ಪ್ರಧಾನಿ ಮೋದಿ ಅಂಫಾನ್ ಪೀಡಿತ ಬಂಗಾಳ ಮತ್ತು ಒಡಿಶಾ ರಾಜ್ಯಗಳಿಗೆ ಚಂಡಮಾರುತದಿಂದಾದ ಹಾನಿಯ ವೈಮಾನಿಕ ಸಮೀಕ್ಷೆ ಮಾಡಲು ಇಂದು ತೆರಳಿದ್ದಾರೆ.
ಕೊರೊನಾ ಬಿಕ್ಕಟ್ಟಿನ 83 ದಿನಗಳ ನಂತರ ಪ್ರಧಾನಿ ಮೋದಿಯವರ ಮೊದಲ ಪ್ರವಾಸ ಇದಾಗಿದೆ. ಅವರ ಕೊನೆಯ ಪ್ರವಾಸ ಫೆಬ್ರವರಿ 29 ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮತ್ತು ಚಿತ್ರಕೂಟ್ ಗೆ ಆಗಿತ್ತು. ಇಂದು ಪ್ರಧಾನಿ ಅಂಫಾನ್ ಪೀಡಿತ ಕೋಲ್ಕತಾ ಮತ್ತು ಪಶ್ಚಿಮ ಬಂಗಾಳದ 24 ಉತ್ತರ ಪರಗಣ ಜಿಲ್ಲೆಗಳಿಗೆ ಹೋಗಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
“ಅವರು ವೈಮಾನಿಕ ಸಮೀಕ್ಷೆಗಳನ್ನು ನಡೆಸುತ್ತಾರೆ ಮತ್ತು ಪರಿಶೀಲನಾ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಪರಿಹಾರ ಮತ್ತು ಪುನರ್ವಸತಿ ವಿಷಯಗಳ ಬಗ್ಗೆ ಚರ್ಚಿಸಲಾಗುವುದು” ಎಂದು ಪ್ರಧಾನ ಮಂತ್ರಿ ಕಚೇರಿ ಗುರುವಾರ ರಾತ್ರಿ ಟ್ವೀಟ್‌ನಲ್ಲಿ ತಿಳಿಸಿದೆ.
ಅತ್ಯಂತ ತೀವ್ರವಾದ ಚಂಡಮಾರುತವು ದುರ್ಬಲಗೊಂಡು ಬಾಂಗ್ಲಾದೇಶಕ್ಕೆ ಸ್ಥಳಾಂತರಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
‘ಅಂಫಾನ್’ ಚಂಡಮಾರುತದಿಂದ ರಾಜ್ಯದಲ್ಲಿ ಸುಮಾರು 76 ಮಂದಿ ಮೃತಪಟ್ಟಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತ, “ರಾಜ್ಯದಲ್ಲಿ ‘ಅಂಫಾನ್’ ಚಂಡಮಾರುತದಿಂದ 76 ಮಂದಿ ಮೃತಪಟ್ಟಿದ್ದಾರೆ. ಇದರಿಂದಾಗಿ ಮೃತಪಟ್ಟವರ ಕುಟುಂಬಕ್ಕೆ 2.5 ಲಕ್ಷ ರೂ. ಪರಿಹಾರ ಧನ ಘೋಷಿಸಲಾಗಿದೆ , ಚಂಡಮಾರುತ ಪೀಡಿತ ಪ್ರದೇಶಕ್ಕೆ ಪ್ರಧಾನಿಯವರು ಭೇಟಿ ನೀಡಿ ಹಾನಿಗಳ ಬಗ್ಗೆ ಪರಿಶೀಲನೆ ನಡೆಸಬೇಕು” ಎಂದು ಹೇಳಿದ್ದಾರೆ.
“ಸುಂದರ್‌ಬನ್ಸ್‌ಗೆ ಭೇಟಿ ನೀಡುವಂತೆ ನಾನು ಪ್ರಧಾನ ಮಂತ್ರಿಯನ್ನು ಕೇಳಿದ್ದೇನೆ. ಈ ಬಿಕ್ಕಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡೋಣ… ಅಮಿತ್ ಶಾ ಅವರು ಇಂದು ಮಧ್ಯಾಹ್ನ ಕರೆ ಮಾಡಿ ಕೇಂದ್ರವು ಸಂಪೂರ್ಣ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದರು” ಎಂದು ಮಮತಾ ಹೇಳಿದ್ದರು.
ಘಟನೆಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಟ್ವೀಟ್ ಮಾಡಿ “ಈ ಸವಾಲಿನ ಸಮಯದಲ್ಲಿ ಚಂಡಮಾರುತದಿಂದ ಪೀಡಿತರಾದವರಿಗೆ ಸಹಾಯ ಮಾಡಲು ಇಡೀ ರಾಷ್ಟ್ರ ಬಂಗಾಳದ ಜೊತೆ ನಿಂತಿದೆ. ರಾಜ್ಯದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದೆ. ಯಥಾಸ್ಥಿತಿಗಾಗಿ ಪ್ರಯತ್ನಗಳು ನಡೆಯುತ್ತಿವೆ” ಎಂದು ಹೇಳಿದ್ದರು.
NDRF teams are working in the cyclone affected parts. Top officials are closely monitoring the situation and also working in close coordination with the West Bengal government.
No stone will be left unturned in helping the affected.
— Narendra Modi (@narendramodi) May 21, 2020
ಗಂಟೆಗೆ 185 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸುತ್ತಿದೆ. ಇದರಿಂದಾಗಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದುದರಿಂದ ವಿದ್ಯುದಾಘಾತದಿಂದಾಗಿ ಹೆಚ್ಚಿನವರು ಸಾವನ್ನಪ್ಪಿದ್ದಾರೆ ಎಂದು ಮಮತ ಬ್ಯಾನರ್ಜಿ ಹೇಳಿದ್ದಾರೆ. ಮೃತಪಟ್ಟ 72 ಜನರಲ್ಲಿ 15 ಮಂದಿ ಕೋಲ್ಕತ್ತಾದವರು ಎನ್ನಲಾಗಿದೆ.
ಚಂಡಮಾರುತದಿಂದಾಗಿ 1 ಲಕ್ಷ ಕೋಟಿ ರೂ.ಗಳ ನಷ್ಟವಾಗಬಹುದು ಎಂದು ಬುಧವಾರ ಸಂಜೆ ಮುಖ್ಯಮಂತ್ರಿ ಮಮತ ಹೇಳಿಕೊಂಡಿದ್ದರು.
ಇಂದು ಪ್ರಧಾನಿ ಮೋದಿ ಮೊದಲಿಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದು, ಮಧ್ಯಾಹ್ನ ನಂತರ ಒಡಿಶಾಗೆ ತೆರಳುತ್ತಾರೆ ಎಂದು ಪಿಟಿಐ ವರದಿ ಮಾಡಿದೆ.
ಓದಿ: ಅಂಫಾನ್ ಚಂಡಮಾರುತವನ್ನು ತಾಂಡವ ನೃತ್ಯ ಎಂದ ಮಮತ ಬ್ಯಾನರ್ಜಿ.
ಓದಿ: ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ?


