Homeಮುಖಪುಟಗುರುದ್ವಾರಕ್ಕೆ ಭೇಟಿ ನೀಡಿದ ಮೋದಿ : ’ಈ ನಾಟಕವೆಲ್ಲ ಬೇಡ’ ಎಂದ ನೆಟ್ಟಿಗರು!

ಗುರುದ್ವಾರಕ್ಕೆ ಭೇಟಿ ನೀಡಿದ ಮೋದಿ : ’ಈ ನಾಟಕವೆಲ್ಲ ಬೇಡ’ ಎಂದ ನೆಟ್ಟಿಗರು!

"ಗುರುವಿನ ಅನುಯಾಯಿಗಳು ಕೊರೆಯುವ ಚಳಿಯಲ್ಲಿ ರಸ್ತೆಯಲ್ಲಿದ್ದರೆ ನೀವು ಗುರುದ್ವಾರಕ್ಕೆ ಭೇಟಿ ನೀಡಿದ್ದನ್ನು, ಸ್ವತಃ ಗುರು ಕೂಡಾ ಕ್ಷಮಿಸಲಾರರು" ಎಂದು ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯಿದೆಗಳ ವಿರುದ್ದ ಕಳೆದ 25 ದಿನಗಳಿಂದ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಸಿಖ್‌ ಸಮುದಾಯವನ್ನು ಮನವೊಲಿಸುವುದಕ್ಕಾಗಿ ನವ ದೆಹಲಿಯಲ್ಲಿರುವ ರಕಬ್‌ ಗಂಜ್‌ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಖ್ ಗುರು ತೇಗ್‌ ಬಹದ್ದೂರ್‌ ಅವರ ಬಲಿದಾದನ ದಿನವಾದ ಇಂದು ಪ್ರಧಾನಿ ಮೋದಿ ಗುರುದ್ವಾರಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ್ದು, ಅದರ ಹಲವಾರು ಚಿತ್ರಗಳನ್ನು ತಮ್ಮ ಟ್ವಿಟ್ಟರ್‌‌ನಲ್ಲಿ ಹಾಕಿಕೊಂಡಿದ್ದಾರೆ. “ಗುರುದ್ವಾರ ರಕಬ್ ಗಂಜ್ ಸಾಹಿಬ್‌‌ನಲ್ಲಿರುವ ಶ್ರೀ ಗುರು ತೇಗ್ ಬಹದ್ದೂರ್‌‌ರಿಗೆ ಇಂದು ನಾನು ಗೌರವ ನಮನ ಸಲ್ಲಿಸಿದೆ. ಅವರು ಹಿಂದೂ ಧರ್ಮವನ್ನು ಉಳಿಸುವ ಸಲುವಾಗಿ ಹಲವಾರು ಕಾರ್ಯಗಳನ್ನು ಮಾಡಿದ್ದು, ಸಾಮರಸ್ಯದ ಸಂದೇಶ ನೀಡಿದ್ದಾರೆ. ಅವರ ಜೀವನದಲ್ಲಿ ಧೈರ್ಯ ಮತ್ತು ಸಹಾನುಭೂತಿ ಗುಣಗಳು ತುಂಬಿತ್ತು. ಅವರ ಹುತಾತ್ಮ ದಿನದಂದು ನಾನು ಅವರಿಗೆ ತಲೆಬಾಗುತ್ತೇನೆ” ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಗೋದಿ ಮೀಡಿಯಾಗಳಿಗೆ ಸೆಡ್ಡು: ಸ್ವಂತ ಚಾನೆಲ್ ಆರಂಭಿಸಿದ ದೆಹಲಿಯ ಹೋರಾಟನಿರತ ರೈತರು!

