ನಮ್ಮ ಭಾರತ ದೇಶ ಈವರೆಗೆ ಕಂಡ ಅಪರೂಪದ ಗುಣಸಂಪನ್ನ ಮೋದಿ ಮಹಾತ್ಮನಿಗೆ ಉಳಿದವರಿರಲಿ, ಬಿಜೆಪಿಗಳೇ ಹೆದರುತ್ತವೆಯಂತಲ್ಲಾ. ಮೂಲತಃ ಬಿಜೆಪಿಗಳೇ ಹುಟ್ಟು ಪುಕ್ಕಲುಗಳು, ಅದಕ್ಕೇ ಅವುಗಳ ಬಳಿ ಲಾಠಿ ಇರುವುದು! ಇರಲಿ ನಮ್ಮ ಮೋದಿ ಮಹಾತ್ಮನನ್ನು ಮುಗಿಸಲು ವಯಸ್ಸಾದ ವಿದ್ವಾಂಸರು ಅದರಲ್ಲೂ ಮಾಜಿ ನಕ್ಸಲರು ನೀಲನಕ್ಷೆ ತಯಾರಿಸುತ್ತಿದ್ದರೆಂದು ಇಂಕಿನ ವಾಸನೆಯನ್ನೆ ಹಿಡಿದುಹೋಗಿ ಪತ್ತೆಹಚ್ಚಿ ಗೃಹಬಂಧನಕ್ಕಾಗಿರುವ ಪೂನಾ ಪೊಲೀಸರು ದಾಬೊಲ್ಕರ್, ಪನ್ಸಾರೆ ಕತೆ ಮುಗಿದು ನಾಲ್ಕು ವರ್ಷಗಳಾದರೂ ಸುಮ್ಮನಿದ್ದದ್ದು ಅಷ್ಟೇನು ಸೋಜಿಗವಲ್ಲವಂತಲ್ಲಾ. ಇಂತಹ ಪೊಲೀಸರು ಕರ್ನಾಟಕದಲ್ಲೇನಾದರೂ ಇದ್ದರೆ ಇಷ್ಟರಲ್ಲಿ ಗೌರಿ ಕೇಸಿನ ಕತೆ ಮುಗಿಸಿ ಬಿ-ರಿಪೋರ್ಟಾಕುತ್ತಿದ್ದರಂತಲ್ಲಾ. ಇದನ್ನೆಲ್ಲಾ ಗಮನಿಸಿದರೆ ಕೊಲೆಗಡುಕ ಬಿಜೆಪಿಗಳು ಮತ್ತೆ ಈ ನಾಡಿನಲ್ಲಿ ವಕ್ಕರಿಸದಂತೆ ಡಿ.ಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಬ್ರದರ್ಸ್‍ಗಳಾದಿಯಾಗಿ ಎಲ್ಲಾ ಮನುಷ್ಯರು ಮನುಷ್ಯರಲ್ಲದವರು ವಕ್ಕರಿಸದಂತೆ ಎಚ್ಚರ ವಹಿಸಬೇಕೆಂಬುದು ಕರ್ನಾಟಕದ ಮಾನವಂತರ ಇಂಗಿತವಾಗಿದೆಯಂತಲ್ಲಾ. ಥೂತ್ತೇರಿ
*******
ಮೋದಿ ತಮ್ಮ 68ನೇ ಹುಟ್ಟುಹಬ್ಬವನ್ನು ಶಾಲಾಮಕ್ಕಳ ಜೊತೆ ಆಚರಿಸಿದರಂತೆ. ಅಚರಿಸಿದ್ದು ಹಾಳುಬಿದ್ದೋಗಲಿ ಮೋದಿ ಮಕ್ಕಳಿಗೆ ಪ್ರಶ್ನೆ
