ಮಂಗಳವಾರ ರಾತ್ರಿಯ ನಡೆದ ಇಸ್ರೇಲಿ ವೈಮಾನಿಕ ದಾಳಿಯಿಂದ ಉತ್ತರ ಜಿಲ್ಲೆಯ ಬೀಟ್ ಲಾಹಿಯಾದಲ್ಲಿನ ವಸತಿ ಕಟ್ಟಡದಲ್ಲಿ ಕನಿಷ್ಠ 100 ಜನರ ಬಲಿಯಾಗಿದ್ದು, ಸತ್ತವರಲ್ಲಿ ಮಕ್ಕಳೆ ಹೆಚ್ಚು ಎಂದು ಗಾಜಾದ ಸಿವಿಲ್ ಡಿಫೆನ್ಸ್ ಏಜೆನ್ಸಿ ಹೇಳಿದೆ.
ಇಸ್ರೇಲ್‌ನ ಪ್ರಮುಖ ಮಿತ್ರ ಮತ್ತು ಬೆಂಬಲಿಗ ಯುನೈಟೆಡ್ ಸ್ಟೇಟ್ಸ್ ವಾಯುದಾಳಿ ಕುರಿತು ಪ್ರತಿಕ್ರಿಯಿಸಿದ್ದು, “ಇದು ಭಯಾನಕ, ಇದು ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕೊಂದಿತು” ಎಂದು ಹೇಳಿದೆ.
“ಇದು ಭಯಾನಕ ಫಲಿತಾಂಶದೊಂದಿಗೆ ಭಯಾನಕ ಘಟನೆಯಾಗಿದೆ” ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗಾರರಿಗೆ ತಿಳಿಸಿದರು.
ಪ್ಯಾಲೇಸ್ತೀನಿಯನ್ ರಕ್ಷಕರು ಮತ್ತು ಹತಾಶ ಕುಟುಂಬ ಸದಸ್ಯರು ಉತ್ತರ ಗಾಜಾದ ಬೀಟ್ ಲಾಹಿಯಾದಲ್ಲಿ ಐದು ಅಂತಸ್ತಿನ ಕಟ್ಟಡದಲ್ಲಿ ಹುಡುಕಾಟ ನಡೆಸಿದ್ದಾರೆ. ದಿಗ್ಭ್ರಮೆಗೊಂಡ ಸಂಬಂಧಿಕರು ಪ್ರೀತಿಪಾತ್ರರನ್ನು ಗುರುತಿಸಲು ಪ್ರಯತ್ನಿಸುತ್ತಿರುವಾಗ, ಮೇಲಿನ ಅಂತಸ್ತಿನ ಕಿಟಕಿಯಲ್ಲಿ ಕೆಲ ದೇಹ ನೇತಾಡುತ್ತಿದ್ದರೆ, ಸುಟ್ಟ ದೇಹಗಳು ಕಂಬಳಿಗಳಲ್ಲಿ ಸುತ್ತಿ ಬೀದಿಯಲ್ಲಿ ಸಾಲಾಗಿ ಇಡಲಾಗಿತ್ತು.
“ಬೀಟ್ ಲಾಹಿಯಾದಲ್ಲಿನ ಅಬು ನಸ್ರ್ ಕುಟುಂಬದ ಮನೆಯ ಹತ್ಯಾಕಾಂಡದಲ್ಲಿ ಹುತಾತ್ಮರ ಸಂಖ್ಯೆ 93 ಕ್ಕೆ ಏರಿದೆ. ಸುಮಾರು 40 ಜನರು ಅವಶೇಷಗಳಡಿಯಲ್ಲಿ ಇನ್ನೂ ಕಾಣೆಯಾಗಿದ್ದಾರೆ” ಎಂದು ಏಜೆನ್ಸಿ ವಕ್ತಾರ ಮಹ್ಮದ್ ಬಾಸ್ಸಲ್ ತಿಳಿಸಿದ್ದಾರೆ.
