ಇಂದು ಹಲವು ಶಾಸಕರು ರಾಜಿನಾಮೇ ನೀಡಲು ಸ್ಪೀಕರ್ ಕಚೇರಿ ತಲುಪಿರುವುದು ನಿಮಗೆಲ್ಲಾ ಗೊತ್ತಿದೆ. ಅದರಲ್ಲಿ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲರೂ ಒಬ್ಬರು. ಇವರು ರಾಜಿನಾಮೆ ನೀಡುವ ಮುನ್ನ ಬಿಜೆಪಿಯ ಶ್ರೀರಾಮುಲು ಮತ್ತು ಯಡಿಯೂರಪ್ಪನವರಿಗೆ ಒಂದು ದೊಡ್ಡ ಕಂಡಿಷನ್ ಹಾಕಿದ್ದಾರೆ. ಅದೇನೆಂದು ಕೇಳಿದರೆ ನೀವು ನಗುತ್ತೀರಿ ಅಷ್ಟೇ.
ಸರಿ ನೇರವಾಗಿ ವಿಷಯಕ್ಕೆ ಬಂದರೆ ಅವರು ಮುಂದಿನ ಸಲಾ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವಂತೆ. ಆದರೂ ಅವರನ್ನು ಮಂತ್ರಿ ಮಾಡಬೇಕೆಂತೆ. ಹೇಗೆಂದರೆ ಎಂಎಲ್‍ಸಿ ಮಾಡಿ, ಮಂತ್ರಿ ಮಾಡಬೇಕು. ಚುನಾವಣೆಯ ಖರ್ಚನ್ನೆಲ್ಲಾ ಪಕ್ಷವೇ ವಹಿಸಿಕೊಳ್ಳಬೇಕು. ಹಾಗಾದರೆ ಮಾತ್ರ ನಾನು ರಾಜಿನಾಮೇ ನೀಡುತ್ತೇನೆ ಎಂದು ರಮೇಶ್ ಜಾರಕಿಹೊಳಿಯವರ ಸಮಕ್ಷಮದಲ್ಲಿ ಈ ಶಾಸಕ ಮಹಾಶಯ ಹೇಳಿದ್ದಾರಂತ ವದಂತಿ ಹಬ್ಬಿದೆ.
ಸರಿ ವಿಧಾನ ಸಭಾ ಚುನಾವಣೆಗೆ ಏಕೆ ನಿಲ್ಲುವುದಿಲ್ಲ ಎಂದರೆ ಹಿಂಜರಿಕೆಯಿಂದಲೇ ಮುಂದಿನ ಸಾರಿ ಖಂಡಿತಾ ನಾನು ಗೆಲ್ಲುವ ಸಾಧ್ಯತೆಯಿಲ್ಲ. ಈ ಸಾರಿ ಬಹಳ ಪ್ರಯಾಸಪಟ್ಟು ಕೇವಲ 213 ಓಟುಗಳಿಂದ ಗೆದ್ದಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಜನರು ನನ್ನ ವಿರುದ್ಧವಿದ್ದಾರೆ. ಹಾಗಾಗಿ ನನ್ನ ಬದಲು ನನ್ನ ಮಕ್ಕಳನ್ನು ಬೇಕಾದರೆ ನಿಲ್ಲಿಸುತ್ತೇನೆ ಎಂದಿದ್ದಾರೆ.
ಈ ಹಿಂದೆಯೂ ಆಪರೇಷನ್ ಮಾಡಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಈ ಪ್ರತಾಪಗೌಡ ಪಾಟೀಲನನ್ನು ಕಾಂಗ್ರೆಸ್ ನಾಯಕರು ಸಮಾಧಾನಿಸಿದ್ದರು. ರಾಜ್ಯ ಉಗ್ರಾಣ ನಿಮಗ ಮಂಡಳಿಯ ಅಧ್ಯಕ್ಷಗಿರಿಯ ಜೊತೆಗೆ ಕ್ಷೇತ್ರದ ಅಭಿವೃದ್ದಿಗಾಗಿ ಸಾಕಷ್ಟು ಹಣವನ್ನು ನೀಡಿದ್ದರು. ತಂದ ಹಣದಲ್ಲಿಯೂ ಸಹ ತನ್ನ ಮೂರು ಮಕ್ಕಳಿಗೆ ಕಾಂಟ್ರಾಕ್ಟ್ ನೀಡಿ ಸಾಕಷ್ಟು ಗುಳುಂ ಮಾಡಿದ್ದರು. ಈಗ ಇನ್ನು ಹಣದಾಹ ತೀರದ ಕಾರಣಕ್ಕೆ ಬಿಜೆಪಿಗೆ ಹೋಗುತ್ತಿದ್ದಾರೆ ಎಂದು ಜನ ಮಸ್ಕಿಯಲ್ಲಿ ಮಾತಾಡುತ್ತಿದ್ದಾರೆ.