ಕೇಳಲು ಭಯಪಡಬೇಡಿ ಎಂಬ ಬುದ್ಧಿ ಮಾತನ್ನ ಹೇಳಿದರಂತೆ. ಏಕೆಂದರೆ ಈಚೆಗೆ ಬಿಜೆಪಿಗಳು ಮೋದಿ ಆಡಳಿತವೈಖರಿ ಬಗ್ಗೆ ಪ್ರಶ್ನೆ ಕೇಳಲು ಹೆದರುತ್ತಿವೆಯಂತೆ. ಇದನ್ನು ಮನಗಂಡ ಮೋದಿ ಪ್ರಶ್ನೆ ಕೇಳುವ ಭಯವನ್ನು ಬಾಲ್ಯದಲ್ಲೇ ನಿವಾರಿಸಲು ಪಣ ತೊಟ್ಟಿದ್ದಾರಂತಲ್ಲಾ. ಸಾಮಾನ್ಯವಾಗಿ ಬಿಜೆಪಿಗಳು ಅಂದರೆ ಆರೆಸ್ಸೆಸ್ಸಿಗರು ಬಲಿತ ಜನರ ಸನಿಹಕ್ಕೆ ಹೋಗುವುದಿಲ್ಲ. ಬದಲಿಗೆ ಎಳೆ ಮಕ್ಕಳನ್ನ ಎತ್ತಿಕೊಂಡು ಚೆಡ್ಡಿಹಾಕಿ ಲಾಠಿಕೊಟ್ಟುಬಿಡುತ್ತವೆ. ಆದ್ದರಿಂದ ಮೋದಿ ಹದಿನೇಳು ವರ್ಷ ಭಾರತದ ಪ್ರಧಾನಿಯಾಗಿದ್ದ ನೆಹರು ತಮ್ಮ ಹುಟ್ಟುಹಬ್ಬದಂದು ಪಾರ್ಕಿನಲ್ಲಿ ಮಕ್ಕಳ ಜೊತೆ ಮಗುವಾಗಿ ಆಟವಾಡಿ ಕತೆ ಹೇಳಿ-ಕೇಳಿ ಖುಷಿ ಪಡುತ್ತಿದ್ದರು. ಎಲ್ಲದರಲ್ಲೂ ನೆಹರು ಮೀರಿಸಲು ಹೋರಾಡುವ ಈ ಮೋದಿ ಎಲ್ಲೀ ಆ ನೆಹರು ಎಲ್ಲೀ ಹಳ್ಳಿ ಗಾದೆಯಂತೆ ರಂಗನ ಮುಂದೆ ಸಿಂಗನೆ ಎಂಬಂತಾಯ್ತಲ್ಲಾ ಥೂತ್ತೇರಿ.
*******
ಕುಮಾರಣ್ಣನ ಸರಕಾರ ಬುಡಭದ್ರವಿಲ್ಲದೆ ಅಲ್ಲಾಡುತ್ತಿರುವುದನ್ನ ನೋಡಿದ ಒಕ್ಕಲಿಗ ಜಗತ್ತಿನ ಗುರುವಾದ ನಿರ್ಮಲಾನಂದ ಸ್ವಾಮಿ ಈ ಸರಕಾರ ಬಿದ್ದರೆ ಅದು ದೈವಕೃಪೆಗೆ ವಿರುದ್ಧ ಎಂದರಂತಲ್ಲಾ. ಈ ನಿರ್ಮಲಾನಂದ ಚಿನ್ನದಂತಹ ಸ್ವಾಮಿ. ಏಕೆಂದರೆ ಎಂ.ಟೆಕ್‍ನಲ್ಲಿ ಇವರು ಹೊನ್ನ ಶಿಖರವೇರಿದ್ದರಂತೆ. ಆ ವಿದ್ವತ್ತಿಗೂ ಈಗ ಇವರು ಸರಕಾರದ ವಿಷಯದಲ್ಲಾಡುತ್ತಿರುವ ಮಾತಿಗೂ ಯಾವ ಸಂಬಂಧವೂ ಇಲ್ಲವಂತ¯್ಲ. ಸಂವಿಧಾನದಲ್ಲಿನ ಚುನಾವಣಾ ನಿಯಮದಂತೆ ಚುನಾವಣೆ ನಡೆದಿದ್ದೆ ಜಾತ್ಯತೀತ ಮನಸ್ಸುಗಳು 78 ಸೀಟು ಗೆಲ್ಲಿಸಿವೆ. ಧರ್ಮಾಂಧರು 104 ಸೀಟು ಗೆದ್ದಿದ್ದಾರೆ ಹಾಗೆ ಜಾತ್ಯಂಧರು 38 ಸೀಟು ಗೆಲ್ಲಿಸಿಕೊಂಡಿದ್ದಾರೆ. ಧರ್ಮಾಂಧರನ್ನ ದೂರವಿಡುವ ಸಲುವಾಗಿ ಜಾತ್ಯತೀತರು ಮತ್ತು ಜಾತಿವಾದಿಗಳು ಸೇರಿ ಸರಕಾರ ಮಾಡಿದ್ದಾರೆ. ಕುಪಿತಗೊಂಡ ಧರ್ಮಾಂಧರು ಸರಕಾರ ಕೆಡವಲು