ಮಿಕರಿಗೆ ಯಾವುದೇ ಸೌಲಭ್ಯ ಒದಗಿಸದೆ, ನಿರ್ಲಕ್ಷ್ಯ ಮಾಡಿದ್ದರಿಂದ ನೂರಾರು ಜನ ರಸ್ತೆಗಳಲ್ಲಿಯೇ ಪ್ರಾಣ ಬಿಟ್ಟಿದ್ದು,

10. ಮೊದಲೇ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಮುಚ್ಚುವ ಸ್ಥಿತಿಯಲ್ಲಿದ್ದವು. ಅವುಗಳ  ಪುನಶ್ಚೇತನಕ್ಕೆ ಸಾಕಷ್ಟು ಹಣಕಾಸಿನ ನೆರವು ಕೊಡದೆ 20ಲಕ್ಷ ಕೋಟಿ ಅನ್ನೋ ಸಾಲದ package ಘೋಷಿಸಿ ಮಾಡಿ ಲಕ್ಷಾಂತರ ವ್ಯಾಪಾರಸ್ಥರು ಬೀದಿಗೆ ಬಿಳೋ ಹಾಗೆ ಮಾಡಿದ್ದು.

ಇವೆಲ್ಲವೂ ಮೇಲ್ನೋಟಕ್ಕೆ ಕಾಣುವ ವೈಫಲ್ಯಗಳು. ಇನ್ನು ಬಹಳಷ್ಟು ವೈಫಲ್ಯಗಳು ಕಾಣವುದಿಲ್ಲ. ಆದರೆ  ಅದರ ಪರಿಣಾಮ ಮುಂದಿನ ದಿನಗಳಲ್ಲಿ ಕಾಣುತ್ತೇವೆ.

ಈಗ ಮೋದಿ ಜನ ಬೆಂಬಲದ ಹಿಂದೆ ಇವರು ಸತ್ಯವನ್ನು ತಿಳಿಯುವ. ಅಂದರೆ ಒಂದು ವ್ಯವಸ್ಥೆ ಹೇಗೆ ಮೋದಿಯನ್ನ ಅನಪೇಕ್ಷಿತ ನಾಯಕನ್ನನ್ನಾಗಿ ಮಾಡಿದ್ರು ಅನ್ನೋದನ್ನ ತಿಳ್ಕೊಳೋ ಸಣ್ಣ ಪ್ರಯತ್ನ ಮಾಡೋಣ.

