ಈ ವರ್ಷದ ಜನವರಿಯಿಂದ ಜುಲೈವರೆಗೆ ಕರ್ನಾಟಕದಲ್ಲಿ 9,000 ಕ್ಕೂ ಹೆಚ್ಚು ಡೆಂಗ್ಯೂ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಏಳು ಸಾವುಗಳು ವರದಿಯಾಗಿವೆ.
ಜುಲೈ 13ರವರೆಗೆ 66,298 ಮಂದಿಗೆ ಡೆಂಗೆ ಪರೀಕ್ಷೆ ಮಾಡಲಾಗಿದ್ದು, ಒಟ್ಟು 9,082 ಮಂದಿಗೆ ಜ್ವರ ಕಾಣಿಸಿಕೊಂಡಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 2,557 ಜನರ ಮಾದರಿಗಳನ್ನು ಡೆಂಗ್ಯೂಗಾಗಿ ಪರೀಕ್ಷಿಸಲಾಗಿದ್ದು, ಅದರಲ್ಲಿ 424 ಪಾಸಿಟಿವ್ ವರದಿಯಾಗಿದೆ.
ಜ್ವರದಿಂದಾಗಿ ಒಟ್ಟು 353 ಮಂದಿ ಆಸ್ಪತ್ರೆಗೆ ದಾಖಲಾಗಬೇಕಾಗಿದ್ದು, ಕಳೆದ 24 ಗಂಟೆಗಳಲ್ಲಿ 119 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರದೇಶಗಳಲ್ಲಿ ಜನವರಿಯಿಂದ ಜುಲೈ 13 ರವರೆಗೆ 2,830 ಪ್ರಕರಣಗಳು ದಾಖಲಾಗಿವೆ, ಇದು ರಾಜ್ಯದಲ್ಲಿ ಅತಿ ಹೆಚ್ಚು, 110 ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 202 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.
ಅದೇ ರೀತಿ, ಚಿಕ್ಕಮಗಳೂರಿನಲ್ಲಿ ಜುಲೈ 13 ರವರೆಗೆ 599 ಪ್ರಕರಣಗಳು ದಾಖಲಾಗಿವೆ, ಇದು ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಪ್ರಕರಣವಾಗಿದೆ.
ಜುಲೈ 13ರ ಹೊತ್ತಿಗೆ, 18 ವರ್ಷಕ್ಕಿಂತ ಮೇಲ್ಪಟ್ಟ ಒಟ್ಟು 5,725 ವಯಸ್ಕರು ಡೆಂಗ್ಯೂ ಪರೀಕ್ಷೆಗೆ ಒಳಗಾಗಿದ್ದಾರೆ. ಜೊತೆಗೆ ಒಂದರಿಂದ ಹದಿನೆಂಟು ವಯಸ್ಸಿನ 3,203 ಮಕ್ಕಳು ಮತ್ತು ಒಂದು ವರ್ಷದೊಳಗಿನ 154 ಶಿಶುಗಳನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ; ತುರ್ತುಪರಿಸ್ಥಿತಿಯನ್ನು ಇಂದಿರಾ ಗಾಂಧಿ ತಪ್ಪು ಎಂದು ಒಪ್ಪಿಕೊಂಡಿದ್ದರು, ಬಿಜೆಪಿ ಹಿಂದಿನದನ್ನು ಮರೆಯಬೇಕು: ಪಿ. ಚಿದಂಬರಂ