ಈ ಪ್ರತಾಪ್ ಗೌಡ ಪಾಟಿಲರು ಆರಂಭದಿಂದಲೂ ಒಂದು ಕಾಲನ್ನು ಬಿಜಿಪಿಯಲ್ಲಿಟ್ಟಿದ್ದರು. ಈ ಮೈತ್ರಿ ಸರ್ಕಾರ ಬಹುಮತ ಸಾಬೀತು ಮಾಡುವ ವೇಳೆ ಡಿ.ಕೆ ಶಿವಕುಮಾರ್ ರವರು ಇವರ ಜೇಬಿಗೆ ವಿಪ್ ಇಟ್ಟಿದ್ದರು. ಅದ ಕೂಡ ತನ್ನ ಅಸಮಾಮಧಾನಕ್ಕೆ ಕಾರಣ ಎಂದು ಹೇಳುತ್ತಿದ್ದಾರೆ.
ಸರ್ಕಾರ ಉರುಳಿಸಲು ಒಕ್ಕಗಲಿಗರ ಜೊತೆ ‘ವಾಲ್ಮೀಕಿ ನಾಯಕ’ರು ಸಾಥ್
ಒಕ್ಕಲಿಗ ಶಾಸಕರನ್ನು ಟಾರ್ಗೆಟ್ ಮಾಡಿಕೊಂಡು ಆಪರೇಷನ್‍ಗೆ ಮುಂದಾಗಿದ್ದ ಬಿಜೆಪಿಗೆ 50-50% ಫಲಿತಾಂಶ ಸಿಕ್ಕಿತ್ತು. ಅದರ ಜೊತೆಗೆ ರಮೇಶ್ ಜಾರಕಿಹೊಳಿ ಹೆಸರಿನಲ್ಲಿ ವಾಲ್ಮೀಕಿ ಶಾಸಕರನ್ನು ಒಳಗೊಳ್ಳಲು ಹಾಕಿದ ಬಿಜೆಪಿ ಸ್ಕೆಚ್ ಯಶಸ್ವಿಯಾದಂತೆ ಕಾಣುತ್ತಿದೆ.
ಬಿ.ಶ್ರೀರಾಮುಲುರವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎನ್ನುವ ಆಮಿಷಕ್ಕೆ ಕೆಲವರು ಕೈ ಸೇರಿಸಿ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉತ್ತರ ಕರ್ನಾಟಕದ ಬಹುತೇಕ ಶಾಸಕರಿಗೆ ತಮ್ಮ ಭವಿಷ್ಯದ ಬಗ್ಗೆ ಸಮರ್ಪಕ ಜ್ಞಾನವಿಲ್ಲ. ಇಲ್ಲಿನ ಎಸ್ಟಿ ಸಮುದಾಯದ ಶಾಸಕರು ಲಿಂಗಾಯಿತ ನಾಯಕರನ್ನೇ ತಮ್ಮ ಗಾಢ್ ಫಾಧರ್‍ಗಳಾಗಿ ಮಾಡಿಕೊಂಡಿದ್ದಾರೆ. ಅವರು ಹೇಳಿದ ಹಾಗೆ ಕೇಳುತ್ತಾರೆ. ಅದರ ಭಾಗವಾಗಿಯೇ ಈಗ ರಾಜಿನಾಮೆ ನೀಡುತ್ತಿದ್ದಾರೆ ಎಂದು ಅಲ್ಲಿನ ಪತ್ರಕರ್ತರೊಬ್ಬರು ವಿವರಿಸಿದ್ದಾರೆ.
ಇದು ಎಲ್ಲಿಗೆ ಹೋಗಿ ತಲುಪುತ್ತೇ ಎಂಬುದಕ್ಕೆ ಕಾಲವೇ ಉತ್ತರ ನೀಡಲಿದೆ.


