ಒಕ್ಕೂಟ ಸರ್ಕಾರವು ಚೀನಾದ ವಿರುದ್ದ ಯಾವುದೇ ತಂತ್ರವನ್ನು ಹೊಂದಿಲ್ಲದಿರುವುದರಿಂದ, ಭಾರತದ ರಾಷ್ಟ್ರೀಯ ಭದ್ರತೆಯು ‘ಕ್ಷಮಿಸಲಾಗದಷ್ಟು ರಾಜಿಯಾಗಿದೆ’ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
‘56 ಇಂಚಿನ ಎದೆ’ ಎಂಬ ಉಲ್ಲೇಖದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಅವರು, ‘ಮಿಸ್ಟರ್ 56 ಹೆದರುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಸರ್ಕಾರ ಸುಳ್ಳುಗಳನ್ನೇ ಹೇಳುತ್ತಿರುವಾಗ ಗಡಿಯಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಡುವ ಸೈನಿಕರ ಪರವಾಗಿ ತಾನು ನಿಲ್ಲುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆ: ಪಾಕಿಸ್ತಾನದ ಹಾದಿಯಲ್ಲಿ ಚೀನಾ!
ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥರು ಚೀನಾ ಗಡಿ ಸಮಸ್ಯೆಯ ಬಗ್ಗೆ ವಿಭಿನ್ನ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ರಾಹುಲ್ ಗಾಂಧಿ ಮಾಧ್ಯಮ ವರದಿಯನ್ನು ಉಲ್ಲೇಖಿಸಿದ್ದಾರೆ.
ಗುರುವಾರದಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರು ಚೀನೀಯರು ಭಾರತೀಯ ಪ್ರದೇಶಕ್ಕೆ ಬಂದು ಹೊಸ ಗ್ರಾಮವನ್ನು ನಿರ್ಮಿಸಿದ್ದಾರೆ ಎಂಬ ಹೇಳಿಕೆಗಳು ನಿಜವಲ್ಲ ಮತ್ತು ಹಳ್ಳಿಗಳು ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಚೀನೀ ಬದಿಯಲ್ಲಿವೆ ಎಂದು ಹೇಳಿದ್ದಾರೆ. ಜೊತೆಗೆ, ಚೀನಾ LAC ಅನ್ನು ಉಲ್ಲಂಘಿಸಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.
ಆದರೆ ಭಾರತದೊಳಗೆ ಚೀನಾ ಗ್ರಾಮ ನಿರ್ಮಿಸಿದೆ ಎಂಬ ಅಮೆರಿಕದ ವರದಿಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯ, ಭಾರತವು ತನ್ನ ಭೂಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದನ್ನು ಅಥವಾ ಚೀನಾದ ಯಾವುದೇ ನ್ಯಾಯಸಮ್ಮತವಲ್ಲದ ಹಕ್ಕುಗಳನ್ನು ಭಾರತ ಒಪ್ಪಿಕೊಂಡಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ಚೀನಾವು ಅರುಣಾಚಲ ಪ್ರದೇಶದಲ್ಲಿ ಗ್ರಾಮ ನಿರ್ಮಿಸಿರುವುದನ್ನು ಉಲ್ಲೇಖಿಸಿದ US ರಕ್ಷಣಾ ವರದಿ



ಈ ಪಪ್ಪು ವರ್ಷದ ಹಿಂದೆ ರಹಸ್ಯ ವಾಗಿ ಚೀನಾ ಗೆ ಹೋಗಿದ್ದನಲ್ಟ ಆಗ ಏನು ಕಡೆದು ಕಟ್ಟೆ ಹಾಕಿ ಬಂದನೋ,ಇವರ ತಾತ ನೆಹರು ಹಿಂದೆ ಮಾಡಿದ ಅಲಕ ಕೆಲಸಕ್ಕೆ ಈಗಲೂ ಭಾರತೀಯರು ಅದರ ಬೆಲೆ ತತ್ತಬೇಕಾಗಿ ಬಂದಿದೆ . ಇನ್ನ ಈ ಪಪ್ಪು ತಾಯಿ ಸೋನಿಯಾ ,ಮನಮೋಹನ್ ಸಿಂಗ್ ರ ಕಾಲದಲ್ಲಿ ಆದ ಕೆಲವು ಎಡವಟ್ಟು ಕೆಲಸ ಗಳ ಬಗ್ಗೆ ಹೇಳಿದರೆ
ಮರ್ಯಾದೆಗೆ ಅಂಜಿ ಪಪ್ಪು ಇಟಲಿ ಪ್ರಯಾಣ ಮಾಡಿದರೂ ಆಶ್ಚರ್ಯ ಇಲ್ಲಾ .