Homeಮುಖಪುಟಫ್ಯಾಕ್ಟ್ ಚೆಕಿಂಗ್‌ ಮಾಡಲು ಏಜೆನ್ಸಿಗಳಿಗೆ ಟೆಂಡರ್‌ ಕರೆದ ಕೇಂದ್ರ ಸರ್ಕಾರ

ಫ್ಯಾಕ್ಟ್ ಚೆಕಿಂಗ್‌ ಮಾಡಲು ಏಜೆನ್ಸಿಗಳಿಗೆ ಟೆಂಡರ್‌ ಕರೆದ ಕೇಂದ್ರ ಸರ್ಕಾರ

- Advertisement -
- Advertisement -

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (CPSI) ಮತ್ತು ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL)ಗಳು ಸಾಮಾಜಿಕ ಜಾಲತಾಣದಲ್ಲಿ “ಫ್ಯಾಕ್ಟ್ ಚೆಕ್‌ ಮತ್ತು ಸುಳ್ಳು ಮಾಹಿತಿ ಪತ್ತೆ” ಗೆ ಸಂಬಂಧಿಸಿದ “ಪರಿಹಾರ ಮತ್ತು ಸೇವೆಗಳನ್ನು” ಒದಗಿಸಲು ಸಂಶೋಧನಾ ಏಜೆನ್ಸಿಗಳಿಗೆ ಟೆಂಡರ್ ಆಹ್ವಾನಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟಲು ಟೆಂಡರ್‌ ಕರೆದಿದ್ದು, ಬಿಡ್ಡಿಂಗ್‌ ಸಂಸ್ಥೆಗಳು “ಸುಳ್ಳು ಸುದ್ದಿಗಳ ಹಿಂದಿರಿರುವ ಪ್ರಮುಖ ಪ್ರಭಾವಿಗಳನ್ನು ಪತ್ತೆಹಚ್ಚಿ, ಅವರ ಲೊಕೇಷನ್‌ ಅನ್ನು ಹುಡಕಲು ಸಮರ್ಥವಾಗಿರಬೇಕು.” ಎಂದು BECIL ಹೇಳಿದೆ.

ಸರ್ಕಾರವು ಅಕ್ರಮ ಕಣ್ಗಾವಲಿಗಾಗಿ ಮಾರ್ಗಗಳನ್ನು ಹುಡುಕುತ್ತಿದೆ. ಇದು ‘ಮಾಟಗಾತಿ ಬೇಟೆ’ ಇದ್ದಂತೆ ಎಂದು ಸೈಬರ್ ಕಾನೂನು ಮತ್ತು ಇತರ ಸುಳ್ಳು ಸುದ್ದಿಗಳನ್ನು ಬರ್ಸ್ಟ್ ಮಾಡುವ ತಜ್ಞರು ಹೇಳಿದ್ಧಾರೆ.

“ಯಾವುದು ಸುಳ್ಳು ಸುದ್ದಿ ಎಂದು ನಮಗೆ ತಿಳಿಯದಿದ್ದಲ್ಲಿ, ಟೆಂಡರ್‌ ಪಡೆದವನು ಸುಳ್ಳು ಯಾವುದು, ಸತ್ಯ ಏನು? ಎಂಬುದನ್ನು ಹೇಗೆ ಗುರುತಿಸುತ್ತಾರೆ. ನಿಖರವಾಗಿ ಏನು ಗುರುತಿಸಬೇಕು ಮತ್ತು ಯಾವುದನ್ನು ಪರಿಶೀಲಿಸಬೇಕು? ಎಂಬುದನ್ನು ಹೇಗೆ ಕಂಡುಕೊಳ್ಳುತ್ತಾರೆ. ಇದು ಕಾನೂನು ಬಾಹಿತವಾಗಿ ಮತ್ತು ಅನೈತಿಕ ಕಣ್ಗಾವಲಿಗೆ ಸರ್ಕಾರ ಸುಲಭವಾದ ಮಾರ್ಗವನ್ನು ಹುಡುಕಿಕೊಂಡಿದೆ” ಎಂದು ವಕೀಲರಾದ ಸಲ್ಮಾನ್ ವಾರಿಸ್ ಹೇಳಿದ್ದಾರೆ.

