Homeಕರ್ನಾಟಕಕೊಡಗು: ಹಾಕಿ ಆಡುತ್ತಲೇ ಮೈದಾನದಲ್ಲಿ ಮೃತಪಟ್ಟ ಆಟಗಾರ

ಕೊಡಗು: ಹಾಕಿ ಆಡುತ್ತಲೇ ಮೈದಾನದಲ್ಲಿ ಮೃತಪಟ್ಟ ಆಟಗಾರ

- Advertisement -
- Advertisement -

ಕೊಡಗಿನಲ್ಲಿ ನಡೆಯುತ್ತಿರುವ ಫ್ಯಾಮಿಲಿ ಹಾಕಿ ಚಾಂಪಿಯನ್‌ಶಿಪ್ ವೇಳೆ ಯುವ ಹಾಕಿ ಆಟಗಾರರೊಬ್ಬರು ಮೈದಾನದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ತೊತ್ತಿಯಂಡ ಸೋಮಣ್ಣ (23) ಎಂದು ಗುರುತಿಸಲಾಗಿದೆ.

ಕೊಡಗು ಸಮೀಪದ ಮೂರ್ನಾಡಿನ ಲಾಲು ಮುದ್ದಯ್ಯ ಮೈದಾನದಲ್ಲಿ ಶನಿವಾರ ಕೊಡವ ಕುಟುಂವಗಳ ಚೌರೀರಾ ಹಾಕಿ ಚಾಂಪಿಯನ್‌ಶಿಪ್ ಉದ್ಘಾಟನೆಗೊಂಡಿತ್ತು.

ಒಟ್ಟು 90 ಕೊಡವ ಕುಟುಂಬಗಳು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ನೋಂದಾಯಿಸಿಕೊಂಡಿವೆ. ಇದು 54 ಕೊಡವ ಕುಟುಂಬಗಳು ಭಾಗವಹಿಸುವ ಫುಟ್‌ಬಾಲ್ ಚಾಂಪಿಯನ್‌ಶಿಪ್ ಅನ್ನು ಸಹ ಆಯೋಜಿಸುತ್ತದೆ.

ಶನಿವಾರ ಮಧ್ಯಾಹ್ನ ಬಟ್ಟೀರ ಕುಟುಂಬ ಹಾಗೂ ತೊತ್ತಿಯಂಡ ಕುಟುಂಬದ ನಡುವೆ ಹಾಕಿ ಪಂದ್ಯ ನಡೆಯುತ್ತಿತ್ತು. ಆಟದ ವೇಳೆ ಹಾಕಿ ಆಟಗಾರ ಇವರು ಬಲಮುರಿ ನಿವಾಸಿ ವಿಠಲ್ ದೇವಯ್ಯ ಅವರ ಪುತ್ರ ತೊತ್ತಿಯಂಡ ಸೋಮಯ್ಯ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆಯೇ ಸಾವನ್ನಪ್ಪಿದ್ದಾರೆ.

ಆಟಗಾರನ ನಿಧನಕ್ಕೆ ಸಹ ಆಟಗಾರರು ಮತ್ತು ನೆರೆದಿದ್ದ ಕ್ರೀಡಾಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.


ಇದನ್ನೂ ಓದಿ: ‘ತೆರವು’ ಹೆಸರಿನಲ್ಲಿ ಬೀದಿಬದಿ ವ್ಯಾಪಾರಿಗಳ ವಸ್ತುಗಳನ್ನು ಜಜ್ಜಿ ಪುಡಿಮಾಡಿ ದರ್ಪ ಮೆರೆದ ಅಧಿಕಾರಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...