ಹಗಲುರಾತ್ರಿ ಹಾರೆಗುದ್ದಲಿಯೊಂದಿಗೆ ಡೈನಮೆಟ್‍ಗಳನ್ನ ಉಪಯೋಗಿಸುವ ಬೆದರಿಕೆಯೊಂದಿಗೆ ಕೆಲಸ ಮಾಡುತ್ತಿವೆ. ಇದು ಸಂವಿಧಾನಕ್ಕೆ ಮುಖ್ಯವಾಗಿ ಕೋರ್ಟಿಗೆ ಬಗೆಯುವ ದ್ರೋಹವಾಗಿದೆ. ಇಂತಲ್ಲಿ ಸರಕಾರ ಉರುಳಿದರೆ ಅದು ದೈವಕೃಪೆಗೆ ವಿರುದ್ಧ ಹೇಗಾಗುತ್ತದೆಂದು ಕೇಳಿದರೆ ನಿವರ್iಲಾನಂದರು ನಿರುತ್ತರ ಕುಮಾರನಂತಾದರಂತಲ್ಲಾ. ಥೂತ್ತೇರಿ
*******
ಕೇವಲ 37 ಸೀಟುಗಳನ್ನ ಹೊಂದಿದ ಜೆಡಿಎಸ್ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿದು ಸರಕಾರ ನಡೆಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಯಜ್ಞ, ಯಾಗ, ಹೋಮ ಮತ್ತು ನೂರಾರು ಕ್ಷೇತ್ರ ದರ್ಶನದ ಪ್ರಭಾವವೇ ಸರಕಾರವನ್ನು ಮುನ್ನಡೆಸುತ್ತಿದೆ ಎಂದು
ಖಚಿತವಾಗಿ ನಂಬಿರುವ ದೇವೇಗೌಡರಿಗೆ ಪ್ರಜಾಪ್ರಭುತ್ವದಲ್ಲಿನ ಚಮತ್ಕಾರವೇ ಹೊಳೆಯದಿರುವುದು ಆಶ್ಚರ್ಯ ತಂದಿದೆಯಂತ¯್ಲ. ಆದರೇನು ಅಪ್ಪನ ಮೂಢನಂಬಿಕೆ ಮಾತುಗಳನ್ನೆ ನಂಬಿದ್ದ ಕುಮಾರಣ್ಣ ಈಚೆಗೆ ಜ್ಞಾನೋದಯವಾದಂತೆ ಸಿದ್ದರಾಮಯ್ಯನ ಕೃಪೆಯಿದ್ದರೆ ಐದು ವರ್ಷ ಮುಗಿಸಿ ಮನೆಗೆ ಹೋಗುತ್ತೇವೆ ಎಂದಿದ್ದಾರಲ್ಲಾ. ಇದರಿಂದ ಸಿದ್ದುಗೆ ಬಿದ್ದ ಹೊಡೆತವೆಂದರೆ ಈವರೆಗೆ ಸರಕಾರವನ್ನು ಅಲ್ಲಾಡಿಸುತ್ತಿದ್ದ ಕೀರ್ತಿ ಸಿದ್ದುಗೆ ಸಲ್ಲುತ್ತದೆ. ಅದಷ್ಟೇ ಅಲ್ಲ ಮುಂದಿನ ಎಲ್ಲಾ ತಾರಾತಿಗಡಿಯ ರಗಳೆ ಸಿದ್ದು ಬೆನ್ನ ಬೀಳುವುದರಲ್ಲಿ ಸಂಶಯವಿಲ್ಲ. ಇದಾವುದನ್ನ ಯೋಚಿಸದ ಸಿದ್ದು ಅಂತೂ ಕುಮಾರನಿಗೆ ನನ್ನ ಕೃಪೆ ಮುಖ್ಯ ಎಂಬುದು ಈಗಲಾದರೂ ಹೊಳೆಯಿತಲ್ಲ ಎಂದು ಆಕಳಿಕೆ ತೆಗೆದು ಸೋಫಾಕ್ಕೆ ಒರಗಿದರಂತಲ್ಲಾ, ಥೂತ್ತೇರಿ.