“ಸ್ಫೋಟವು ರಾತ್ರಿಯಲ್ಲಿ ಸಂಭವಿಸಿದೆ ಮತ್ತು ನಾನು ಮೊದಲು ಶೆಲ್ ದಾಳಿ ಎಂದು ಭಾವಿಸಿದೆ. ಆದರೆ, ನಾನು ಸೂರ್ಯೋದಯದ ನಂತರ ಹೊರಗೆ ಹೋದಾಗ ಜನರ ದೇಹಗಳು, ಕೈಕಾಲುಗಳು ಮತ್ತು ಗಾಯಾಳುಗಳನ್ನು ಅವಶೇಷಗಳಡಿಯಿಂದ ಎಳೆಯುವುದನ್ನು ನೋಡಿದೆ” ಎಂದು ಬೀಟ್ ಲಾಹಿಯಾದಲ್ಲಿ ಹತ್ತಿರದ ಶಾಲೆಯಲ್ಲಿ ಆಶ್ರಯ ಪಡೆದಿರುವ 30 ವರ್ಷದ ರಾಬಿ ಅಲ್-ಶಾಂಡಗ್ಲಿ ಹೇಳಿದರು.
Israeli forces have killed the son of Dr Hussam Abu Safiya, the director of Kamal Adwan Hospital in northern Gaza. This happened after Dr Hussam refused to leave the hospital after it came under attack. The hospital is featured in our @AJFaultLines doc Starving Gaza. pic.twitter.com/sjt1TqJ4F1
— Hind Hassan (@HindHassanNews) October 26, 2024
“ಬಹುಪಾಲು ಬಲಿಪಶುಗಳು ಮಹಿಳೆಯರು ಮತ್ತು ಮಕ್ಕಳು, ಜನರು ಗಾಯಗೊಂಡವರನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವುದೇ ಆಸ್ಪತ್ರೆಗಳು ಅಥವಾ ಸರಿಯಾದ ವೈದ್ಯಕೀಯ ಆರೈಕೆ ಇಲ್ಲ” ಎಂದು ಅವರು ತಿಳಿಸಿದ್ದಾರೆ.
ಮಂಗಳವಾರ, ಪ್ಯಾಲೇಸ್ತೀನಿಯನ್ನರು ಕಟ್ಟಡದ ಅವಶೇಷಗಳ ಮೂಲಕ ಹುಡುಕಿದರು, ಸತ್ತವರನ್ನು ಹೊರತೆಗೆದರು. ಇತರರು ಸಂಬಂಧಿಕರ ತಮ್ಮವರ ದೇಹಗಳ ಕಣ್ಣೀರಿಟ್ಟ ದೃಶ್ಯಗಳು ಮನಕಲಕುತ್ತಿವೆ.
ಇಸ್ರೇಲ್ ಗಡಿಯ ಸಮೀಪವಿರುವ ಉತ್ತರ ಪಟ್ಟಣವಾದ ಬೀಟ್ ಲಾಹಿಯಾದಲ್ಲಿ ನಡೆದ ದಾಳಿಯಲ್ಲಿ ಇನ್ನೂ 20 ಜನರು ಗಾಯಗೊಂಡಿದ್ದಾರೆ ಎಂದು ಸಚಿವಾಲಯದ ತುರ್ತು ಸೇವೆ ತಿಳಿಸಿದೆ.
ಗಾಜಾ ಪಟ್ಟಿಯ ಮೇಲೆ ಇಸ್ರೇಲಿ ನಡೆಸಿದ ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ತಮ್ಮ ಸಂಬಂಧಿಕರಿಗೆ ಪ್ಯಾಲೆಸ್ತೀನಿಯಾದವರು ಮಂಗಳವಾರ ದೇರ್ ಅಲ್-ಬಾಲಾಹ್‌ನಲ್ಲಿರುವ ಆಸ್ಪತ್ರೆಯ ಶವಾಗಾರದಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ.
ದಾಳಿಯಲ್ಲಿ ಸಾವನ್ನಪ್ಪಿದ 15 ಜನರ ಶವಗಳನ್ನು ಕಮಲ್ ಅಡ್ವಾನ್ ಆಸ್ಪತ್ರೆಗೆ ತರಲಾಗಿದೆ ಎಂದು ಅದರ ನಿರ್ದೇಶಕ ಹುಸ್ಸಾಮ್ ಅಬು ಸಫಿಯಾ ಎಎಫ್‌ಪಿಗೆ ತಿಳಿಸಿದ್ದಾರೆ.
“ನಾವು ಇನ್ನೂ ಹಲವಾರು ಹುತಾತ್ಮರು ಮತ್ತು ಗಾಯಾಳುಗಳನ್ನು ನಿರೀಕ್ಷೆಯಲ್ಲಿದ್ದೇವೆ” ಎಂದು ಸಫಿಯಾ ಹೇಳಿದರು. ಸಿಬ್ಬಂದಿ ಮತ್ತು ಔಷಧಿಗಳ ಕೊರತೆಯಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಣಗಾಡುತ್ತಿದೆ ಎಂದು ಹೇಳಿದರು.
