ದೆಹಲಿಯಲ್ಲಿ ಪತ್ತೆಯಾದ ಐದು ಮಂಕಿಪಾಕ್ಸ್ ಸೋಂಕಿನ ಪ್ರಕರಣಗಳಲ್ಲಿ, ರೋಗಿಗಳು ಯಾವುದೇ ಅಂತರರಾಷ್ಟ್ರೀಯ ಪ್ರಯಾಣ ಮಾಡದೆ ಇದ್ದರೂ ಅವರಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯೊಂದು ವಿವರಿಸಿದ್ದು, ಸಮುದಾಯದ ನಡುವೆ ಮಂಕಿಪಾಕ್ಸ್ ಸೋಂಕಿನ ಬಗ್ಗೆ ಸರಿಯಾಗಿ ರೋಗನಿರ್ಣಯ ಮಾಡಲು ವಿಫಲವಾಗಿದೆ ವರದಿ ಸೂಚಿಸಿದೆ.
ನವದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು, ಪುಣೆಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ – ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ನವದೆಹಲಿಯ ಏಮ್ಸ್‌ನ ಸಂಶೋಧಕರು, ಸೋಂಕು ಹರಡಲು ಹೆಚ್ಚಿನ ಸಾಧ್ಯತೆ ಇರುವ ಪುರುಷ ಮತ್ತು ಸ್ತ್ರೀ ಲೈಂಗಿಕ ಕಾರ್ಯಕರ್ತರೊಂದಿಗೆ ಲೈಂಗಿಕತೆಯಲ್ಲಿ ಏರ್ಪಡುವ ಜನರಲ್ಲಿ ಮಂಕಿಪಾಕ್ಸ್ ವೈರಸ್ (MPXV)ನ ಸಕ್ರಿಯ ಕಣ್ಗಾವಲು ಅಗತ್ಯವನ್ನು ಒತ್ತಿಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ವರ್ಷ ಜುಲೈ 14 ರಂದು, ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲಿ ವರದಿ ಆಗಿತ್ತು. ಅಂದಿನಿಂದ, ಅಕ್ಟೋಬರ್ 13, 2022 ರವರೆಗೆ ಕೇರಳದಲ್ಲಿ 6 ಪ್ರಕರಣದಗಳು ಮತ್ತು ದೆಹಲಿಯಲ್ಲಿ 14 ಪ್ರಕರಣಗಳು ಸೇರಿ ಒಟ್ಟು 20 ದೃಡಪಡಿಸಿದ ಮಂಕಿಪಾಕ್ಸ್ ಪ್ರಕರಣಗಳನ್ನು ಗುರುತಿಸಲಾಗಿದೆ.
ಇದನ್ನೂ ಓದಿ: ಮಂಕಿಪಾಕ್ಸ್: ಆತಂಕದ ಅವಶ್ಯಕತೆ ಇಲ್ಲ; ತಿಳಿವಳಿಕೆ ಮತ್ತು ಮುನ್ನೆಚ್ಚರಿಕೆಯಿಂದ ನಿಯಂತ್ರಣ ಸಾಧ್ಯ
ಅಕ್ಟೋಬರ್‌ನಲ್ಲಿ ಜರ್ನಲ್ ಆಫ್ ಮೆಡಿಕಲ್ ವೈರಾಲಜಿಯಲ್ಲಿ ಪ್ರಕಟವಾದ ಅಧ್ಯಯನವು, ಕೇರಳದಲ್ಲಿ ಪತ್ತೆಯಾದ ಪ್ರಕರಣಗಳು ಉತ್ತಮವಾಗಿ ವ್ಯಾಖ್ಯಾನಿಸಲಾದ ಸಾಂಕ್ರಾಮಿಕ ರೋಗಶಾಸ್ತ್ರೀಯ ಸಂಬಂಧವನ್ನು ಹೊಂದಿವೆ ಎಂದು ಹೇಳಿದೆ. ಕೇರಳದ ಈ ಪ್ರಕರಣಗಳಲ್ಲಿ ರೋಗಿಗಳು ಅಂತರಾಷ್ಟ್ರೀಯ ಪ್ರಯಾಣ ಮಾಡಿರುವ ಬಗ್ಗೆ ಮತ್ತು ಶಂಕಿತ ರೋಗಿಗಳೊಂದಿಗೆ ಸಂಪರ್ಕ ಇದ್ದ ಬಗ್ಗೆ ಹೇಳಲಾಗಿದೆ.