ಡಿಸೆಂಬರ್‌ 15 ರಂದು ಕೂಡಾ ಗುಜರಾತ್‌ನ ಕಚ್‌‌ನಲ್ಲಿ ಸಿಖ್‌ ಸಮುದಾಯದ ರೈತರ ನಿಯೋಗವನ್ನು ಮೋದಿ ಭೇಟಿಯಾಗಿದ್ದಾಗಿ ಮಾಧ್ಯಮಗಳು ವರದಿ ಮಾಡಿತ್ತು. ಆದರೆ ಅದು ರೈತರ ನಿಯೋಗವಾಗಿರದೆ ಬಿಜೆಪಿ ಕಾರ್ಯಕರ್ತರ ನಿಯೋಗ ಎಂದು ನ್ಯಾಷನಲ್ ಹೆರಾಲ್ಡ್‌ ತನಿಖಾ ವರದಿ ಮಾಡಿದೆ. ದೆಹಲಿಯ ಗಡಿಯ ಸುತ್ತಲೂ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಸಿಖ್ ಸಮುದಾಯದವರೇ ಹೆಚ್ಚಾಗಿ ಕಾಣುತ್ತಿರುವುದರಿಂದ ಪ್ರಧಾನಿ ಸಿಖ್ಖರನ್ನು ಮನವೊಲಿಸಲು ಪ್ರಯತ್ನಿಸುತ್ತದ್ದಾರೆ ಎಂದು ಹಲವಾರು ಜನರು ಆರೋಪಿಸಿದ್ದಾರೆ.

ರೈತರ ಹೋರಾಟ ದಿನೇ ದಿನೇ ತೀವ್ರಗೊಳ್ಳುತ್ತಿದ್ದು ಪ್ರಧಾನಿ ಮೋದಿ ಇದುವರೆಗೂ ತಮ್ಮ ನೂತನ ಕಾಯ್ದೆಯನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಆದರೆ ಪ್ರತಿಭಟನಾ ನಿರತ ರೈತರು ಕೃಷಿ ವಿರೋಧಿ ಕಾಯ್ದೆಯನ್ನು ರದ್ದು ಪಡಿಸಲೇಬೇಕು ಎಂದು ಪಟ್ಟುಹಿಡಿದಿದ್ದಾರೆ. ಪ್ರಧಾನಿ ಮೋದಿ ಗುರುದ್ವಾರಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ “ಗುರುವಿನ ಅನುಯಾಯಿಗಳು ಕೊರೆಯುವ ಚಳಿಯಲ್ಲಿ ರಸ್ತೆಯಲ್ಲಿದ್ದರೆ ನೀವು ಗುರುದ್ವಾರಕ್ಕೆ ಭೇಟಿ ನೀಡಿದ್ದನ್ನು, ಸ್ವತಃ ಗುರು ಕೂಡಾ ಕ್ಷಮಿಸಲಾರರು” ಎಂದು ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ‘ದೇಶಪ್ರೇಮಿ ಯುವಾಂದೋಲನ’

“ಸರ್, ದೇವರ ಸಂಬಂಧಿಗಳು ಕೊರೆಯುವ ಚಳಿಗಾಲದಲ್ಲಿ ಕುಳಿತಿದ್ದಾರೆ. ತಮ್ಮ ಅನುಯಾಯಿಗಳು ಮತ್ತು ಜನರು ಸಂತೋಷವಾಗಿರದೆ ಯಾವುದೇ ಗುರು ಕೂಡಾ ಸಂತೋಷವಾಗಿ ಇರುವುದಿಲ್ಲ. ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿ” ಎಂದು ಚಮನ್ ವರ್ಸ್‌ನೆ ಹೇಳಿದ್ದಾರೆ.

