ಪ್ರಧಾನಿ ನರೇಂದ್ರ ಮೋದಿ “ಘೋಷಣೆಗಳ ಕಲೆ”ಯನ್ನು ಕರಗತ ಮಾಡಿಕೊಂಡಿದ್ದಾರೆಯೆ ಹೊರತು, ಯಾವುದೇ ಪರಿಹಾರಗಳನ್ನು ನೀಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ಹೊರತಾಗಿಯೂ ಭಾರತದ ಉತ್ಪಾದನೆ ದಾಖಲೆಯ ಕೆಳಮಟ್ಟದಲ್ಲಿದೆ ಎಂದು ಅವರು ಹೇಳಿದ್ದಾರೆ. ಮೋದಿ ಘೋಷಣೆ ನೀಡುವ
ಎಕ್ಸ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “‘ಮೇಕ್ ಇನ್ ಇಂಡಿಯಾ’ ಕಾರ್ಖಾನೆ ಭಾರಿ ಭರವಸೆ ನೀಡಿತು. ಹಾಗಾದರೆ ಉತ್ಪಾದನೆಯು ದಾಖಲೆ ಮಟ್ಟದಲ್ಲಿ ಕನಿಷ್ಠವಾಗಿರುವುದು ಏಕೆ, ಯುವಜನರ ನಿರುದ್ಯೋಗ ದಾಖಲೆ ಮಟ್ಟದಲ್ಲಿ ಇರುವುದು ಏಕೆ ಮತ್ತು ಚೀನಾದಿಂದ ಆಮದು ದುಪ್ಪಟ್ಟಾಗಿದ್ದು ಯಾಕೆ? ಮೋದಿ ಅವರು ಘೋಷಣೆಗಳ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆಯೆ ಹೊರತು ಪರಿಹಾರಗಳಲ್ಲ. 2014 ರಿಂದ, ಉತ್ಪಾದನೆಯು ನಮ್ಮ ಆರ್ಥಿಕತೆಯ ಶೇಕಡಾ 14 ಕ್ಕೆ ಇಳಿದಿದೆ” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಗೆ ಯಾವುದೇ ಹೊಸ ಆಲೋಚನೆಗಳಿಲ್ಲ ಮತ್ತು ಸಂಪೂರ್ಣವಾಗಿ ಶರಣಾಗಿದ್ದಾರೆ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿ ಹೇಳಿದ್ದಾರೆ.
“ಹೆಚ್ಚು ಪ್ರಚಾರ ಪಡೆದ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯನ್ನು ಸಹ ಈಗ ಸದ್ದಿಲ್ಲದೆ ಹಿಂದಕ್ಕೆ ಪಡೆಯಲಾಗುತ್ತಿದೆ” ಎಂದು ಅವರು ಆರೋಪಿಸಿದ್ದಾರೆ. ಭಾರತಕ್ಕೆ ಮೂಲಭೂತ ಬದಲಾವಣೆಯ ಅಗತ್ಯವಿದೆ ಎಂದು ಹೇಳಿದ ಅವರು, ಇದು ಪ್ರಾಮಾಣಿಕ ಸುಧಾರಣೆಗಳು ಮತ್ತು ಆರ್ಥಿಕ ಬೆಂಬಲದ ಮೂಲಕ ಲಕ್ಷಾಂತರ ಉತ್ಪಾದಕರಿಗೆ ಅಧಿಕಾರ ನೀಡುತ್ತದೆ ಎಂದು ತಿಳಿಸಿದ್ದಾರೆ.
“Make in India” promised a factory boom. So why is manufacturing at record lows, youth unemployment at record highs, and why have imports from China more than doubled?
Modi ji has mastered the art of slogans, not solutions. Since 2014, manufacturing has fallen to 14% of our… pic.twitter.com/HsL9PBUYpx— Rahul Gandhi (@RahulGandhi) June 21, 2025
“ನಾವು ಇತರರಿಗೆ ಮಾರುಕಟ್ಟೆ ಆಗುವುದನ್ನು ನಿಲ್ಲಿಸಬೇಕು. ನಾವು ಇಲ್ಲಿಯೆ ವಸ್ತುಗಳನ್ನು ನಿರ್ಮಿಸುವವರೆಗೂ ಖರೀದಿಸುತ್ತಲೇ ಇರುತ್ತೇವೆ. ಗಡಿಯಾರ ಓಡುತ್ತಲೆ ಇದೆ” ಎಂದು ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ದೆಹಲಿಯ ನೆಹರೂ ಪ್ಲೇಸ್‌ನಲ್ಲಿ ಮೊಬೈಲ್ ರಿಪೇರಿ ತಂತ್ರಜ್ಞರನ್ನು ಭೇಟಿಯಾಗಿ ಅಲ್ಲಿ ಅವರೊಂದಿಗೆ ನಡೆಸಿದ ಸಂಭಾಷಣೆಯ ವೀಡಿಯೊವನ್ನು ಎಕ್ಸ್ ಪೋಸ್ಟ್‌ಗೆ ಲಗತ್ತಿಸಿದ್ದಾರೆ. ಮೋದಿ ಘೋಷಣೆ ನೀಡುವ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಇರಾನ್ ಮೇಲಿನ ದಾಳಿ ನಿಲ್ಲಿಸಲ್ಲ: ವಿಶ್ವಸಂಸ್ಥೆಗೆ ತಿಳಿಸಿದ ಇಸ್ರೇಲ್

