Homeಮುಖಪುಟಮೋದಿ ಮನ್ ಕಿ ಬಾತ್ ಸಮಯದಲ್ಲಿ ತಟ್ಟೆ ಬಾರಿಸಿ: ಹೋರಾಟನಿರತ ರೈತರ ಕರೆ

ಮೋದಿ ಮನ್ ಕಿ ಬಾತ್ ಸಮಯದಲ್ಲಿ ತಟ್ಟೆ ಬಾರಿಸಿ: ಹೋರಾಟನಿರತ ರೈತರ ಕರೆ

"ರೈತ ಹೋರಾಟ ಬೆಂಬಲಿಸಿ ನಾಳೆಯಿಂದ 11 ಜನರ ತಂಡ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಿ. ನಂತರ ಅದನ್ನು ಮತ್ತೆ 11 ಜನರ ಮುಂದುವರೆಸುವುದು. ಈಗೆ ರಿಲೇ ಉಪವಾಸ ಸತ್ಯಾಗ್ರಹ ಕೈಗೊಳ್ಳೋಣ"

- Advertisement -
- Advertisement -

ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಹೋರಾಟ ನಡೆಸುತ್ತಿರುವ ರೈತ ಮುಖಂಡರು ಹೋರಾಟವನ್ನು ತೀವ್ರಗೊಳಿಸಲು ಡಿಸೆಂಬರ್ 27 ರಂದು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್ ನಡೆಸುವ ವೇಳೆ ದೇಶಾದ್ಯಂತ ಮನೆಯಿಂದ ಹೊರಬಂದು ತಟ್ಟೆ ಬಾರಿಸುವಂತೆ ಕರೆ ನೀಡಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಜಗ್ಜಿತ್ ಸಿಂಗ್ ದಾಲೆವಾಲಾ ಮಾತನಾಡಿ “ಕೊರೊನಾ ಆರಂಭದ ಸಮಯದಲ್ಲಿ ಪ್ರಧಾನಿ ಮೋದಿ ನಮಗೆಲ್ಲಾ ತಟ್ಟೆ ಬಾರಿಸುವಂತೆ ಕರೆ ನೀಡಿದ್ದರು. ಈಗ ಅವರು ಮನ್‌ ಕಿ ಬಾತ್ ಆಡುವ ವೇಳೆ, ಅವರು ಮಾತು ಮುಗಿಸುವವರೆಗೂ ನಾವು ತಟ್ಟೆ ಬಾರಿಸಿ ಅವರನ್ನು ವಿರೋಧಿಸೋಣ” ಎಂದು  ತಿಳಿಸಿದ್ದಾರೆ.

ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಮಾತನಾಡಿ “ರೈತ ಹೋರಾಟ ಬೆಂಬಲಿಸಿ ನಾಳೆಯಿಂದ 11 ಜನರ ತಂಡ 24 ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಿ. ನಂತರ ಅದನ್ನು ಮತ್ತೆ 11 ಜನರ ಮುಂದುವರೆಸುವುದು. ಈಗೆ ರಿಲೇ ಉಪವಾಸ ಸತ್ಯಾಗ್ರಹ ಕೈಗೊಳ್ಳೋಣ” ಎಂದು ಕರೆ ನಿಡಿದ್ದಾರೆ.

ಪತ್ರಿಕಾಗೋಷ್ಟಿಯ ಲೈವ್ ನೋಡಿ.


ಇದನ್ನೂ ಓದಿ: ಗೋದಿ ಮೀಡಿಯಾಗಳಿಗೆ ಸೆಡ್ಡು: ಸ್ವಂತ ಚಾನೆಲ್ ಆರಂಭಿಸಿದ ದೆಹಲಿಯ ಹೋರಾಟನಿರತ ರೈತರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...