“ಎಲ್ಲಾ ಸಿಖ್ಖರು ನಿಮ್ಮೊಂದಿಗಿದ್ದಾರೆ ಎಂದು ಹೇಳಲು ಮತ್ತು ತೋರಿಸಲು ನೀವು ಪ್ರಯತ್ನಿಸುತ್ತಿದ್ದೀರಿ. ಆದರೆ ಸಿಖ್ ರೈತರು ರಸ್ತೆಯಲ್ಲಿ ನಿಂತು ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ದಯವಿಟ್ಟು ಕಾಯ್ದೆಯನ್ನು ಅಮಾನತುಗೊಳಿಸಿ ಹಾಗೂ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಅನೇಕ ರಾಜ್ಯಗಳ ರೈತರು ತಮ್ಮ ಮನಗೆ ಹೋಗಲು ಅನುಕೂಲ ಮಾಡಿ” ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟದ ಹುತಾತ್ಮರಿಗೆ ಇಂದು ಶ್ರದ್ಧಾಂಜಲಿ: ಇಲ್ಲಿವೆ ಪ್ರಮುಖ ಅಂಶಗಳು

ಅನಿಲ್ ಕಪೂರ್ ಎಂಬುವವರು‌, “ಮೋದಿಯವರೆ, ಟೈಮ್ ನಿಯತಕಾಲಿಕವು ನಿಮ್ಮನ್ನು ’ಡಿವೈಡ್ ಇನ್ ಚೀಫ್’ ಎಂದು ಕರೆದಿ‌ದ್ದು ಸರಿಯಾಗಿದೆ. ನೀವು ಸಿಖ್ ಸಮುದಾಯವನ್ನು ಎರಡು ಭಾಗಗಳಾಗಿ ವಿಂಗಡಿಸಲು ಪ್ರಯತ್ನಿಸುತ್ತಿದ್ದೀರಿ. ಪ್ರತಿಭಟಿಸುತ್ತಿರುವ ರೈತರನ್ನು ಪ್ರತ್ಯೇಕಿಸಲು ನೀವು ಬಯಸುತ್ತೀರಿ” ಎಂದು ಕಿಡಿಕಾರಿದ್ದಾರೆ.

“ಈ ನಾಟಕವೆಲ್ಲ ಬೇಡ. ರಕ್ತ, ಬೆವರು ಚೆಲ್ಲುವ ಮೂಲಕ ಉತ್ಪತ್ತಿಯಾಗುವ ಬೆಳೆಗೆ ಕನಿಷ್ಠ ಬೆಲೆ ಖಾತರಿಯ ಕಾನೂನು ಅಗತ್ಯವಿದೆ. ಗುರುವಿನ ಮಕ್ಕಳು ಕೊರೆಯುವ ಚಳಿಯಲ್ಲಿ ಸಾಯುತ್ತಿದ್ದಾರೆ ಮತ್ತು ನೀವು ಗುರುದ್ವಾರದಲ್ಲಿ ಚಿತ್ರೀಕರಣ ಮಾಡುತ್ತಿದ್ದೀರಿ. ದಿಕ್ಕಾರವಿದೆ. ರೈತರು ತಮ್ಮ ಬೆಳೆಗೆ ಕನಿಷ್ಠ ಬೆಲೆಯನ್ನಷ್ಟೇ ಕೇಳಿದ್ದಾರೆ, ವಜ್ರವನ್ನಲ್ಲ” ಎಂದು ಝಾಲಿಮ್ ಜಾಟ್ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಬಿಜೆಪಿ ಕಾರ್ಯಕರ್ತರ ಭೇಟಿ ಮಾಡಿದ್ದನ್ನು, ರೈತರೊಂದಿಗಿನ ಭೇಟಿಯೆಂದ ಮಾಧ್ಯಮಗಳು!

