Homeಮುಖಪುಟ12 ಕೋಟಿ ಮೌಲ್ಯದ ಪ್ರಧಾನಿ ಮೋದಿಯವರ ಹೊಸ ಕಾರು: ವಿಶೇಷತೆಗಳು ಇಲ್ಲಿವೆ

12 ಕೋಟಿ ಮೌಲ್ಯದ ಪ್ರಧಾನಿ ಮೋದಿಯವರ ಹೊಸ ಕಾರು: ವಿಶೇಷತೆಗಳು ಇಲ್ಲಿವೆ

- Advertisement -
- Advertisement -

ರೇಂಜ್ ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್‌ಗಿಂತ ಅತ್ಯಧಿಕವಾಗಿ ನವೀಕೃತಗೊಂಡಿರುವ ಹೊಸ ಮರ್ಸಿಡಿಸ್-ಮೇಬ್ಯಾಕ್ S 650 ಗಾರ್ಡ್ (Mercedes-Maybach S 650 Guard) ಕಾರನ್ನು ಪ್ರಧಾನಿ ನರೇಂದ್ರ ಮೋದಿ ಈಗ ಬಳಸುತ್ತಿದ್ದಾರೆ.

ಇತ್ತೀಚೆಗೆ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಸ್ವಾಗತಿಸಲು ಆಗಮಿಸಿದಾಗ ಶಸ್ತ್ರಸಜ್ಜಿತ ಮರ್ಸಿಡಿಸ್-ಮೇಬ್ಯಾಕ್ S 650 ಕಾಣಿಸಿಕೊಂಡಿದ್ದಾರೆ. ಈ ಕಾರು ಈಗ ಎಲ್ಲರ ಗಮನ ಸೆಳೆದಿದೆ.

ಮೇಬ್ಯಾಕ್ S 650 ಗಾರ್ಡ್ VR10-ಮಟ್ಟದ ರಕ್ಷಣೆ ನೀಡುತ್ತದೆ. ಅಂದರೆ ಅತ್ಯುನ್ನತ ಮಟ್ಟದ ಶಸ್ತ್ರಸಜ್ಜಿತ ರಕ್ಷಣೆಯನ್ನು ನೀಡುತ್ತದೆ. ಇದರ ನವೀಕರಿಸಿದ ಕಿಟಕಿಗಳು ಮತ್ತು ಕಾರ್‌ ಬಾಡಿ ಗುಂಡುಗಳ ದಾಳಿ ಮತ್ತು AK-47 ರೈಫಲ್‌ಗಳಿಂದ ನಡೆಯಬಹುದಾದ ಆಕ್ರಮಣವನ್ನು ತಡೆದುಕೊಳ್ಳುತ್ತದೆ.

ಇದನ್ನೂ ಓದಿ: ಚಂಡೀಗಢ ಚುನಾವಣೆ: ವಿವಾದಿತ ಕೃಷಿ ಕಾಯ್ದೆಗಳ ರದ್ದುಗೊಳಿಸಿದ ಬಳಿಕ ಬಿಜೆಪಿಗೆ ಮೊದಲ ಮುಖಭಂ

ಸ್ಫೋಟಕ ನಿರೋಧಕ ವಾಹನ (ERV) 2010 ರೇಟಿಂಗ್ ಪಡೆದಿರುವ ಈ ಕಾರು ಸ್ಫೋಟಗಳಂಥ ಘಟನೆ ನಡೆದಾಗ ಹೆಚ್ಚಿನ ಪ್ರತಿರೋಧಕ ಒಡ್ಡುತ್ತದೆ. ಕಿಟಕಿಗಳು ಒಳಭಾಗದಲ್ಲಿ ಪಾಲಿಕಾರ್ಬೊನೇಟ್ ಲೇಪನವನ್ನು ಹೊಂದಿವೆ. ಕಾರಿನ ಒಳಭಾಗವು ನೇರ ಸ್ಫೋಟದಿಂದ ಒಳಗಿರುವವರನ್ನು ರಕ್ಷಿಸಲು ಹೆಚ್ಚು ಶಸ್ತ್ರಸಜ್ಜಿತವಾಗಿದೆ. ಗ್ಯಾಸ್ ದಾಳಿಯ ಸಂದರ್ಭದಲ್ಲಿ ಕ್ಯಾಬಿನ್ ಪ್ರತ್ಯೇಕ ಗಾಳಿಯ ಪೂರೈಕೆಯನ್ನು ಸಹ ನೀಡುತ್ತದೆ.

ಪ್ರಧಾನಿ ನರೇಂದ್ರ ಮೋದಿ ಬಳಸುತ್ತಿರುವ ಈ ಕಾರು 6.0-ಲೀಟರ್ ಸಾಮರ್ಥ್ಯದ ಟ್ವಿನ್-ಟರ್ಬೊ V12 ಎಂಜಿನ್‌ನಿಂದ ಚಾಲಿತವಾಗುತ್ತದೆ. ಗಂಟೆಗೆ ಇದರ ಗರಿಷ್ಠ ವೇಗ 160 km. ಕಾರು ವಿಶೇಷವಾದ ರನ್-ಫ್ಲಾಟ್ ಟೈರ್‌ಗಳನ್ನು ಹೊಂದಿದೆ. ಟೈರ್‌ಗಳಿಗೆ ಹಾನಿಯಾದರೆ ಅಥವಾ ಗಾಳಿ ಹೋಗಿ ಪಂಕ್ಚರ್ ಆದರೂ ಫ್ಲ್ಯಾಟ್ ಟೈರ್‌ಗಳಲ್ಲಿ ಚಲಿಸುವ ಮೂಲಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುತ್ತದೆ. ಈ ಕಾರಿನ ಬೆಲೆ 12 ಕೋಟಿ ರೂಪಾಯಿ.

ಮರ್ಸಿಡೆಸ್-ಮೇಬ್ಯಾಕ್ ಎಸ್600 ಗಾರ್ಡ್ ವಾಹನವು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾಗಿತ್ತು. ಆಗ ಅದರ ಬೆಲೆ 10.5 ಕೋಟಿಯಿತ್ತು. ಈಗ ಪ್ರಧಾನಿ ಬಳಸುತ್ತಿರುವ ಹೊಸ ಮರ್ಸಿಡಿಸ್-ಮೇಬ್ಯಾಕ್ S 650 ಗಾರ್ಡ್ ಬೆಲೆ 12 ಕೋಟಿ ರೂಪಾಯಿಯಾಗಿದೆ.


ಇದನ್ನೂ ಓದಿ: ಮಂಗಳೂರು: ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಕಾನೂನು ಪಾಠ ಮಾಡಿದ ಬೀದಿಬದಿ ವ್ಯಾಪಾರಿಗಳು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...