Homeಮುಖಪುಟಒಂದು ತಿಂಗಳ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾದ IAS ಅಧಿಕಾರಿಣಿ!

ಒಂದು ತಿಂಗಳ ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾದ IAS ಅಧಿಕಾರಿಣಿ!

- Advertisement -
- Advertisement -

ತನ್ನ ಒಂದು ತಿಂಗಳ ಮಗುವಿನೊಂದಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಪುರಸಭೆಯ ಆಯುಕ್ತರಾದ ಶ್ರಿಜನಾ ಗುಮ್ಮಲ್ಲಾ ಸೇವೆ ಸಲ್ಲಿಸಲು ಕಚೇರಿಗೆ ಮರಳಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ದ ದೇಶವು ಹೋರಾಡುತ್ತಿರುವುದರಿಂದ ಆದಷ್ಟು ಬೇಗ ಕೆಲಸಕ್ಕೆ ಮರಳಲು ಪ್ರೇರೇಪಿಸಿತು ಎಂದು ಶ್ರಿಜನಾ ಹೇಳಿದ್ದಾರೆ.

ಶ್ರಿಜನಾ ಗುಮ್ಮಲ್ಲಾ ಅವರು 2013 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಕಚೇರಿಯಲ್ಲಿ ಒಂದು ತಿಂಗಳ ತನ್ನ ಮಗುವನ್ನು ತನ್ನ ತೋಳುಗಳಲ್ಲಿ ಹಿಡಿದಿರುವ ಫೋಟೋ ಈಗಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದ್ದು ಭಾರಿ ಮೆಚ್ಚುಗೆ ಗಳಿಸಿದೆ.

“ಇದು ನನ್ನ ಕರ್ತವ್ಯದ ಕರೆಯಾಗಿದೆ. ಒಬ್ಬ ಮನುಷ್ಯಳಾಗಿ ಆಡಳಿತಕ್ಕೆ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ. ನಾವೆಲ್ಲರೂ ಪರಸ್ಪರ ಒಗ್ಗಟ್ಟಾಗಿ ನಿಂತು ಬಲಶಾಲಿಯಾಗಿರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಗ್ರೇಟರ್ ವಿಶಾಖಪಟ್ಟಣಂ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರಿಜನಾ ಗುಮ್ಮಲ್ಲಾ ಹೇಳುತ್ತಾರೆ.

ಸರ್ಕಾರದ ನಿಯಮಗಳ ಪ್ರಕಾರ ಮಹಿಳೆಯರಿಗೆ ಆರು ತಿಂಗಳವರೆಗೆ ಸಂಬಳದ ಹೆರಿಗೆ ರಜೆ ಇರುತ್ತದೆ.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆಯುಕ್ತೆಯನ್ನು ಶ್ಲಾಘಿಸಿ “ಕರ್ತವ್ಯದ ಕರೆ” ಗೆ ಹಾಜರಾಗಿದ್ದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

“ಕೊರೊನಾ ಬಿಕ್ಕಟ್ಟಿನಲ್ಲಿ ಭಾರತವೂ ಇಂತಹಾ ಯೋಧರನ್ನು ಹೊಂದಿರುವುದು ಅದೃಷ್ಟಶಾಲಿಯಾಗಿದೆ. ಕರ್ತವ್ಯ ಬದ್ಧತೆಯ ಈ ಜೀವಂತ ಉದಾಹರಣೆಗಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳು” ಎಂದು ಶೇಖಾವತ್ ಐಎಎಸ್ ಅಧಿಕಾರಿ ಮತ್ತು ಅವರ ಮಗುವಿನ ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ.

 

ಆಂಧ್ರಪ್ರದೇಶದಲ್ಲಿ 427 ಕರೋನವೈರಸ್ ಪ್ರಕರಣಗಳಿವೆ. ರಾಜ್ಯದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದ ಒಟ್ಟಾರೆ ಕೊರೊನಾ ಪ್ರಕರಣಗಳು 308 ಸಾವುಗಳೊಂದಿಗೆ 9,000 ದಾಟಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...