“ಜಬಾಲಿಯಾದಲ್ಲಿ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಕಮಲ್ ಅಡ್ವಾನ್ ಆಸ್ಪತ್ರೆಯಲ್ಲಿ ನಮ್ಮ ವೈದ್ಯಕೀಯ ತಂಡ ಮತ್ತು ಕಾರ್ಮಿಕರನ್ನು ಆಕ್ರಮಣ ಮಾಡಿದಾಗ ಸೇನೆಯು ಬಂಧಿಸಿದ ನಂತರ ಪ್ರಥಮ ಚಿಕಿತ್ಸಾ ಸಾಮಗ್ರಿಗಳನ್ನು ಹೊರತುಪಡಿಸಿ ಏನೂ ಉಳಿದಿಲ್ಲ” ಎಂದು ಸಫಿಯಾ ಹೇಳಿದರು.
ದಾಳಿಯ ಸಮಯದಲ್ಲಿ ಆಸ್ಪತ್ರೆಯಿಂದ ಹೊರಬರಲು ನಿರಾಕರಿಸಿದ್ದರಿಂದ ಹುಸ್ಸಾಮ್ ಅಬು ಸಫಿಯಾ ಅವರ ಎಂಟು ವರ್ಷದ ಮಗನನ್ನು ಅಕ್ಟೋಬರ್ 18 ರಂದು ಇಸ್ರೇಲಿ ಸೇನೆಯು ಕೊಂದಿತು.
ಸೈನ್ಯವು ಆಸ್ಪತ್ರೆಗೆ ನುಗ್ಗಿತು ಮತ್ತು ಸೌಲಭ್ಯದಲ್ಲಿ ಆಶ್ರಯ ಪಡೆದ ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಇತರರು ಸೇರಿದಂತೆ ನೂರಾರು ಪ್ಯಾಲೆಸ್ತೀನಿಯನ್ನರನ್ನು ಬಂಧಿಸಿತು.
ಇತ್ತೀಚಿನ ತಿಂಗಳುಗಳಲ್ಲಿ ಇಸ್ರೇಲಿ ಮಿಲಿಟರಿ ಪದೇಪದೆ ನಿರಾಶ್ರಿತ ಜನರಿಗೆ ಆಶ್ರಯವನ್ನು ಹೊಡೆದಿದೆ. ಇದು ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿ ಎಂದು ಹೇಳಿಕೊಂಡಿದೆ.
ಪ್ಯಾಲೇಸ್ತೀನಿಯನ್ ಅಧಿಕಾರಿಗಳ ಪ್ರಕಾರ, ಉತ್ತರ ಗಾಜಾದಲ್ಲಿ ಕೇವಲ 19 ದಿನಗಳಲ್ಲಿ 770 ಕ್ಕೂ ಹೆಚ್ಚು ಜನರನ್ನು ಇಸ್ರೇಲ್ ಕೊಂದಿದೆ. ಜಬಾಲಿಯಾ ಉತ್ತರ ಗಾಜಾದ ನಗರ ನಿರಾಶ್ರಿತರ ಶಿಬಿರವಾಗಿದೆ.
ಗಾಜಾದ ಮೇಲಿನ ಇತ್ತೀಚಿನ ಯುದ್ಧದ ಆರಂಭದಿಂದ ಇಸ್ರೇಲ್ 43,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರನ್ನು ಕೊಂದಿದೆ ಎಂದು ಗಾಜಾದ ಅಧಿಕಾರಿಗಳು ಸೋಮವಾರ ವರದಿ ಮಾಡಿದ್ದಾರೆ. ಇದರಲ್ಲಿ ಕನಿಷ್ಠ 17,000 ಮಕ್ಕಳು ಮತ್ತು 11,400 ಕ್ಕೂ ಹೆಚ್ಚು ಮಹಿಳೆಯರು ಸೇರಿದ್ದಾರೆ. ಇಸ್ರೇಲ್ ಗಾಜಾದಲ್ಲಿ 174 ಕ್ಕೂ ಹೆಚ್ಚು ಪತ್ರಕರ್ತರು ಮತ್ತು 1000 ಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ಕೊಂದಿದೆ.
ಇದನ್ನೂ ಓದಿ; ಗಾಜಾದ ವಸತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿಗೆ 55 ಜನ ಬಲಿ; ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿಕೊಂಡಿರುವ ಶಂಕೆ