ನಮ್ಮ ದೇಶದಲ್ಲಿ ಪುರಾಣ, ಪುಣ್ಯ ಕಥೆಗಳಿಗೆ ಕಮ್ಮಿ ಇಲ್ಲ. ಅದರಿಂದ ಬಹುಪಾಲು ಜನಕ್ಕೆ ದೇವರ ಮೇಲೆ ಅತೀವ ಭಯ ಮತ್ತೆ ಭಕ್ತಿ. ನಮಗೆ ದೇವರ ಮೇಲೆ ಇಷ್ಟು ಭಯ ಭಕ್ತಿ ಬರಕ್ಕೆ ಕಾರಣ ದೇವರುಗಳ ಮೇಲೆ ಇರೋ ಕಥೆಗಳು. ಈಗ ಯಾವುದೇ ದೇವರ ಕಥೆಗಳನ್ನು ನೋಡಿದ್ರೆ ನಮಗೆ ಅಲ್ಲಿ ದೇವರ ಹುಟ್ಟು, ಬಾಲ್ಯ, ಯೌವನ ಮತ್ತೆ ದೇವರಿಂದ ರಾಕ್ಷಸರ ಸಂಹಾರ ಆಗೋವರೆಗೂ ಅತಿರಂಜಿತವಾಗಿ ಇರುತ್ತೆ. ಈಗ ಮೋದಿಯವರ ಹುಟ್ಟು ತಗೋಳಿ. ಅದು ಬಡತನದಲ್ಲಿ ಆಗಿದ್ದು ಮನೆಯಲ್ಲಿ ಬಹಳ ಕಷ್ಟ ಇದ್ರೂ ಮೋದಿ ಸಾಮಾನ್ಯ ಬಾಲಕರಿಗಿಂತ ಸ್ವಾಭಿಮಾನಿ, ಚುರುಕು. ಮತ್ತು ಮೋದಿ ದೇಶ ಪ್ರೇಮ ಎಂತದ್ದು ಅಂದ್ರೆ ಟೀಗಳನ್ನ ಸೈನಿಕರಿಗೆ ಉಚಿತವಾಗಿ ಕೊಡ್ತಾ ಇದ್ರೂ. ಮೋದಿ ಧೈರ್ಯ ಎಂತದ್ದು ಅಂದ್ರೆ ಚಿಕ್ಕ ಹುಡುಗನಾಗಿದ್ದಾಗ ಮೊಸಳೆ ಹಿಡ್ಕೊಂಡು ಮನೆಗೆ ಬಂದಿದ್ರು. ಇದೊಂತರ ಶ್ರೀಕೃಷ್ಣ ಬಾಲ್ಯದಲ್ಲಿ ಕಾಳಿಂಗಮರ್ದನ ಮಾಡಿದ ರೀತಿ ಇಂತ ಕಟ್ಟು ಕಥೆಗಳನ್ನ ಜನಗಳ ತಲೇಲಿ ತುರುಕಿದ್ದು.

ಆಮೇಲೆ ಮದುವೆ ಆಗಿ ವಾರದಲ್ಲೇ ಹೆಂಡತಿ ಬಿಟ್ಟಿದ್ದನ್ನು ಎಲ್ಲ ಬಿಟ್ಟು ಸನ್ಯಾಸಿ ಆದ ಬುದ್ಧನಿಗೆ ಹೋಲಿಕೆ ಮಾಡೋದು. ಬುದ್ಧನ ತರ ಎಲ್ಲ ಬಿಟ್ಟು ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡಿದ್ರು ಅಂತ, ಮೋದಿ ಸಾಮಾನ್ಯ ಜನರ ತರ ಊಟ, ನಿದ್ರೆ ಮಾಡಲ್ಲ ದಿನಕ್ಕೆ 18 ಘಂಟೆ ದುಡೀತಾರೆ. ಇದೆಲ್ಲ ಅವರ ಸ್ವಂತಕ್ಕೆ ಮಾಡಿಲ್ಲ. ಎಲ್ಲ ದೇಶಸೇವೆಗೇ ಅಂತ ನಂಬಿಸೋದು. ಒಂದು ರೀತಿ ಮೋದಿನ ದೇವರ ಸಮ ಇಲ್ಲ ಅದಕ್ಕಿಂತ ಜಾಸ್ತಿ ಅನ್ನೋ ತರ ಮಾಡಿದ್ದಾರೆ.

ಮೋದಿಗೇ ದುರ್ಬಲ ವಿರೋಧಿಗಳನ್ನು ಎದುರು ನಿಲ್ಲಿಸಲು ಮಾಧ್ಯಮದ ಪಾತ್ರ ಬಹಳಷ್ಟಿದೆ. ಪಾಕಿಸ್ತಾನ ಇರಬಹುದು ಇಲ್ಲ ರಾಹುಲ್ ಇರಬಹುದು. ಯಾವ ಕಡೆಯಿಂದ ಪಾಕಿಸ್ತಾನ ಇಂಡಿಯಾಗೇ ಸಮ ಇಲ್ಲ ಅನ್ನೋದು ಸಣ್ಣ ಮಕ್ಕಳಿಗೂ ಗೊತ್ತು. ಇದೆ ಮಾಧ್ಯಮ ಮೋದಿ ಬಂದ್ರೆ ಪಾಕಿಸ್ತಾನದ ಭಯ ಇರಲ್ಲ, ಪಾಕಿಸ್ತಾನನ ನಿರ್ನಾಮ ಮಾಡ್ತಾರೆ ಅಂತ ನಂಬಿಸಿದ್ದಾರೆ.