ಸುಳ್ಳು ಸುದ್ದಿ ಅಥವಾ ತಪ್ಪು ಮಾಹಿತಿಯ ಬಗ್ಗೆ ಯಾವುದಾದರೂ ವ್ಯಾಖ್ಯಾನಕ್ಕೆ ಬಂದಿದ್ದೀರಾ? ಮೇ. 13 ರಂದು ಕರೆದಿರುವ ಟೆಂಡರ್‌ಗಾಗಿ ಯಾರಾದರೂ ಬಿಡ್‌ ಮಾಡಿದ್ದಾರಾ? ಎಂದು ಕೇಳಲಾಗಿರುವ ಪ್ರಶ್ನೆಗೆ ಬಿಇಸಿಎಲ್‌ ಪ್ರತಿಕ್ರಿಯಿಸಿಲ್ಲ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಇತ್ತೀಚೆಗೆ ಮಾಹಿತಿ ತಂತ್ರಜ್ಞಾನ ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಸಾಮಾಜಿಕ ಮಾಧ್ಯಮ ನಿಯಮಗಳು 2020 ರ ಮಾರ್ಗಸೂಚಿಗಳ ಕರಡನ್ನು ಏಪ್ರಿಲ್‌ ವೇಳೆಗೆ ಬಿಡುಗಡೆಗೊಳಿಲಾಗುವುದು ಎಂದು ಹೇಳಿತ್ತು. ಆದರೆ, ನಿಯಮಗಳ ಅಂತಿಮ ಕರಡು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ.

ವಾಟ್ಸಾಪ್‌ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಪಹರಣ ಮತ್ತು ಕಳ್ಳಸಾಗಾಣಿಕೆಗಳ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡುವ ಪೋಸ್ಟ್‌ಗಳು ಹರಿದಾಡಿದ್ದವು. ಅಲ್ಲದೆ, ಈ ವರ್ಷದ ಫೆಬ್ರವರಿಯಲ್ಲಿ ಹಿಂಸಾಚಾರವನ್ನು ಹರಡಲು ವಾಟ್ಸಾಪ್‌ ದುರ್ಬಳಕೆಯಾಗಿದೆ. ಎರಡು ಸಮುದಾಯಗಳ ನಡುವೆ ಗಲಬೆ, ಹಿಂಸಾಚಾರ, ದ್ವೇಷವನ್ನು ಹರಡುವಂತಹ ಪಠ್ಯಗಳು, ಆಡಿಯೋಗಳು ಮತ್ತು ವಿಡಿಯೋಗಳು ವಾಟ್ಸಾಪ್‌ನಲ್ಲಿ ಹರಿದಾಡಿವೆ. ಇವುಗಳಲ್ಲಿ ಕೆಲವು ಹಳೆಯವು ಹಾಗೂ ಅಂದಿನ ಘಟನೆಗೆ ಸಂಬಂಧವೇ ಇಲ್ಲದಂತವುಗಳಾಗಿದೆ.

ಭಾರತದಲ್ಲಿ ಫೇಸ್‌ಬುಕ್‌ ಮತ್ತು ವಾಟ್ಸಾಪ್‌ಗಳ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವು ಫೇಕ್‌ ನ್ಯೂಸ್‌ಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿವೆ ಎಂದು ಟೀಕೆಗೆ ಒಳಗಾಗಿವೆ. ಟ್ವಿಟರ್‌ ಇತ್ತೀಚೆಗೆ ಸುಳ್ಳು ಸುದ್ದಿಗಳ ವಿರುದ್ಧ ಲೇಬಲ್‌ ಹಾಕಲು ಆರಂಭಿಸಿದೆ. ಆದರೆ, ಹೆಚ್ಚಿನ ಬಳಕೆದಾರರಿರುವದರಿಂದ ಎಲ್ಲಾ ರೀತಿಯ ಫೇಕ್‌ನ್ಯೂಸ್‌ಗಳನ್ನು ತಡೆಗಟ್ಟಲು ಸಾಧ್ಯವಾಗದಿರಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಇದಲ್ಲದೆ, ವೈರಲ್‌ ಅದ ಫೇಕ್‌ ಪೋಸ್ಟ್‌ಗಳ ಹಿಂದಿರುವ ಪ್ರಭಾವಶಾಲಿಗಳನ್ನು ಗುರುತಿಸುವುದು ಸಹ ಸುಲಭವಲ್ಲ. ಪ್ರಭಾವಿಯನ್ನು ಗುರುತಿಸುವುದರ ಜೊತೆಗೆ ಸುಳ್ಳು ಮಾಹಿತಿ ಭೌಗೋಳಿಕ ಸ್ಥಳದ ವಿಶ್ಲೇಷಣೆ ಮಾಡಬೇಕು. ಬಿತ್ತರಿಸಿದ ಪೇಜ್‌ಗಳು ಹಾಗೂ ವಿಡಿಯೋಗಳ ಡೇಟಾವನ್ನು ವರ್ಗೀಕರಿಸಲು ಸಮರ್ಥವಾಗಿರಬೇಕು ಎಂದು ಟೆಂಡರ್‌ನಲ್ಲಿ ಆದೇಶಿಸಲಾಗಿದೆ. ಇಂತಹ “ಡೇಟಾ ವರ್ಗೀಕರಣ ಮತ್ತು ಕ್ಲಸ್ಟರಿಂಗ್”ಗಾಗಿ ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಟೆಂಡರ್ ಪ್ರಸ್ತಾಪಿಸುತ್ತದೆ. ಆದರೆ, ಅದು ಅಷ್ಟು ಸುಲಭವೂ ಸಾಧ್ಯವೂ ಅಲ್ಲ ಎಂದು ಫ್ಯಾಕ್ಟ್-ಚೆಕಿಂಗ್ ಪ್ಲಾಟ್‌ಫಾರ್ಮ್‌ನ ಸಹ-ಸಂಸ್ಥಾಪಕ ಸಿಹ್ನಾ ಹೇಳುತ್ತಾರೆ.

