Homeರಾಜಕೀಯಮಿತ್ರೋ... ಮಿತ್ರೋ... ಮಿತ್ರೋ...

ಮಿತ್ರೋ… ಮಿತ್ರೋ… ಮಿತ್ರೋ…

- Advertisement -
- Advertisement -

ಮಿತ್ರೊ…. ಟೆಡ್ಡಿ ಫೋನ್ ಮಾಡಿದ್ರು.. ಸಡುನ್ ಆಗಿ ಎಂಜಿಲು ಮುಖಕ್ಕೆ ಬಿತ್ತು.. `ಥೂ ಬೋ$%&@#, 2008ರಲ್ಲಿ ನೀವಿಲ್ದೆ 110 ಸೀಟ್ ಗೆದಿದ್ದೆ, ಮೋದಿ ಅಲೆ, ದೇಶಭಕ್ತಿ, ಶಾ ಅಂತ 104ಕ್ಕೆ ತಂದು ನಡುನೀರ್ನಲ್ ನಿಲ್ಸಿ ಕೈಕೊಟ್ರಲ್ಲೋ..’ ಫುಲ್ ಸಂಸ್ಕೃತ.. ಇನ್ನು ಏನೋ ಹೇಳೋಕೆ ಹೋದ್ರು, ಕೋಪ ಮಾಡಿಕೊಂಡೊವ್ರೆ ಅಂಥ ಫೋನ್ ಕಟ್ ಮಾಡಿಬಿಟ್ಟೆ..
* * * *
ಮಿತ್ರೊ…. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಗೆ 104 ಡಾಲರ್ ಇದ್ದಾಗ uಠಿಚಿ ಸರ್ಕಾರ ಬರಿ 4.5% ಕೇಂದ್ರೀಯ ತೆರಿಗೆ ಹಾಕಿ ಭಾರತ ಅಭಿವೃದ್ಧಿ ಆಗದಂತೆ ಮಾಡಿತ್ತು.. ನಾವು ಅಧಿಕಾರಕ್ಕೆ ಬಂದಾಗಿನಿಂದ ಅದೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ಗೆ 35 ಡಾಲರ್ ಇಂದ ಹಿಡಿದು 60 ಡಾಲರ್ ಆಗಿದೆ.. ನಾವು 4.5% ಇದ್ದ ಕೇಂದ್ರೀಯ ತೆರಿಗೆಯನ್ನು 19.5% ಹೆಚ್ಚಿಸಿ ದೇಶದ ಅಭಿವೃದ್ದಿಯ್ಯನ್ನು ಭಯಂಕರ ಹೆಚ್ಚಿಸಿದ್ದೇವೆ..!
* * * *
ಮಿತ್ರೊ…. ವೇದಾಂತ ಕಂಪನಿಯ ಅನಿಲ್ ಫೋನ್ ಮಾಡಿದ್ದ.. ಮಚ್ಚ, ಕಂಪನಿಗೆ ಬೀಗ ಹಾಕ್ಬಿಟ್ರು, ಏನಾರ ಮಾಡು ಅಂತ.. ನಾನು ಕೂಡ ಮೊನ್ನೆಯಿಂದ ಕ್ಯಾಲ್ಕುಲೇಟರ್ ಇಡ್ಕೊಂಡ್ ಲೆಕ್ಕ ಹಾಕ್ತಿದ್ದೆ. ಇವನು, ಕಾಂಗಿಗಳು ಮತ್ತು ನಮ್ಮ ಕೃಪೆಯಿಂದ, ಭಾರತೀಯ ಬ್ಯಾಂಕುಗಳಿಂದ ಪಡೆದಿರುವ ಒಟ್ಟೂ ಸಾಲ 2 ಲಕ್ಷ ಕೋಟಿಯಂತೆ. ಒಂದು ಅಂದಾಜಿನ ಮೇಲೆ ಇವನ ಕಂಪನಿಯಲ್ಲಿ ಒಟ್ಟು ಕೆಲಸಗಾರರು 60000.. ಅಂದರೆ ಪ್ರತಿ 3 ಕೋಟಿ 33 ಲಕ್ಷಕ್ಕೆ ಒಂದು ಉದ್ಯೋಗ ಶೃಸ್ಟಿ ಮಾಡುತ್ತಿದ್ದಾನಂತೆ! ಅಂದರೆ ಇವನ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರೆಲ್ಲರೂ ಕೋಟ್ಯಧಿಪತಿಗಳೇ? ಇಲ್ಲ, ಇವನ ಕಂಪನಿಯಲ್ಲಿ 90% ಮೇಲೂ ಕಾರ್ಮಿಕರು, ತಿಂಗಳಿಗೆ 20,000ಕ್ಕಿಂತಲೂ ಕಡಿಮೆ ಸಂಬಳ ಪಡೆಯುತ್ತಿದ್ದಾರೆ.. ಕಾಂಗಿ ಮತ್ತು ನಮಗೆ ಇವನು ಲೆಕ್ಕದಲ್ಲಿ ಕೊಟ್ಟಿರುವ ದೇಣಿಗೆ ಬರಿ 29 ಕೋಟಿ.. ಇನ್ನ ಮಿಕ್ಕ ಅಷ್ಟೊಂದು ಕಾಸಿನಲ್ಲಿ ಏನ್ ಮಾಡ್ತಾ ಇದ್ದಿಯೊ ಅಂತ ಡೌಟ್ನಲ್ಲಿ ಕೇಳ್ದೆ .. ಅವನು “ದೇಶದ್ರೋಹಿ, ಸೈನಿಕರು ಗಡಿಯಲ್ಲಿ ದೇಶಕ್ಕೋಸ್ಕರ ಸಾಯಿತಾ ಇದ್ರೆ ನಿಂಗೆ ಲೆಕ್ಕದ್ ಚಿಂತೆ” ಅಂತ ಫೋನ್ ಕಟ್ ಮಾಡ್ಬಿಡೋದ!!!
* * * *
ಮಿತ್ರೊ…. , ನನ್ನ ಗುರು ಸಾವರ್ಕರ್ ಅವರ ಬಗ್ಗೆ ನಾನು ಚಿಕ್ಕಂದಿನಿಂದಲೇ ಓದಲು ಶುರು ಮಾಡಿದ ಪುಸ್ತಕ “ಲೈಫ್ ಒಫ್ ಬ್ಯಾರಿಸ್ಟರ್ ಸಾವರ್ಕರ್”. ಇದು ಅವರು ಬ್ರಿಟಿಷರಿಂದ ಭಿಕ್ಷೆ ಬೇಡಿ, ನಾನು ಇನ್ನೆಂದಿಗೂ ಬ್ರಿಟಿಷರ ವಿರುದ್ಧ ಹೋರಾಡುವುದಿಲ್ಲ, ಇನ್ನು ಮುಂದೆ ನಾನು ನಿಮ್ಮ ಗುಲಾಮ ಎಂದು ಒಂದರ ಮೇಲೆ ಒಂದರಂತೆ ಹನ್ನೊಂದು ಪತ್ರಗಳನ್ನು ಬೆರೆದು 1924ರಲ್ಲಿ ಷರತ್ತಿನ ಮೇಲೆ ಬಿಡುಗಡೆಯಾಗಿ ಎರೆಡನೆ ವರ್ಷದಲ್ಲಿ(1926) ಅನಾಮಧೇಯ ಚಿತ್ರಗುಪ್ತ ಎಂಬುವವರು ಪ್ರಕಟಿಸಿದ ಪುಸ್ತಕ.. ಈ ಪುಸ್ತಕ ಎಷ್ಟು ರೋಚಕವಾಗಿತ್ತೆಂದರೆ, ಸಾವರ್ಕರ್ ಹುಟ್ಟಿನಿಂದಲೇ ಅತಿ ಬುದ್ದಿವಂತ, ಆಜನ್ಮ ಹೋರಾಟಗಾರ, ಅನ್ಯಾಯಗಳ ವಿರುದ್ಧ ಸಿಡಿದೇಳುವ ವೀರ, ಶೂರ, ಯಾವುದೇ ತಂತ್ರಕ್ಕೆ, ಮಣಿಯದೆ ಪ್ರತಿತಂತ್ರ ಹೆಣೆಯುವ ಶಕ್ತಿ ಮತ್ತು ಯುಕ್ತಿಯುಳ್ಳ ವೀರ ಎಂದು ಪುಸ್ತಕದ ಪ್ರತಿಯೊಂದು ಹಂತದಲ್ಲೂ ಬರೆಯಲಾಗಿತ್ತು.. ಯಾವುದೇ ಫಿಕ್ಷನ್ ಪುಸ್ತಕ ಓದುತ್ತಿದ್ದರೆ ಆ ಪಾತ್ರಗಳ ಒಳಗೆ ನಾವು ಹೇಗೆ ನುಸುಳಿ ಮಾರುಹೋಗುತ್ತೇವೋ ಅದೇ ರೀತಿ ಸಾವರ್ಕರರೇ ನಾನು ಎಂಬಂತೆ ಕಲ್ಪಿಸಿಕೊಳ್ಳಲು ಆರಂಭಿಸಿದೆ (ಒಂದು ರೀತಿಯ ನಾಗವಲ್ಲಿ ಟೈಪ್ಸ್). ನನ್ನ ಮೂವತ್ತೊಂದನೆ ವರ್ಷದಲ್ಲಿ, ಅದೆ 1987ರಲ್ಲಿ ತಿಳಿಯಿತು ಆ ಚಿತ್ರಗುಪ್ತ ಬೇರ್ಯಾರು ಅಲ್ಲ, ಖುದ್ದು ಸರ್ವರ್ಕರ್, ಚಿತ್ರಗುಪ್ತ ಎಂಬ ಹೆಸರಿನಲ್ಲಿ ಬರೆದ ಪುಸ್ತಕ ಎಂದು.. ಅಷ್ಟೊತ್ತಿಗಾಗಲೇ ಕಾಲ ಮಿಂಚಿತ್ತು.. ನಾನು ಸಾವರ್ಕರ್ ಆಗಿಹೋಗಿದ್ದೆ.. ನಿಜಜೀವನದಲ್ಲಿ ಭಗತ್ ಸಿಂಗ್, ರಾಜ್ಗುರು, ಸುಖ್ದೇವ್ ಥರ ವೀರರಾಗದಿದ್ದರೂ ಮುಖವಾಡಗಳಲ್ಲಿ ಹೀರೊ ಅಗೋ ಖುಷಿನೆ ಬೇರೆ.. ಈಗಲೂ ಅದನ್ನೇ mಚಿiಟಿಣಚಿiಟಿ ಮಾಡ್ಕೊಂಡ್ ಹೋಗ್ತಾ ಇದ್ದೀನಿ..
* * * *
ಮಿತ್ರೊ….
ನಾನು ಕೆಲಸ ಮಾಡುವವನು ಅಲ್ಲವೇ ಅಲ್ಲ, ನಾನು ಕಲರ್‍ಪುಲ್ ಮಾತಿನ ಗಿರಾಕಿ. ನಾಲ್ಕು ವರ್ಷಗಳಿಂದ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದೆ. ನನ್ನ ತುಘಲಕ್ ತೀರ್ಮಾನವಾದ ಅಮಾನ್ಯೀಕರಣದಿಂದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು. ಇನ್ನೂ ದೇಶದ ಆಡಳಿತ ನಡೆಸಲು ಬಾರದೆ ವಿದೇಶಿ ಪ್ರವಾಸ ಮಾಡಿಕೊಂಡು ಅಲ್ಲಿಯೂ ಭಾಷಣ ಮಾಡಿಕೊಂಡು ದಿನ ನೂಕಿದೆ. ಇನ್ನೂ ಹೀಂಗೆ ಹೇಳುತ್ತ ಹೋದರೆ ನೂರಾರು ಸಾಧನೆಗಳನ್ನು ಹೇಳಬಹುದು. ನೀವುಗಳು ನನ್ನ ಮಾತಿನಿಂದಲೇ ಹೊಟ್ಟೆ ತುಂಬಿಸಿಕೊಂಡು ದೇಶಕ್ಕಾಗಿ ಮಾಡುತ್ತಿರುವ ತ್ಯಾಗ ನೆನಸಿಕೊಂಡರೆ ಇನ್ನೂ ಅರ್ಧ ಕೆಜಿ ಅಣಬೆ ತಿನ್ನುವ ಅನ್ನಿಸುತ್ತೆ. 2019 ಕ್ಕೂ ನನ್ನ ಮಾತನ್ನೆ ರಾಷ್ಟ್ರ ನಿರ್ಮಾಣ ಎಂದು ತಿಳಿದುಕೊಂಡು ಮತ್ತೊಮ್ಮೆ ಪ್ರಧಾನಿ ಮಾಡುತ್ತಿರಿ ಅನ್ನುವ ಗ್ಯಾರಂಟಿ ನನಗೆ ಇದೆ.
* * * *
ಮಿತ್ರೊ…. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ರೆ ನಿಮ್ಗೆ ಇಷ್ಟ್ ಮಜಾ ಇರ್ತೀತ್ತ? ನಂಗೊತ್ತು ನೀವ್ ಯಾಕ್ ಬಿಜೆಪಿಗೆ ವೋಟ್ ಹಾಕುದ್ರಿ ಅಂತ.. ಗೋವಾ, ಕೇರಳ, ರೆಸಾರ್ಟ್ ರಾಜಕೀಯ, 100 ಕೋಟಿ, ಅವ್ನು ಅಲ್ಲಿಂದ ಇಲ್ಲಿಗೆ, ಇಲ್ಲಿರೋವ್ನು ಅಲ್ಲಿಗೆ.. ಇವ್ನು ಅವ್ನ ಭ್ರಷ್ಟ ಅನ್ನೋದು, ಅವ್ನು ಇವ್ನ ಭ್ರಷ್ಟ ಅನ್ನೋದು.. ಎಲ್ಲ ಮಿಸ್ ಮಾಡ್ಕೊಂಡಿದ್ರಿ ಅಂತ ಗೊತ್ತು..
* * * *
ಮಿತ್ರೊ…. ನಾನು ತೈವಾನ್ ಇಂದ ತರ್ಸಿರೋ ಇಂಪೋರ್ಟೆಡ್ ಅಣಬೆ ತಿನ್ನೋದು.. ಯಾರೋ ಕಿಡಿಗೇಡಿಗಳು ನಾನು ಭಾಷಣ ಪ್ರಾರಂಭ ಮಾಡೋಕು ಮುಂಚೆ ಕೊಡೈ ಕನಲ್ ಅಣೆಬೆ ಸೇರ್ಸಿ ಕೊಡ್ತಿದ್ದಾರೆ ಅನ್ಸುತ್ತೆ.. ಅದಕ್ಕೆ ನಾನೇನು ಮಾತಾಡ್ತಾ ಇದ್ದೀನಿ ಅಂಥ ನಂಗೆ ಗೋತೈತಿಲ್ಲ.. ಹಂಗೆ ನಮ್ಮ ಈಶ್ವರಪ್ಪ ಹೇಳ್ದಂಗೆ ಒಂದ್ ಫ್ಲೋ ನಲ್ಲಿ ಬಾಯಿಗೆ ಬಂದದ್ದು ಸುಳ್ಳೋ ಪೊಳ್ಳೋ ಜೋರಾಗಿ ಹೇಳ್ಬಿಡ್ತೀನಿ.. ಆ ಕಿಡಿಗೇಡಿಗಳನ್ನು ಹಿಡಿಯಲು ನನ್ನ ಗೆಲ್ಲಿಸಿ…
* * * *
ಮಿತ್ರೊ…. ನಾನೀಗ ನೇಪಾಳದ ಮುಕ್ತಿನಾಥ ದೇವಸ್ಥಾನದಲ್ಲಿದ್ದೀನಿ.. ಇಲ್ಲಿ ಧಾರ್ಮಿಕ ಡಿಪ್ಲೊಮಾಸಿ ಮುಗಿಸಿ ಮೌಂಟ್ ಎವರೆಸ್ಟ್ ಹತ್ತಲು ಯೋಚಿಸ್ತಿದ್ದೀನಿ.. ಕಾಂಗ್ರೆಸ್ನವರು, ಮೌಂಟ್ ಎವರೆಸ್ಟ್ ಈವರೆಗೂ ಹತ್ತದೆ ಅದನ್ನು ಅವಮಾನ ಮಾಡಿದ್ದಾರೆ..

– ಭರತ್ ಹೆಬ್ಬಾಳ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...