Homeರಾಜಕೀಯನೆಹರು ಎಲ್ಲೀ, ಮೋದಿ ಎಲ್ಲೀ, ರಂಗನ ಮುಂದೆ ಸಿಂಗನೆ?

ನೆಹರು ಎಲ್ಲೀ, ಮೋದಿ ಎಲ್ಲೀ, ರಂಗನ ಮುಂದೆ ಸಿಂಗನೆ?

- Advertisement -
- Advertisement -

ನಮ್ಮ ಭಾರತ ದೇಶ ಈವರೆಗೆ ಕಂಡ ಅಪರೂಪದ ಗುಣಸಂಪನ್ನ ಮೋದಿ ಮಹಾತ್ಮನಿಗೆ ಉಳಿದವರಿರಲಿ, ಬಿಜೆಪಿಗಳೇ ಹೆದರುತ್ತವೆಯಂತಲ್ಲಾ. ಮೂಲತಃ ಬಿಜೆಪಿಗಳೇ ಹುಟ್ಟು ಪುಕ್ಕಲುಗಳು, ಅದಕ್ಕೇ ಅವುಗಳ ಬಳಿ ಲಾಠಿ ಇರುವುದು! ಇರಲಿ ನಮ್ಮ ಮೋದಿ ಮಹಾತ್ಮನನ್ನು ಮುಗಿಸಲು ವಯಸ್ಸಾದ ವಿದ್ವಾಂಸರು ಅದರಲ್ಲೂ ಮಾಜಿ ನಕ್ಸಲರು ನೀಲನಕ್ಷೆ ತಯಾರಿಸುತ್ತಿದ್ದರೆಂದು ಇಂಕಿನ ವಾಸನೆಯನ್ನೆ ಹಿಡಿದುಹೋಗಿ ಪತ್ತೆಹಚ್ಚಿ ಗೃಹಬಂಧನಕ್ಕಾಗಿರುವ ಪೂನಾ ಪೊಲೀಸರು ದಾಬೊಲ್ಕರ್, ಪನ್ಸಾರೆ ಕತೆ ಮುಗಿದು ನಾಲ್ಕು ವರ್ಷಗಳಾದರೂ ಸುಮ್ಮನಿದ್ದದ್ದು ಅಷ್ಟೇನು ಸೋಜಿಗವಲ್ಲವಂತಲ್ಲಾ. ಇಂತಹ ಪೊಲೀಸರು ಕರ್ನಾಟಕದಲ್ಲೇನಾದರೂ ಇದ್ದರೆ ಇಷ್ಟರಲ್ಲಿ ಗೌರಿ ಕೇಸಿನ ಕತೆ ಮುಗಿಸಿ ಬಿ-ರಿಪೋರ್ಟಾಕುತ್ತಿದ್ದರಂತಲ್ಲಾ. ಇದನ್ನೆಲ್ಲಾ ಗಮನಿಸಿದರೆ ಕೊಲೆಗಡುಕ ಬಿಜೆಪಿಗಳು ಮತ್ತೆ ಈ ನಾಡಿನಲ್ಲಿ ವಕ್ಕರಿಸದಂತೆ ಡಿ.ಕೆ ಶಿವಕುಮಾರ್ ಮತ್ತು ಜಾರಕಿಹೊಳಿ ಬ್ರದರ್ಸ್‍ಗಳಾದಿಯಾಗಿ ಎಲ್ಲಾ ಮನುಷ್ಯರು ಮನುಷ್ಯರಲ್ಲದವರು ವಕ್ಕರಿಸದಂತೆ ಎಚ್ಚರ ವಹಿಸಬೇಕೆಂಬುದು ಕರ್ನಾಟಕದ ಮಾನವಂತರ ಇಂಗಿತವಾಗಿದೆಯಂತಲ್ಲಾ. ಥೂತ್ತೇರಿ

*******

ಮೋದಿ ತಮ್ಮ 68ನೇ ಹುಟ್ಟುಹಬ್ಬವನ್ನು ಶಾಲಾಮಕ್ಕಳ ಜೊತೆ ಆಚರಿಸಿದರಂತೆ. ಅಚರಿಸಿದ್ದು ಹಾಳುಬಿದ್ದೋಗಲಿ ಮೋದಿ ಮಕ್ಕಳಿಗೆ ಪ್ರಶ್ನೆ ಕೇಳಲು ಭಯಪಡಬೇಡಿ ಎಂಬ ಬುದ್ಧಿ ಮಾತನ್ನ ಹೇಳಿದರಂತೆ. ಏಕೆಂದರೆ ಈಚೆಗೆ ಬಿಜೆಪಿಗಳು ಮೋದಿ ಆಡಳಿತವೈಖರಿ ಬಗ್ಗೆ ಪ್ರಶ್ನೆ ಕೇಳಲು ಹೆದರುತ್ತಿವೆಯಂತೆ. ಇದನ್ನು ಮನಗಂಡ ಮೋದಿ ಪ್ರಶ್ನೆ ಕೇಳುವ ಭಯವನ್ನು ಬಾಲ್ಯದಲ್ಲೇ ನಿವಾರಿಸಲು ಪಣ ತೊಟ್ಟಿದ್ದಾರಂತಲ್ಲಾ. ಸಾಮಾನ್ಯವಾಗಿ ಬಿಜೆಪಿಗಳು ಅಂದರೆ ಆರೆಸ್ಸೆಸ್ಸಿಗರು ಬಲಿತ ಜನರ ಸನಿಹಕ್ಕೆ ಹೋಗುವುದಿಲ್ಲ. ಬದಲಿಗೆ ಎಳೆ ಮಕ್ಕಳನ್ನ ಎತ್ತಿಕೊಂಡು ಚೆಡ್ಡಿಹಾಕಿ ಲಾಠಿಕೊಟ್ಟುಬಿಡುತ್ತವೆ. ಆದ್ದರಿಂದ ಮೋದಿ ಹದಿನೇಳು ವರ್ಷ ಭಾರತದ ಪ್ರಧಾನಿಯಾಗಿದ್ದ ನೆಹರು ತಮ್ಮ ಹುಟ್ಟುಹಬ್ಬದಂದು ಪಾರ್ಕಿನಲ್ಲಿ ಮಕ್ಕಳ ಜೊತೆ ಮಗುವಾಗಿ ಆಟವಾಡಿ ಕತೆ ಹೇಳಿ-ಕೇಳಿ ಖುಷಿ ಪಡುತ್ತಿದ್ದರು. ಎಲ್ಲದರಲ್ಲೂ ನೆಹರು ಮೀರಿಸಲು ಹೋರಾಡುವ ಈ ಮೋದಿ ಎಲ್ಲೀ ಆ ನೆಹರು ಎಲ್ಲೀ ಹಳ್ಳಿ ಗಾದೆಯಂತೆ ರಂಗನ ಮುಂದೆ ಸಿಂಗನೆ ಎಂಬಂತಾಯ್ತಲ್ಲಾ ಥೂತ್ತೇರಿ.