*******
ಹಟ ಸಂಭೋಗದ ಮುದುಕನಂತೆ ಹಗಲೂರಾತ್ರಿ ಅಧಿಕಾರಕ್ಕಾಗಿ ಹೋರಾಡುತ್ತಿರುವ ಎಡೂರಪ್ಪನನ್ನು ಗಮನಿಸಿದ ಚೆಡ್ಡಿಗಳು ಎಡೂರಪ್ಪನ ಇಂತಹ ಕಾರ್ಯಾಚರಣೆಗೆ ನಮ್ಮ ವಿರೋಧವಿದೆ ಎಂಬ ಸುದ್ದಿ ಬಿತ್ತರಿಸಿವೆಯಲ್ಲಾ. ಅಂದರೆ ಆರೆಸ್ಸೆಸ್ಸಿಗರು ಶ್ರೇಷ್ಠವಾದ ಜನತಂತ್ರ ರಾಜಕಾರಣ. ಎಡೂರಪ್ಪನದಲ್ಲ ಎಂದು ಅತ್ತ ಎಡೂರಪ್ಪನನ್ನ ದೂರಿ ಇತ್ತ ತಾವು ಮಾತ್ರ ಧರ್ಮವಂತರೆಂದು ಬಿಂಬಿಸಲು ಹೊರಟಿರುವುದು ಸ್ವತಃ ಎಡೂರಪ್ಪನಿಗೇ ಸಿಟ್ಟು ತರಿಸಿದೆಯಂತಲ್ಲಾ. ಕಂಠಪೂರ್ತಿ ಭ್ರಷ್ಟ ಎಂಬುದನ್ನ ಬಿಟ್ಟರೆ, ಎಡೂರಪ್ಪ ಎಂದು ಮುಸ್ಲಿಮರನ್ನ ದೂಷಿಸಿದವರಲ್ಲಾ ಇದಕ್ಕೆ ಕಾರಣ ಅವರ ಕ್ಷೇತ್ರದ ಮುಸ್ಲಿಮರ ಬೆಂಬಲ. ಜೊತೆಗೆ ಈ ಅನಂತ, ಈಶ್ವರ, ಜೋಷಿ, ಯತ್ನಾಳ ಇಂತ ಮತಾಂಧರಾಡುವ ಮಾತನ್ನ ಯಡ್ಡಿ ಎಂದೂ ಆಡಿದವರಲ್ಲ. ಆದ್ದರಿಂದ ಚಿಡ್ಡಿಗಳು ಬಿಟ್ಟುಹೋದ ಮನೆಗೆ ಬಂದ ಯಡ್ಡಿ ಬಗ್ಗೆ ಎಚ್ಚರಿಕೆಯಿಂದಲೇ ವರ್ತಿಸುತ್ತಿವೆಯಂತಲ್ಲಾ, ಥೂತ್ತೇರಿ.