ಹೊಸ ದೆಹಲಿಯಿಂದ ಟಿ‌ಕ್ರೀ ಮತ್ತು ಸಿಂಘೂ ಗಡಿಗೆ ತೆರಳುವ ಗೂಗಲ್ ಮ್ಯಾಪ್‌‌ನ ಚಿತ್ರವನ್ನು ಹಾಕಿರುವ ಟ್ರಾಕ್ಟರ್‌ ಟು ಟ್ವಿಟ್ಟರ್‌ ಹ್ಯಾಂಡಲ್, “ನರೇಂದ್ರ ಮೋದಿ ನಿಮ್ಮಲ್ಲಿ ವಿನಮ್ರ ವಿನಂತಿ, ನಿಜವಾದ ರೈತರು ಗುಜರಾತ್‌ನಲ್ಲಿ ಅಥವಾ ಗುರುದ್ವಾರ ಸಾಹಿಬ್‌ನಲ್ಲಿಲ್ಲ. ದಯವಿಟ್ಟು ಈ ನಕ್ಷೆಯನ್ನು ಅನುಸರಿಸಿ ಬನ್ನಿ, ಅದು ನಿಮ್ಮ ಸಮಯವನ್ನು ಉಳಿಸುವುದಲ್ಲದೆ, ಪ್ರತಿಭಟಿಸುತ್ತಿರುವ ಅರ್ಧ ಮಿಲಿಯನ್ ರೈತರ ಬಳಿಗೆ ಕರೆದೊಯ್ಯುತ್ತದೆ” ಎಂದಿದ್ದಾರೆ.

“ಗುರು ಸಾಹಿಬ್ ಅನುಯಾಯಿಗಳನ್ನು ರಸ್ತೆಯಲ್ಲಿ ಬಿಟ್ಟು ನಿಮ್ಮ ಪ್ರದರ್ಶನ ಏನು? ಸಿಖ್ಖರ ವಿರುದ್ಧ ನಿಮ್ಮ ಪಿತೂರಿ ಸ್ಪಷ್ಟವಾಗಿದೆ” ಎಂದು ಆಯುಷ್ ಹೇಳಿದ್ದಾರೆ.

ಇದನ್ನೂ ಓದಿ: ‘ಈಗ ನಾನು ರೈತರೊಂದಿಗೆ ನಿಲ್ಲಲೇಬೇಕು’ – ಬಿಜೆಪಿ ಮುಖಂಡ ಚೌಧರಿ ಬಿರೇಂದರ್ ಸಿಂಗ್

“ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಜಿ ಅವರಿಂದ ನೀವು ಕಲಿತದ್ದನ್ನು ಅನುಸರಿಸಲು ಬಯಸಿದರೆ, ಅವರು ಕಾಶ್ಮೀರಿ ಪಂಡಿತರ ಉಳಿವಿಗಾಗಿ ದೆಹಲಿಗೆ ಬಂದಂತೆಯೇ, ದೆಹಲಿಯ ಬಾಗಿಲನ್ನು ಬಡಿದುಕೊಳ್ಳುತ್ತಿರುವ ರೈತರ ಬಳಿ ಹೋಗಿ. ಈ ಮೂಲಕ ಅವರಿಂದ ಏನಾದರೂ ಕಲಿಯಿರಿ. ಕೇವಲ ಚಿತ್ರಗಳನ್ನು ಪೋಸ್ಟ್ ಮಾಡುವುದರಿಂದ ಏನೂ ಆಗುವುದಿಲ್ಲ” ಎಂದು ಮನ್‌‌ಜೀತ್‌ ಸಿಂಗ್‌‌ ಹೇಳಿದ್ದಾರೆ.

ಇದನ್ನೂ ಓದಿ: ರೈತ ಹೋರಾಟ ತೀವ್ರ: 1 ಲಕ್ಷಕ್ಕೂ ಹೆಚ್ಚು ಗ್ರಾಮಗಳಲ್ಲಿ ‘ಶ್ರದ್ಧಾಂಜಲಿ ದಿವಸ್’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತೆಯರಿಗೆ ಸಹಾಯವಾಣಿ ಆರಂಭಿಸಿದ ಎಸ್‌ಐಟಿ

0
ಹಾಸನದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತರಿಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹಾಯವಾಣಿ ತೆರೆದಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, "ಹಾಸನ ಜಿಲ್ಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ...