ಹರಿಯಾಣ: ರೈತರ ಪ್ರತಿಭಟನೆಗೆ ಬೆಂಬಲ ನೀಡಿದ ಮತ್ತೊಬ್ಬ ಬಿಜೆಪಿ ಮುಖಂಡ

ಕೃಷಿ ಕಾನೂನುಗಳನ್ನು ವಿರೋಧಿಸಿ ಹರಿಯಾಣದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅವರೊಂದಿಗೆ ಧರಣಿ ಮಾಡುತ್ತಿರುವ ಬಿಜೆಪಿ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಚೌಧರಿ ಬಿರೇಂದರ್ ಸಿಂಗ್, “ರೈತರ ಪ್ರತಿಭಟನೆ ಈಗ ಎಲ್ಲರ ಆಂದೋಲನವಾಗಿದೆ” ಎಂದು ಹೇಳಿದ್ದಾರೆ.

ಸರ್ ಛೋಟು ರಾಮ್ ಮಂಚ್‌ನ ಸದಸ್ಯರು ಧರಣಿಯನ್ನು ಆಯೋಜಿಸಿದ್ದಾರೆ. ಬಿರೇಂದರ್ ಸಿಂಗ್ ಅವರು, ಸ್ವಾತಂತ್ರಪೂರ್ವ ಭಾರತದ ಝಾಟ್ ನಾಯಕ ಸರ್ ಚೋಟು ರಾಮ್ ಅವರ ಮೊಮ್ಮಗನಾಗಿದ್ದು, ರೈತರುನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ತಾನು ಉತ್ಸುಕನಾಗಿದ್ದೇನೆ ಹೇಳಿದ್ದಾರೆ.

ಇದನ್ನೂ ಓದಿ: ಹಿಂಸೆಯನ್ನೆ ಸ್ಥಾಯಿಯಾಗಿಟ್ಟುಕೊಂಡು ಕಾರುಣ್ಯವನ್ನು ಶೋಧಿಸಿದ ’ಕಿಮ್ ಕಿ ಡುಕ್’

“ನಾನು ರೈತರೊಂದಿಗೆ ನಿಲ್ಲುತ್ತೇನೆ. ಇದು ಪ್ರತಿಯೊಬ್ಬರ ಪ್ರತಿಭಟನೆಯಾಗಿದೆ. ಇದು ಸಮಾಜದ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ನಾನೀಗಲೇ ಕಣಕ್ಕೆ ಇಳಿದಿದ್ದೇನೆ. ಈಗ ಮುಂಚೂಣಿಯಲ್ಲಿ ನಿಲ್ಲದಿದ್ದರೆ ನಾನು ಕೇವಲ ರಾಜಕೀಯ ಮಾಡುತ್ತೇನೆ ಎಂದು ಜನರು ಭಾವಿಸುತ್ತಾರೆ” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಕೃಷಿ ಕಾನೂನಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದರೂ ಅವುಗಳೆಲ್ಲಾ ವಿಫಲವಾಗಿವೆ. ನಿನ್ನೆ ಈ ವಿಷಯವನ್ನು ಕೈಗೆತ್ತಿಕೊಂಡು ಸುಪ್ರೀಂ ಕೋರ್ಟ್, ಈ ಕುರಿತು ಶೋಧನೆ ಮಾಡಲು ಒಂದು ಸ್ವತಂತ್ರ ಸಮಿತಿಯನ್ನು ರಚಿಸುವಂತೆ ಕೇಂದ್ರಕ್ಕೆ ಸಲಹೆ ನೀಡಿತ್ತು.

ಇದನ್ನೂ ಓದಿ: BJP ಮತ್ತು RSS ಸಿಖ್ ಜನಾಂಗವನ್ನು ಮುಗಿಸಲು ಪ್ರಯತ್ನಿಸುತ್ತಿದೆ: ಸಿಖ್ ಧರ್ಮಗುರುವಿನ ಆತ್ಮಹತ್ಯಾ ಟಿಪ್ಪಣಿ

ಜೊತೆಗೆ ರೈತರು ತಮ್ಮ ಹೋರಾಟವನ್ನು ಹಿಂತೆಗೆದುಕೊಳ್ಳಬೇಕಾಗಿಲ್ಲ. ಹೋರಾಟ ಮಾಡುವುದು ಅವರ ಹಕ್ಕು ಎಂದು ಸುಪ್ರೀಂ ನಿನ್ನೆ ಹೇಳಿತ್ತು. ಆದರೆ ಸಾರ್ವಜನಿಕ ಜೀವನಕ್ಕೆ ತೊಂದರೆಯಾಗದಂತೆ, ಶಾಂತಿಯುತವಾಗಿ ಪ್ರತಿಭಟಿಸುವಂತೆ ಹೇಳಿತ್ತು.

ಈ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪಂಜಾಬ್‌ನ ಬಿಜೆಪಿ ಮುಖಂಡರೊಬ್ಬರು ತಮ್ಮ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದರು. ಈಗ ಹರಿಯಾಣದ ಬಿಜೆಪಿ ನಾಯಕ ಇದಕ್ಕೆ ಬೆಂಬಲ ಸೂಚಿಸಿದ್ದಾರೆ.


ಇದನ್ನೂ ಓದಿ: ನನ್ನ ಮಗ ರಾಜಾ ವೇಮುಲಾ ವಕೀಲನಾಗಿದ್ದು, ಜನರಿಗಾಗಿ ಹೋರಾಡಲಿದ್ದಾನೆ: ರಾಧಿಕ ವೇಮುಲಾ

LEAVE A REPLY

Please enter your comment!
Please enter your name here