*******

ಕುಮಾರಣ್ಣನ ಸರಕಾರ ಬುಡಭದ್ರವಿಲ್ಲದೆ ಅಲ್ಲಾಡುತ್ತಿರುವುದನ್ನ ನೋಡಿದ ಒಕ್ಕಲಿಗ ಜಗತ್ತಿನ ಗುರುವಾದ ನಿರ್ಮಲಾನಂದ ಸ್ವಾಮಿ ಈ ಸರಕಾರ ಬಿದ್ದರೆ ಅದು ದೈವಕೃಪೆಗೆ ವಿರುದ್ಧ ಎಂದರಂತಲ್ಲಾ. ಈ ನಿರ್ಮಲಾನಂದ ಚಿನ್ನದಂತಹ ಸ್ವಾಮಿ. ಏಕೆಂದರೆ ಎಂ.ಟೆಕ್‍ನಲ್ಲಿ ಇವರು ಹೊನ್ನ ಶಿಖರವೇರಿದ್ದರಂತೆ. ಆ ವಿದ್ವತ್ತಿಗೂ ಈಗ ಇವರು ಸರಕಾರದ ವಿಷಯದಲ್ಲಾಡುತ್ತಿರುವ ಮಾತಿಗೂ ಯಾವ ಸಂಬಂಧವೂ ಇಲ್ಲವಂತ¯್ಲ. ಸಂವಿಧಾನದಲ್ಲಿನ ಚುನಾವಣಾ ನಿಯಮದಂತೆ ಚುನಾವಣೆ ನಡೆದಿದ್ದೆ ಜಾತ್ಯತೀತ ಮನಸ್ಸುಗಳು 78 ಸೀಟು ಗೆಲ್ಲಿಸಿವೆ. ಧರ್ಮಾಂಧರು 104 ಸೀಟು ಗೆದ್ದಿದ್ದಾರೆ ಹಾಗೆ ಜಾತ್ಯಂಧರು 38 ಸೀಟು ಗೆಲ್ಲಿಸಿಕೊಂಡಿದ್ದಾರೆ. ಧರ್ಮಾಂಧರನ್ನ ದೂರವಿಡುವ ಸಲುವಾಗಿ ಜಾತ್ಯತೀತರು ಮತ್ತು ಜಾತಿವಾದಿಗಳು ಸೇರಿ ಸರಕಾರ ಮಾಡಿದ್ದಾರೆ. ಕುಪಿತಗೊಂಡ ಧರ್ಮಾಂಧರು ಸರಕಾರ ಕೆಡವಲು ಹಗಲುರಾತ್ರಿ ಹಾರೆಗುದ್ದಲಿಯೊಂದಿಗೆ ಡೈನಮೆಟ್‍ಗಳನ್ನ ಉಪಯೋಗಿಸುವ ಬೆದರಿಕೆಯೊಂದಿಗೆ ಕೆಲಸ ಮಾಡುತ್ತಿವೆ. ಇದು ಸಂವಿಧಾನಕ್ಕೆ ಮುಖ್ಯವಾಗಿ ಕೋರ್ಟಿಗೆ ಬಗೆಯುವ ದ್ರೋಹವಾಗಿದೆ. ಇಂತಲ್ಲಿ ಸರಕಾರ ಉರುಳಿದರೆ ಅದು ದೈವಕೃಪೆಗೆ ವಿರುದ್ಧ ಹೇಗಾಗುತ್ತದೆಂದು ಕೇಳಿದರೆ ನಿವರ್iಲಾನಂದರು ನಿರುತ್ತರ ಕುಮಾರನಂತಾದರಂತಲ್ಲಾ. ಥೂತ್ತೇರಿ

*******

ಕೇವಲ 37 ಸೀಟುಗಳನ್ನ ಹೊಂದಿದ ಜೆಡಿಎಸ್ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿದು ಸರಕಾರ ನಡೆಸುತ್ತಿರುವುದು ಸಾಮಾನ್ಯ ಸಂಗತಿಯಲ್ಲ. ಇದಕ್ಕೆ ಯಜ್ಞ, ಯಾಗ, ಹೋಮ ಮತ್ತು ನೂರಾರು ಕ್ಷೇತ್ರ ದರ್ಶನದ ಪ್ರಭಾವವೇ ಸರಕಾರವನ್ನು ಮುನ್ನಡೆಸುತ್ತಿದೆ ಎಂದು ಖಚಿತವಾಗಿ ನಂಬಿರುವ ದೇವೇಗೌಡರಿಗೆ ಪ್ರಜಾಪ್ರಭುತ್ವದಲ್ಲಿನ ಚಮತ್ಕಾರವೇ ಹೊಳೆಯದಿರುವುದು ಆಶ್ಚರ್ಯ ತಂದಿದೆಯಂತ¯್ಲ. ಆದರೇನು ಅಪ್ಪನ ಮೂಢನಂಬಿಕೆ ಮಾತುಗಳನ್ನೆ ನಂಬಿದ್ದ ಕುಮಾರಣ್ಣ ಈಚೆಗೆ ಜ್ಞಾನೋದಯವಾದಂತೆ ಸಿದ್ದರಾಮಯ್ಯನ ಕೃಪೆಯಿದ್ದರೆ ಐದು ವರ್ಷ ಮುಗಿಸಿ ಮನೆಗೆ ಹೋಗುತ್ತೇವೆ ಎಂದಿದ್ದಾರಲ್ಲಾ. ಇದರಿಂದ ಸಿದ್ದುಗೆ ಬಿದ್ದ ಹೊಡೆತವೆಂದರೆ ಈವರೆಗೆ ಸರಕಾರವನ್ನು ಅಲ್ಲಾಡಿಸುತ್ತಿದ್ದ ಕೀರ್ತಿ ಸಿದ್ದುಗೆ ಸಲ್ಲುತ್ತದೆ. ಅದಷ್ಟೇ ಅಲ್ಲ ಮುಂದಿನ ಎಲ್ಲಾ ತಾರಾತಿಗಡಿಯ ರಗಳೆ ಸಿದ್ದು ಬೆನ್ನ ಬೀಳುವುದರಲ್ಲಿ ಸಂಶಯವಿಲ್ಲ. ಇದಾವುದನ್ನ ಯೋಚಿಸದ ಸಿದ್ದು ಅಂತೂ ಕುಮಾರನಿಗೆ ನನ್ನ ಕೃಪೆ ಮುಖ್ಯ ಎಂಬುದು ಈಗಲಾದರೂ ಹೊಳೆಯಿತಲ್ಲ ಎಂದು ಆಕಳಿಕೆ ತೆಗೆದು ಸೋಫಾಕ್ಕೆ ಒರಗಿದರಂತಲ್ಲಾ, ಥೂತ್ತೇರಿ.

