Homeಕರ್ನಾಟಕಮಂಗಳೂರು: ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಕಾನೂನು ಪಾಠ ಮಾಡಿದ ಬೀದಿಬದಿ ವ್ಯಾಪಾರಿಗಳು!

ಮಂಗಳೂರು: ತೆರವುಗೊಳಿಸಲು ಬಂದ ಅಧಿಕಾರಿಗಳಿಗೆ ಕಾನೂನು ಪಾಠ ಮಾಡಿದ ಬೀದಿಬದಿ ವ್ಯಾಪಾರಿಗಳು!

- Advertisement -
- Advertisement -

ತಮ್ಮನ್ನು ತೆರವುಗೊಳಿಸುವುದರ ವಿರುದ್ದ ಮಂಗಳೂರು ಬೀದಿಬದಿ ವ್ಯಾಪಾರಿಗಳು ಸಿಡಿದೆದ್ದಿದ್ದು, ಮಹಾನಗರ ಪಾಲಿಕೆ ಸತತ ಮೂರನೇ ದಿನವೂ ನಗರದ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಲು ಬಂದಾಗ ವಾಗ್ವಾದ ನಡೆಸಿದ ಘಟನೆ ಶನಿವಾರ ನಡೆದಿದೆ. ಪಾಲಿಕೆಯ ಅಧಿಕಾರಿಗಳು ಕಾನೂನು ಮೀರಿ ಬೀದಿಬದಿ ವ್ಯಪಾರಿಗಳ ವಸ್ತುಗಳು ಮತ್ತು ತಳ್ಳುಗಾಡಿಗಳನ್ನು ನಾಶ ಮಾಡುವುದರ ವಿರುದ್ದ ವ್ಯಾಪಾರಿಗಳು ಬೀದಿಯಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅನಧಿಕೃತ ಗೂಡಂಗಡಿ ಮತ್ತು ಪುಟ್‌ಪಾತ್ ತೆರವು ಕಾರ್ಯಾಚರಣೆ ಮಾಡಲು ಕಳೆದ ಬುಧವಾರದಂದು ಪಾಲಿಕೆಯ ಮೇಯರ್ ಮತ್ತು ಕಮೀಷನರ್‌‌‌‌ ಆದೇಶ ಹೊರಡಿಸಿದ್ದರು ಎನ್ನಲಾಗಿದ್ದು, ಅದರಂತೆ ಗುರುವಾರದಿಂದ ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ. ಆದರೆ ಬೀದಿಬದಿ ವ್ಯಾಪಾರಿಗಳಿಗೆ ಸರಕಾರವೇ ನೀಡಿದ್ದ ಗುರುತಿನ ಚೀಟಿಯಿದ್ದರೂ ಅಂತಹ ವ್ಯಾಪಾರಿಗಳನ್ನು ಕೂಡಾ ಅಧಿಕಾರಿಗಳು ತೆರವುಗೊಳಿಸಿದ್ದು, ಹಲವು ವ್ಯಾಪಾರಿಗಳ ಗಾಡಿ ಮತ್ತಿತರ ವಸ್ತುಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ನಿಯಮಬಾಹಿರವಾಗಿ ಜಜ್ಜಿ ನಾಶಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:‘ತೆರವು’ ಹೆಸರಿನಲ್ಲಿ ಬೀದಿಬದಿ ವ್ಯಾಪಾರಿಗಳ ವಸ್ತುಗಳನ್ನು ಜಜ್ಜಿ ಪುಡಿಮಾಡಿ ದರ್ಪ ಮೆರೆದ ಅಧಿಕಾರಿಗಳು

ತೆರವು ಕಾರ್ಯಾಚರಣೆ ಮಾಡಲು ಶನಿವಾರ ಕೂಡಾ ಪಾಲಿಕೆ ಅಧಿಕಾರಿಗಳು ನಗರದ ಬೀದಿಗೆ ಬಂದಾಗ ಬೀದಿಬದಿ ವ್ಯಾಪಾರಿಗಳು ತಡೆದಿದ್ದು, ತೆರವು ಕಾರ್ಯಾಚರಣೆ ಮಾಡುವ ಆದೇಶ ಪತ್ರವನ್ನು ಕೇಳಿದ್ದಾರೆ. ಜೊತಗೆ ಸರ್ಕಾರ ನೀಡಿದ ಗುರುತಿನ ಚೀಟಿವ ಇರುವ ವ್ಯಾಪಾರಿಗಳ ತೆರವು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ಪಾಠ ಮಾಡಿ, ಅಧಿಕಾರಿಗಳನ್ನು ತರಾಟೆಗೆ ಪಡೆದ ವ್ಯಾಪಾರಿಗಳು

ಕಾನೂನಿನ ಪ್ರಕಾರ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕೆಂದರೆ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಯೂ ಮಾಡಿರಬೇಕು. ಜೊತೆಗೆ ತೆರವುಗೊಳಿಸಿದ ವಸ್ತುಗಳನ್ನು ದಂಡ ಕಟ್ಟಿಸಿ ಅದನ್ನು ಅವರಿಗೆ ವಾಪಾಸು ಕೊಡಬೇಕು.