ಯಾವ ಮೋದಿ ಬಂದ್ರೆ ಹಿಂದೂ ಧರ್ಮದ ಪುನರುತ್ತಾನ ಆಗುತ್ತೆ ಅಂತ ಮಾಧ್ಯಮಗಳು ಹೇಳಿದ್ರೋ ಅದೇ ಮಾಧ್ಯಮ ಮತ್ತೆ ಹಿಂದೂ ಧರ್ಮ ಅಪಾಯದಲ್ಲಿದೆ ಅಂತ ಭ್ರಮೆ ಹುಟ್ಟಿಸಿದ್ದಾರೆ. ಹಾಗಾದ್ರೆ ಮೋದಿ ಬಂದು ಇಷ್ಟು ವರ್ಷ ಆದ್ರೂ ಅಪಾಯ ಹೋಗಿಲ್ಲ ಅಂದ್ರೆ ಇನ್ನು ಇವರನ್ನ ಯಾಕೆ ಗೆಲ್ಲಿಸಬೇಕು ಅಂತ ಯಾರು ಯಾಕೆ ಯೋಚನೆ ಮಾಡ್ತಿಲ್ಲ ? ಇದೆ ತರಹ ಜರ್ಮನ್ ನಾಝಿಗಳಲ್ಲೂ ಭಯ ಹುಟ್ಟಿಸಿ ಗೆಲ್ಲುತ್ತಿದ್ದರು. ಅದನ್ನೆ ಇಲ್ಲಿಯೂ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಮೋದಿ ಹೇಳೋ ಪ್ರತಿ ಸುಳ್ಳಿಗೂ ಒಂದು ಕಥೆ ಕಟ್ಟಿ ಅದನ್ನ ಜನಗಳಿಗೆ ತಲುಪಿಸೋದು SOCIAL MEDIA ಐಟಿ ಸೆಲ್‌ಗಳ ಕೆಲಸ. ಅವರ ಐಟಿ ಸೆಲ್‌ ಎಷ್ಟು ಪ್ರಭಾವಶಾಲಿ ಎಂದರೆ ಕನಿಷ್ಠ 2000 ದಷ್ಟು FAKE WEBSITE ಗಳು ಮೋದಿ ಪರವಾಗಿ ಸತತ 24 ಘಂಟೆ ಕೆಲಸ ￰ಮಾಡುತ್ತಿದ್ದಾರೆ. ಭಾರತದ ನಿಜ ಇಂಡಿಯನ್‌ ಆರ್ಮಿ ಫೇಸ್‌ಬುಕ್‌ ಪುಟಕ್ಕಿಂತಲು ಬಿಜೆಪಿಯ INDIAN ARMY FAN PAGE ಪುಟಕ್ಕೆ ಹೆಚ್ಚಿನ ಹಿಂಬಾಲಕರಿದ್ದಾರೆ. ಹತ್ತಾರು ಫೇಕ್‌ ವೆಬ್‌ಸೈಟ್‌ಗಳಿವೆ. ಇವುಗಳ ಕೆಲಸ ದಿನ ಬೆಳಗಾದ್ರೆ ಮೋದಿ ಪರವಾಗಿ ಹೊಗೊಳೊದು ಮತ್ತು ಮೋದಿ ವಿರೋಧಿಗಳ ವೈಯಕ್ತಿಕ ತೇಜೋವಧೆ ಮಾಡುವುದು.

