Homeಮುಖಪುಟಚಳವಳಿ ನಿರಂತರ: ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ಮುಂದುವರೆಯುತ್ತದೆ

ಚಳವಳಿ ನಿರಂತರ: ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ಮುಂದುವರೆಯುತ್ತದೆ

ಪ್ರಸ್ತುತ ಆಂದೋಲನವನ್ನು ಸ್ಥಗಿತಗೊಳಿಸಲಾಗಿದೆ, ಹೋರಾಟ ಗೆದ್ದಿದೆ; ರೈತರ ಹಕ್ಕುಗಳನ್ನು ಖಾತ್ರಿಪಡಿಸುವ ಹೋರಾಟ ಮುಂದುವರಿಯುತ್ತದೆ ಎಂದು ಎಸ್‌ಕೆಎಂ ಟ್ವೀಟ್ ಮಾಡಿದೆ.

- Advertisement -
- Advertisement -

ಐತಿಹಾಸಿಕ ರೈತ ಚಳವಳಿ ಗೆಲುವು ಸಾಧಿಸಿದೆ. ಕೃಷಿ ಕಾಯ್ದೆಗಳು ರದ್ದಾದ ನಂತರ ಎಂಎಸ್‌ಪಿ ಸೇರಿದಂತೆ ರೈತರ ಇತರ ಹಕ್ಕೊತ್ತಾಯಗಳ ಎದುರು ಮೋದಿ ಸರ್ಕಾರ ಮಂಡಿಯೂರಿದೆ. ಹಾಗಾಗಿ ದೆಹಲಿ ಗಡಿಗಳಲ್ಲಿ ಮತ್ತು ಪಂಜಾಬ್‌ನ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿದ್ದ ರೈತ ಹೋರಾಟಕ್ಕೆ ತೆರೆ ಎಳೆಯುವುದಾಗಿ ರೈತ ಹೋರಾಟದ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಘೋಷಿಸಿದೆ. ಆದರೆ ಎಂಎಸ್‌ಪಿ ಸಿಗುವವರೆಗೂ ಮತ್ತು ಲಖಿಂಪುರ್ ಖೇರಿ ಹತ್ಯಾಕಾಂಡದ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ಚಳವಳಿ ನಿರಂತರವಾಗಿ ನಡೆಯಲಿದ್ದ, ಮುಂದಕ್ಕೂ ಕಿಸಾನ್ ಮೋರ್ಚಾ ದೇಶಾದ್ಯಂತ ಮುಂದುವರೆಯುತ್ತದೆ ಎಂದು ಎಸ್‌ಕೆಎಂ ತಿಳಿಸಿದೆ.

ದೆಹಲಿ ಗಡಿಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಇತರ ಸ್ಥಳಗಳಲ್ಲಿನ ಪ್ರತಿಭಟನಾ ಧರಣಿಗಳನ್ನು ತೆರವುಗೊಳಿಸುವುದಾಗಿ ಎಸ್‌ಕೆಎಂ ಔಪಚಾರಿಕವಾಗಿ ಘೋಷಿಸುತ್ತದೆ. ಪ್ರಸ್ತುತ ಆಂದೋಲನವನ್ನು ಸ್ಥಗಿತಗೊಳಿಸಲಾಗಿದೆ, ಹೋರಾಟ ಗೆದ್ದಿದೆ; ರೈತರ ಹಕ್ಕುಗಳನ್ನು ಖಾತ್ರಿಪಡಿಸುವ ಹೋರಾಟ ಮುಂದುವರಿಯುತ್ತದೆ ಎಂದು ಎಸ್‌ಕೆಎಂ ಟ್ವೀಟ್ ಮಾಡಿದೆ.