ಆದರೆ ದೆಹಲಿಯಲ್ಲಿ ಪತ್ತೆಯಾದ ಮಂಕಿಪಾಕ್ಸ್ ಪ್ರಕರಣದಲ್ಲಿ ರೋಗಿಗಳು ಸೋಂಕಿತ ಪ್ರದೇಶಗಳಿಗೆ ಪ್ರಯಾಣ ಮಾಡದೆ ಅವರಿಗೆ ಸೋಂಕು ತಗಲಿರುವ ಬಗ್ಗೆ ವರದಿ ಉಲ್ಲೇಖಿಸಿದೆ. “ನವದೆಹಲಿಯಿಂದ ದೃಢಪಟ್ಟ ಮಂಕಿಪಾಕ್ಸ್ ಪ್ರಕರಣಗಳಲ್ಲಿ ಸೋಂಕಿತರು, ಮಂಕಿಪಾಕ್ಸ್ ಇರುವ ಪ್ರದೇಶಗಳಿಗೆ ಪ್ರಯಾಣ ಮಾಡಿಲ್ಲ” ಎಂದು ಸಂಶೋಧಕರು ತಿಳಿಸಿದ್ದು, ಜೊತೆಗೆ ಈ ಮಂಕಿಪಾಕ್ಸ್ ಪ್ರಕರಣಗಳು ಸೌಮ್ಯವಾಗಿರುತ್ತವೆ ಮತ್ತು ಸಂಪೂರ್ಣವಾಗಿ ಚೇತರಿಸಿಕೊಂಡಿವೆ ಎಂದು ತಿಳಿಸಿದ್ದಾರೆ.
“ಇದು ಆರಂಭಿಕ ಪತ್ತೆ ಮತ್ತು ರೋಗಿಗಳ ನಿರ್ವಹಣೆಗೆ ಸಕಾಲಿಕ ಕ್ಲಿನಿಕಲ್ ಮತ್ತು ಪ್ರಯೋಗಾಲಯ ರೋಗನಿರ್ಣಯದ ಮಹತ್ವವನ್ನು ಒತ್ತಿಹೇಳುತ್ತದೆ” ಎಂದು ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಪ್ರಮುಖ ಲೇಖಕ ಡಾ. ವಿನೀತ್ ರೆಲ್ಹಾನ್ ವರದಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಕಿಪಾಕ್ಸ್: ಕೋವಿಡ್ ರೀತಿ ವೇಗವಾಗಿ ಹರಡುವುದಿಲ್ಲ ಎಂದ ತಜ್ಞರು
ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಪುರುಷರ ಮೂಲಕ ಪ್ರಮುಖವಾಗಿ ಮಂಕಿಪಾಕ್ಸ್ ಹರಡುತ್ತಿದೆ ಎಂದು 2022 ರ ವರದಿ ಉಲ್ಲೇಖಿಸಿತ್ತು.
ಆದ್ದರಿಂದ, ಸೋಂಕಿನ ಪ್ರಸರಣವನ್ನು ಅರ್ಥಮಾಡಿಕೊಳ್ಳಲು ಪುರುಷ-ಪುರುಷರ ನಡೆಸುವ ಲೈಂಗಿಕ ಸಂಬಂಧ ನಡೆಸುವವರು, ಮಹಿಳಾ ಲೈಂಗಿಕ ಕಾರ್ಯಕರ್ತರು, ಪುರುಷ ಮತ್ತು ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧದಲ್ಲಿ ಏರ್ಪಡುವ ಜನರ ಮೇಲೆ ತೀವ್ರ ಕಣ್ಗಾವಲು ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಮಂಕಿಪಾಕ್ಸ್ ಸೋಂಕಿನ ಹೊಸ ಪ್ರಸ್ತುತಿಗಳನ್ನು ಅರ್ಥಮಾಡಿಕೊಳ್ಳಲು ಆರೋಗ್ಯ ಕಾರ್ಯಕರ್ತರಲ್ಲಿ, ನಿರ್ದಿಷ್ಟವಾಗಿ ಲೈಂಗಿಕವಾಗಿ ಹರಡುವ ಸೋಂಕುಗಳು ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡುವವರಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಅಧ್ಯಯನ ಹೇಳಿದೆ.
ಇದನ್ನೂ ಓದಿ: ಭಾರತದ ಮೊದಲನೇ ‘ಮಂಕಿಪಾಕ್ಸ್’ ಕೇರಳದಲ್ಲಿ ಪತ್ತೆ
ಮಂಕಿಪಾಕ್ಸ್ ವೈರಸ್ ಒಂದು ಹೆಚ್ಚುತ್ತಿರುವ ಆರ್ಥೋಪಾಕ್ಸ್ ವೈರಸ್ ಆಗಿದ್ದು, ಮೇ 2022 ರಿಂದ ಪತ್ತೆಯಾಗುತ್ತಿದೆ. ಅಕ್ಟೋಬರ್ 14, 2022 ರವರೆಗೆ 109 ಸ್ಥಳಗಳಿಂದ ಒಟ್ಟು 73,288 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಹಚ್ಚಲಾಗಿದೆ ಎಂದು ವರದಿ ಹೇಳಿದೆ.