*******

ಹಟ ಸಂಭೋಗದ ಮುದುಕನಂತೆ ಹಗಲೂರಾತ್ರಿ ಅಧಿಕಾರಕ್ಕಾಗಿ ಹೋರಾಡುತ್ತಿರುವ ಎಡೂರಪ್ಪನನ್ನು ಗಮನಿಸಿದ ಚೆಡ್ಡಿಗಳು ಎಡೂರಪ್ಪನ ಇಂತಹ ಕಾರ್ಯಾಚರಣೆಗೆ ನಮ್ಮ ವಿರೋಧವಿದೆ ಎಂಬ ಸುದ್ದಿ ಬಿತ್ತರಿಸಿವೆಯಲ್ಲಾ. ಅಂದರೆ ಆರೆಸ್ಸೆಸ್ಸಿಗರು ಶ್ರೇಷ್ಠವಾದ ಜನತಂತ್ರ ರಾಜಕಾರಣ. ಎಡೂರಪ್ಪನದಲ್ಲ ಎಂದು ಅತ್ತ ಎಡೂರಪ್ಪನನ್ನ ದೂರಿ ಇತ್ತ ತಾವು ಮಾತ್ರ ಧರ್ಮವಂತರೆಂದು ಬಿಂಬಿಸಲು ಹೊರಟಿರುವುದು ಸ್ವತಃ ಎಡೂರಪ್ಪನಿಗೇ ಸಿಟ್ಟು ತರಿಸಿದೆಯಂತಲ್ಲಾ. ಕಂಠಪೂರ್ತಿ ಭ್ರಷ್ಟ ಎಂಬುದನ್ನ ಬಿಟ್ಟರೆ, ಎಡೂರಪ್ಪ ಎಂದು ಮುಸ್ಲಿಮರನ್ನ ದೂಷಿಸಿದವರಲ್ಲಾ ಇದಕ್ಕೆ ಕಾರಣ ಅವರ ಕ್ಷೇತ್ರದ ಮುಸ್ಲಿಮರ ಬೆಂಬಲ. ಜೊತೆಗೆ ಈ ಅನಂತ, ಈಶ್ವರ, ಜೋಷಿ, ಯತ್ನಾಳ ಇಂತ ಮತಾಂಧರಾಡುವ ಮಾತನ್ನ ಯಡ್ಡಿ ಎಂದೂ ಆಡಿದವರಲ್ಲ. ಆದ್ದರಿಂದ ಚಿಡ್ಡಿಗಳು ಬಿಟ್ಟುಹೋದ ಮನೆಗೆ ಬಂದ ಯಡ್ಡಿ ಬಗ್ಗೆ ಎಚ್ಚರಿಕೆಯಿಂದಲೇ ವರ್ತಿಸುತ್ತಿವೆಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...