ಈ ಜಯವನ್ನು 715 ಹುತಾತ್ಮ ರೈತರಿಗೆ ಮತ್ತು ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ಹುತಾತ್ಮರಾದವರಿಗೆ ಅರ್ಪಿಸುತ್ತೇವೆ. ಹೋರಾಟದಲ್ಲಿ ಜೊತೆಗೂಡಿದ ಬೆಂಬಲಿಸಿದ ದೇಶದ ಎಲ್ಲಾ ರೈತರು ಮತ್ತು ನಾಗರೀಕರನ್ನು ಅಭಿನಂದಿಸುತ್ತೇವೆ. ಪ್ರತಿಭಟನೆ ವೇಳೆ ತೊಂದರೆಗೊಳಗಾದವರಲ್ಲಿ ಕ್ಷಮೆಯಾಚಿಸುತ್ತೇವೆ. ಶಾಂತಿ, ತಾಳ್ಮೆ ಗೆಲುವಿನ ಸೂತ್ರವಾಗಿದ್ದ, ಮುಂದೆಯೂ ಅದನ್ನು ಕಾಪಿಟ್ಟುಕೊಳ್ಳಲಾಗುವುದು ಎಂದು ಎಸ್‌ಕೆಎಂ ಹೇಳಿದೆ.

ಕೇಂದ್ರ ಸರ್ಕಾರ ರೈತರಿಗೆ ಅಧಿಕೃತ ಪತ್ರ ಬರೆದಿದೆ. ಅದರಲ್ಲಿ ಎಂಎಸ್‌ಪಿಗೆ ಶಾಸನಬದ್ಧ ಮಾನ್ಯತೆ, ರೈತರ ಮೇಲಿನ ಎಲ್ಲಾ ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯುವುದು, ಹುತಾತ್ಮ ರೈತ ಕುಟುಂಬಕ್ಕೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ, ವಿದ್ಯುತ್ ಮಸೂದೆ ಹಿಂಪಡೆಯುವುದು ಮತ್ತು ಕೃಷಿ ತ್ಯಾಜ್ಯ ಸುಡುವುದನ್ನು ಅಪರಾಧೀಕರಿಸುವುದಕ್ಕೆ ತಡೆಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶ ಸರ್ಕಾರಗಳು ರೈತರ ಮೇಲಿನ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುತ್ತವೆ. ದೆಹಲಿ ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೇಸುಗಳನ್ನು ಹಿಂಪಡೆಯುವುದಾಗಿ ಕೇಂದ್ರ ಏಜೆನ್ಸಿಗಳು ಒಪ್ಪಿಕೊಂಡಿವೆ. ರೈತರಿಗೆ ಪರಿಹಾರ ನೀಡಲು ಹರಿಯಾಣ, ಯುಪಿ ಸರ್ಕಾರಗಳು ಸಿದ್ಧವಾಗಿವೆ. ರೈತ ಸಂಘಟನೆಗಳೊಂದಿಗೆ ಚರ್ಚಿಸದೆ ವಿದ್ಯುತ್ ಬಿಲ್ ತರುವುದಿಲ್ಲ ಎಂದು ಕೇಂದ್ರ ಸರ್ಕಾರ ಪತ್ರ ಬರೆದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಚಳುವಳಿ ಮುಗಿದಿಲ್ಲ. ಎಂಎಸ್‌ಪಿ ಮತ್ತು ಲಖಿಂಪುರ ಮತ್ತಿತರ ಸಮಸ್ಯೆಗಳ ಕುರಿತು ಹೋರಾಟ ಮುಂದುವರಿಯಲಿದೆ. ಜನವರಿ 15 ರಂದು SKM ಮತ್ತೆ ಸಭೆ ಸೇರಲಿದೆ. ಸಂಯುಕ್ತ ಕಿಸಾನ್ ಮೋರ್ಚಾ ಮುಂದುವರಿಯುತ್ತದೆ ಎಂದು ಘೋಷಿಸಿದೆ.


ಇದನ್ನೂ ಓದಿ; ದೆಹಲಿ ಗಡಿಗಳಲ್ಲಿನ ಹೋರಾಟಕ್ಕೆ ತೆರೆ: ವಿಜಯೀ ಮೆರವಣಿಗೆ ಮೂಲಕ ಪಂಜಾಬ್‌ಗೆ ತೆರಳಲಿರುವ ರೈತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ

0
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ​​ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲ ಕಪಿಲ್ ಸಿಬಲ್ ಗೆಲುವು ಸಾಧಿಸಿದ್ದಾರೆ. ಸಿಬಲ್ 1,066 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಹಿರಿಯ ವಕೀಲ ಪ್ರದೀಪ್ ರೈ...