ಭಾರತದ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 30 ಮತ್ತು ಅಕ್ಟೋಬರ್ 31 ರಂದು ಜಿ -20 ಶೃಂಗಸಭೆಯಲ್ಲಿ ಭಾಗವಹಿಸಲು ರೋಮ್‌ಗೆ ತೆರಳಲಿದ್ದಾರೆ. ಶೃಂಗಸಭೆಗೂ ಮೊದಲು ಅಕ್ಟೋಬರ್ 29 ರಂದು ಅವರು ಜಾಗತಿಕ ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಶ್ರದ್ಧಾ ಕೇಂದ್ರವಾದ ವ್ಯಾಟಿಕನ್ ಸಿಟಿಯ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಅದಕ್ಕಾಗಿ ಅವರು ರೋಮ್‌ಗೆ ಅಕ್ಟೋಬರ್ 28 ರಂದೇ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮೋದಿ ಪ್ರವಾಸ ವಿರೋಧಿಸಿ ವೈಟ್ ಹೌಸ್ ಮುಂದೆ ಅನಿವಾಸಿ ಭಾರತೀಯರ ಪ್ರತಿಭಟನೆ
ರೋಮ್‌ನ ಎರಡು ದಿನಗಳ ಜಿ-20 ಶೃಂಗಸಭೆಯ ನಂತರ, ಹವಾಮಾನ ಬದಲಾವಣೆಯ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು COP2 26 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಸ್ಕಾಟ್ಲೆಂಡ್‌ನ ಗ್ಲಾಸ್ಗೋಗೆ ತೆರಳಲಿದ್ದಾರೆ.
ಹವಾಮಾನ ಬದಲಾವಣೆ ಶೃಂಗಸಭೆಯ ಹಿನ್ನೆಲೆಯಲ್ಲಿ, ಸ್ಕಾಟ್ಲೆಂಡ್ ಭೇಟಿಯ ಸಂದರ್ಭ ಪ್ರಧಾನಿ ಮೋದಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗೆ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಹವಾಮಾನ ಬದಲಾವಣೆಯು ಈ ಸಮಯದಲ್ಲಿ ಜಗತ್ತು ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ. COP 26 ಕ್ಕಿಂತ ಮುಂಚಿತವಾಗಿ ಪ್ರಧಾನಿ ಮೋದಿ ಸಂಬಂಧಪಟ್ಟ ಉನ್ನತ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದು, ಅವರು ಭಾರತದ ಹವಾಮಾನ ನಿಧಿ, ಕಾರ್ಬನ್ ಟ್ರೇಡಿಂಗ್ ವ್ಯವಸ್ಥೆಗಳು ಮತ್ತು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಪರಿಹಾರಕ್ಕಾಗಿ ಲಾಬಿ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ: ಅತಿಹೆಚ್ಚು ವಿದೇಶಿ ಪ್ರವಾಸ ಮಾಡಿದ್ದು ಮೋದಿಯಲ್ಲ, ಮನಮೋಹನ್ ಸಿಂಗ್: ಅಮಿತ್ ಶಾ ಹೇಳಿದ್ದು ನಿಜವೇ?


