Homeಕೊರೊನಾ12 ಕೋಟಿ ಮೌಲ್ಯದ ಕಾರು ಖರೀದಿ: ಮೋದಿ ತಮ್ಮನ್ನು ತಾವು ಫಕೀರ ಎಂದು ಕರೆದುಕೊಳ್ಳಬಾರದು -...

12 ಕೋಟಿ ಮೌಲ್ಯದ ಕಾರು ಖರೀದಿ: ಮೋದಿ ತಮ್ಮನ್ನು ತಾವು ಫಕೀರ ಎಂದು ಕರೆದುಕೊಳ್ಳಬಾರದು – ಸಂಜಯ್ ರಾವುತ್

- Advertisement -
- Advertisement -

“ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬೆಂಗಾವಲಿನಲ್ಲಿ “12 ಕೋಟಿ” ಮೌಲ್ಯದ ಕಾರನ್ನು ಹೊಂದಿದ್ದು, ತಮ್ಮನ್ನು ತಾವು ‘ಫಕೀರ’ ಎಂದು ಕರೆದುಕೊಳ್ಳಬಾರದು” ಎಂದು ಶಿವಸೇನೆಯ ಸಂಸದ ಸಂಜಯ್‌ ರಾವುತ್ ಭಾನುವಾರ ಹೇಳಿದ್ದಾರೆ.

ಶಿವಸೇನೆಯ ಮುಖವಾಣಿ ಸಾಮ್ನಾದ ತಮ್ಮ ಸಾಪ್ತಾಹಿಕ ಅಂಕಣ ’ರೋಖ್‌ಥೋಕ್‌’ದಲ್ಲಿ ಈ ಕುರಿತು ಬರೆದಿರುವ ಅವರು, ಜವಾಹರಲಾಲ್ ನೆಹರೂ ಯಾವಾಗಲೂ ದೇಶೀಯ ನಿರ್ಮಿತ ಕಾರನ್ನು ಬಳಸುತ್ತಿದ್ದದ್ದು ಮತ್ತು ಇಂದಿರಾ ಗಾಂಧಿ ಅವರು ತಮ್ಮ ಜೀವ ಬೆದರಿಕೆಯ ಹೊರತಾಗಿಯೂ ತಮ್ಮ ಭದ್ರತಾ ಸಿಬ್ಬಂದಿಯನ್ನು ಬದಲಾಯಿಸದಿದ್ದಕ್ಕಾಗಿ ಹೊಗಳಿದ್ದಾರೆ.

“ಡಿಸೆಂಬರ್ 28 ರಂದು ಮಾಧ್ಯಮಗಳು ಪ್ರಧಾನಿ ಮೋದಿಯವರ 12 ಕೋಟಿ ರೂಪಾಯಿಯ ಕಾರಿನ ಚಿತ್ರಗಳನ್ನು ವರದಿ ಮಾಡಿವೆ. ತನ್ನನ್ನು ತಾನು ಫಕೀರ್, ಪ್ರಧಾನ ಸೇವಕ ಎಂದು ಕರೆದುಕೊಳ್ಳುವ ವ್ಯಕ್ತಿ ವಿದೇಶಿ ನಿರ್ಮಿತ ಕಾರನ್ನು ಬಳಸುತ್ತಾರೆ” ಎಂದು ರಾವುತ್ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: 12 ಕೋಟಿ ಮೌಲ್ಯದ ಪ್ರಧಾನಿ ಮೋದಿಯವರ ಹೊಸ ಕಾರು: ವಿಶೇಷತೆಗಳು ಇಲ್ಲಿವೆ

“ಪ್ರಧಾನಿಯವರ ಭದ್ರತೆ ಮತ್ತು ಸೌಕರ್ಯಗಳು ಮುಖ್ಯ, ಆದರೆ ಇನ್ನು ಮುಂದೆ, ಪ್ರಧಾನ ಸೇವಕರು ತಾನು ಫಕೀರ (ಸನ್ಯಾಸಿ) ಎಂದು ಪುನರುಚ್ಚರಿಸಬಾರದು. ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟ್-ಅಪ್ ಇಂಡಿಯಾ’ ನಂತಹ ‘ಸ್ವದೇಶಿ’ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ ಮೋದಿ ಅವರು ವಿದೇಶಿ ಉತ್ಪಾದನೆಯ ಕಾರನ್ನು ಬಳಸುತ್ತಿದ್ದಾರೆ” ಎಂದು ರಾಜ್ಯಸಭಾ ಸದಸ್ಯ ರಾವುತ್ ಹೇಳಿದ್ದಾರೆ.

