Homeಕವನಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

ಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ

- Advertisement -
- Advertisement -

ಮೊಳಗುತ್ತಿದೆ ಸೈರನ್!

ನಾನು
ಅಂದೇ ಹೇಳಿದ್ದೆ!
ಕಿರೀಟ ತೊಟ್ಟವರ ನಂಬದಿರಿ ಎಂದು!
ಜೀವ ಹಿಂಡುವ ರಕ್ತ ಹೀರುವ ಮಂದಿ
ನಮ್ಮ ನಿಮ್ಮಂತೆ ಬರುವುದಿಲ್ಲ!
ಕಿರೀಟ ತೊಟ್ಟಿಯೇ ಬರುತ್ತಾರೆ!
ಥೇಟ್ ಈಗ ಬಂದಿರುವ
ಅರೆಜೀವಿಯಂತೆ!
ಪೀಠವಿಲ್ಲದ ಅರಮನೆಯಲ್ಲಿ
ಕಿರೀಟಿ ರಾಜನದ್ದೆ ಆರ್ಭಟ
ನಿರ್ಗತಿಕ ವಲಸೆಗಾರರ ಬಡವರ
ಕೂಳಿಗೂ ಗತಿ ಇಲ್ಲ!
ಮಂದಗತಿಯ ಮೂರ್ಖ ರಾಜನಿಗೆ
ಕೇಳುವವರು ಯಾರು?
ಅಯ್ಯೋ ಹೇಳುವವರು ಯಾರು?
ಎಂದು ಗೊರವಂಕ ಕೂಗುತ್ತಿರುವಾಗ
ಗಲ್ಲಿಗಲ್ಲಿಗಳ ರಸ್ತೆಗಳಲ್ಲಿ
ಒಣಗಿ ಉದುರಿದ ಎಲೆಗಳ ತಳಗಳಲ್ಲಿ
ಹುಳದಂತೆ ಜನರು ಸಾಯುತ್ತಿರುವ ದೃಶ್ಯವನ್ನು
ತದೇಕ ಚಿತ್ತದಿಂದ ಕಂಬಳಿ ಹುಳುವೊಂದು
ಬರೆದು ದಾಖಲು ಮಾಡುತ್ತಿತ್ತು
“ಯಕಶ್ಚಿತ್ ಕಣ್ಣಿಗೆ ಕಾಣದ
ಅರೆಜೀವಿಯೊಂದರಿಂದ
ಮನುಷ್ಯರು ಉಸಿರುಗಟ್ಟಿ
ಸಾಯುತ್ತಿದ್ದಾರೆ ಅಯ್ಯೋ
ಮನುಷ್ಯರು ಉಸಿರುಗಟ್ಟಿ
ಸಾಯುತ್ತಿದ್ದಾರೆ”

ಮರದ ಮೇಲೆ ಕೂತ ಹಕ್ಕಿ
ಅಯ್ಯೋ ಅಯ್ಯೋ ಈ ಮನುಷ್ಯರಿಗೆ ಏನಾಗಿದೆ?
ಯಾಕ್ಹೀಗೆ ಮುಖಕ್ಕೆ ಮುಸುಕು ಹಾಕಿಕೊಂಡಿದ್ದಾರೆ!
ಕಲ್ಲು ಹೊಡೆಯುತ್ತಿದ್ದ ಕೈಗಳೇ ಕಾಣುತ್ತಿಲ್ಲವಲ್ಲ!
ಎಂದು ವ್ಯಂಗ್ಯವಾಗಿ ಚರಮಗೀತೆಯ ಹಾಡುತ್ತಿತ್ತು!
ಬೆಕ್ಕು, ನಾಯಿ, ಇರುವೆ ಮತ್ತು ಕೋಳಿ ಮಾತನಾಡಿಕೊಳ್ಳುತ್ತಿದ್ದವು!
ನೋಡಿದೆಯ ಬೆಕ್ಕಣ್ಣ
‘ನಮ್ಮ ಕುತ್ತಿಗೆಗೆ ಹಗ್ಗ ಜಡಿದು ಮೂಲೆಗೆ ಕಟ್ಟುತ್ತಿದ್ದ
ಈ ಮನುಷ್ಯರ ಪಾಡು ಇಂದು ಈಗ ಏನಾಗಿದೆಯೆಂದು?
ಕಾಲಕ್ಕೆ ಬೆಲೆ ಕಟ್ಟುವರುಂಟೆ?
ಕೆಲಸವಿಲ್ಲದ ಯುವಕರ ಗೋಣು
ನೇಣು ಕುಣಿಕೆಗೆ ಅಯ್ಯೋ ನೋಡಲಾಗುತ್ತಿಲ್ಲ!
ಕೆಲಸವೇ ಸಿಗುತ್ತಿಲ್ಲ!
ಗುಳೆ ಬಂದವರ ಪಾಡು
ಅವರ ಹಸಿವು ಯಾರಿಗೂ ಬೇಡ!’
ಎಂದು ಬೊಗಳಿತು ನಾಯಿ!
ಹೌದಣ್ಣ ಹೌದು
‘ತೋಳಕ್ಕೆ ಸಿಂಹದ ಬಣ್ಣ
ನಾಯಕನ ಬಣ್ಣ ಬಳಿದರೆ
ಎಷ್ಟು ದಿನ ತಾನೇ ಉಳಿದೀತು?
ಮಳೆ ಬಂದಾಗ ಕರಗಿ
ಬಿಸಿಲು ಹೆಚ್ಚಾದಾಗ ಒಣಗಿ
ಹೋಗಲೇಬೇಕಲ್ಲ!
ರಾಜನ ಸತ್ಯದ ಮಿಥ್ಯವು ಜನರಿಗೆ ತಿಳಿಯಲೆ ಬೇಕಲ್ಲ!
ಕ್ಕೊ ಕ್ಕೊ ಕ್ಕೊ ಎಂದು ಕೂಗಿತು ಕೋಳಿ!

