Homeಮುಖಪುಟಹರಿಯಾಣದ ಹಳ್ಳಿಗಳಿಗೆ ತೆರಳಿ ಧನ್ಯವಾದ ತಿಳಿಸುತ್ತಿರುವ ಪಂಜಾಬ್ ರೈತರು!

ಹರಿಯಾಣದ ಹಳ್ಳಿಗಳಿಗೆ ತೆರಳಿ ಧನ್ಯವಾದ ತಿಳಿಸುತ್ತಿರುವ ಪಂಜಾಬ್ ರೈತರು!

ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವೆ ನದಿ ನೀರು ಹಂಚಿಕೆ ವಿವಾದದಿಂದಾಗಿ ಸಂಬಂಧ ಹದಗೆಟ್ಟಿತ್ತು. ಆದರೆ ರೈತ ಹೋರಾಟ ಅದನ್ನು ಮರೆಸಿ ಹೊಸ ಭಾಂದವ್ಯ ಬರೆದಿದೆ.

- Advertisement -
- Advertisement -

ಪ್ರತಿಭಟನಾ ನಿರತ ರೈತರ ಎಲ್ಲಾ ಹಕ್ಕೊತ್ತಾಯಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಲಿಖಿತ ಭರವಸೆಯನ್ನು ನೀಡಿದೆ. ಹಾಗಾಗಿ ಟಿಕ್ರಿ ಗಡಿಯಲ್ಲಿ ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದ ಪಂಜಾಬಿನ ರೈತರು ಅಲ್ಲಿಂದ ನಿರ್ಗಮಿಸುತ್ತಿದ್ದು ಅದಕ್ಕೂ ಮೊದಲು ಹರಿಯಾಣದ ನಿವಾಸಿಗಳೊಂದಿಗಿನ ಬಾಂಧವ್ಯವನ್ನು ಬಲಪಡಿಸುವಂತಹ ವಿಶೇಷ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೇಕಾದ ಆಹಾರ ಪದಾರ್ಥಗಳು ಮತ್ತು ಉಚಿತ ವಸತಿ ಸೌಕರ್ಯವನ್ನು ಒದಗಿಸಿದವರನ್ನು ಗೌರವಿಸಲು, ಪಂಜಾಬಿನ ರೈತರು ಟಿಕ್ರಿ ಗಡಿ ಹತ್ತಿರದ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ. ಧನ್ಯವಾದ ಅರ್ಪಿಸಿ ಪಂಜಾಬ್‌ಗೆ ಭೇಟಿ ನೀಡುವಂತೆಯೂ ಆಹ್ವಾನ ನೀಡುತ್ತಿದ್ದಾರೆ.

ಪಂಜಾಬ್ ರೈತ ಸಂಘಟನೆಗಳ ಸಮಿತಿಯು ಹೋರಾಟವನ್ನು ಬೆಂಬಲಿಸಿದ ಹರಿಯಾಣ ಮತ್ತು ಪಂಜಾಬ್‌ನ ಜನರಿಗೆ ಕೃತಜ್ಞತೆ ವ್ಯಕ್ತಪಡಿಸಲು ಬಿಕೆಯು (ಸಿಧುಪುರ್) ಮುಖಂಡರು ಟಿಕ್ರಿ ಬಳಿಯ ಬರಾಹಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಕೆಲವು ಗ್ರಾಮಸ್ಥರಿಗೆ  ಸ್ಮರಣಿಕೆಗಳನ್ನು ನೀಡಿದರು. ರೈತ ಸಂಘಟನೆಗಳ ಜಂಟಿ ಸಮಿತಿಯು ಸುಮಾರು 20 ಸ್ಥಳೀಯರನ್ನು ಮತ್ತು ಪಂಜಾಬ್‌ನ ಅನೇಕರನ್ನು ಮುಖ್ಯ ಪ್ರತಿಭಟನಾ ಸ್ಥಳದಲ್ಲಿ ಅವರ ನಿರಂತರ ಪ್ರತಿಭಟನೆಯ ಯಶಸ್ಸಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಗೌರವಿಸಿತು.

‘ಪ್ರತಿಭಟನೆಯು ಈಗ ಕೊನೆಗೊಳ್ಳಲಿದೆ. ಆದ್ದರಿಂದ ನಮ್ಮೊಂದಿಗೆ ಬೆಂಬಲವಾಗಿ ನಿಂತ ಎಲ್ಲರಿಗೂ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ನಮ್ಮ ಕರ್ತವ್ಯವಾಗಿದೆ. ಬರಾಹಿ ಗ್ರಾಮದ ನಿವಾಸಿಗಳು ಹಾಲು, ತರಕಾರಿಗಳು, ಹಣ್ಣುಗಳು ಮತ್ತು ಇತರ ಆಹಾರ ಪದಾರ್ಥಗಳ ನಿರಂತರ ಪೂರೈಕೆಯನ್ನು ಮಾಡಿದ್ದಾರೆ. ಈ ಸಹೋದರತ್ವದ ಬಾಂಧವ್ಯವನ್ನು ಬಲಪಡಿಸಲು ನಾವು ಅವರನ್ನು ಪಂಜಾಬ್‌ಗೆ ಆಹ್ವಾನಿಸಿದ್ದೇವೆ’ ಎಂದು ಬಿಕೆಯು ನಾಯಕ ಲಖ್ವಿಂದರ್ ಸಿಂಗ್ ಹೇಳಿದರು.

ವಕೀಲ ಅಮರವೀರ್ ಸಿಂಗ್ ಭುಲ್ಲಾರ್ ಅವರು ಪಂಜಾಬ್ ರೈತರಿಗೆ ಉಚಿತ ವಸತಿ ಒದಗಿಸಿದ್ದಕ್ಕಾಗಿ ಬಹದ್ದೂರ್ಗಡದ ವ್ಯಕ್ತಿಯನ್ನು ಗೌರವಿಸಿ, ‘ನಮಗೆ ಸಹಾಯ ಮಾಡಿದ ಕೊನೆಯ ವ್ಯಕ್ತಿಯನ್ನು ಗೌರವಿಸುವವರೆಗೂ ಇದು ಮುಂದುವರಿಯುತ್ತದೆ. ನಾವು ನಾಳೆ ಬೇರೆ ಹಳ್ಳಿಗೆ ಹೋಗುತ್ತೇವೆ’ ಎಂದು ತಿಳಿಸಿದರು.

ಬಿಕೆಯು (ರಾಜೇವಾಲ್) ನಾಯಕ ಪರ್ಗತ್ ಸಿಂಗ್, ‘ನಮ್ಮ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಹರಿಯಾಣ ನಿವಾಸಿಗಳು ನೀಡಿದ ಬೆಂಬಲವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಆದ್ದರಿಂದ ಅಂತಹ ವ್ಯಕ್ತಿಗಳನ್ನು ಗೌರವಿಸಲಾಗುತ್ತಿದೆ. ಪಂಜಾಬ್ ಮತ್ತು ಹರಿಯಾಣ ರೈತರ ಒಗ್ಗಟ್ಟು ನಮ್ಮ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದು ಅವರು ಹೇಳಿದರು.

ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವೆ ನದಿ ನೀರು ಹಂಚಿಕೆ ವಿವಾದದಿಂದಾಗಿ ಸಂಬಂಧ ಹದಗೆಟ್ಟಿತ್ತು. ಆದರೆ ರೈತ ಹೋರಾಟ ಅದನ್ನು ಮರೆಸಿ ಹೊಸ ಭಾಂದವ್ಯ ಬರೆದಿದೆ.


ಇದನ್ನೂ ಓದಿ: ಚಳವಳಿ ನಿರಂತರ: ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ಮುಂದುವರೆಯುತ್ತದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ಹುದ್ದೆಯಿಂದ ವಜಾ!

0
ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಎಎಪಿಯ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು...