ದೆಹಲಿ V/s ಉತ್ತರ ಪ್ರದೇಶ: ಸರ್ಕಾರಿ ಶಾಲೆಗಳ ವಾಸ್ತವತೆ ಬಿಚ್ಚಿಡಲು ಆಪ್ ಅಭಿಯಾನ
PC:[email protected]

2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಆಮ್ ಆದ್ಮಿ ಪಕ್ಷ ಈಗಿನಿಂದಲೇ ಹೊಸ ಹೊಸ ಪ್ರಯೋಗಗಳ ಮೂಲಕ ಉತ್ತರ ಪ್ರದೇಶದಲ್ಲಿ ನೆಲೆಗೊಳ್ಳಲು ಪ್ರಯತ್ನಿಸುತ್ತಿದೆ. ಆಪ್ ನಾಯಕ ಅರವಿಂದ್ ಕೇಜ್ರೀವಾಲ್ ಇಂತಹದೊಂದು ಘೋಷಣೆ ಹೊರಡಿಸುತ್ತಿದ್ದಂತೆ ಉಭಯ ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ. ಇದು ಈಗ ಶಾಲೆಗಳ ಅಭಿವೃದ್ಧಿಗೆ ಬಂದು ನಿಂತಿದ್ದು, ಆಪ್ ಸರ್ಕಾರಿ ಶಾಲೆಗಳ ಬಗ್ಗೆ ಅಭಿಯಾನವನ್ನೇ ಆರಂಭಿಸಿದೆ.

ಚುನಾವಣೆಯಲ್ಲಿ ಸ್ಫರ್ಧಿಸುವುದಾಗಿ ಘೋಷಿಸಿದ್ದ ಅರವಿಂದ್ ಕೇಜ್ರೀವಾಲ್, ಜೊತೆಗೆ ದೆಹಲಿ ಮತ್ತು ಉತ್ತರ ಪ್ರದೇಶದ ಶಾಲೆಗಳನ್ನು ಹೋಲಿಸಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಉತ್ತರ ಪ್ರದೇಶದ ಪ್ರಾಥಮಿಕ ಶಿಕ್ಷಣ ಸಚಿವ ಸತೀಶ್ ಚಂದ್ರ ದ್ವಿವೇದಿ, ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಉತ್ತರ ಪ್ರದೇಶದ ಶಾಲೆಗಳಿಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು.

ಸತೀಶ್ ದ್ವಿವೇದಿ ಸೇರಿದಂತೆ ಉತ್ತರ ಪ್ರದೇಶದ ಹಲವಾರು ಮಂತ್ರಿಗಳು ಎಸೆದ ಸವಾಲನ್ನು ತಾವು ಒಪ್ಪಿಕೊಂಡಿದ್ದೇವೆ ಎಂದು ಸಿಸೋಡಿಯಾ ಹೇಳಿದ್ದಾರೆ. ಅಲ್ಲದೆ ದೆಹಲಿ ಸಚಿವರಿಗೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಲು ಮತ್ತು ಎರಡು ರಾಜ್ಯಗಳಲ್ಲಿನ ಶಿಕ್ಷಣ ಮತ್ತು ಶಾಲಾ ಸೌಲಭ್ಯಗಳ ಬಗ್ಗೆ ಚರ್ಚಿಸಲು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲೂ AAP ಸ್ಪರ್ಧೆ: ಕೇಜ್ರಿವಾಲ್ ಘೋಷಣೆ

Image
PC:[email protected] (ಉತ್ತರ ಪ್ರದೇಶದ ಸರ್ಕಾರಿ ಶಾಲೆಯೊಂದರ ಚಿತ್ರ)

ಈಗ #SelfieWithSarkaariSchool ಅಭಿಯಾನ ಆರಂಭಿಸಿರುವ ಆಪ್, ಉತ್ತರ ಪ್ರದೇಶದ ಶಾಲೆಗಳ ಚಿತ್ರಣವನ್ನು ಬಯಲಿಗೆಳೆಯುತ್ತಿದೆ. ಉತ್ತರ ಪ್ರದೇಶದ ಪಾಳುಬಿದ್ದ ಶಾಲೆಗಳು, ದನದ ಕೊಟ್ಟಿಗೆಗಳಾಗಿ ಬದಲಾಗಿರುವ ಶಾಲೆಗಳು, ಸ್ವಚ್ಛತೆ ಮಾಯವಾಗಿರುವ, ಸುಣ್ಣ-ಬಣ್ಣ ಕಾಣದೇ ಅದೇಷ್ಟೋ ವರ್ಷಗಳಾಗಿರುವ ಶಾಲೆಗಳ ಚಿತ್ರಗಳನ್ನು ಈ ಅಭಿಯಾನದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ’ಮೋದಿಯವರಂತೆ ಆಗಬೇಡಿ, ಮಾಸ್ಕ್ ಧರಿಸಿ’: ಮೋದಿ ವಿಡಿಯೋ ಟ್ರೋಲ್ ಮಾಡಿದ ಆಪ್

ಜನಸಂಖ್ಯೆ ಆಧಾರದಲ್ಲಿ ಮಕ್ಕಳ ಶಿಕ್ಷಣವನ್ನು ಹೊಲಿಕೆ ಮಾಡಿದ್ದ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾತಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇಬ್ಬರೂ ತಿರುಗೇಟು ನೀಡಿದ್ದಾರೆ.

ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಸಾಧ್ಯವಾಗದಿದ್ದರೆ ಅವರು ಅಧಿಕಾರ ಬಿಟ್ಟುಬಿಡಬೇಕು ಎಂದು ಮನೀಶ್ ಸಿಸೋಡಿಯಾ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ’ಈ ಹೋರಾಟ ಕೇವಲ ರೈತರದ್ದಲ್ಲ, ಎಲ್ಲಾ ದೇಶವಾಸಿಗಳದ್ದು’: ಭಾರತ್ ಬಂದ್ ಬೆಂಬಲಿಸಿದ ಆಪ್

ಸಿಸೋಡಿಯಾ ಮಾತಿಗೆ ಬೆಂಬಲ ನೀಡಿರುವ ಅರವಿಂದ್ ಕೇಜ್ರೀವಾಲ್ ಕೂಡ “ಜನಸಂಖ್ಯೆ 5 ಲಕ್ಷ ಅಥವಾ 5 ಕೋಟಿ ಆಗಿರಲಿ, ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಉಜ್ವಲ ಭವಿಷ್ಯವನ್ನು ನೀಡುವುದು ನಮ್ಮ ಸರ್ಕಾರಗಳ ಜವಾಬ್ದಾರಿಯಾಗಿದೆ” ಎಂದು ಹೇಳಿದ್ದಾರೆ.

ಆಪ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಆಪ್ ಮುಖಂಡರಷ್ಟೇ ಅಲ್ಲದೇ ಸಾರ್ವಜನಿಕರು ತಮ್ಮ ಊರುಗಳಲ್ಲಿನ ಸರ್ಕಾರಿ ಶಾಲಾ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿ ಹೀಗಿದೆ ಎಂದು ಹಲವು ನೆಟ್ಟಿಗರು ಪೋಟೋ ಶೇರ್‌ ಮಾಡಿದ್ದಾರೆ.

ಸದ್ಯ ಉತ್ತರ ಪ್ರದೇಶ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಪ್ ಸರ್ಕಾರ ದೆಹಲಿ ಶಾಲೆಗಳ ಜೊತೆಗೆ ಉತ್ತರ ಪ್ರದೇಶದ ಸರ್ಕಾರಿ ಶಾಲೆಗಳನ್ನು ಹೋಲಿಕೆ ಮಾಡುತ್ತಿದೆ. ಈ ಮೂಲಕ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಕ್ಷವನ್ನು ಆಯ್ಕೆ ಮಾಡಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತಿದೆ.


ಇದನ್ನೂ ಓದಿ: ಗೋವಾ ಜಿಲ್ಲಾ ಪಂಚಾಯಿತಿಯಲ್ಲಿ ಖಾತೆ ತೆರೆದ ಆಪ್: ಇದು ಕೇವಲ ಆರಂಭವಷ್ಟೇ ಎಂದ ಕೇಜ್ರಿವಾಲ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here