ನಂಟು ಗಂಟಿನ ಹಂಗಿನೊಳಗೆ ಯಾವ
ಸಾಂಕ್ರಾಮಿಕ ರೋಗ ಬಂದರೇನು?
ಮನುಷ್ಯ ಬದಲಾಗುವನೇ?
ಇಲ್ಲ ಅವನು ಬದಲಾಗುವುದೇ ಇಲ್ಲ!
ಜಿಡ್ಡುಗಟ್ಟಿದೆ ಮೆದುಳು
ಮದ ಮತ್ಸರ ಮೋಹ ಸ್ವಾರ್ಥದಿಂದ!
ಹಸಿದ ಹೊಟ್ಟೆಗೆ ಅನ್ನ ಇಕ್ಕುವವರಿಲ್ಲ!
ತಿನ್ನುವವರು ರೋಗದ ಹೆಸರಿನಲ್ಲಿ
ಮತ್ತಷ್ಟು ಮಗದಷ್ಟು ತಿನ್ನುತ್ತಲೆ ಇದ್ದಾರೆ!
ಸಾಯುವವರು ಮಾತ್ರ ಸಾಯುತ್ತಲೆ ಇದ್ದಾರೆ!
ಇದಕ್ಕೆ ಕೊನೆ ಎಲ್ಲಿದೆ ಇಲ್ಲಿ?
ಎಂದು ಬುಸುಗುಟ್ಟಿತು ಹಾವು ಪೊಟರೆಯಲಿ!

ಕಾಲದ ಮೃಗ ಓಡುತ್ತಿದೆ ಓಡುತ್ತಿದೆ
ತನ್ನ ಬೆನ್ನ ತಾನೇ ಕಾಣದಂತೆ!
ಮೃಗ ಖಗಗಳು ವ್ಯಂಗ್ಯವಾಡುತ್ತಿವೆ!
ಅಪರೂಪಕ್ಕೆ ಕೇಳುತ್ತಿದ್ದ
ಆ್ಯಂಬುಲೆನ್ಸಿನ ಸೈರನ್ ಸದ್ದು
ಈಗ ನಿತ್ಯದ ಮಂತ್ರವಾಗಿದೆ!
ರಾಮ ಮಂದಿರದ ಭಜನೆಯಂತೆ
ಭಗವದ್ಗೀತೆಯ ಶ್ಲೋಕದಂತೆ!
ಅಲ್ಲಾವುವಿನ ಆದೇಶದಂತೆ
ಕುರಾನಿನ ವಚನದಂತೆ!
ಶಿಲುಬೆ ಮೇಲಿನ ಅಹಿಂಸಾ ಮೂರ್ತಿಯಂತೆ
ಬೈಬಲ್ಲಿನ ವಾಣಿಯಂತೆ!
ಬುದ್ಧನ ಉಪದೇಶದಂತೆ
ಹೊರಗೆ ಹೆಜ್ಜೆ ಇಟ್ಟರೆ ಸಾಕು ಸೈರನ್ ‌ಮೊಳಗುತ್ತಿದೆ
‘ಎಚ್ಚರ‌ ಮನುಷ್ಯ ಎಚ್ಚರ
ನಿನಗಿನ್ನೂ ಬಹಳ ಸಮಯವಿದೆ ಬದಲಾಗು’ ಎಂದು!

ಶಂಕರ್ ಸಿಹಿಮೊಗೆ

(ಮೂಲತಃ ಶಿವಮೊಗ್ಗದವರಾದ ಶಂಕರ್ ಸಿಹಿಮೊಗೆಯವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿದ್ದಾರೆ.)


ಇದನ್ನೂ ಓದಿ: ಕವನ | ಅಂತಿಮ ವಲಸೆಯ ಮುನ್ನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...