ಜವಾಹರಲಾಲ್ ನೆಹರೂ ಅವರನ್ನು ಶ್ಲಾಘಿಸಿರುವ ಶಿವಸೇನೆಯ ವಕ್ತಾರ ರಾವುತ್, ’ದೇಶ ವಿಭಜನೆಯ ನಂತರ ದೇಶದ ಮೊದಲ ಪ್ರಧಾನಿಯವರು ಭದ್ರತಾ ಬೆದರಿಕೆಯ ನಡುವೆಯೂ ಯಾವಾಗಲೂ ಭಾರತೀಯ ನಿರ್ಮಿತ ಅಂಬಾಸಿಡರ್ ಕಾರನ್ನು ಬಳಸುತ್ತಿದ್ದರು’ ಎಂದಿದ್ದಾರೆ.

’ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಮ್ಮ ಜೀವ ಬೆದರಿಕೆಯ ಹೊರತಾಗಿಯೂ ತಮ್ಮ ಭದ್ರತೆಗಾಗಿ ನಿಯೋಜಿಸಲಾದ ಸಿಖ್ ಭದ್ರತಾ ಸಿಬ್ಬಂದಿಯನ್ನು ಬದಲಾಯಿಸಲಿಲ್ಲ. ಅಲ್ಲದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಮಿಳುನಾಡಿನಲ್ಲಿ ಜನಸಂದಣಿಯೊಂದಿಗೆ ಬೆರೆತು ಎಲ್‌ಟಿಟಿಇಯಿಂದ ಕೊಲ್ಲಲ್ಪಟ್ಟರು’ ಎಂದು ಹೇಳಿದ್ದಾರೆ.

ಅತ್ಯಧಿಕವಾಗಿ ನವೀಕೃತಗೊಂಡಿರುವ ಹೊಸ ಮರ್ಸಿಡಿಸ್-ಮೇಬ್ಯಾಕ್ S 650 ಗಾರ್ಡ್ (Mercedes-Maybach S 650 Guard) ಕಾರನ್ನು ಪ್ರಧಾನಿ ನರೇಂದ್ರ ಮೋದಿ ಈಗ ಬಳಸುತ್ತಿದ್ದಾರೆ. ಇದು ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್‌ಗಿಂತ ಉತ್ತಮವಾಗಿ ನವೀಕರಣಗೊಂಡಿದೆ.

ಈ ಕಾರಿನ ಬೆಲೆ 12 ಕೋಟಿ ರೂಪಾಯಿಯಾಗಿದ್ದು, ವಿಪಕ್ಷಗಳು ಸೇರಿದಂತೆ ನೆಟ್ಟಿಗರು ಕೊರೊನಾ ಲಾಕ್‌ಡೌನ್‌‌ನಿಂದ ಜನ ಪರದಾಡಿ, ಈಗಲೂ ಜೀವನ ಕಟಟಿಕೊಳ್ಳು ಒದ್ದಾಡುತ್ತಿದ್ದಾರೆ. ಹೊಸ ಸೋಂಕು ದೇಶವನ್ನು ಆವರಿಸುತ್ತಿರುವ ಹೊತ್ತಿನಲ್ಲಿ ಪ್ರಧಾನಿಯವರು ಇಷ್ಟು ದುಂದುವೆಚ್ಚ ಮಾಡಬಹುದೇ ಎಂದು ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ: 12 ಕೋಟಿ ಮೌಲ್ಯದ ಪ್ರಧಾನಿ ಮೋದಿ ಕಾರು: ಟ್ವಿಟರ್‌ನಲ್ಲಿ ’ಬ್ರಾಂಡೆಡ್ ಫಕೀರ್‌’ ಟ್ರೆಂಡ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ಶಿಫಾರಸು ಮಾಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

0
ನಿಷೇಧಿತ ಭಯೋತ್ಪಾದಕ ಸಂಘಟನೆ 'ಸಿಖ್ಸ್ ಫಾರ್ ಜಸ್ಟೀಸ್' ನಿಂದ ತಮ್ಮ ಪಕ್ಷಕ್ಕೆ ದೇಣಿಗೆ ಪಡೆದ ಆರೋಪದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಎನ್ಐಎ ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ...