ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 50 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 90,123 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 50,20,360 ಆಗಿದೆ.
ಇದರಲ್ಲಿ ಸದ್ಯ 9,95,933 ಸಕ್ರಿಯ ಪ್ರಕರಣಗಳಿದ್ದು, 39,42,361 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಮೃತರ ಸಂಖ್ಯೆ 82 ಸಾವಿರದ ಗಡಿ ದಾಟಿದೆ.
ಶೇಕಡಾ 60ರಷ್ಟು ಕೊರೊನಾ ಪ್ರಕರಣಗಳು ದೇಶದ ಐದು ರಾಜ್ಯಗಳಿಗೆ ಸೇರಿದ್ದಾಗಿವೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ ಹಾಗೂ ತಮಿಳುನಾಡು ಈ ಪಟ್ಟಿಯಲ್ಲಿವೆ.
ಇದನ್ನೂ ಓದಿ: ಐದು ವರ್ಷದಲ್ಲಿ ಎಲ್ಲಾ ಬಡವರ ಭೂಮಿ ಕಿತ್ತುಕೊಳ್ಳುತ್ತಾರೆ: ಸಸಿಕಾಂತ್ ಸೆಂಥಿಲ್ ಆತಂಕ

ಕಳೆದ 24 ಗಂಟೆಯಲ್ಲಿ 79,292 ಮಂದಿ ಗುಣಮುಖರಾಗಿದ್ದರೆ, 1,290 ಸೋಂಕಿತರು ಮೃತಪಟ್ಟಿದ್ದಾರೆ. ಇಲ್ಲಿವರೆಗೂ ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 82,066ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
?#COVID19 India Tracker
(As on 16 September, 2020, 08:00 AM)➡️Confirmed cases: 50,20,359
➡️Recovered: 39,42,360 (78.5%)?
➡️Active cases: 9,95,933 (19.8%)
➡️Deaths: 82,066 (1.6%)#IndiaFightsCorona#IndiaWillWin#StaySafeVia @MoHFW_INDIA pic.twitter.com/tXLIKBDzqp
— #IndiaFightsCorona (@COVIDNewsByMIB) September 16, 2020
ವಿಶ್ವದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಹಾಗೂ ಮೂರನೇ ಸ್ಥಾನದಲ್ಲಿ ಬ್ರೆಜಿಲ್ ಇವೆ. ಆದರೆ ಸೋಂಕಿದಿಂದ ಗುಣಮುಖರಾದವರ ಪ್ರಮಾಣ ಭಾರತದಲ್ಲೇ ಹೆಚ್ಚಾಗಿದ್ದು, ಬ್ರೆಜಿಲ್ ಹಾಗೂ ಅಮೆರಿಕ ದೇಶಗಳು ನಂತರದ ಸ್ಥಾನದಲ್ಲಿವೆ.