ಇದಿಷ್ಟು ಒಂದು ಕಡೆಯಾದ್ರೆ ಮತ್ತೊಂದು ಕಡೆ ಭಾರತದ ಬಹುತೇಕ ಮಾಧ್ಯಮಗಳು ಅದು ಹೇಗೆ ಕೆಲಸ ಮಾಡ್ತಾ ಇವೆ ಅಂತ ಹೇಳೋದೇ ಬೇಡ. 1947 ರಿಂದ ಪತ್ರಿಕಾ ಮಾಧ್ಯಮ ಸಂಸ್ಥೆಗಳು ಸರ್ಕಾರದ ತಪ್ಪುಗಳು ಮತ್ತೆ ಅದರ ವಿರುದ್ಧ ಕೆಲಸ ಮಾಡುತ್ತಿದ್ದವು. ಆದರೆ ಈಗ ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ಮೋದಿ ತಪ್ಪುಗಳ ವಿರುದ್ಧ ಮಾತಾಡಲು ಭಯಪಡುತ್ತವೆ. ಬೆರಳೆಣಿಕೆಯ ಕೆಲವೇ ಮಾಧ್ಯಮಗಳು ಮಾತ್ರ ಸತ್ಯ ತಿಳಿಸಲು ಒದ್ದಾಡುತ್ತಿವೆ.

ಕೊನೆ ಮಾತು : ಇಷ್ಟೆಲ್ಲಾ ಜನಬೆಂಬಲ ಬಹುಶಃ ಯಾವ ಪ್ರಧಾನಿಗೂ ಸಿಕ್ಕಿಲ್ಲ. ಮೋದಿ ಒಂದು ರೀತಿಯಲ್ಲಿ ಅವರೊಬ್ಬ ಅದೃಷ್ಟವಂತ. ಆದರೆ ಅವರಿಗೆ ಸಿಕ್ಕಿರುವ ಸುವರ್ಣಾವಕಾಶವನ್ನು ಅವರು ಹಾಳು ಮಾಡುತ್ತಿದ್ದಾರೆ. ಅವರ ಏಕಪಕ್ಷಿಯ ನಿರ್ಧಾರಗಳಿಂದ ದೇಶದ ಆರ್ಥಿಕತೆ, ಸಾಮಾಜಿಕ ಪರಿಸ್ಥಿತಿ ಎಲ್ಲವೂ ಪಾತಾಳ ತಲುಪುತ್ತಿದೆ.

ಇದು ಜನರಿಗೆ ಆದಷ್ಟು ಬೇಗ ಅರ್ಥವಾದರೆ ಒಳ್ಳೆಯದು. ಇಲ್ಲದಿದ್ದಲ್ಲಿ ಇದು ಸರಿಪಡಿಸಲಾರದಷ್ಟು ದೂರ ಹೋಗುವುದರಲ್ಲಿ ಸಂದೇಹವಿಲ್ಲ.

(ಲೇಖಕರು ಸಾಮಾಜಿಕ ಕಾರ್ಯಕರ್ತರು, ಅಭಿಪ್ರಾಯಗಳು ವೈಯಕ್ತಿಕವಾದವುಗಳು)


ಇದನ್ನೂ ಓದಿ: ಕನಿಷ್ಟ ಬೆಂಬಲ ಬೆಲೆ (MSP) ಬಗ್ಗೆ ಸುಳ್ಳು ಹೇಳಿತೇ ಮೋದಿ ಸರ್ಕಾರ!?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

3 COMMENTS

  1. ಒಬ್ಬ ವ್ಯಕ್ತಿ ಎಶ್ಟೇ ದಕ್ಶನಿದ್ದರೂ, ದೇಶದ ಅದಿಕಾರ ಒಬ್ಬ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾದರೆ ದುರಂತ ಕಟ್ಟಿಟ್ಟ ಬುತ್ತಿ. ‌ನಮ್ಮ ದೇಶದಲ್ಲಿ ಏನಾಗಬಾರದಿತ್ತೋ ಅದು ಈಗ ಆಗುತ್ತಿದೆ.

LEAVE A REPLY

Please enter your comment!
Please enter your name here