“ಜಾಗೃತಿ ಅಭಿಯಾನದ ಮೂಲಕ, ಜನರಿಗೆ ಹೇಗೆ ಸತ್ಯವನ್ನು ಪರಿಶೀಲಿಸಬೇಕೆಂದು ಕಲಿಸುವುದು ಫೇಕ್‌ ನ್ಯೂಸ್‌ಗಳನ್ನು ತಡೆಯುವ ಒಂದು ಉತ್ತಮ ಮಾರ್ಗವಾಗಿದೆ. ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಪ್ಲ್ಯಾಟ್‌ಫಾರ್ಮ್‌ಗಳು ಹಳೆಯ ವೀಡಿಯೊಗಳು ಮತ್ತು ಫೋಟೋಗಳನ್ನು ಮರುಬಳಕೆ ಮಾಡುವ ಹಕ್ಕು ನಿರಾಕರಣೆಗಳನ್ನು ಒದಗಿಸಬಲ್ಲವು” ಎಂದು ಸಿನ್ಹಾ ಹೇಳುತ್ತಾರೆ.

“ಭಾರತದಲ್ಲಿ ಅತೀ ಹೆಚ್ಚು ಫೇಕ್‌ ನ್ಯೂಸ್‌ಗಳನ್ನು ಬಿಜೆಪಿ ಮತ್ತು ಆರೆಸ್ಸೆಸ್‌ನ ಐಟಿ ಸೆಲ್‌ಗಳೇ ಹರಡುತ್ತಿವೆ. ಅದರಲ್ಲೂ 2014 ರಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಮುಸ್ಲಿಂ ವಿರೋಧಿ, ದಲಿತ ವಿರೋಧಿ ಪೇಕ್‌ನ್ಯೂಸ್‌ಗಳನ್ನು ಹೆಚ್ಚಾಗಿ ಬಿಜೆಪಿಯ ನಾನಾ ಬ್ರಾಂಚ್‌ಗಳು ಹರಡುತ್ತಿವೆ. ಕರ್ನಾಟಕದಲ್ಲಿಯೂ ವಿಕ್ರಮ್ ಹೆಗಡೆ ಸಂಪಾದಕನಾಗಿರುವ ಪೋಸ್ಟ್‌ಕಾರ್ಡ್‌ ಫೇಕ್‌ನ್ಯೂಸ್‌ ತಯಾರಿಸಲೇ ಇರುವ ಕರ್ನಾಟಕದ ಕಾರ್ಖಾನೆಯಾಗಿದೆ.” ಎಂದು ಸಾಮಾಜಿಕ ಜಾಲತಾಣ ಪರಿಣಿತರಾದ ಅನಿಲ್ ಕುಮಾರ್‌ ಅಭಿಪ್ರಾಯ ಪಡುತ್ತಾರೆ.

ಸಾಮಾಜಿಕ ಜಾಲತಾಣದ ಮೇಲೆ ಹಿಡಿತ ಸಾಧಿಸುವ ಹಾಗೂ ಬಳಕೆದಾರರನ್ನು ಕಂಟ್ರೋಲ್‌ ಮಾಡುವ ಉದ್ದೇಶದಿಂದ ಇಂತಹ ಹೊಸ ಗೇಮ್‌ಪ್ಲಾನ್‌ ಮಾಡಲು ಸರ್ಕಾರ ಮುಂದಾಗಿದೆ, ಹಾಗಾಗಿ ಇದು ಒಂದು ದೊಡ್ಡ ವ್ಯಂಗ್ಯವಾಗಿದೆ, ಎಂದು ಅನಿಲ್ ಅವರು ಹೇಳುತ್ತಾರೆ.


ಓದಿ: ಸತತ ವೈಫಲ್ಯಗಳ ನಡುವೆಯೂ ಮೋದಿ ಭಾರೀ ಜನ ಬೆಂಬಲ ಹೊಂದಿರುವುದು ಹೀಗೆ.


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...