ಶನಿವಾರ ತೆರವು ಕಾರ್ಯಾಚರಣೆ ಮಾಡಲು ಬಂದ ಅಧಿಕಾರಿಗಳನ್ನು ತಡೆದ ವ್ಯಾಪಾರಿಗಳು, ತಮ್ಮ ವಸ್ತುಗಳನ್ನು ನಾಶ ಪಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ಬೀದಿಯಲ್ಲೇ ಕಾನೂನು ಪಾಠ ಮಾಡಿದ್ದಾರೆ.

ಇದನ್ನೂ ಓದಿ:ಬೀದಿಬದಿ ವ್ಯಾಪಾರಿಗಳ ಮೇಲೆ ಮಂಗಳೂರು ಪಾಲಿಕೆ ದಾಳಿ: ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆ ಎಂದು ವ್ಯಾಪಾರಿಗಳ ಅಳಲು

“ಅನಧೀಕೃತ ಮತ್ತು ಗುರುತಿನ ಚೀಟಿ ಇಲ್ಲದ ಬೀದಿಬದಿ ವ್ಯಾಪಾರಿಗಳ ವಸ್ತುಗಳನ್ನು ಅಧಿಕಾರಿಲು ವಶಕ್ಕೆ ಪಡೆಯಬಹುದು. ಆದರೆ ಅವುಗಳನ್ನು ನಾಶ ಪಡಿಸುವ ಅಧಿಕಾರ ಯಾರು ನೀಡಿದ್ದು. ಇದು ಸರಿಯಾದ ಕ್ರಮವಲ್ಲ. ಅಲ್ಲದೆ, ಇತ್ತೀಚೆಗೆ ಬೀದಿಬದಿ ವ್ಯಾಪಾರಿಗಳ ಸರ್ವೇ ಮಾಡಲಾಗಿತ್ತು. ಅವರಿಗೆ ಪಾಲಿಕೆ ಗುರುತಿನ ಚೀಟಿ ಮುಂದಿನ ದಿನದಲ್ಲಿ ನೀಡುತ್ತದೆ. ಆದರೆ ಈಗ ಸರ್ವೇ ಮಾಡಿರುವ ಬೀದಿಬದಿ ವ್ಯಾಪಾರಿಗಳನ್ನು ಕೂಡಾ ತೆರವುಗೊಳಿಸಲು ಮುಂದಾಗಿದ್ದಾರೆ” ಎಂದು ‘ದ.ಕ.ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃಧಿ ಸಂಘ’ದ ಅಧ್ಯಕ್ಷ ಮುಸ್ತಫಾ ಕಿಡಿಕಾರಿದ್ದಾರೆ.

ಗುರುವಾರ ಮತ್ತು ಶುಕ್ರವಾರದಂದು ದರ್ಪ ಮೆರೆದ ಅಧಿಕಾರಿಗಳು

ತೆರವಿನ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಬೀದಿಬದಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, “ಮಹಾನಗರ ಪಾಲಿಕೆಯ ತೆರವು ಕಾರ್ಯಾಚರಣೆಯು ಸತತ ಮೂರನೇ ದಿನವೂ ನಡೆಯುತ್ತಿದೆ. ಆದರೆ ಈ ರೀತಿ ಕಾರ್ಯಾಚರಣೆ ನಡೆಸಲು ಪಟ್ಟಣ ವ್ಯಾಪಾರಿ ಸಮಿತಿಯಲ್ಲಿ ನಿರ್ಧಾರ ಮಾಡಿಲ್ಲ. ಕಾನೂನಿನ ಪ್ರಕಾರ ಪಟ್ಟಣ ವ್ಯಾಪಾರಿ ಸಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಪಾಲಿಕೆಯು ಏಕಾಏಕಿ ವ್ಯಾಪಾರಿಗಳಿಗೆ ತೊಂದರೆ ನೀಡಿ, ಅವರ ವಸ್ತುಗಳು ಮತ್ತು ತಳ್ಳುವ ಗಾಡಿಗಳನ್ನು ನಾಶ ಮಾಡುತ್ತಿದೆ” ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸರ್ಕಾರದ ಸಹಾಯಧನ ಕೇಂದ್ರ ಸರ್ಕಾರದ ಸಾಲಕ್ಕೆ ವಜಾ: ಬೀದಿ ಬದಿ ವ್ಯಾಪಾರಿಗಳನ್ನು ತಲುಪದ ಸರ್ಕಾರದ ನೆರವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹೈದರಾಬಾದ್: ಮತದಾರರ ಪಟ್ಟಿಯಿಂದ 5.41 ಲಕ್ಷ ಮತದಾರರನ್ನು ಕೈ ಬಿಟ್ಟ ಚುನಾವಣಾ ಆಯೋಗ; ವರದಿ

0
ಮತದಾರರ ಪಟ್ಟಿಯ ಶುದ್ಧತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ತೆಲಂಗಾಣದ ಹೈದರಾಬಾದ್ ಜಿಲ್ಲೆಯ 5.41 ಲಕ್ಷ ಮಂದಿಯ ಹೆಸರನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈ ಬಿಟ್ಟಿದೆ ಎಂದು ದಿ ಹಿಂದೂ ವರದಿ ಮಾಡಿದೆ. 2023ರ ಜನವರಿಯಿಂದೀಚೆಗೆ...